ಹಾರ್ದಿಕ್ ಪಾಂಡ್ಯಗೆ ಗಾಯದ ಭೀತಿ, ಪ್ರಮುಖ ತಂಡದಲ್ಲಿ ರಿಂಕು ಸಿಂಗ್ಗೆ ಸ್ಥಾನ; ಆರ್ಪಿ ಸಿಂಗ್ ಹೇಳಿದ್ದೇನು?
Hardik Pandya Injury: ಟಿ20 ವಿಶ್ವಕಪ್ಗೂ ಮುನ್ನವೇ ಹಾರ್ದಿಕ್ ಪಾಂಡ್ಯ ಅವರು ಗಾಯಗೊಂಡಿದ್ದು, ರಿಂಕು ಸಿಂಗ್ ಅವರ ಸ್ಥಾನ ತುಂಬಲಿದ್ದಾರೆ ಎಂದು ವರದಿಯಾಗಿದೆ.
Hardik Pandya: 2024ರ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ತಂಡದ ಆಟಗಾರರ ಪೈಕಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕೂಡ ಒಬ್ಬರು. 2023ರಲ್ಲಿ ಬಹುಪಾಲು ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಪಾಂಡ್ಯ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತೀವ್ರ ವೈಫಲ್ಯ ಅನುಭವಿಸಿದ್ದಾರೆ. ಆದರೆ ಹಾರ್ದಿಕ್ ಟಿ20 ವಿಶ್ವಕಪ್ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಎಲ್ಲರಿಗೆ ಕುತೂಹಲ ಮೂಡಿಸಿದೆ. ಇದರ ನಡುವೆ ಗಾಯದ ಭೀತಿ ಆವರಿಸಿದೆ.
2023ರ ಡಿಸೆಂಬರ್ 19ರಲ್ಲಿ ನಡೆದ ಮಿನಿ ಹರಾಜಿಗೂ ಮುನ್ನ ಟ್ರೇಡ್ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಸೇರಿದ ಹಾರ್ದಿಕ್ ಪಾಂಡ್ಯ, ಹರಾಜಿನ ನಂತರ ನಾಯಕತ್ವ ಫ್ರಾಂಚೈಸಿ ನಾಯಕತ್ವ ಪಡೆದುಕೊಂಡರು. ಇದು ಮುಂಬೈನ ವಾಂಖೆಡೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಭಿಮಾನಿಗಳು ಹಾರ್ದಿಕ್ ವಿರುದ್ಧ ಘೋಷಣೆ ಕೂಗಿದರು. ಇದು ಹಾರ್ದಿಕ್ ಮತ್ತು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತು. ಐದು ಬಾರಿಯ ಚಾಂಪಿಯನ್ ತಂಡವು 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಜಯಿಸಿತು.
14 ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಹಾರ್ದಿಕ್, 10.75 ಎಕಾನಮಿ ಹೊಂದಿದ್ದಾರೆ. ಅಲ್ಲದೆ, ಇಷ್ಟೇ ಪಂದ್ಯಗಳಲ್ಲಿ 143.05 ಸ್ಟ್ರೈಕ್ ರೇಟ್ ಮತ್ತು 18.00ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 216 ರನ್ ಗಳಿಸಿದ್ದಾರೆ. ಈ ಕಳಪೆ ಫಾರ್ಮ್ ಹೊರತಾಗಿಯೂ ಈ ಆಲ್ರೌಂಡರ್ನನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಯಿತು. ಇದೇ ವೇಳೆ ಹಾರ್ದಿಕ್ ಕುರಿತು ಮಾತನಾಡಿದ ಮಾಜಿ ವೇಗದ ಬೌಲರ್ ಆರ್ಪಿ ಸಿಂಗ್, ಪಂದ್ಯಾವಳಿಯಲ್ಲಿ ಪಾಂಡ್ಯ ತಮ್ಮ ಕೋಟಾದ 4 ಓವರ್ಗಳನ್ನು ಎಸೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಹಾರ್ದಿಕ್ಗೆ ಗಾಯದ ಭೀತಿ, ರಿಂಕುಗೆ ಅವಕಾಶ?
ಹಾರ್ದಿಕ್ ಪಾಂಡ್ಯಗೆ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಭಾರತ ಕ್ರಿಕೆಟ್ ತಂಡದ ಮ್ಯಾನೇಜ್ಮೆಂಟ್ಗೆ ಆತಂಕ ಸೃಷ್ಟಿಸಿದೆ. ಆದರೆ ಗಾಯದ ಪ್ರಮಾಣ ಇನ್ನೂ ಎಷ್ಟು ಎಂಬುದರ ಬಗ್ಗೆ ಇಲ್ಲ ಎಂದು ವರದಿಗಳು ಹೇಳುತ್ತಿವೆ. ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ಪಾಂಡ್ಯ ಒಂದು ವೇಳೆ ಟೂರ್ನಿಯಿಂದ ಹೊರಬಿದ್ದರೆ ತಂಡಕ್ಕೆ ಭಾರಿ ನಷ್ಟವಾಗಲಿದೆ. ಅಲ್ಲದೆ, ಮೀಸಲು ಆಟಗಾರನಾಗಿರುವ ರಿಂಕು ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮ್ಯಾನೇಜ್ಮೆಂಟ್ ಚಿಂತಿಸಿದೆ ಎನ್ನಲಾಗಿದೆ.
ಗಾಯದ ಭೀತಿ ಇಲ್ಲ ಎಂದ ಆರ್ಪಿ ಸಿಂಗ್
ಐಪಿಎಲ್ನಲ್ಲಿ 4 ಓವರ್ಗಳನ್ನು ಬೌಲಿಂಗ್ ಮಾಡಿರುವ ಹಾರ್ದಿಕ್ಗೆ ಯಾವುದೇ ಗಾಯದ ಭಯವಿಲ್ಲ ಎಂಬುದು ನನ್ನ ಅನಿಸಿದೆ. ಟಿ20 ವಿಶ್ವಕಪ್ನಲ್ಲೂ ಹಾರ್ದಿಕ್ ಅವರ ಬೌಲಿಂಗ್ ಪ್ರಮುಖ ಪಾತ್ರವಹಿಸುತ್ತದೆ. ತಮ್ಮ 4 ಓವರ್ ಬೌಲಿಂಗ್ ಕೋಟಾವನ್ನು ಪೂರೈಸಲೇಬೇಕು ಎಂದು ಸೂಚಿಸಿದ್ದಾರೆ. ಮೊದಲಾರ್ಧದಲ್ಲಿ ಐಪಿಎಲ್ನಲ್ಲಿ ಪಾಂಡ್ಯ ಮಿತವಾಗಿ ಬೌಲಿಂಗ್ ಮಾಡಿದ್ದರು. ಆಗ ಅವರ ಫಿಟ್ನೆಸ್ ಬಗ್ಗೆ ಹೊಸ ಊಹಾಪೋಹಗಳು ಎದ್ದಿದ್ದವು. ಆದಾಗ್ಯೂ, ಟೂರ್ನಿ ಮುಂದುವರೆದಂತೆ ತಮ್ಮ ಬೌಲಿಂಗ್ ಕೆಲಸದಲ್ಲಿ ಯಾವುದೇ ಸಮಸ್ಯೆ ಕಂಡು ಬರಲಿಲ್ಲ ಎಂದು ಹೇಳಿದ್ದಾರೆ.
ಶಿವಂ ದುಬೆ ಹೊಗಳಿದ ಆರ್ಪಿ ಸಿಂಗ್
ಇದೇ ವೇಳೆ ಶಿವಂ ದುಬೆ ಅವರನ್ನು ಕೊಂಡಾಡಿದ ಆರ್ಪಿ ಸಿಂಗ್, ಭಾರತ ತಂಡದ ಪರ ಟಿ20 ವಿಶ್ವಕಪ್ನಲ್ಲಿ ಬೌಲಿಂಗ್ ಮಾಡಿದರೆ ಹೆಚ್ಚುವರಿ ಅನುಕೂಲವಾಗಲಿದೆ ಎಂದು 2007ರ ಚಾಂಪಿಯನ್ ತಂಡದ ಆಟಗಾರ ಹೇಳಿದ್ದಾರೆ. ದುಬೆ ಆರಂಭದಲ್ಲಿ ಕೆಲವು ಪಂದ್ಯಗಳನ್ನು ಆಡದೇ ಇರಬಹುದು. ಒಂದು ವೇಳೆ ಅವರು ಕಣಕ್ಕಿಳಿದರೆ, ತಾನು ಆಡಿದಾಗಲೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಾರೆ ಮತ್ತು ಭಾರತಕ್ಕಾಗಿ ರನ್ ಗಳಿಸುತ್ತಾರೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.