ದಸರಾ ಹಬ್ಬದ ದಿನ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡದಿರಿ; ನಕಾರಾತ್ಮಕ ಶಕ್ತಿ ಮನೆ, ಮನಸ್ಸನ್ನು ಆವರಿಸಬಹುದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಸರಾ ಹಬ್ಬದ ದಿನ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡದಿರಿ; ನಕಾರಾತ್ಮಕ ಶಕ್ತಿ ಮನೆ, ಮನಸ್ಸನ್ನು ಆವರಿಸಬಹುದು

ದಸರಾ ಹಬ್ಬದ ದಿನ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡದಿರಿ; ನಕಾರಾತ್ಮಕ ಶಕ್ತಿ ಮನೆ, ಮನಸ್ಸನ್ನು ಆವರಿಸಬಹುದು

ಇಂದು (ಅಕ್ಟೋಬರ್ 12) ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವಿಜಯದಶಮಿಯ ಈ ದಿನದಂದು ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬಾರದು. ಇದರಿಂದ ಜೀವನದಲ್ಲಿ ನಕಾರಾತ್ಮಕ ಅಂಶ ಹೆಚ್ಚುತ್ತದೆ. ಬದುಕಿನಲ್ಲಿ ನೆಮ್ಮದಿ ಕೆಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ದಸರಾ ದಿನ ಯಾವ ಯಾವ ಕೆಲಸ ಮಾಡಬಾರದು ನೋಡಿ.

ದಸರಾ ದಿನ ಮಾಡಬಾರದಂತಹ 5 ತಪ್ಪುಗಳಿವು
ದಸರಾ ದಿನ ಮಾಡಬಾರದಂತಹ 5 ತಪ್ಪುಗಳಿವು (PC: Canva)

ವಿಜಯದಶಮಿಯು ಅನ್ಯಾಯದ ವಿರುದ್ಧ ನ್ಯಾಯದ ಗೆಲುವನ್ನು ಸೂಚಿಸುವ ದಿನವಾಗಿದೆ. ಇದು ದುಷ್ಟರ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುವ ದಿನವೂ ಹೌದು. ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ನವರಾತ್ರಿಯ ನಂತರದ ಅಂದರೆ 10ನೇ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ.

ವಿಜಯದಶಮಿಯಂದು ವಿವಿಧ ರೀತಿಯ ಪೂಜೆ, ಪುನಸ್ಕಾರಗಳನ್ನು ಮಾಡುವ ಮೂಲಕ ದುರ್ಗಾಮಾತೆಯನ್ನು ಆರಾಧಿಸಲಾಗುತ್ತದೆ. ಆದರೆ ಈ ದಿನ ಅಪ್ಪಿತಪ್ಪಿಯೂ ಮಾಡಬಾರದಂತಹ ಕೆಲವು ಕೆಲಸಗಳಿವೆ. ಈ ರೀತಿ ಮಾಡುವುದರಿಂದ ಮನೆ–ಮನದಲ್ಲಿ ನಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ದಸರಾ ಹಬ್ಬದ ದಿನ ಯಾವ ತಪ್ಪುಗಳನ್ನು ಮಾಡಬಾರದು ನೋಡಿ.

ಮನೆ ಸ್ವಚ್ಛ ಮಾಡದೇ ಇರುವುದು

ಹಬ್ಬದ ದಿನಗಳಲ್ಲಿ ಸಾಮಾನ್ಯವಾಗಿ ಮನೆಯನ್ನು ಸ್ವಚ್ಛ ಮಾಡುವ ಪದ್ಧತಿ ಇದೆ. ದಸರಾ ಹಬ್ಬದಲ್ಲೂ ತಪ್ಪದೇ ಮನೆ ಸ್ವಚ್ಛ ಮಾಡಲೇಬೇಕು. ಮನೆಯ ಮುಂಬಾಗಿಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯ ಒಳಗೆ ವಸ್ತುಗಳು ಹರಡಿದಂತೆ ಇರಬಾರದು. ದಸರಾ ಹಬ್ಬದ ದಿನ ಮನೆ ಗಲೀಜಾಗಿದ್ದರೆ ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಹಿರಿಯರನ್ನು ಅವಮಾನಿಸುವುದು

ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರನ್ನು ಗೌರವಿಸುವುದು ಬಹಳ ಮುಖ್ಯ. ಹಬ್ಬದ ದಿನ ಹಿರಿಯರಿಗೆ ಗೌರವ ಕೊಡದೆ ಅವಮಾನ ಮಾಡುವವರು ಮಾಡುವ ಕೆಲಸಗಳು ಕೆಡುತ್ತವೆ ಎಂದು ಹೇಳಲಾಗುತ್ತದೆ. ದಸರಾ ದಿನದಂದು ಹಿರಿಯರೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಅವರು ಇಷ್ಟಪಡುವುದನ್ನು ತಂದುಕೊಡಿ. ಅವರಿಷ್ಟದ ಆಹಾರಗಳನ್ನು ಮಾಡಿ ಬಡಿಸಿ. ಹಿರಿಯರ ಮನಸ್ಸು ಸಂತೋಷಗೊಳ್ಳುವುದರಿಂದ ದೇವರು ಕೂಡ ಸಂತುಷ್ಠಿಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಮರ, ಗಿಡಗಳಿಗೆ ಹಾನಿ ಮಾಡದಿರಿ

ನಮ್ಮ ಜೀವನದಲ್ಲಿ ಮರ, ಗಿಡಗಳಿಗೆ ಮಹತ್ವ ನೀಡಬೇಕು. ನಮ್ಮ ಉಸಿರು ನಿಂತಿರುವುದು ಅವುಗಳ ಮೇಲೆ ಎಂಬುದನ್ನು ಮರೆಯಬಾರದು. ದಸರಾ ಹಬ್ಬದ ದಿನಂದು ಮರ, ಗಿಡಗಳಿಗೆ ವಿಶೇಷ ಮಹತ್ವ ನೀಡಬೇಕು. ಈ ದಿನ, ತಪ್ಪಾಯೂ ಸಹ, ಮರ ಮತ್ತು ಸಸ್ಯಗಳಿಗೆ ಹಾನಿ ಮಾಡಬಾರದು. ಈ ದಿನ ಸಾಧ್ಯವಾದರೆ ಗಿಡ ನೆಡಬೇಕು. ಇದನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ.

ಈ ಆಹಾರ, ವಸ್ತುಗಳಿಂದ ದೂರವಿರಿ

ದಸರಾ ಹಬ್ಬದ ದಿನ ಸಾತ್ವಿಕ ಆಹಾರ ತಿನ್ನುವುದಕ್ಕೆ ಗಮನ ಕೊಡಬೇಕು. ಮಾಂಸಾಹಾರ, ಮಧ್ಯಪಾನ ಹಾಗೂ ಧೂಮಪಾನ ಮಾಡುವುದು ಆರೋಗ್ಯಕ್ಕೆ ಒಳಿತಲ್ಲ. ಈ ದಿನ ಮಸಾಲೆಯುಕ್ತ ಆಹಾರ ತ್ಯಜಿಸುವುದು ಕೂಡ ಉತ್ತಮ.

ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ

ದಸರಾ ದಿನದಂದು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ತಪ್ಪಿಸಿ. ಈ ಅಭ್ಯಾಸವನ್ನು ದಸರಾಕ್ಕೆ ಮಾತ್ರವಲ್ಲದೆ ನಿಮ್ಮ ಜೀವನದಲ್ಲಿ ನಿಯಮದಂತೆ ಅನುಸರಿಸಿ. ದುರುದ್ದೇಶದಿಂದ ಇತರರಿಗೆ ಕೆಟ್ಟದ್ದಾಗಿ ಮಾತನಾಡುವುದರಿಂದ ಇತರರಿಗೆ ಹಾನಿ ಮಾಡುವುದಿಲ್ಲ ಆದರೆ ನಿಮಗೇ ಹಾನಿಯಾಗುವುದು ನೆನಪಿರಲಿ. ಅಂತಹ ಪರಿಸ್ಥಿತಿಯಲ್ಲಿ ಈ ದಸರಾದಲ್ಲಿ ರಾವಣನ ದಹನದ ಜೊತೆಗೆ ನಿಮ್ಮಲ್ಲಿ ಈ ಅಭ್ಯಾಸವನ್ನು ಸುಟ್ಟುಹಾಕಿ. ಮನಸ್ಸಿನಲ್ಲಿರುವ ಎಲ್ಲಾ ಋಣಾತ್ಮಕ ಅಂಶಗಳನ್ನು ದೂರ ಮಾಡಿ.

ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ನಂಬಿಕೆಗಳನ್ನು ಆಧರಿಸಿದ ಬರಹವಾಗಿದೆ. ಅಂತರ್ಜಾಲದಲ್ಲಿ ದೊರೆತ ವಿವರಗಳನ್ನು ಆಧರಿಸಿದೆ. ಇದು ಮಾಹಿತಿಗಾಗಿ ಮಾತ್ರ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಪುಷ್ಟೀಕರಿಸುವುದಿಲ್ಲ. ಇದನ್ನು ಅನುಸರಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.