Tasty Pani Puri: ಮನೆಯಲ್ಲಿ ಮಾಡುವ ಪಾನಿಪುರಿಗೆ ಹೊರಗಡೆ ತಿಂದಷ್ಟು ಟೇಸ್ಟ್‌ ಇರಲ್ವಾ? ಹಾಗಾದ್ರೆ ಈ ವಿಧಾನವನ್ನು ಒಮ್ಮೆ ಟ್ರೈ ಮಾಡಿ-panipuri made at home does not have the same taste as eaten outside so try this method once smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tasty Pani Puri: ಮನೆಯಲ್ಲಿ ಮಾಡುವ ಪಾನಿಪುರಿಗೆ ಹೊರಗಡೆ ತಿಂದಷ್ಟು ಟೇಸ್ಟ್‌ ಇರಲ್ವಾ? ಹಾಗಾದ್ರೆ ಈ ವಿಧಾನವನ್ನು ಒಮ್ಮೆ ಟ್ರೈ ಮಾಡಿ

Tasty Pani Puri: ಮನೆಯಲ್ಲಿ ಮಾಡುವ ಪಾನಿಪುರಿಗೆ ಹೊರಗಡೆ ತಿಂದಷ್ಟು ಟೇಸ್ಟ್‌ ಇರಲ್ವಾ? ಹಾಗಾದ್ರೆ ಈ ವಿಧಾನವನ್ನು ಒಮ್ಮೆ ಟ್ರೈ ಮಾಡಿ

Panipuri: ಪಾನಿಪುರಿಗೆ ಪೂರಿಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಆದರೆ ಅಷ್ಟೊಂದು ರುಚಿ ಬರೋದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಅದೇ ರುಚಿ ನಿಮಗೆ ಮನೆಯಲ್ಲಿ ಬರುವಂತೆ ಮಾಡುವ ಒಂದು ಸರಳ ವಿಧಾನವನ್ನು ನಾವಿಲ್ಲಿ ತಿಳಿಸಿದ್ದೇವೆ. ಇದೇ ಅಳತೆಯಲ್ಲಿ ಎಲ್ಲ ಪದಾರ್ಥಗಳನ್ನು ಹಾಕಿ ರೆಡಿ ಮಾಡಿ.

ಮನೆಯಲ್ಲೇ ಮಾಡಿ ಟೇಸ್ಟಿ ಪಾನಿಪುರಿ
ಮನೆಯಲ್ಲೇ ಮಾಡಿ ಟೇಸ್ಟಿ ಪಾನಿಪುರಿ

ಮನೆಯಲ್ಲಿ ಮಾಡುವ ಪಾನಿಪುರಿ ಯಾವಾಗ ತಿಂದ್ರು ಹೊರಗಡೆ ತಿಂದ ಹಾಗೆ ಆಗೋದಿಲ್ಲ. ಅಂಗಡಿ ಅಥವಾ ಹೋಟೆಲ್‌ನಲ್ಲಿ ತಿಂದ ರುಚಿ ಸಿಗೋದೇ ಇಲ್ಲ ಎಂದು ಹಲವರ ಹೇಳುತ್ತಾರೆ. ಅದರಲ್ಲೂ ಪೂರಿಗಳು ಅಷ್ಟೊಂದು ಟೇಸ್ಟಿ ಮತ್ತು ಗರಿಗರಿಯಾಗಿರುವುದಿಲ್ಲ. ಈ ಅಳತೆಗಳೊಂದಿಗೆ ನೀವು ಒಮ್ಮೆ ಪ್ರಯತ್ನಿಸಿದರೆ, ಖಂಡಿತವಾಗಿಯೂ ಉತ್ತಮ ಗರಿಗರಿಯಾದ ಪೂರಿಗಳನ್ನು ಮಾಡಬಹುದು. ನೀವು ಒಂದು ಬಾರಿಗೆ 100 ಪಾನಿಪುರಿಗಳನ್ನು ಮಾಡಬಹುದು. ನೀವು ಅದನ್ನು ಮೊದಲ ಬಾರಿಗೆ ಪ್ರಯತ್ನಿಸಿದಾಗ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಟ್ರೈ ಮಾಡಿ ನೋಡಿ. ಇಲ್ಲವಾದರೆ ನಿಮಗೆ ಇದು ರಗಳೆ ಎನಿಸಬಹುದು.

ಮೊದಲು ಕೆಲವು ಸಲಹೆಗಳನ್ನು ಪಾಲಿಸಿ

ಪಾನಿಪುರಿಗಳನ್ನು ಮಾಡುವಾಗ ನೀವು ಹಿಟ್ಟು ಕಲೆಸಿದ ನಂತರ ಅದನ್ನು ಒದ್ದೆ ಬಟ್ಟೆಯಲ್ಲಿ ಮುಚ್ಚಿಡಿ

ಹಿಟ್ಟನ್ನು ಬೆರೆಸುವಾಗ ಹೆಚ್ಚು ಹುಡಿ ಹಿಟ್ಟನ್ನು ಬಳಸಬೇಡಿ ತೇವ ಸ್ವಲ್ಪ ಹೆಚ್ಚಿರಲಿ

ಎಣ್ಣೆ ಬಿಸಿಯಾದ ನಂತರವೇ ಪಾನಿಪುರಿಗಳನ್ನು ಹುರಿಯಬೇಕು. ಇಲ್ಲದಿದ್ದರೆ ಅದು ಉಬ್ಬುವುದಿಲ್ಲ

ಪಾನಿಪುರಿ ಮಾಡಲು ಬೇಕಾಗುವ ಸಾಮಾಗ್ರಿಗಳು:

2 ಕಪ್ ಸಣ್ಣ ರವಾ

ಅಡಿಗೆ ಸೋಡಾ ಟೀಚಮಚ

ಹಿಟ್ಟು (ಮೈದಾ, ಗೋದಿ)

ಕಾಲು ಕಪ್ ನೀರು

ಉಪ್ಪು ರುಚಿಗೆ ತಕ್ಕಷ್ಟು

2 ಚಮಚ ಎಣ್ಣೆ

ಕರಿಯಲು ಸಾಕಷ್ಟು ಎಣ್ಣೆ

ಪಾನಿಪುರಿ ಮಾಡುವ ವಿಧಾನ:

ದೊಡ್ಡ ಬೌಲ್ ತೆಗೆದುಕೊಳ್ಳಿ. ರವೆ, ಚಮಚ ಎಣ್ಣೆ, ಉಪ್ಪು ಮತ್ತು ಅಡಿಗೆ ಸೋಡಾ ಸೇರಿಸಿ ಮತ್ತು ಅದನ್ನು ಮಿಕ್ಸ್ ಮಾಡಿ.

ನಂತರ ಅದಕ್ಕೆ ಹಿಟ್ಟನ್ನು ಸೇರಿಸಿ. ಹಿಟ್ಟು ಹಾಕುವಾಗ ನೀವು ನಾಲ್ಕರಿಂದ ಐದು ಚಮಳ ಎಣ್ಣೆಯನ್ನೂ ಹಾಕಿ ನಂತರ ನೀರು ಚಿಮುಕಿಸಿ ಮಿಕ್ಸ್‌ ಮಾಡುತ್ತಾ ಬನ್ನಿ

ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟು ಹಾಕಿದರೆ ನೀರು ಹೀರಿಕೊಂಡು ರವೆ ಮೃದುವಾಗುತ್ತದೆ. ಹಿಟ್ಟು ತುಂಬಾ ಮೃದುವಾಗುವುದಿಲ್ಲ. ತುಂಬಾ ಗಟ್ಟಿಯೂ ಆಗಬಾರದು.

ತಪ್ಪಿ ನೀರು ಜಾಸ್ತಿಯಾಗಿ ಹಿಟ್ಟು ಮೆತ್ತಗಾದರೆ ಮತ್ತೆರಡು ಅಥವಾ ಮೂರು ಚಮಚ ರವೆ ಹಾಕಿ ಮತ್ತೆ ಹಿಟ್ಟನ್ನು ಕಲಸಿ.

ಮಿಶ್ರಣವನ್ನು ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಮತ್ತು ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ.

ನಂತರ ಮತ್ತೆ ಕಲಸಿ ಚಪಾತಿ ಲಟ್ಟಣಿಗೆಯಿಂದ ಲಟ್ಟಿಸಿ

ಚಿಕ್ಕ ಚಿಕ್ಕ ಗೋಲಗಳನ್ನು ಮಾಡಿಕೊಳ್ಳಿ

ಪಾನಿಪುರಿ ಕರಿಯುವ ವಿಧಾನ

ಈಗ ಕಡಾಯಿಯಲ್ಲಿ ಎಣ್ಣೆಯನ್ನು ಸುರಿಯಿರಿ ಮತ್ತು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಎಣ್ಣೆಯನ್ನು ಬಿಸಿ ಮಾಡುವ ಮೊದಲು, ಪುರಿ ಮಾಡಿ. ಇದು ನಿಧಾನವಾಗಿ ಬಿಸಿಯಾಗುತ್ತದೆ. ಸಂಪೂರ್ಣ ಬಿಸಿಯಾದ ನಂತರ ಮಾತ್ರ ನೀವು ಪುರಿಗಳನ್ನು ಕರಿಯಬೇಕು. ಒಂದು ಪುರಿ ಬಿಟ್ಟು ನೋಡಿ. ಅದು ಉಬ್ಬಬೇಕು. ಈಗ ಉಳಿದ ಪೂರಿಗಳನ್ನು ಹಾಕಿ ಎರಡೂ ಕಡೆ ಹುರಿಯಿರಿ. ಗೋಲ್ಡನ್ ಬಣ್ಣ ಬಂದರೆ ಸಾಕು.

mysore-dasara_Entry_Point