ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಕೆಆರ್‌ ನೂತನ ಚಾಂಪಿಯನ್‌; 2008ರಿಂದ 2024ರವರೆಗಿನ ಐಪಿಎಲ್‌ ಟ್ರೋಫಿ ವಿಜೇತರ ಪಟ್ಟಿ ಇಲ್ಲಿದೆ

ಕೆಕೆಆರ್‌ ನೂತನ ಚಾಂಪಿಯನ್‌; 2008ರಿಂದ 2024ರವರೆಗಿನ ಐಪಿಎಲ್‌ ಟ್ರೋಫಿ ವಿಜೇತರ ಪಟ್ಟಿ ಇಲ್ಲಿದೆ

ಈ ಹಿಂದೆ 2012 ಹಾಗೂ 2014ರಲ್ಲಿ ಐಪಿಎಲ್‌ ಟ್ರೋಫಿ ಗೆದ್ದಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು, ಗಂಭೀರ್‌ ಮಾರ್ಗದರ್ಶನದಲ್ಲಿ ಮತ್ತೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಐಪಿಎಲ್‌ ಇತಿಹಾಸದಲ್ಲಿ ಈವರೆಗೆ ಕಪ್‌ ಗೆದ್ದ ತಂಡಗಳು ಯಾವುವು ಎಂಬುದನ್ನು ನೋಡೋಣ.

2008ರಿಂದ 2024ರವರೆಗಿನ ಐಪಿಎಲ್‌ ಟ್ರೋಫಿ ವಿಜೇತರ ಪಟ್ಟಿ ಇಲ್ಲಿದೆ
2008ರಿಂದ 2024ರವರೆಗಿನ ಐಪಿಎಲ್‌ ಟ್ರೋಫಿ ವಿಜೇತರ ಪಟ್ಟಿ ಇಲ್ಲಿದೆ (AP)

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಐಪಿಎಲ್‌ 2024ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಶ್ರೇಯಸ್‌ ಅಯ್ಯರ್‌ ಬಳಗವು ಐಪಿಎಲ್‌ ಇತಿಹಾಸದಲ್ಲಿ ಮೂರನೇ ಟ್ರೋಫಿಗೆ ಮುತ್ತಿಟ್ಟಿದೆ. ಎಸ್‌ಆರ್‌ಎಚ್‌ ನೀಡಿದ ಸಾಧಾರಣ 113 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಕೆಕೆಆರ್‌, 11 ಓವರ್‌ಗಳೊಳಗೆ ಮುಂಚಿತವಾಗಿ ಚೇಸಿಂಗ್‌ ಪೂರ್ಣಗೊಳಿಸಿತು. ಮಿಚೆಲ್‌ ಸ್ಟಾರ್ಕ್‌, ವರುಣ್‌ ಚಕ್ರವರ್ತಿ ಹಾಗೂ ರಸೆಲ್‌ ಬೌಲಿಂಗ್‌ನಲ್ಲಿ ಮಿಂಚಿದರೆ, ವೆಂಕಟೇಶ್‌ ಅಯ್ಯರ್‌ ಬ್ಯಾಟಿಂಗ್‌ನಲ್ಲಿ ಸಿಡಿದರು.

ಟ್ರೆಂಡಿಂಗ್​ ಸುದ್ದಿ

ಈ ಹಿಂದೆ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ 2012 ಹಾಗೂ 2014ರಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದೀಗ ಗಂಭೀರ್‌ ಮಾರ್ಗದರ್ಶನದಲ್ಲಿ ತಂಡ ಮತ್ತೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳ ಪಟ್ಟಿಯಲ್ಲಿ ಕೆಕೆಆರ್‌ ಮೂರನೇ ಸ್ಥಾನದಲ್ಲಿದೆ. ಹಾಗಿದ್ದರೆ ಐಪಿಎಲ್‌ ಇತಿಹಾಸದಲ್ಲಿ ಈವರೆಗೆ ಯಾವ ತಂಡಗಳು ಚಾಂಪಿಯನ್‌ ಪಟ್ಟ ಅಲಂಕರಿಸಿವೆ ಎಂಬುದನ್ನು ನೋಡೋಣ.

ಐಪಿಎಲ್‌ ಟ್ರೋಫಿ ವಿಜೇತರ ಪಟ್ಟಿ

ವರ್ಷವಿನ್ನರ್ಸ್ರನ್ನರ್‌ ಅಪ್
2008 ರಾಜಸ್ಥಾನ್ ರಾಯಲ್ಸ್ಚೆನ್ನೈ ಸೂಪರ್ ಕಿಂಗ್ಸ್
2009 ಡೆಕ್ಕನ್ ಚಾರ್ಜರ್ಸ್ರಾಯಲ್ ಚಾಲೆಂಜರ್ಸ್ ಬೆಂಗಳೂರು
2010ಚೆನ್ನೈ ಸೂಪರ್ ಕಿಂಗ್ಸ್ಮುಂಬೈ ಇಂಡಿಯನ್ಸ್
2011ಚೆನ್ನೈ ಸೂಪರ್ ಕಿಂಗ್ಸ್ರಾಯಲ್ ಚಾಲೆಂಜರ್ಸ್ ಬೆಂಗಳೂರು
2012ಕೋಲ್ಕತ್ತಾ ನೈಟ್ ರೈಡರ್ಸ್ಚೆನ್ನೈ ಸೂಪರ್ ಕಿಂಗ್ಸ್
2013ಮುಂಬೈ ಇಂಡಿಯನ್ಸ್ಚೆನ್ನೈ ಸೂಪರ್ ಕಿಂಗ್ಸ್
2014ಕೋಲ್ಕತ್ತಾ ನೈಟ್ ರೈಡರ್ಸ್ಕಿಂಗ್ಸ್ XI ಪಂಜಾಬ್
2015ಮುಂಬೈ ಇಂಡಿಯನ್ಸ್ಚೆನ್ನೈ ಸೂಪರ್ ಕಿಂಗ್ಸ್
2016ಸನ್‌ರೈಸರ್ಸ್ ಹೈದರಾಬಾದ್ರಾಯಲ್ ಚಾಲೆಂಜರ್ಸ್ ಬೆಂಗಳೂರು
2017ಮುಂಬೈ ಇಂಡಿಯನ್ಸ್ರೈಸಿಂಗ್ ಪುಣೆ ಸೂಪರ್‌ಜೈಂಟ್
2018ಚೆನ್ನೈ ಸೂಪರ್ ಕಿಂಗ್ಸ್ಸನ್‌ರೈಸರ್ಸ್ ಹೈದರಾಬಾದ್
2019 ಮುಂಬೈ ಇಂಡಿಯನ್ಸ್ಚೆನ್ನೈ ಸೂಪರ್ ಕಿಂಗ್ಸ್
2020 ಮುಂಬೈ ಇಂಡಿಯನ್ಸ್ಡೆಲ್ಲಿ ಕ್ಯಾಪಿಟಲ್ಸ್
2021ಚೆನ್ನೈ ಸೂಪರ್ ಕಿಂಗ್ಸ್ಕೋಲ್ಕತ್ತಾ ನೈಟ್ ರೈಡರ್ಸ್
2022ಗುಜರಾತ್ ಟೈಟಾನ್ಸ್ರಾಜಸ್ಥಾನ್ ರಾಯಲ್ಸ್
2023ಚೆನ್ನೈ ಸೂಪರ್ ಕಿಂಗ್ಸ್ಗುಜರಾತ್ ಟೈಟಾನ್ಸ್
2024ಕೋಲ್ಕತ್ತಾ ನೈಟ್ ರೈಡರ್ಸ್ಸನ್‌ರೈಸರ್ಸ್ ಹೈದರಾಬಾದ್

ಫೈನಲ್‌ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್‌ಗೆ ತೆರೆ ಬಿದ್ದಿದೆ. ಮುಂದೆ ಕ್ರಿಕೆಟ್‌ ಅಭಿಮಾನಿಗಳ ಗಮನ ಟಿ20 ವಿಶ್ವಕಪ್‌ನತ್ತ ವಾಲಲಿದೆ.

ಟಿ20 ವರ್ಲ್ಡ್‌ಕಪ್ 2024