ಕನ್ನಡ ಸುದ್ದಿ / ಕ್ರಿಕೆಟ್ / ಏಷ್ಯಾಕಪ್ /
ಏಷ್ಯಾಕಪ್ ವಿಜೇತರು
ಇಲ್ಲಿಯವರೆಗೆ ಏಷ್ಯಾಕಪ್ ಕ್ರಿಕೆಟ್ ಗೆದ್ದ ತಂಡಗಳ ವಿವರಗಳನ್ನು ಒಮ್ಮೆ ಅವಲೋಕಿಸೋಣ. ಏಷ್ಯಾಕಪ್‌ನ ಮೊದಲ ಆವೃತ್ತಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ 1984ರಲ್ಲಿ ನಡೆಯಿತು. ಈ ಪಂದ್ಯ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಿತು. ಮೊದಲ ಪಂದ್ಯವು ಪಾಕಿಸ್ತಾನ ಮತ್ತು ಹೊಸ ಐಸಿಸಿ ಸದಸ್ಯ ದೇಶವಾಗಿದ್ದ ಶ್ರೀಲಂಕಾ ನಡುವೆ ನಡೆಯಿತು. ಮೊದಲ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದ ಶ್ರೀಲಂಕಾ ಎರಡನೇ ಸ್ಥಾನ ಗಳಿಸಿತು. ಪಾಕಿಸ್ತಾನವು ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಶ್ರೀಲಂಕಾ 1986 ರ ಪಂದ್ಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ನಂತರ ಭಾರತ 1988, 1990, 1995ರಲ್ಲಿ ಸತತ ಗೆಲುವು ಸಾಧಿಸಿತು. ಶ್ರೀಲಂಕಾ 1997 ರಲ್ಲಿ ಮತ್ತು ಪಾಕಿಸ್ತಾನ 2000 ರಲ್ಲಿ ಚಾಂಪಿಯನ್ ಆದವು. 2004 ಮತ್ತು 2008ರಲ್ಲಿ ಶ್ರೀಲಂಕಾ ಸತತವಾಗಿ ಚಾಂಪಿಯನ್ ಆಯಿತು. ನಂತರ 2010ರಲ್ಲಿ ಭಾರತ ಹಾಗೂ 2012ರಲ್ಲಿ ಪಾಕಿಸ್ತಾನ 2ನೇ ಬಾರಿ ಚಾಂಪಿಯನ್ ಆದವು. 2014ರಲ್ಲಿ ಶ್ರೀಲಂಕಾ ಹಾಗೂ 2016 ಮತ್ತು 2018ರಲ್ಲಿ ಭಾರತ ಗೆದ್ದಿತ್ತು. 2016ರಲ್ಲಿ ಏಷ್ಯಾಕಪ್ ಪಂದ್ಯಾವಳಿಯು ಟಿ20 ಮಾದರಿಯಲ್ಲಿ ನಡೆಯಿತು ಎನ್ನುವುದು ಗಮನಾರ್ಹ ಸಂಗತಿ. ಆಗ ಭಾರತ ಜಯಗಳಿಸಿತ್ತು. 2022 ರಲ್ಲಿ, ಟಿ20 ಮಾದರಿಯಲ್ಲಿ ಮತ್ತೊಮ್ಮೆ ಪಂದ್ಯಾವಳಿ ನಡೆದಾಗ ಶ್ರೀಲಂಕಾ ಚಾಂಪಿಯನ್ ಆಯಿತು. ಈವರೆಗೆ ಭಾರತ 7 ಬಾರಿ ಹಾಗೂ ಶ್ರೀಲಂಕಾ 6 ಬಾರಿ ಏಷ್ಯಾಕಪ್ ಗೆದ್ದುಕೊಂಡಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಏಷ್ಯಾಕಪ್‌ನಲ್ಲಿ ಟಿ20 ಹಾಗೂ 50 ಓವರ್‌ಗಳ ಏಕದಿನ ಪಂದ್ಯಗಳು, ಹೀಗೆ ಎರಡೂ ಸ್ವರೂಪದಲ್ಲಿ ಪಂದ್ಯಗಳು ನಡೆಯುತ್ತವೆ.
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಒಟ್ಟು 2 ಬಾರಿ ಚಾಂಪಿಯನ್ ಆಗಿದೆ. 2012ರಲ್ಲಿ ಪಾಕಿಸ್ತಾನ ತಂಡವು ಕೊನೆಯ ಬಾರಿ ಚಾಂಪಿಯನ್‌ಷಿಪ್ ಗೆದ್ದಿತ್ತು. ನಾಲ್ಕನೇ ಆವೃತ್ತಿಯು 1990-91ರ ಅವಧಿಯಲ್ಲಿ ಭಾರತದಲ್ಲಿ ನಡೆಯಿತು. ಭಾರತದೊಂದಿಗಿನ ರಾಜಕೀಯ ಸಂಬಂಧ ಹದಗೆಟ್ಟ ಕಾರಣ ಪಾಕಿಸ್ತಾನ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ ಏಷ್ಯಾಕಪ್ ಅನ್ನು ಉಳಿಸಿಕೊಂಡಿತ್ತು. 1993 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಸಂಬಂಧಗಳಲ್ಲಿ ಬಿರುಕು ಉಂಟಾಗಿದ್ದರಿಂದ ಪಂದ್ಯಾವಳಿಯನ್ನು ರದ್ದುಗೊಳಿಸಲಾಯಿತು. ಐದನೇ ಆವೃತ್ತಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ 11 ವರ್ಷಗಳ ನಂತರ 1995 ರಲ್ಲಿ ನಡೆಯಿತು. ಮೊದಲ ಸುತ್ತಿನ ನಂತರ ಎಲ್ಲಾ ಮೂರು ತಂಡಗಳು ಪಾಯಿಂಟ್‌ಗಳಲ್ಲಿ ಸಮಬಲ ಸಾಧಿಸಿದ್ದರಿಂದ ಪಾಕಿಸ್ತಾನಕ್ಕಿಂತ ಉತ್ತಮ ರನ್-ರೇಟ್ ಹೊಂದಿದ್ದ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್‌ಗೆ ಮುನ್ನಡೆದವು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಭಾರತ ತಂಡ ಸೋಲಿಸಿತು. ಆರನೇ ಆವೃತ್ತಿಯನ್ನು 1997 ರಲ್ಲಿ ಶ್ರೀಲಂಕಾದಲ್ಲಿ ನಡೆಸಲಾಯಿತು. ಫೈನಲ್‌ನಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಶ್ರೀಲಂಕಾ ತನ್ನ ಎರಡನೇ ಏಷ್ಯಾಕಪ್ ಗೆದ್ದುಕೊಂಡಿತು. ಯುನೈಟೆಡ್ ಅರಬ್ ಎಮಿರೇಟ್ಸ್ (1984, 1995, 2018, 2022) ಶ್ರೀಲಂಕಾ (1986, 1997, 2004, 2010, 2023), ಬಾಂಗ್ಲಾದೇಶ (1988, 2000, 2012, 2014, 2016), ಭಾರತ (1990/91), ಪಾಕಿಸ್ತಾನ (2008, 2023) ಏಷ್ಯಾಕಪ್ ಪಂದ್ಯಾವಳಿಗಳು ನಡೆದವು. 1984 ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, 1986 ರಲ್ಲಿ ಬಾಂಗ್ಲಾದೇಶ, 2004 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಹಾಂಗ್ ಕಾಂಗ್, 2014 ರಲ್ಲಿ ಅಫ್ಘಾನಿಸ್ತಾನ, 2023 ರಲ್ಲಿ ನೇಪಾಳ ತಂಡಗಳು ಏಷ್ಯಾಕಪ್‌ಗೆ ಪದಾರ್ಪಣೆ ಮಾಡಿದವು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು 19 ಸೆಪ್ಟೆಂಬರ್ 1983 ರಂದು ದೆಹಲಿಯಲ್ಲಿ ರಚಿಸಲಾಯಿತು. ಏಷ್ಯಾ ಖಂಡದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಸಂಘಟಿಸುವುದು, ಕ್ರಿಕೆಟ್‌ಗೆ ಉತ್ತೇಜನ ಕೊಡುವುದು ಇದರ ಮೂಲ ಸಂವಿಧಾನದಲ್ಲಿದ್ದ ಅಂಶವಾಗಿತ್ತು. ಬಾಂಗ್ಲಾದೇಶ, ಭಾರತ, ಮಲೇಷ್ಯಾ, ಪಾಕಿಸ್ತಾನ, ಸಿಂಗಾಪುರ ಮತ್ತು ಶ್ರೀಲಂಕಾ ಎಸಿಸಿಯ ಸ್ಥಾಪಕ ಸದಸ್ಯ ದೇಶಗಳಾಗಿದ್ದವು. ನಂತರದ ದಿನಗಳಲ್ಲಿ ಸದಸ್ಯತ್ವ ಪಡೆದ ದೇಶಗಳ ಸಂಖ್ಯೆ ಹೆಚ್ಚಾಯಿತು. ಮೊದಲು ಹಾಂಗ್ ಕಾಂಗ್, ನಂತರ ಯುನೈಟೆಡ್ ಅರಬ್ ಎಮಿರೇಟ್ಸ್, ನಂತರ ನೇಪಾಳ ದೇಶಗಳು ಸದಸ್ಯತ್ವ ಪಡೆದವು. ಚೀನಾ 2004 ರಲ್ಲಿ ACC ಗೆ ಸೇರಿತು. ನೇಪಾಳ ಈ ವರ್ಷ (2023) ಸೇರಿಕೊಂಡಿದೆ. 1993 ರಲ್ಲಿ, ಏಷ್ಯನ್ ಕ್ರಿಕೆಟ್ ಸಮ್ಮೇಳನವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯಿತು. ACC ಯಲ್ಲಿ ಪೂರ್ಣ ಸದಸ್ಯತ್ವ ಮತ್ತು ಸಹ ಸದಸ್ಯತ್ವ ಎನ್ನುವ ಎರಡು ವರ್ಗಗಳ ಸದಸ್ಯತ್ವ ಇದೆ. ಹಾಂಗ್ ಕಾಂಗ್, ಕುವೈತ್, ಮಲೇಷ್ಯಾ, ನೇಪಾಳ, ಸಿಂಗಾಪುರ, ಥೈಲ್ಯಾಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಸಹ ಸದಸ್ಯತ್ವ ಪಡೆದಿವೆ. ಟೆಸ್ಟ್ ಆಡುವ ರಾಷ್ಟ್ರಗಳು ಪೂರ್ಣ ಸದಸ್ಯತ್ವ ಪಡೆದಿವೆ. ಕ್ರಿಕೆಟ್ ಆಟಕ್ಕೆ ಉತ್ತೇಜನ ನೀಡುವುದು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮುಖ್ಯ ಉದ್ದೇಶವಾಗಿದೆ. ಹೊಸ ಪ್ರದೇಶಗಳಲ್ಲಿ ಮ್ಯಾಚ್‌ಗಳನ್ನು ಸಂಘಟಿಸಿ ಆ ಮೂಲಕ ಆಟವನ್ನು ನಿಜವಾದ ಅರ್ಥದಲ್ಲಿ ಜಾಗತಿಕಗೊಳಿಸುವುದು ಎಸಿಸಿ ಕೌನ್ಸಿನ್‌ನ ಉದ್ದೇಶವಾಗಿದೆ. ಫಿಜಿ, ಜಪಾನ್ ಮತ್ತು ಪಪುವಾ ನ್ಯೂಗಿನಿ ಸಹ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಸಕ್ರಿಯವಾಗಿದ್ದವು. ಈ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪೂರ್ವ ಏಷ್ಯಾ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದ ಕೌನ್ಸಿಲ್ ರಚಿಸಿದ ನಂತರ ಈ ದೇಶಗಳು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಸದಸ್ಯತ್ವವನ್ನು ತ್ಯಜಿಸಿದವು. ಡಿಸೆಂಬರ್ 1999 ರವರೆಗೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಎಲ್ಲಾ ಆಡಳಿತಾತ್ಮಕ ಹುದ್ದೆಗಳು ಗೌರವಾನ್ವಿತವಾಗಿದ್ದವು. 1999 ರಿಂದ, ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆ ಹೊಂದಿರುವವರು ವೇತನ ಪಡೆಯುತ್ತಿದ್ದಾರೆ. 2003 ರವರೆಗೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಧಾನ ಕಛೇರಿಯನ್ನು ಅದರ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ತಾಯ್ನಾಡಿಗೆ ಸ್ಥಳಾಂತರಿಸಲಾಯಿತು. 20ನೇ ಆಗಸ್ಟ್ 2016ರಿಂದ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಏಷ್ಯಾಕಪ್ ಮುಖ್ಯ ಕಚೇರಿಯು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಜೇ ಶಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ ಸಂಗತಿ. 2022-23ರ ಏಷ್ಯಾ ಕಪ್‌ನ ಪ್ರಸಾರ ಹಕ್ಕುಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಮತ್ತು ಪಾಕಿಸ್ತಾನದಲ್ಲಿ PTV ಮತ್ತು ಟೆನ್ ಸ್ಪೋರ್ಟ್ಸ್ ಹೊಂದಿವೆ.

Year | Winner | Runner Up | Player of the Series | Venue |
---|---|---|---|---|
2022 | ![]() | ![]() | Bhanuka Rajapaksa (Sri Lanka) | Dubai |
2018 | ![]() | ![]() | Shikhar Dhawan (India) | Dubai |
2016 | ![]() | ![]() | Sabbir Rahman (Bangladesh) | Dhaka |
2014 | ![]() | ![]() | Lahiru Thirimanne (Sri Lanka) | Dhaka |
2012 | ![]() | ![]() | Shakib Al Hasan(Bangladesh) | Dhaka |
2010 | ![]() | ![]() | Shahid Afridi (Pakistan) | Dambulla |
2008 | ![]() | ![]() | Ajantha Mendis (Sri Lanka) | Karachi |
2004 | ![]() | ![]() | Sanath Jayasuriya (Sri Lanka) | Colombo |
2000 | ![]() | ![]() | Mohammad Yousuf (Pakistan) | Dhaka |
1997 | ![]() | ![]() | Arjuna Ranatunga (Sri Lanka) | Colombo |
1995 | ![]() | ![]() | Navjot Sidhu (India) | Sharjah |
1990-91 | ![]() | ![]() | N/A | Kolkata |
1988 | ![]() | ![]() | Navjot Sidhu (India) | Dhaka |
1986 | ![]() | ![]() | Arjuna Ranatunga (Pakistan) | Colombo |
1984 | ![]() | ![]() | Surinder Khanna (India) | Sharjah |
ನ್ಯೂಸ್
ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)
ಏಷ್ಯಾಕಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದ ತಂಡ ಯಾವುದು?
ಭಾರತವು ಅತಿಹೆಚ್ಚು ಬಾರಿ ಏಷ್ಯಾಕಪ್ ಪಂದ್ಯಾವಳಿ ಗೆದ್ದಿದೆ. ಏಕದಿನ, ಟಿ20 ಮಾದರಿಯೂ ಸೇರಿದಂತೆ ಒಟ್ಟು 7 ಬಾರಿ ಏಷ್ಯಾಕಪ್ ಸರಣಿ ಗೆದ್ದಿದೆ.
ಮೊದಲ ಏಷ್ಯಾಕಪ್ ಸರಣಿಯನ್ನು ಗೆದ್ದ ತಂಡ ಯಾವುದು?
ಭಾರತವು 1984 ರಲ್ಲಿ ಮೊದಲ ಬಾರಿಗೆ ನಡೆದ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿತ್ತು.
2ನೇ ಏಷ್ಯಾಕಪ್ ಸರಣಿಯಲ್ಲಿ ಗೆಲುವು ಸಾಧಿಸಿದ ತಂಡ ಯಾವುದು?
ಶ್ರೀಲಂಕಾ 2ನೇ ಏಷ್ಯಾಕಪ್ ಸರಣಿಯಲ್ಲಿ ಗೆಲುವು ಸಾಧಿಸಿತು. ಶ್ರೀಲಂಕಾ ಈವರೆಗೆ ಒಟ್ಟು 6 ಬಾರಿ ಚಾಂಪಿಯನ್ ಆಗಿದೆ. 2022ರಲ್ಲಿ ಟಿ20 ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿಯೂ ಶ್ರೀಲಂಕಾ ಚಾಂಪಿಯನ್ ಆಗಿತ್ತು.