ವಿರಾಟ್ ಕೊಹ್ಲಿಗೆ 2024ರ ಐಪಿಎಲ್ ಆರೆಂಜ್ ಕ್ಯಾಪ್; ಚಾಂಪಿಯನ್ ತಂಡದ ಸುನಿಲ್ ನರೇನ್‌ ಟೂರ್ನಿ ಶ್ರೇಷ್ಠ, ಯಾರಿಗೆ ಯಾವ ಪ್ರಶಸ್ತಿ ಸಿಕ್ತು
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿಗೆ 2024ರ ಐಪಿಎಲ್ ಆರೆಂಜ್ ಕ್ಯಾಪ್; ಚಾಂಪಿಯನ್ ತಂಡದ ಸುನಿಲ್ ನರೇನ್‌ ಟೂರ್ನಿ ಶ್ರೇಷ್ಠ, ಯಾರಿಗೆ ಯಾವ ಪ್ರಶಸ್ತಿ ಸಿಕ್ತು

ವಿರಾಟ್ ಕೊಹ್ಲಿಗೆ 2024ರ ಐಪಿಎಲ್ ಆರೆಂಜ್ ಕ್ಯಾಪ್; ಚಾಂಪಿಯನ್ ತಂಡದ ಸುನಿಲ್ ನರೇನ್‌ ಟೂರ್ನಿ ಶ್ರೇಷ್ಠ, ಯಾರಿಗೆ ಯಾವ ಪ್ರಶಸ್ತಿ ಸಿಕ್ತು

2024 ಐಪಿಎಲ್ ಚಾಂಪಿಯನ್ ತಂಡದ ಆರಂಭಿಕ ಬ್ಯಾಟರ್ ಕಂ ಸಿನ್ನರ್ ಸುನಿಲ್ ನರೇಟ್ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. 17ನೇ ಆವೃತ್ತಿಯಲ್ಲಿ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಅನ್ನೋದರ ಸಂಪೂರ್ಣ ಪಟ್ಟಿ ಇಲ್ಲಿದೆ.

ವಿರಾಟ್ ಕೊಹ್ಲಿಗೆ 2024ರ ಐಪಿಎಲ್ ಆರೆಂಜ್ ಕ್ಯಾಪ್; ಚಾಂಪಿಯನ್ ತಂಡದ ಸುನಿಲ್ ನರೇನ್‌ ಟೂರ್ನಿ ಶ್ರೇಷ್ಠ, ಯಾರಿಗೆ ಯಾವ ಪ್ರಶಸ್ತಿ ಸಿಕ್ತು ಅನ್ನೋದರ ವಿವರ ಇಲ್ಲಿದೆ.
ವಿರಾಟ್ ಕೊಹ್ಲಿಗೆ 2024ರ ಐಪಿಎಲ್ ಆರೆಂಜ್ ಕ್ಯಾಪ್; ಚಾಂಪಿಯನ್ ತಂಡದ ಸುನಿಲ್ ನರೇನ್‌ ಟೂರ್ನಿ ಶ್ರೇಷ್ಠ, ಯಾರಿಗೆ ಯಾವ ಪ್ರಶಸ್ತಿ ಸಿಕ್ತು ಅನ್ನೋದರ ವಿವರ ಇಲ್ಲಿದೆ.

ಚೆನ್ನೈ(ತಮಿಳುನಾಡು): ಚೆಪಾನ್ ಸ್ಟೇಡಿಯಂನಲ್ಲಿ ನಡೆದ 2024ರ ಐಪಿಎಲ್ ಕೋಲ್ಕತ್ತಾ ನೈಟ್ ರೈಡರ್ಸ್ ದಾಳಿಗೆ ಬೆಚ್ಚಿಬಿದ್ದ ಸನ್ ರೈಸರ್ಸ್ ಹೈದರಾಬಾದ್ ಎಲ್ಲೂ ಕೂಟ ತುಟಿಕ್ ಪಿಟಿಕ್ ಎನ್ನದೆ ಸೋಲು ಒಪ್ಪಿಕೊಂಡಿತು. ಲೀಗ್ ಹಂತದಿಂದಲೂ ದಾಖಲೆಯ ಹಾಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸನ್ ರೈಸರ್ಸ್ ಫೈನಲ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದರು. ಇದರ ಪರಿಣಾಮವಾಗಿ ಕೆಕೆಆರ್ 8 ವಿಕೆಟ್‌ಗಳಿಂದ ಗೆದ್ದು 17ನೇ ಆವೃತ್ತಿಯ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಈ ಟೂರ್ನಿಯಲ್ಲಿ ಕೆಕೆಆರ್ ಪರ ಅದ್ಭುತ್ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಸುನಿಲ್ ನರೇನ್ ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೆಕೆಆರ್‌ನ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೇನ್ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ಅವರು 180.74 ಸ್ಟ್ರೈಕ್ ರೇಟ್‌ನಲ್ಲಿ 488 ರನ್ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 6.69 ರ ಎಕಾನಮಿ ರೇಟ್‌ನಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಅವರು ಐಪಿಎಲ್ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿರಾಟ್‌ಗೆ ಆರೆಂಜ್, ಹರ್ಷಲ್‌ಗೆ ಪರ್ಪಲ್ ಕ್ಯಾಪ್

2024ರ ಐಪಿಎಲ್‌ನಲ್ಲಿ ಯಾವ ಆಟಗಾರರು ಯಾವ ಪ್ರಶಸ್ತಿಯನ್ನು ಪಡೆದರು ಎಂಬುದನ್ನು ನೋಡುವುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಅವರು ನಿರೀಕ್ಷೆಯಂತೆ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಲೀಗ ಹಂತದಲ್ಲಿ 14 ಪಂದ್ಯಗಳು ಹಾಗೂ 1 ಪ್ಲೇ-ಆಫ್ ಪಂದ್ಯ ಸೇರಿ ಒಟ್ಟು 15 ಪಂದ್ಯಗಳಿಂದ ಕಿಂಗ್ ಕೊಹ್ಲಿ 741 ರನ್ ಗಳಿಸಿದ್ದಾರೆ. ವಿರಾಟ್‌ಗೆ ಐಪಿಎಲ್‌ನಲ್ಲಿ ಎರಡನೇ ಬಾರಿ ಆರೆಂಜ್ ಕ್ಯಾಪ್ ಪಡೆದ ಏಕೈಕ ಭಾರತೀಯ ಆಟಗಾರ ಎನಿಸಿದ್ದಾನೆ. ವಿರಾಟ್ ಕೊಹ್ಲಿ ಪರವಾಗಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇನ್ನ ಪಂಜಾಬ್ ಕಿಂಗ್ಸ್ ತಂಡ ಲೀಗ್ ಹಂತದಿಂದಲೇ ಹೊರ ಹೋದರೂ ಆ ತಂಡದ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಅನ್ನು ಗೆದ್ದುಕೊಂಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಹರ್ಷಲ್ 14 ಲೀಗ್ ಪಂದ್ಯಗಳಿಂದ ಒಟ್ಟು 24 ವಿಕೆಟ್ ಕಬಳಿಸಿದ್ದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿತೀಶ್ ರೆಡ್ಡಿಗೆ ಉದಯೋನ್ಮುಖ ಯುವ ಆಟಗಾರ ಪ್ರಶಸ್ತಿ

ಹೈದರಾಬಾದ್‌ ತಂಡದ ಯುವ ಬ್ಯಾಟರ್ ನಿತೀಶ್ ರೆಡ್ಡಿ ಉದಯೋನ್ಮುಖ ಯುವ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ರೆಡ್ಡಿ 300 ಕ್ಕೂ ಹೆಚ್ಚು ರನ್ ಗಳಿಸಿದ್ದು, 3 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಕಂಡರು ಈ ತಂಡ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆರಂಭಿಕ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಆರಂಭದಿಂದಲೇ ಅಬ್ಬರಿಸುತ್ತಿದ್ದರು. ಇವರ ವಿಕೆಟ್‌ಗಳ ಬಳಿಕ ಕ್ರೀಸ್‌ಗೆ ಬರುತ್ತಿದ್ದ ನಿತೀಶ್ ರೆಡ್ಡಿ ತಂಡವನ್ನು ಮೊತ್ತ ಹೆಚ್ಚಿಸಲು ನೆರವಾಗುತ್ತಿದ್ದರರು. ಫೈನಲ್ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದ ಮಿಚೆಲ್ ಸ್ಟ್ರಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.

2024ರ ಐಪಿಎಲ್‌ನಲ್ಲಿ ಯಾರಿಗೆ ಯಾವ ಪ್ರಶಸ್ತಿ ಎಂಬುದರ ಸಂಪೂರ್ಣ ಪಟ್ಟಿ

  1. ಟೂರ್ನಿ ಶ್ರೇಷ್ಠ- ಸುನಿಲ್ ನರೇನ್ (488 ರನ್, 17 ವಿಕೆಟ್, 8 ಕ್ಯಾಚ್)
  2. ಫೈನಲ್ ಪಂದ್ಯ ಶ್ರೇಷ್ಠ - ಮಿಚೆಲ್ ಸ್ಟಾರ್ಕ್ (2/14)
  3. ಉದಯೋನ್ಮುಖ ಆಟಗಾರ - ನಿತೀಶ್ ರೆಡ್ಡಿ (300 ರನ್, 3 ವಿಕೆಟ್)
  4. ಆರೆಂಜ್ ಕ್ಯಾಪ್ - ವಿರಾಟ್ ಕೊಹ್ಲಿ (741 ರನ್)
  5. ಪರ್ಪಲ್ ಕ್ಯಾಪ್ - ಹರ್ಷಲ್ ಪಟೇಲ್ (24 ವಿಕೆಟ್)
  6. ಟೂರ್ನಿಯ ಶ್ರೇಷ್ಠ ಕ್ಯಾಚ್ (ರಮಣದೀಪ್ ಸಿಂಗ್ (ಎಲ್‌ಎಸ್‌ಜಿ ವಿರುದ್ಧ)
  7. ಅತ್ಯುತ್ತಮ ಸ್ಟ್ರೈಕ್ ರೇಟ್ - ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ (330 ರನ್, 234.04 ಸ್ಟ್ರೈಕ್ ರೇಟ್)
  8. ವೈಯಕ್ತಿಕ ಗರಿಷ್ಠ ರನ್ - ಮಾರ್ಕಸ್ ಸ್ಟೋಯ್ನಿಸ್ (124 ರನ್ ಸಿಎಸ್‌ಕೆ ವಿರುದ್ಧ)
  9. ಟೂರ್ನಿಯಲ್ಲಿ ಗರಿಷ್ಠ 50 ಪ್ಲಸ್ ರನ್ - ವಿರಾಟ್ ಕೊಹ್ಲಿ (6)
  10. ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್‌ಗಳು - ಅಭಿಷೇಕ್ ಶರ್ಮಾ (42)
  11. ಟೂರ್ನಿಯಲ್ಲಿ ಗರಿಷ್ಠ ಕ್ಯಾಚ್‌ ಪಡೆದವರು - ಅಕ್ಷರ್ ಪಟೇಲ್ (13)
  12. ಅತ್ಯುತ್ತಮ ಬೌಲಿಂಗ್ - ಸಂದೀಪ್ ಶರ್ಮಾ (ಮುಂಬೈ ವಿರುದ್ಧ 5 ವಿಕೆಟ್‌ಗೆ 18 ರನ್)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner