ಏಷ್ಯಾಕಪ್‌ನಲ್ಲಿ ಹೆಚ್ಚು ರನ್ ಗಳಿಸಿದವರು
ಏಷ್ಯಾ ಕಪ್ 2023 ರ ವೇಳಾಪಟ್ಟಿಯನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಕನಿಷ್ಠ ಎರಡು ಪಂದ್ಯಗಳನ್ನು ಆಡುವ ರೀತಿಯಲ್ಲಿ ಮಾಡಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವು ಸಾಕಷ್ಟು ಆದಾಯವನ್ನು ಗಳಿಸುತ್ತದೆ ಮತ್ತು ಈ ಕಾರಣಕ್ಕಾಗಿ, ಏಷ್ಯಾಕಪ್‌ನಲ್ಲಿ ಕಳೆದ ಬಾರಿಯಿಂದ ವೇಳಾಪಟ್ಟಿಯನ್ನು ಮಾಡಲಾಗಿದೆ, ಆದ್ದರಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಕನಿಷ್ಠ ಎರಡು ಪಂದ್ಯಗಳನ್ನು ಆಡಿಸಲಾಗುತ್ತದೆ. ನೇಪಾಳ ಮೊದಲ ಬಾರಿಗೆ ಏಷ್ಯಾಕಪ್‌ನಲ್ಲಿ ಆಡಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಈ ಬಾರಿ ಏಷ್ಯಾಕಪ್ 2023 ರಲ್ಲಿ ಆಡಲಿವೆ. ಏಷ್ಯಾ ಕಪ್ 2023 ರ ಪೂರ್ಣ ವೇಳಾಪಟ್ಟಿಯ ಪ್ರಕಾರ, ಅಂತಿಮ ಪಂದ್ಯವು ಸೆಪ್ಟೆಂಬರ್ 17 ರಂದು ಶ್ರೀಲಂಕಾದ ಕೊಲಂಬೊದಲ್ಲಿರುವ ಎಂ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
Player | Teams | Runs | SR | Mat | Inn | NO | HS | Avg | 30s | 50s | 100s | 6s | |
---|---|---|---|---|---|---|---|---|---|---|---|---|---|
1 | ![]() | IND | 302 | 93 | 6 | 6 | 2 | 121 | 75 | 0 | 2 | 1 | 6 |
2 | ![]() | SL | 270 | 85 | 6 | 6 | 0 | 92 | 45 | 0 | 3 | 0 | 5 |
3 | ![]() | SL | 215 | 89 | 6 | 6 | 0 | 93 | 35 | 1 | 2 | 0 | 2 |
4 | ![]() | PAK | 207 | 97 | 5 | 4 | 0 | 151 | 51 | 0 | 0 | 1 | 4 |
5 | ![]() | PAK | 195 | 94 | 5 | 4 | 2 | 86* | 97 | 1 | 2 | 0 | 3 |
6 | ![]() | IND | 194 | 107 | 6 | 5 | 1 | 74* | 48 | 0 | 3 | 0 | 11 |
7 | ![]() | BAN | 193 | 85 | 2 | 2 | 0 | 104 | 96 | 0 | 1 | 1 | 2 |
8 | ![]() | PAK | 179 | 122 | 5 | 3 | 1 | 109* | 89 | 1 | 0 | 1 | 6 |
9 | ![]() | SL | 179 | 74 | 6 | 6 | 2 | 62* | 44 | 2 | 1 | 0 | 3 |
10 | ![]() | BAN | 173 | 97 | 5 | 5 | 1 | 80 | 43 | 1 | 2 | 0 | 4 |
11 | ![]() | IND | 169 | 89 | 4 | 3 | 1 | 111* | 84 | 1 | 0 | 1 | 2 |
12 | ![]() | BAN | 158 | 84 | 5 | 5 | 1 | 112 | 39 | 0 | 0 | 1 | 3 |
13 | ![]() | BAN | 158 | 68 | 5 | 5 | 0 | 82 | 31 | 0 | 2 | 0 | 3 |
14 | ![]() | IND | 143 | 81 | 6 | 4 | 1 | 82 | 47 | 1 | 1 | 0 | 3 |
15 | ![]() | SL | 132 | 78 | 6 | 6 | 0 | 41 | 22 | 2 | 0 | 0 | 0 |
ನ್ಯೂಸ್
ಏಷ್ಯಾಕಪ್ 2023 ವೇಳಾಪಟ್ಟಿ ಕುರಿತು ನೀವು ತಿಳಿಯಬೇಕಾದ ಮಾಹಿತಿ
2012ರಲ್ಲಿ ಢಾಕಾದಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ 183 ರನ್ ಸಿಡಿಸಿದ್ದರು. ಇದು ಅವರ ಅತ್ಯಧಿಕ ರನ್ ಗಳಿಕೆಯ ಸಾಧನೆಯಾಗಿದೆ. ಈ ಪಂದ್ಯದಲ್ಲಿ ಭಾರತವು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಪಾಕ್ ನೀಡಿದ್ದ 330 ರನ್‌ಗಳ ಗುರಿಯ ಬೆನ್ನಟ್ಟಿತು. ಇದು ಸಚಿನ್ ತೆಂಡೂಲ್ಕರ್ ಅವರ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವೂ ಆಗಿತ್ತು
ರೋಹಿತ್ ಶರ್ಮಾ ಏಷ್ಯಾಕಪ್‌ನಲ್ಲಿ 22 ಏಕದಿನ (ODI) ಪಂದ್ಯಗಳನ್ನು ಆಡಿದ್ದಾರೆ. 745 ರನ್ ಗಳಿಕೆಯ ಸಾಧನೆ ಅವರದು. ಸಚಿನ್ ತೆಂಡೂಲ್ಕರ್ ಅವರು 23 ಪಂದ್ಯಗಳಿಂದ 971 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ರೋಹಿತ್ ಶರ್ಮಾ ರನ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿರುವ 2ನೇ ಭಾರತೀಯರಾಗಿದ್ದಾರೆ.
ಮೊದಲು ಏಷ್ಯಾಕಪ್ 2023 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಭಾರತವು ಒಪ್ಪದ ಹಿನ್ನೆಲೆಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿತು. ಪಂದ್ಯಾವಳಿಯು ಈಗ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಲ್ಲಿ ನಡೆಯಲಿದೆ.
ಏಷ್ಯಾಕಪ್ 2023 ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ.
ಏಷ್ಯಾ ಖಂಡದ ರಾಷ್ಟ್ರಗಳಿಗೆ ‘ಏಷ್ಯಾಕಪ್’ ಪಂದ್ಯಾವಳಿಯು ಕ್ರಿಕೆಟ್ ವೇಳಾಪಟ್ಟಿಯ ಅತ್ಯಗತ್ಯ ಭಾಗವಾಗಿದೆ. ಅತಿ ಮುಖ್ಯ ಪಂದ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲು ಏಷ್ಯಾಕಪ್ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. 1984 ರಿಂದಲೂ ಏಷ್ಯಾಕಪ್ ನಡೆಯುತ್ತಿದೆ. ಪ್ರತಿ 2 ವರ್ಷಗಳಿಗೆ ಒಮ್ಮೆ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಹೌದು, ಈ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಈ ಹಿಂದೆಯೂ ಭಾರತ ಲೀಗ್ ಹಂತದಲ್ಲಿ ಅಥವಾ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಸೋತ ನಂತರ ಏಷ್ಯಾಕಪ್ ಗೆದ್ದಿತ್ತು.
ಹೌದು, ವಿರಾಟ್ ಕೊಹ್ಲಿ 2018 ರ ಏಷ್ಯಾಕಪ್ ಆವೃತ್ತಿಯಲ್ಲಿ ಆಡಿರಲಿಲ್ಲ. ಏಕೆಂದರೆ ಬಿಸಿಸಿಐ ತಮ್ಮ ಅಂದಿನ ಭಾರತ ನಾಯಕನಿಗೆ ವಿಶ್ರಾಂತಿ ನೀಡಲು ನಿರ್ಧರಿಸಿತ್ತು. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದರು. ರೋಚಕ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದರು.
ಈ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಪಾಕಿಸ್ತಾನವು ಈ ಹಿಂದೆ ಭಾರತವನ್ನು ಸೋಲಿಸಿತ್ತು. ತೀರಾ ಇತ್ತೀಚೆಗೆ, ಅಂದರೆ ಕಳೆದ ವರ್ಷವೂ ಭಾರತ ತಂಡವನ್ನು ಪಾಕ್ ಮಣಿಸಿತ್ತು. ಭಾರತವು ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದು ಎನ್ನುವುದು ನಿಜವಾಗಿದ್ದರೂ, ಭಾರತವನ್ನು ಮಣಿಸುವ ಸಾಮರ್ಥ್ಯವಿರುವ ತಂಡವಾಗಿ ಪಾಕ್ ತಂಡವನ್ನು ಪರಿಗಣಿಸಲಾಗುತ್ತಿದೆ ಎನ್ನುವುದು ಸುಳ್ಳಲ್ಲ.
ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶವು ಭಾರತವನ್ನು ಈ ಹಿಂದೆ ಹಲವು ಬಾರಿ ಸೋಲಿಸಿದೆ. ಈ ಬಾರಿಯೂ ಅದು ಮರುಕಳಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. 2012 ರಲ್ಲಿ ಸಚಿನ್ ತೆಂಡೂಲ್ಕರ್ 100 ನೇ ಶತಕ ಬಾರಿಸಿದ್ದ ಪಂದ್ಯವನ್ನೂ ಬಾಂಗ್ಲಾ ತನ್ನ ಪರವಾಗಿ ತಿರುಗಿಸಿಕೊಂಡಿತ್ತು.
ವಿರಾಟ್ ಕೊಹ್ಲಿ ಅವರ ಚೊಚ್ಚಿಲ ‘T20I’ ಶತಕ, ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ವಿರುದ್ಧ ಗೆಲುವಿನ ರನ್ ಬಾರಿಸಿದ್ದು ಮತ್ತು ಶ್ರೀಲಂಕಾ ಟ್ರೋಫಿ ತನ್ನದಾಗಿಸಿಕೊಂಡಿದ್ದು ಏಷ್ಯಾಕಪ್ 2022 ರ ಕೆಲವು ಅತ್ಯುತ್ತಮ ಕ್ಷಣಗಳು ಎಂದು ಪರಿಗಣಿಸಲಾಗಿದೆ.
2012ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 183 ರನ್ ಸಿಡಿಸಿದ್ದರು. ಇದು ಅವರ ಗರಿಷ್ಠ ಸ್ಕೋರ್ ಆಗಿದೆ.
ಈ ವರ್ಷದ ಆರಂಭದಲ್ಲಿ ಭಾರತದ ಏಕದಿನ ತಂಡದಿಂದ ಶಿಖರ್ ಧವನ್ ಅವರನ್ನು ಕೈಬಿಡಲಾಯಿತು. ಏಷ್ಯಾಕಪ್‌ಗೆ ಆಡುವ ತಂಡದಲ್ಲಿ ಅವರು ಸ್ಥಾನ ಪಡೆಯುವುದು ಅನುಮಾನ. ಇಂಥ ಬೆಳವಣಿಗೆ ನಡೆದರೆ ಅದು ಅಚ್ಚರಿಯ ಸಂಗತಿಯಾಗುತ್ತದೆ.
ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಕಾಗದ ಮೇಲಿನ ಲೆಕ್ಕಾಚಾರದಲ್ಲಿ ಬಲಿಷ್ಠ ತಂಡಗಳಾಗಿವೆ. ಇವು ಏಷ್ಯಾಕಪ್ 2023 ಗೆಲ್ಲುವ ನೆಚ್ಚಿನ ತಂಡಗಳಾಗಿವೆ.