logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟು ಜೋಪಾನ ಮಾಡಿದ್ರೂ ಅಕ್ಕಿ ಮೂಟೆಯಲ್ಲಿ ಹುಳು ಆಗ್ತಿದ್ಯಾ? ಹಾಗಾದ್ರೆ ಈ ಮುನ್ನೆಚ್ಚರಿಕೆ ವಹಿಸಿ

ಎಷ್ಟು ಜೋಪಾನ ಮಾಡಿದ್ರೂ ಅಕ್ಕಿ ಮೂಟೆಯಲ್ಲಿ ಹುಳು ಆಗ್ತಿದ್ಯಾ? ಹಾಗಾದ್ರೆ ಈ ಮುನ್ನೆಚ್ಚರಿಕೆ ವಹಿಸಿ

Suma Gaonkar HT Kannada

Sep 26, 2024 12:10 PM IST

google News

ಅಕ್ಕಿ ಮೂಟೆಯಲ್ಲಿ ಹುಳ ಆಗದಂತೆ ನೋಡಿಕೊಳ್ಳಲು ಇಲ್ಲಿದೆ ಉಪಾಯ

    • ನಿಮ್ಮ ಮನೆಯ ಅಕ್ಕಿ ಮೂಟೆಯನ್ನು ಕೀಟಬಾಧೆಯಿಂದ ರಕ್ಷಣೆ ಮಾಡಲು ನೀವು ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಸಾಯನಿಕ ಅಥವಾ ಯಾವುದೇ ಮಾತ್ರೆಗಳನ್ನು ಬಳಸದೆ ನೈಸರ್ಗಿಕವಾಗಿ ಹೇಗೆ ಸುರಕ್ಷಿತವಾಗಿಡಬಹುದು ಗಮನಿಸಿ. 
ಅಕ್ಕಿ ಮೂಟೆಯಲ್ಲಿ ಹುಳ ಆಗದಂತೆ ನೋಡಿಕೊಳ್ಳಲು ಇಲ್ಲಿದೆ ಉಪಾಯ
ಅಕ್ಕಿ ಮೂಟೆಯಲ್ಲಿ ಹುಳ ಆಗದಂತೆ ನೋಡಿಕೊಳ್ಳಲು ಇಲ್ಲಿದೆ ಉಪಾಯ

ನಾವೆಲ್ಲರೂ ಊಟಕ್ಕೆ ಬಳಸುವ ಅಕ್ಕಿ, ಬೇಳೆ -ಕಾಳು ಇವೆಲ್ಲವನ್ನು ಎಷ್ಟು ಜೋಪಾನವಾಗಿ ಇಟ್ಟರೂ ಸಹ ಅದಕ್ಕೆ ಕೀಟಬಾಧೆ ಉಂಟಾಗುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ನಾನಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ನಿಮ್ಮಿಂದ ಅಕ್ಕಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಈ ಸಲಹೆಗಳನ್ನು ಪಾಲಿಸಿ ನೀವು ಅಕ್ಕಿಯನ್ನು ಸರಿಯಾಗಿ ಇಟ್ಟುಕೊಳ್ಳಬಹುದು.

ನೀವು ಈಗಾಗಲೇ ಗೂಗಲ್‌ನಲ್ಲಿ ಈ ಬಗ್ಗೆ ಹುಡುಕಿ ಅಕ್ಕಿಯನ್ನು ರಕ್ಷಿಸಲು ಬೇಕಾದ ಪರಿಹಾರವನ್ನು ಕಂಡುಕೊಂಡಿದ್ದರೂ ಸಹ ಇದರಲ್ಲಿರುವ ಇನ್ನೊಂದಷ್ಟು ಐಡಿಯಾಗಳನ್ನು ಬಳಸಿ ನೋಡಿ. ಹೀಗೆ ಮಾಡುವುದರಿಂದ ಅಕ್ಕಿ ಸುರಕ್ಷಿತವಾಗಿರುತ್ತದೆ. ಸಾಮಾನ್ಯವಾಗಿ ಯಾವಾಗಲೂ ಕೀಟಗಳ ಮಲ, ಅವುಗಳ ಸತ್ತ ದೇಹ ಇದೆಲ್ಲವೂ ಅಕ್ಕಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ನಿಮಗೆ ಸಿಗುತ್ತದೆ. ಅಕ್ಕಿಯಲ್ಲಿರುವ ಹುಳಗಳನ್ನು ಆರಿಸಿ ಅಕ್ಕಿ ತೊಳೆದು ಅನ್ನ ಮಾಡುವಷ್ಟರಲ್ಲಿ ತುಂಬಾ ಸಮಯವಾಗುತ್ತದೆ.

ಈ ಸಲಹೆಗಳು ನಿಮ್ಮ ಪ್ರಯೋಜನಕ್ಕೆ ಬರಬಹುದು
ಮಸಾಲೆಗಳಲ್ಲಿ ಆಯುರ್ವೇದದ ದೃಷ್ಟಿಯಿಂದ ಅನೇಕ ಉಪಯೋಗವಿದೆ. ಆದರೆ ರಾಸಾಯನಿಕ ಮಾತ್ರೆಗಳನ್ನು ಅಕ್ಕಿ ಚೀಲದಲ್ಲಿ ಇಡುವ ಮೂಲಕ ಹುಳುಗಳನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಬದಲಾಗಿ ಮಸಾಲೆ ಪದಾರ್ಥ ಅಂದರೆ ಬೆಳ್ಳುಳ್ಳಿ, ಲವಂಗದ ತುಂಡುಗಳು ಈ ರೀತಿಯ ಸುವಾಸನೆ ಭರಿತ ಮಸಾಲೆ ಸಾಮಗ್ರಿಗಳನ್ನು ಅಕ್ಕಿ ಚೀಲದಲ್ಲಿಟ್ಟರೆ ಹುಳು ಕಾಟ ಕಡಿಮೆ ಇರುತ್ತದೆ. ರಾಸಾಯನಿಕ ಬಳಕೆಯೂ ಕಡಿಮೆ ಆಗಿ ಆರೋಗ್ಯ ಸುಧಾರಿಸುತ್ತದೆ.

ಬೇವಿನ ಎಲೆ:
ಅಕ್ಕಿ ಚೀಲದಲ್ಲಿ ಹುಳು ಆಗದಂತೆ ನೋಡಿಕೊಳ್ಳಲು ನಾವು ಬೇವಿನ ಎಲೆಗಳನ್ನು ಉಪಯೋಗ ಮಾಡಬಹುದು. ಇವುಗಳ ಕಹಿ ಅಂಶ ಹುಳಗಳಾಗದಂತೆ ತಡೆಯುತ್ತದೆ. ಹೆಚ್ಚಿನ ದಿನಗಳ ಕಾಲ ನೀವು ಅಕ್ಕಿಯನ್ನು ಸಂಗ್ರಹಿಸಿ ಇಡಲು ಸಾಧ್ಯವಾಗುತ್ತದೆ. ಒಂದಷ್ಟು ಬೇವಿನ ಎಲೆಗಳನ್ನು ತಂದು ಅದರಲ್ಲಿ ನೀರಿನ ಅಂಶವಿದ್ದರೆ, ಆ ನೀರಿನ ಅಂಶ ಹೋಗಲು ಒಂದೆರಡು ಗಂಟೆಗಳ ಕಾಲ ಅದನ್ನು ಹಾಗೇ ಬಿಟ್ಟು ಆ ನಂತರದಲ್ಲಿ ಆ ಎಲೆಗಳನ್ನು ಅಕ್ಕಿ ಚೀಲದಲ್ಲಿ ಹಾಕಿ ಇಡಬೇಕು. ಹೀಗೆ ಮಾಡುವುದರಿಂದ ಅಕ್ಕಿ ಕೆಡುವುದಿಲ್ಲ.

ಗೋಡೆಯ ಹತ್ತಿರ ಅಕ್ಕಿ ಚೀಲ ಇಡಬೇಡಿ
ಅಕ್ಕಿ ಚೀಲವನ್ನು ಗೋಡೆಗೆ ಅಂಟಿಸಿ ಇಡುವುದರಿಂದ ಇರುವೆಗಳ ಕಾಟ ಹೆಚ್ಚಿರುತ್ತದೆ. ಇನ್ನು ಬೇರೆ ಬೇರೆ ಹುಳ ಹುಪ್ಪಟೆಗಳಿಗೆ ಚೀಲದೊಳಗಡೆ ನುಸುಳಿಕೊಳ್ಳಲು ನೀವೇ ದಾರಿ ಮಾಡಿಟ್ಟ ಹಾಗಾಗುತ್ತದೆ. ಆದ್ದರಿಂದ ಆದಷ್ಟು ಗೋಡೆಗಳಿಂದ ಸ್ವಲ್ಪ ದೂರದಲ್ಲಿ ಅಂದರೆ ಚೀಲ ಗೋಡೆಗೆ ತಾಗದಂತೆ ಜಾಗ್ರತೆ ವಹಿಸಿ. ಹೀಗೆ ಮಾಡುವುದರಿಂದ ಅಕ್ಕಿಯನ್ನು ಕೀಟಗಳ ಆಕ್ರಮಣದಿಂದ ಕಾಪಾಡಬಹುದು.

ತೇವಾಂಶ ಇರುವಲ್ಲಿ ಅಕ್ಕಿ ಇಡಬೇಡಿ
ತೇವಾಂಶ ಮತ್ತು ಹೆಚ್ಚಿನ ಕತ್ತಲಿರುವ ಜಾಗದಲ್ಲಿ ಅಕ್ಕಿ ಮೂಟೆಯನ್ನು ಇಟ್ಟರೆ ಅಕ್ಕಿ ಕೆಡುತ್ತದೆ. ಆದ್ದರಿಂದ ಸ್ವಲ್ಲ ಬೆಳಕು ಮತ್ತು ಸರಿಯಾದ ಉಷ್ಣತೆ ಇರುವ ಜಾಗದಲ್ಲಿ ನೀವು ಅಕ್ಕಿ ಚೀಲವನ್ನು ಇಡಬೇಕು. ಇದು ಕೂಡ ತುಂಬಾ ಸಹಾಯಕ್ಕೆ ಬರುವ ಸಲಹೆ. ಇದೆಲ್ಲವನ್ನೂ ನೀವು ಒಮ್ಮೆ ಟ್ರೈ ಮಾಡಿ ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ