ಏಷ್ಯಾಕಪ್ ಕ್ರಿಕೆಟ್ ಪಂದ್ಯಗಳು ನಡೆಯುವ ಸ್ಥಳಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾ ಕಪ್ ಸುದ್ದಿ  /   போட்டி நடக்கும் இடங்கள்

ಏಷ್ಯಾಕಪ್ ಕ್ರಿಕೆಟ್ ಪಂದ್ಯಗಳು ನಡೆಯುವ ಸ್ಥಳಗಳು


ಪಾಕಿಸ್ತಾನದ ಮುಲ್ತಾನ್ ನಲ್ಲಿ ಆಗಸ್ಟ್ 30 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ನೇಪಾಳವನ್ನು ಎದುರಿಸಲಿದೆ. ಆಗಸ್ಟ್ 31ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಬಾಂಗ್ಲಾದೇಶ-ಶ್ರೀಲಂಕಾ ಮ್ಯಾಚ್ ನಡೆಯಲಿದೆ. ಭಾರತ-ಪಾಕಿಸ್ತಾನಗಳ ನಡುವೆ ಸೆ 2ರಂದು ಕ್ಯಾಂಡಿಯಲ್ಲಿ ಮ್ಯಾಚ್ ನಡೆಯಲಿದೆ. ಹೀಗೆ ಲಾಹೋರ್, ಮುಲ್ತಾನ್, ಕ್ಯಾಂಡಿ, ಕೊಲಂಬೊ ನಗರಗಳಲ್ಲಿ ಏಷ್ಯಾಕಪ್ ಮ್ಯಾಚ್‌ಗಳು ನಡೆಯಲಿವೆ.

ಸೆ 6 ರಂದು ಲಾಹೋರ್‌ನಲ್ಲಿ ಸೂಪರ್ 4 ಸುತ್ತಿನಲ್ಲಿ A1 vs B2 ಪಂದ್ಯ ಮತ್ತು ಸೆಪ್ಟೆಂಬರ್ 9 ರಂದು ಕೊಲಂಬೊದಲ್ಲಿ ಸೂಪರ್ 4 ಸುತ್ತಿನಲ್ಲಿ B1 vs B2 ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 10ರಂದು ಸೂಪರ್ 4 ಸುತ್ತಿನ A1 vs A2 ಪಂದ್ಯವು ಕೊಲಂಬೊದಲ್ಲಿ ಮತ್ತು ಸೆಪ್ಟೆಂಬರ್ 12 ರಂದು ಸೂಪರ್ 4 ಸುತ್ತಿನ A2 ವಿರುದ್ಧ B1 ಪಂದ್ಯವು ಕೊಲಂಬೊದಲ್ಲಿ ನಡೆಯಲಿದೆ. ಕೊಲಂಬೊದಲ್ಲಿ ಸೆಪ್ಟೆಂಬರ್ 14 ರಂದು ಸೂಪರ್ 4 ಸುತ್ತಿನಲ್ಲಿ A1 vs B1 ಪಂದ್ಯ ಮತ್ತು ಸೆಪ್ಟೆಂಬರ್ 15 ರಂದು ಕೊಲಂಬೊದಲ್ಲಿ ಸೂಪರ್ 4 ಸುತ್ತಿನಲ್ಲಿ A2 vs B2 ಪಂದ್ಯಗಳು ಆಯೋಜನೆಯಾಗಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.

ಭಾರತ, ಪಾಕಿಸ್ತಾನ ಮತ್ತು ನೇಪಾಳ ದೇಶಗಳು ಗ್ರೂಪ್ 1 ರಲ್ಲಿ ಮತ್ತು ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವು ಗ್ರೂಪ್‌ 2 ರಲ್ಲಿವೆ. ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ. ನಾಲ್ಕು ಪಂದ್ಯಗಳನ್ನು ದೇಶದಿಂದ ಹೊರಕ್ಕೆ ಸ್ಥಳಾಂತರಿಸದಂತೆ ತಡೆಯುವಲ್ಲಿ ಪಾಕಿಸ್ತಾನವು ಯಶಸ್ವಿಯಾಯಿತು. ಕಳೆದ ಅಕ್ಟೋಬರ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಾಲೋಚನೆಯೊಂದಿಗೆ ವೇಳಾಪಟ್ಟಿಯಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ.
ಗಡಾಫಿ ಕ್ರಿಕೆಟ್ ಸ್ಟೇಡಿಯಂ

ಗಡಾಫಿ ಕ್ರಿಕೆಟ್ ಸ್ಟೇಡಿಯಂ

Lahore, Pakistan
ಪಾಕಿಸ್ತಾನದ ಇತಿಹಾಸ ಪ್ರಸಿದ್ಧ ನಗರ ಲಾಹೋರ್‌ನಲ್ಲಿ ಗಡಾಫಿ ಕ್ರಿಕೆಟ್ ಸ್ಟೇಡಿಯಂ ಇದೆ. ಖ್ಯಾತ ವಾಸ್ತುಶಿಲ್ಪಿ ನಯ್ಯರ್ ಅಲಿ ದಾದಾ ವಿನ್ಯಾಸಗೊಳಿಸಿದ ಗಡಾಫಿ ಕ್ರೀಡಾಂಗಣವು ಮೊಘಲ್ ವಾಸ್ತುಶೈಲಿಯಿಂದ ಪ್ರೇರಣೆ ಪಡೆದಿದೆ. ಇಟ್ಟಿಗೆಗಳನ್ನು ಆಕರ್ಷಕವಾಗಿ ಬಳಸಿರುವುದು ಕ್ರೀಡಾಂಗಣಕ್ಕೆ ವಿಶಿಷ್ಟ ನೋಟ ನೀಡಿದೆ. ಈ ಕ್ರೀಡಾಂಗಣಕ್ಕೆ ಲಿಬಿಯಾದ ಕರ್ನಲ್ ಗಡಾಫಿ ಅವರ ಹೆಸರು ಇರಿಸಲಾಗಿದೆ. 1959 ರಲ್ಲಿ ಮೊದಲ ಬಾರಿಗೆ ಗಡಾಫಿ ಕ್ರೀಡಾಂಗಣದಲ್ಲಿ ಟೆಸ್ಟ್ ಕ್ರಿಕೆಟ್ ನಡೆಯಿತು. ಆಗ ಪ್ರವಾಸಿ ಆಸ್ಟ್ರೇಲಿಯನ್ನರ ವಿರುದ್ಧ ಪಾಕಿಸ್ತಾನ ತಂಡವು ಆಡಿತ್ತು. 1996 ರಲ್ಲಿ ವಿಶ್ವಕಪ್ ಫೈನಲ್‌ಗೆ ಆತಿಥ್ಯ ವಹಿಸಲು ಕ್ರೀಡಾಂಗಣವನ್ನು ನವೀಕರಿಸಲಾಯಿತು. ಇದು ಪಾಕಿಸ್ತಾನದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿದೆ. ಹೊಸ ಕ್ರೀಡಾಂಗಣದಲ್ಲಿ ಕಾಂಕ್ರೀಟ್ ಬೆಂಚುಗಳನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಕವರ್ ಸೀಟ್‌ಗಳಿಂದ ಬದಲಾಯಿಸಲಾಗಿದೆ. ಕ್ರೀಡಾಂಗಣವು 60,000 ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಒದಗಿಸುವ ಸಾಮರ್ಥ್ಯ ಹೊಂದಿದೆ. 1996ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್ ಮ್ಯಾಚ್ ಇದೇ ಗಡಾಫಿ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಮೈದಾನಕ್ಕೆ ಆರಂಭದಲ್ಲಿ ಲಾಹೋರ್ ಸ್ಟೇಡಿಯಂ ಎಂದು ನಾಮಕರಣ ಮಾಡಲಾಗಿತ್ತು. 1974 ರಲ್ಲಿ ಗಡಾಫಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಯಿತು. ಈ ಮೈದಾನದಲ್ಲಿ ಪಾಕಿಸ್ತಾನ ತಂಡವು ಉತ್ತಮ ಸಾಧನೆ ಮಾಡಿದೆ. ಹಲವು ಮೈಲಿಗಲ್ಲುಗಳನ್ನು ದಾಖಲಿಸಿದೆ. 1976 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಜಾವೇದ್ ಮಿಯಾಂದಾದ್ ಮತ್ತು ಆಸಿಫ್ ಇಕ್ಬಾಲ್ ನಡುವಿನ ದಾಖಲೆಯ ಐದನೇ ವಿಕೆಟ್ 281 ಜೊತೆಯಾಟಕ್ಕೆ ಗಡಾಫಿ ಕ್ರೀಡಾಂಗಣ ಸಾಕ್ಷಿಯಾಗಿತ್ತು. ಇಂಜಮಾಮ್ ಅವರ ಪ್ರಸಿದ್ಧ ‘ಟ್ರಿಪಲ್ ಸೆಂಚುರಿ’ ಕೂಡ ಇದೇ ಕ್ರೀಡಾಂಗಣದಲ್ಲಿ ಬಂದಿದೆ. ಅವರು ಈ ಸಾಧನೆ ಮಾಡಿದ್ದು ನ್ಯೂಜಿಲೆಂಡ್ ತಂಡದ ವಿರುದ್ಧ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಹೆಚ್ಚು ಪ್ರೇಕ್ಷಕರು ಬರುತ್ತಿಲ್ಲ ಎಂಬ ಟೀಕೆಗಳೂ ಕೇಳಿ ಬರುತ್ತಿವೆ.
…read more

MATCHES WON

Batting First34 Won
Bowling First31 Won
50.75%49.25%
Avg 1st Innings253
Avg 2nd Innings218
PACE
69.89%

Percentage of wickets
taken by pacers

SPIN
30.11%

Percentage of wickets
taken by spinners

Pace Friendly

Team-wise Asia Cup performance at Gaddafi Stadium, Lahore

TeamsMatchesWonLostTieWin %
553419062
14104071
725029
642067
10100
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ

Multan, Pakistan
ಪಾಕಿಸ್ತಾನದ ಮುಲ್ತಾನ್‌ ನಗರದಲ್ಲಿರುವ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ ಪಾಕಿಸ್ತಾನದ ಅತಿದೊಡ್ಡ ಮತ್ತು ಪ್ರಸಿದ್ಧ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿದೆ. ಈ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜೊತೆಗೆ ಫುಟ್ಬಾಲ್ ಕೂಡ ಆಡಲಾಗುತ್ತದೆ. 30 ಸಾವಿರ ಮಂದಿ ಏಕಕಾಲಕ್ಕೆ ಪಂದ್ಯ ವೀಕ್ಷಿಸಬಹುದು. ಉತ್ತಮ ಹುಲ್ಲು ಹಾಸು ಇರುವ ಸುಂದರ ಕ್ರೀಡಾಂಗಣ ಇದು. ಮುಲ್ತಾನ್ ಸ್ಟೇಡಿಯಂ ಅನ್ನು ಪಾಕಿಸ್ತಾನದ ಅತ್ಯಂತ ಸುಂದರವಾದ ಕ್ರೀಡಾಂಗಣ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ ಅಳವಡಿಸಲಾಗಿದೆ. ಈ ಕ್ರೀಡಾಂಗಣವನ್ನು 2001 ರಲ್ಲಿ ಆರಂಭಿಸಲಾಯಿತು. ಮುಲ್ತಾನ್‌ನಲ್ಲಿದ್ದ ಹಳೆಯ ಖಾಸಿಂ ಬಾಗ್ ಕ್ರೀಡಾಂಗಣವನ್ನು ಕೆಡವಿ ಈ ಹೊಸ ಕ್ರೀಡಾಂಗಣವನ್ನು ನಿರ್ಮಿಸಲಾಯಿತು. 2001ರಲ್ಲಿ ಇಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನವು ಬಾಂಗ್ಲಾದೇಶವನ್ನು 264 ರನ್‌ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿತು. ಈ ಕ್ರೀಡಾಂಗಣದಲ್ಲಿಯೇ ಭಾರತದ ವೀರೇಂದ್ರ ಸೆಹ್ವಾಗ್ ತ್ರಿಶತಕ ಬಾರಿಸಿದ್ದರು. 2003 ರಿಂದ ಇಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವು ಸುಲಭ ಗೆಲುವು ಸಾಧಿಸಿತ್ತು.
…read more

MATCHES WON

Batting First6 Won
Bowling First5 Won
54.55%45.45%
Avg 1st Innings263
Avg 2nd Innings197
PACE
63.16%

Percentage of wickets
taken by pacers

SPIN
36.84%

Percentage of wickets
taken by spinners

Pace Friendly

Team-wise Asia Cup performance at Multan Cricket Stadium, Multan

TeamsMatchesWonLostTieWin %
1183073
20200
1100100
10100
ಆರ್ ಪ್ರೇಮದಾಸ ಸ್ಟೇಡಿಯಂ

ಆರ್ ಪ್ರೇಮದಾಸ ಸ್ಟೇಡಿಯಂ

Colombo, SriLanka
ಶ್ರೀಲಂಕಾದ ರಾಜಧಾನಿ ಕೊಲಂಬೊ ನಗರದಲ್ಲಿರುವ ಆರ್ ಪ್ರೇಮದಾಸ ಸ್ಟೇಡಿಯಂ ತುಂಬಾ ಹಳೆಯದು. ಐತಿಹಾಸಿಕ ಹಿನ್ನೆಲೆ ಇರುವ ಈ ಕ್ರೀಡಾಂಗಣಕ್ಕೆ ಆ ದೇಶದ ಮಾಜಿ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರ ಹೆಸರು ಇರಿಸಲಾಗಿದೆ. ‘ಖೆತ್ತಾರಾಮ ದೇವಸ್ಥಾನ’ದ ಪಕ್ಕದಲ್ಲಿಯೇ ಈ ಕ್ರೀಡಾಂಗಣವಿದೆ. ಇದು ಶ್ರೀಲಂಕಾದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಆರಂಭದಲ್ಲಿ ಇದನ್ನು ಖೆತ್ತಾರಾಮ ಕ್ರೀಡಾಂಗಣ ಎಂದು ಕರೆಯಲಾಗುತ್ತಿತ್ತು. ನಂತರ ಹೆಸರು ಬದಲಾಯಿಸಲಾಯಿತು. ಶ್ರೀಲಂಕಾದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಮೂರು ಕ್ರೀಡಾಂಗಣಗಳಲ್ಲಿ ಇದೂ ಒಂದು. ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಈ ಕ್ರೀಡಾಂಗಣದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 952 ರನ್ ಗಳಿಸಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಧಿಕ ಸ್ಕೋರ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಟೆಸ್ಟ್ ಪಂದ್ಯಗಳು ನಡೆಯುತ್ತಿಲ್ಲ. ಈ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ 2023 ಫೈನಲ್ ನಡೆಯಲಿದೆ.
…read more

MATCHES WON

Batting First82 Won
Bowling First59 Won
54.3%45.70%
Avg 1st Innings236
Avg 2nd Innings194
PACE
53.63%

Percentage of wickets
taken by pacers

SPIN
46.37%

Percentage of wickets
taken by spinners

Pace Friendly

Team-wise Asia Cup performance at R.Premadasa Stadium, Colombo

TeamsMatchesWonLostTieWin %
1308041062
532622049
261410054
1311208
10100
ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣ

ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣ

Kandy, SriLanka
ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು 2009 ರಲ್ಲಿ ನಿರ್ಮಿಸಲಾಯಿತು. ಇಲ್ಲಿ ಏಕಕಾಲಕ್ಕೆ 35 ಸಾವಿರ ಮಂದಿ ಪಂದ್ಯ ವೀಕ್ಷಿಸಬಹುದಾಗಿದೆ. ಇದು ಶ್ರೀಲಂಕಾದ ಹೊಸ ಕ್ರೀಡಾಂಗಣಗಳಲ್ಲಿ ಒಂದಾಗಿದೆ. 1983 ರಿಂದ 2007 ರವರೆಗೆ ಟೆಸ್ಟ್ ಪಂದ್ಯಗಳಿಗೆ ಸ್ಥಳವಾಗಿದ್ದ ಅಸ್ಗಿರಿಯಾ ಕ್ರೀಡಾಂಗಣಕ್ಕೆ ಪರ್ಯಾಯವಾಗಿ ಪಲ್ಲೆಕೆಲೆ ಕ್ರೀಡಾಂಗಣವನ್ನು ನಿರ್ಮಿಸಲಾಯಿತು. ಮೊದಲ ಟೆಸ್ಟ್ 2010ರಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆದಿತ್ತು. 2011ರ ವಿಶ್ವಕಪ್‌ನ ಅಂಗವಾಗಿಯೂ ಇಲ್ಲಿ ಪಂದ್ಯಗಳು ನಡೆದವು. ಇದು ಶ್ರೀಲಂಕಾದ ರಾಷ್ಟ್ರೀಯ ತಂಡದ ಜೊತೆಗೆ ಸ್ಥಳೀಯ ‘ಕಂಡೂರಾಟ’ ತಂಡದ ‘ತವರು ಕ್ರೀಡಾಂಗಣ’ವೂ ಹೌದು. 2012ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಹಲವು ಪಂದ್ಯಗಳು ಈ ಕ್ರೀಡಾಂಗಣದಲ್ಲಿ ನಡೆದಿದ್ದವು. ಇದೇ ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಗೌರವವನ್ನು ಸುರಂಗ ಲಕ್ಮಲ್ ಪಡೆದರು. ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಈ ಸಾಧನೆಯನ್ನು ಈ ಹಿಂದೆ ಮಾಡಿದ್ದರು.
…read more

MATCHES WON

Batting First16 Won
Bowling First25 Won
36.36%63.64%
Avg 1st Innings248
Avg 2nd Innings206
PACE
57.79%

Percentage of wickets
taken by pacers

SPIN
42.21%

Percentage of wickets
taken by spinners

Pace Friendly

Team-wise Asia Cup performance at Pallekele International Cricket Stadium, Kandy

TeamsMatchesWonLostTieWin %
402216055
623033
614017
540080
211050
10100

ನ್ಯೂಸ್

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಏಷ್ಯಾಕಪ್‌ನ ಮೊದಲ ಪಂದ್ಯ ಎಲ್ಲಿ ನಡೆಯಲಿದೆ?

ಏಷ್ಯಾಕಪ್‌ನ ಮೊದಲ ಪಂದ್ಯ ಆಗಸ್ಟ್ 30 ರಂದು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಆರಂಭವಾಗಲಿದೆ. ಮಧ್ಯಾಹ್ನ 3.30ಕ್ಕೆ ಪಾಕಿಸ್ತಾನ ಮತ್ತು ನೇಪಾಳ ನಡುವೆ ಪಂದ್ಯ ನಡೆಯಲಿದೆ.

ಏಷ್ಯಾ ಕಪ್‌ನ ಫೈನಲ್ ಎಲ್ಲಿ ನಡೆಯಲಿದೆ?

ಏಷ್ಯಾಕಪ್ ಕ್ರಿಕೆಟ್‌ನ ಫೈನಲ್ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ.

ಭಾರತ-ಪಾಕಿಸ್ತಾನಗಳ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ?

ಪಾಕಿಸ್ತಾನ-ಭಾರತ ಪಂದ್ಯ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.