ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನ ರಾಶಿಯಲ್ಲಿ ಶುಕ್ರ, ಬುಧ, ಸೂರ್ಯನ ಭೇಟಿ; 4 ರಾಶಿಯವರ ಜೀವನದಲ್ಲಿ ಹರಿಯಲಿದೆ ಸಂತೋಷದ ಹೊಳೆ

ಮಿಥುನ ರಾಶಿಯಲ್ಲಿ ಶುಕ್ರ, ಬುಧ, ಸೂರ್ಯನ ಭೇಟಿ; 4 ರಾಶಿಯವರ ಜೀವನದಲ್ಲಿ ಹರಿಯಲಿದೆ ಸಂತೋಷದ ಹೊಳೆ

Planet Transit: ಜೂನ್‌ 12 ರಂದು ಮಿಥುನ ರಾಶಿಗೆ ಶುಕ್ರ ಪ್ರವೇಶಿಸಿದರೆ ಜೂನ್‌ 14 ರಂದು ಬುಧ ಹಾಗೂ ಜೂನ್‌ 15ಕ್ಕೆ ಸೂರ್ಯ ಮಿಥುನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದರ ಪರಿಣಾಮ ಮೇಷ, ಸಿಂಹ ಸೇರಿದಂತೆ 4 ರಾಶಿಯವರಿಗೆ ಲಕ್ಷ್ಮೀ, ಸಂಪತ್ತನ್ನು ನೀಡಿ ಹರಸಲಿದ್ದಾಳೆ.

ಮಿಥುನ ರಾಶಿಯಲ್ಲಿ ಶುಕ್ರ, ಬುಧ, ಸೂರ್ಯನ ಭೇಟಿ; 4 ರಾಶಿಯವರ ಜೀವನದಲ್ಲಿ ಹರಿಯಲಿದೆ ಸಂತೋಷದ ಹೊಳೆ
ಮಿಥುನ ರಾಶಿಯಲ್ಲಿ ಶುಕ್ರ, ಬುಧ, ಸೂರ್ಯನ ಭೇಟಿ; 4 ರಾಶಿಯವರ ಜೀವನದಲ್ಲಿ ಹರಿಯಲಿದೆ ಸಂತೋಷದ ಹೊಳೆ

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಕ್ರಮಣಕ್ಕೆ ವಿಶೇಷ ಸ್ಥಾನಮಾನವಿದೆ. ಗ್ರಹಗಳ ಸಂಚಾರವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ ಕೆಲವು ರಾಶಿಯವರಿಗೆ ಅಶುಭ ಫಲಗಳನ್ನು ನೀಡುತ್ತದೆ. ಕೆಲವೇ ದಿನಗಳಲ್ಲಿ ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ ಮತ್ತು ಸಂಪತ್ತು ನೀಡುವ ಶುಕ್ರ ತಮ್ಮ ಚಲನೆಯನ್ನು ಬದಲಾಯಿಸುತ್ತಿದ್ದಾರೆ. ಈ ಮೂರೂ ಗ್ರಹಗಳು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾರೆ.

ಜೂನ್ 12 ರಂದು ಶುಕ್ರನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ . ಹಾಗೆಯೇ ಬುಧನು ಜೂನ್ 14 ರಂದು ಮಿಥುನ ರಾಶಿಯನ್ನು ಪ್ರವೇಶಿಸಿದರೆ, ಸೂರ್ಯ ಜೂನ್ 15 ರಂದು ಅದೇ ರಾಶಿಗೆ ಪ್ರವೇಶಿಸುತ್ತಾನೆ. ಮಿಥುನ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಜನೆಯಿಂದ 4 ರಾಶಿಯವರಿಗೆ ಬಹಳ ಅನುಕೂಲವಿದೆ. ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರನ ಪ್ರವೇಶದಿಂದ ಯಾವ ರಾಶಿಯವರಿಗೆ ಏನು ಫಲಗಳು ದೊರೆಯಲಿದೆ ನೋಡೋಣ.

ಮೇಷ ರಾಶಿ

ಮಿಥುನ ರಾಶಿಗೆ 3 ಗ್ರಹಗಳು ಪ್ರವೇಶಿಸುವುದರಿಂದ ಮೇಷ ರಾಶಿಗೆ ಶುಭ ಫಲಿತಾಂಶ ದೊರೆಯಲಿದೆ. ಹೊಸ ಕೆಲಸಗಳನ್ನು ಆರಂಭಿಸಲು ಇದು ಶುಭ ಸಮಯ. ನಿಮ್ಮ ವ್ಯವಹಾರಗಳಿಗೆ ಇದು ಅನುಕೂಲಕರ ಸಮಯವಾಗಿದ್ದರೂ, ಎಚ್ಚರಿಕೆಯಿಂದ ಹೆಜ್ಜೆ ಇಡುವುದುಉತ್ತಮ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಹೊಸ ಮನೆ ಅಥವಾ ವಾಹನವನ್ನು ಖರೀದಿಸಲಿದ್ದೀರಿ. ನಿಮ್ಮ ಮೇಲೆ ಲಕ್ಷ್ಮೀದೇವಿಯ ವಿಶೇಷ ಕೃಪೆ ಇದೆ. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಗೌರವ ಹೆಚ್ಚುತ್ತದೆ. ಮನೆಯಲ್ಲಿ ಸಂತೋಷದ ಹೊನಲು ಹರಿಯುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ.

ಮಿಥುನ ರಾಶಿ

3 ಪ್ರಮುಖ ಗ್ರಹಗಳು ಮಿಥುನ ರಾಶಿಯನ್ನು ಪ್ರವೇಶಿಸುವುದರಿಂದ. ನಿಮಗೆ ಲಕ್ಷ್ಮೀ ಒಲಿಯುತ್ತಾಳೆ. ಇದು ವ್ಯಾಪಾರಿಗಳಿಗೆ ಉತ್ತಮ ಸಮಯವಾಗಿದೆ. ಹೊಸ ವಾಹನ ಅಥವಾ ಮನೆ ಖರೀದಿಸಲು ಶುಭ ಕಾಲ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಒಳ್ಳೆ ಲಾಭ ಪಡೆಯಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಆದರೆ ಖರ್ಚಿನ ಬಗ್ಗೆ ಎಚ್ಚರ ವಹಿಸಬೇಕು. ಸೂಕ್ತ ರೀತಿಯಲ್ಲಿ ಹಣ ಉಳಿಸಲು ಯೋಜನೆ ನಿರ್ಮಿಸಿ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ನೀವು ಕೈ ಹಾಕಿದ ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಸಿಂಹ ರಾಶಿ

ಈ ಸಮಯ ವ್ಯಾಪಾರಕ್ಕೆ ಬಹಳ ಅನುಕೂಲಕರವಾಗಿದೆ. ಉತ್ತಮ ಲಾಭ ಇರುತ್ತದೆ . ಆದರೆ ಈ ಅವಧಿಯಲ್ಲಿ ನೀವು ಖರ್ಚುಗಳನ್ನು ನಿಯಂತ್ರಿಸಬೇಕು. ಲಕ್ಷ್ಮೀ ಕೃಪಾ ಕಟಾಕ್ಷದಿಂದ ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ಆಸ್ತಿ ಖರೀದಿಸುವ ಸಾಮರ್ಥ್ಯವಿದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಶುಭ ಸುದ್ದಿ ಕೇಳುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಒಟ್ಟಿನಲ್ಲಿ ನಿಮ್ಮ ಖುಷಿಗೆ ಮಿತಿಯೇ ಇರುವುದಿಲ್ಲ.

ವೃಶ್ಚಿಕ ರಾಶಿ

ಲಕ್ಷ್ಮೀ ಆಶೀರ್ವಾದದಿಂದ ನಿಮ್ಮ ಆದಾಯ ಹೆಚ್ಚಲಿದೆ. ವೆಚ್ಚಗಳು ಕಡಿಮೆಯಾಗುತ್ತವೆ. ವಹಿವಾಟುಗಳಿಗೆ ಈ ತಿಂಗಳು ಅನುಕೂಲಕರವಾಗಿದೆ. ಆರ್ಥಿಕ ವಲಯವು ಬಲವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುವುದು ಉತ್ತಮ. ಹಣ ದೊರೆಯುವ ಸಾಧ್ಯತೆಗಳಿವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಅವಕಾಶವಿದೆ. ಸಂಗಾತಿಯೊಂದಿಗೆ ಸಮಯ ಕಳೆಯಲಿದ್ದೀರಿ. ಬಹಳ ಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.