ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Prize Money: ಐಪಿಎಲ್ ಚಾಂಪಿಯನ್ ಕೆಕೆಆರ್​ ಪಡೆದ ಬಹುಮಾನದ ಮೊತ್ತವೆಷ್ಟು? 4ನೇ ಸ್ಥಾನದ ಆರ್​ಸಿಬಿಗೆ ಸಿಕ್ಕಿದ್ದೆಷ್ಟು?

IPL 2024 Prize Money: ಐಪಿಎಲ್ ಚಾಂಪಿಯನ್ ಕೆಕೆಆರ್​ ಪಡೆದ ಬಹುಮಾನದ ಮೊತ್ತವೆಷ್ಟು? 4ನೇ ಸ್ಥಾನದ ಆರ್​ಸಿಬಿಗೆ ಸಿಕ್ಕಿದ್ದೆಷ್ಟು?

IPL 2024 Prize Money: 2024ರ ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಡೆದ ಬಹುಮಾನದ ಮೊತ್ತವೆಷ್ಟು, ರನ್ನರ್​ಅಪ್​ ಸನ್​ರೈಸರ್ಸ್​ ಹೈದರಾಬಾದ್ ಸಿಕ್ಕ ಹಣವೆಷ್ಟು? ಇಲ್ಲಿದೆ ವಿವರ.

IPL 2024 Prize Money: ಚಾಂಪಿಯನ್ ಕೆಕೆಆರ್​ ಪಡೆದ ಬಹುಮಾನದ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕಿದ್ದೆಷ್ಟು?
IPL 2024 Prize Money: ಚಾಂಪಿಯನ್ ಕೆಕೆಆರ್​ ಪಡೆದ ಬಹುಮಾನದ ಮೊತ್ತವೆಷ್ಟು? 4ನೇ ಸ್ಥಾನಿ ಆರ್​ಸಿಬಿಗೆ ಸಿಕ್ಕಿದ್ದೆಷ್ಟು?

IPL 2024 Prize Money: ಮಾರ್ಚ್​ 22ರಿಂದ ನಿರಂತರ ಮನರಂಜನೆಯ ರಸದೌತಣ ಉಣಬಡಿಸಿದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ​​ (Indian Premier League-2024) ಕೊನೆಗೂ ತೆರೆಬಿದ್ದಿದೆ. ವಿಶ್ವ ಪ್ರಸಿದ್ಧ ಲೀಗ್​​​ನಲ್ಲಿ ಈ ಬಾರಿಯೂ 10 ತಂಡಗಳ ನಡುವಿನ ಸೆಣಸಾಟದ ನಂತರ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಚಾಂಪಿಯನ್ ಆಗಿದೆ. ಕಿಕ್ಕಿರಿದು ತುಂಬಿದ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಫೈನಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದ ಕೆಕೆಆರ್​ ಮೂರನೇ ಬಾರಿಗೆ ಟ್ರೋಫಿಯನ್ನು ಒಲಿಸಿಕೊಂಡಿತು.

ಟ್ರೆಂಡಿಂಗ್​ ಸುದ್ದಿ

46.5 ಕೋಟಿ ಬಹುಮಾನದ ಮೊತ್ತ

ವಿಶ್ವ ನಗದು ಸಮೃದ್ಧ ಲೀಗ್​​ ಚಾಂಪಿಯನ್​​ ಆಗಿ ಹೊರ ಹೊಮ್ಮಿದ ತಂಡಕ್ಕೆ ಎಷ್ಟು ಬಹುಮಾನ ಸಿಗಲಿದೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಅದಕ್ಕೆ ನಾವಿಲ್ಲಿ ಉತ್ತರ ನೀಡುತ್ತೇವೆ. ಒಟ್ಟು ಬಹುಮಾನದ ಮೊತ್ತ 46.5 ಕೋಟಿ ಇರಲಿದೆ. ಮಾರ್ಚ್​ 22ರಿಂದ ಆರಂಭವಾಗುವ ಐಪಿಎಲ್​ ಮೆಗಾ ಟೂರ್ನಿ, 65 ದಿನಗಳ ಕಾಲ ನಂತರ ಅಂದರೆ ಇಂದು ಮೇ 26ರ ಭಾನುವಾರಕ್ಕೆ ಕೊನೆಗೊಂಡಿದೆ. ಲೀಗ್​​​ ಹಂತದಲ್ಲಿ 70 ಪಂದ್ಯಗಳು ನಡೆದವು.

 • ಫೈನಲ್​​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 20 ಕೋಟಿ ಸಿಗಲಿದೆ.
 • ಫೈನಲ್‌ನಲ್ಲಿ ಸೋತು 2ನೇ ಸ್ಥಾನ ಪಡೆದ ಸನ್​ರೈಸರ್ಸ್ ಹೈದರಾಬಾದ್ ತಂಡ (ರನ್ನರ್​ಅಪ್​​) 12.50 ಕೋಟಿ ಪಡೆಯಲಿದೆ.
 • 3ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್​ ತಂಡ 7 ಕೋಟಿ ಬಹುಮಾನವಾಗಿ ಸ್ವೀಕರಿಸಲಿದೆ
 • 4ನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.50 ಕೋಟಿಗೆ ತೃಪ್ತಿಪಟ್ಟುಕೊಂಡಿದೆ.

ಯಾವೆಲ್ಲಾ ತಂಡಗಳು ಐಪಿಎಲ್​ ಪ್ರಶಸ್ತಿ ಗೆದ್ದಿವೆ?

 • ಮುಂಬೈ ಇಂಡಿಯನ್ಸ್​​ ಐದು ಬಾರಿ (2013, 2015, 2017, 2019, 2020)
 • ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕು ಬಾರಿ (2010, 2011, 2018, 2021)
 • ಕೋಲ್ಕತ್ತಾ ನೈಟ್​ ರೈಡರ್ಸ್​ 2 ಬಾರಿ (2012, 2014, 2024)
 • ರಾಜಸ್ಥಾನ​ ರಾಯಲ್ಸ್​​​ (2008)
 • ಡೆಕ್ಕನ್​ ಚಾರ್ಜರ್ಸ್​​ (2009)
 • ಸನ್​​ರೈಸರ್ಸ್​ ಹೈದರಾಬಾದ್​ (2016)
 • ಗುಜರಾತ್​ ಟೈಟಾನ್ಸ್​ (2022)

ಇದನ್ನೂ ಓದಿ: 10 ವರ್ಷ ಕೆಕೆಆರ್ ಜೊತೆಗಿರುವಂತೆ ಗೌತಮ್‌ ಗಂಭೀರ್‌ಗೆ ಖಾಲಿ ಚೆಕ್ ನೀಡಿದ್ರಾ ಶಾರುಖ್ ಖಾನ್; ವರದಿ ಹೇಳಿದ್ದೇನು?

ಯಾವ ತಂಡಗಳು ಇನ್ನೂ ಪ್ರಶಸ್ತಿ ಗೆದ್ದಿಲ್ಲ?

 • ರಾಯಲ್​ ಚಾಲೆಂಜರ್ಸ್ ಬೆಂಗಳೂರು (3 ಬಾರಿ ರನ್ನರ್​ಅಪ್​)
 • ಪಂಜಾಬ್​ ಕಿಂಗ್ಸ್​ (1 ಬಾರಿ ರನ್ನರ್​​ಅಪ್​)
 • ಡೆಲ್ಲಿ ಕ್ಯಾಪಿಟಲ್ಸ್​ (1 ಬಾರಿ ರನ್ನರ್​ಅಪ್​​)
 • ಲಕ್ನೋ ಸೂಪರ್ ಜೈಂಟ್ಸ್​​​ (ಎಲಿಮಿನೇಟರ್​​ ಹಂತ)

2008-2009ರಲ್ಲಿ ಮೊದಲ ಎರಡು ಸೀಸನ್​​​ನಲ್ಲಿ ವಿಜೇತರಿಗೆ 4.8 ಕೋಟಿ ರೂಪಾಯಿ ನಗದು ಬಹುಮಾನ ಮತ್ತು ರನ್ನರ್​ಅಪ್​ ತಂಡಕ್ಕೆ 2.4 ಕೋಟಿ ನೀಡಲಾಗಿತ್ತು. ಐಪಿಎಲ್​ ಕ್ರೇಜ್​ ಜೊತೆಗೆ ಅದರಿಂದ ಬರುವ ಆದಾಯವೂ ದುಪ್ಪಟ್ಟಾಗಿದೆ. ಹಾಗಾಗಿ, ಹಂತ ಹಂತವಾಗಿ ಐಪಿಎಲ್​ ಬಹುಮಾನದ ಮೊತ್ತ ಏರಿಕೆಯಾಗುತ್ತಲೇ ಬಂದಿದೆ. ಸದ್ಯ 2019ರಿಂದ ಬಹುಮಾನ ಮೊತ್ತ ಬದಲಾವಣೆ ಕಂಡಿಲ್ಲ. ಕಳೆದ ಬಾರಿ ಗುಜರಾತ್​ ಟೈಟಾನ್ಸ್ ತಂಡವು ರನ್ನರ್​ಅಪ್​ ಆಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿತ್ತು.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ