ಎರಡು ದೊಡ್ಡ ತಪ್ಪುಗಳನ್ನು ಮಾಡಿ ಗುಜರಾತ್, ಎಸ್​ಆರ್​ಹೆಚ್​ಗೆ ಆರ್ಥಿಕ ಸಂಕಷ್ಟ ತಂದಿಟ್ಟ ಹರಾಜುಗಾರ್ತಿ ಮಲ್ಲಿಕಾ ಸಾಗರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಎರಡು ದೊಡ್ಡ ತಪ್ಪುಗಳನ್ನು ಮಾಡಿ ಗುಜರಾತ್, ಎಸ್​ಆರ್​ಹೆಚ್​ಗೆ ಆರ್ಥಿಕ ಸಂಕಷ್ಟ ತಂದಿಟ್ಟ ಹರಾಜುಗಾರ್ತಿ ಮಲ್ಲಿಕಾ ಸಾಗರ್

ಎರಡು ದೊಡ್ಡ ತಪ್ಪುಗಳನ್ನು ಮಾಡಿ ಗುಜರಾತ್, ಎಸ್​ಆರ್​ಹೆಚ್​ಗೆ ಆರ್ಥಿಕ ಸಂಕಷ್ಟ ತಂದಿಟ್ಟ ಹರಾಜುಗಾರ್ತಿ ಮಲ್ಲಿಕಾ ಸಾಗರ್

Mallika Sagar Mistakes: ಇಂಡಿಯನ್ ಪ್ರೀಮಿಯರ್ ಲೀಗ್‌ 2024 ಮೆಗಾ ಹರಾಜು ನಡೆಸುವ ವೇಳೆ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಎರಡು ದೊಡ್ಡ ತಪ್ಪುಗಳನ್ನು ಮಾಡಿದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು.

ಹರಾಜುಗಾರ್ತಿ ಮಲ್ಲಿಕಾ ಸಾಗರ್ ಮಾಡಿದ್ರು 2 ದೊಡ್ಡ ತಪ್ಪುಗಳು; ಗುಜರಾತ್, ಎಸ್​ಆರ್​ಹೆಚ್​ಗೆ ಆರ್ಥಿಕ ಸಂಕಷ್ಟ
ಹರಾಜುಗಾರ್ತಿ ಮಲ್ಲಿಕಾ ಸಾಗರ್ ಮಾಡಿದ್ರು 2 ದೊಡ್ಡ ತಪ್ಪುಗಳು; ಗುಜರಾತ್, ಎಸ್​ಆರ್​ಹೆಚ್​ಗೆ ಆರ್ಥಿಕ ಸಂಕಷ್ಟ

ನವೆಂಬರ್ 24 ರಂದು ನಡೆದ ಐಪಿಎಲ್ 2025 ಮೆಗಾ ಹರಾಜು ಮೊದಲ ದಿನದಲ್ಲಿ ಹೆಸರಾಂತ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಅವರು ದೊಡ್ಡ ಪ್ರಮಾದಗಳನ್ನು ಎಸೆಗುವ ಮೂಲಕ ಫ್ರಾಂಚೈಸಿಗಳ ಆರ್ಥಿಕ ನಷ್ಟಕ್ಕೆ ಕಾರಣವಾಯಿತು. ಪ್ರಮುಖವಾಗಿ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಎರಡು ಫ್ರಾಂಚೈಸಿಗಳ ಪರ್ಸ್​ ಮೇಲೆ ದೊಡ್ಡ ಆರ್ಥಿಕ ಪರಿಣಾಮ ಬೀರಿತು. ಇದು ಈ 2 ತಂಡಗಳು ಹಾಕಿಕೊಂಡಿದ್ದ ಹರಾಜು ತಂತ್ರಗಳಿಗೆ ಗೊಂದಲ ಸೃಷ್ಟಿಸಿತು.

ಮಲ್ಲಿಕಾ ಸಾಗರ್ ಮಾಡಿದ ಮೊದಲ ತಪ್ಪು

ಬಹುಶಃ ಐಪಿಎಲ್ 2025ರ ಮೆಗಾ ಹರಾಜಿನ ಮೊದಲನೇ ದಿನದಂದು ನಡೆದ ಅತ್ಯಂತ ದೊಡ್ಡ ಪ್ರಮಾದವೆಂದರೆ ಮಲ್ಲಿಕಾ ಸಾಗರ್ ಅವರು ಇಂಗ್ಲೆಂಡ್ ವಿಕೆಟ್-ಕೀಪರ್ ಬ್ಯಾಟರ್ ಜೋಸ್ ಬಟ್ಲರ್‌ಗೆ ಬಿಡ್ಡಿಂಗ್‌ಗೆ ಸಂಬಂಧಿಸಿ ತಪ್ಪು ಸಂವಹನ ನಡೆಸಿದರು. ಗುಜರಾತ್ ಟೈಟಾನ್ಸ್ ತಂಡ ಜೋಸ್ ಬಟ್ಲರ್‌ 15.75 ಕೋಟಿ ರೂ. ಪಾವತಿಸಿ ಖರೀದಿಸಿದೆ. ಇದೇ ವೇಳೆ ಏಕಾಗ್ರತೆ ಕಳೆದುಕೊಂಡಿದ್ದ ಮಲ್ಲಿಕಾ, ಜಿಟಿ 25 ಲಕ್ಷ ಹೆಚ್ಚುವರಿ ಪಾವತಿ ಮಾಡುವಂತಾಯಿತು. ಗುಜರಾತ್ 15.50 ಕೋಟಿಗೆ ಬಿಡ್ ಮಾಡಿ ಮುಗಿಸಿತ್ತು. ಆಗ ಮಲ್ಲಿಕಾ ಅವರು ಎಲ್‌ಎಸ್‌ಜಿ ಫ್ರಾಂಚೈಸಿಗೆ 15.75 ಕೋಟಿ ರೂಪಾಯಿಗೆ ಹೆಚ್ಚಿಸಲು ಬಯಸುತ್ತೀರಾ ಎಂದು ಕೇಳಿದರು. ಎಲ್​ಎಸ್​ಜಿ ಮನವಿ ನಿರಾಕರಿಸಿತು. ಆದರೆ 15.50 ಕೋಟಿ ಕೋಟಿ ಅಂತಿಮ ಬಿಡ್ ಎಂದು ಹೇಳುವ ಬದಲಿಗೆ ಮಲ್ಲಿಕಾ ಅವರು 15.75 ಕೋಟಿ ಮೊತ್ತವೆಂದು ಘೋಷಿಸಿದರು. ಇದರಿಂದ ಟೈಟಾನ್ಸ್​​ 25 ಲಕ್ಷ ಹೆಚ್ಚು ಪಾವತಿಸಿತು.

ಜಿಟಿ ಖರೀದಿಸಿದ ಆಟಗಾರರ ಪಟ್ಟಿ: ಕಗಿಸೊ ರಬಾಡ (10.75 ಕೋಟಿ), ಜೋಸ್ ಬಟ್ಲರ್ (15.75 ಕೋಟಿ), ಮೊಹಮ್ಮದ್ ಸಿರಾಜ್ (12.25 ಕೋಟಿ), ಪ್ರಸಿದ್ಧ್ ಕೃಷ್ಣ (9.50 ಕೋಟಿ), ನಿಶಾಂತ್ ಸಿಂಧು (30 ಲಕ್ಷ), ಮಹಿಪಾಲ್ ಲೊಮ್ರೋರ್ (1.70 ಕೋಟಿ), ಕುಮಾರ್ ಕುಶಾಗ್ರಾ (65 ಲಕ್ಷ), ಅನುಜ್ ರಾವತ್ (30 ಲಕ್ಷ), ಮಾನವ್ ಸುತಾರ್ (30 ಲಕ್ಷ).

ಜಿಟಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ರಶೀದ್ ಖಾನ್ (18 ಕೋಟಿ), ಶುಭ್ಮನ್ ಗಿಲ್ (16.5 ಕೋಟಿ), ಸಾಯಿ ಸುದರ್ಶನ್ (8.5 ಕೋಟಿ), ರಾಹುಲ್ ತೆವಾಟಿಯಾ (4 ಕೋಟಿ), ಶಾರುಖ್ ಖಾನ್ (4 ಕೋಟಿ).

ಮಲ್ಲಿಕಾ ಸಾಗರ್ ಮಾಡಿದ ಎರಡನೇ ತಪ್ಪು

30 ಲಕ್ಷ ಮೂಲ ಬೆಲೆ ಹೊಂದಿದ್ದ ಬ್ಯಾಟರ್ ಅಭಿನವ್ ಮನೋಹರ್ ಅವರನ್ನು ಬಿಡ್ ಮಾಡುವಾಗ ಮಲ್ಲಿಕಾ ಸಾಗರ್ ಅವರು ಮತ್ತೊಂದು ಸ್ಪಷ್ಟ ದೋಷ ಎಸಗಿದರು. ಮನೋಹರ್​​ ಖರೀದಿಗೆ ಆರಂಭದಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಆರ್​ಸಿಬಿ ಹಿಂದೆ ಸರಿದ ಬೆನ್ನಲ್ಲೇ ಗುಜರಾತ್ ಬಿಡ್ ಮಾಡಿತು. ಬಳಿಕ ಸನ್‌ರೈಸರ್ಸ್ ಹೈದರಾಬಾದ್ (SRH) 2.40 ಕೋಟಿ ಆಗಿದ್ದ ವೇಳೆ ಮಧ್ಯ ಪ್ರವೇಶಿಸಿತು. ಈ ಬಿಡ್ ಮೊತ್ತ 2.80 ಕೋಟಿಗೆ ಹೆಚ್ಚಾಯಿತು. ಆದರೆ ಆಗ ಸಿಎಸ್​ಕೆ ಹಿಂದೆ ಸರಿಯಿತು. ಆಗ ಎಸ್​ಆರ್​ಹೆಚ್​ಗೆ ಮನೋಹರ್ ಸೋಲ್ಡ್ ಎಂದು ಘೋಷಿಸಿದರು. ಕೆಲವೇ ಸೆಕೆಂಡ್​ಗಳಲ್ಲಿ ಕೆಕೆಆರ್​​ ಪ್ಯಾಡಲ್ ಎತ್ತಿದ್ದನ್ನು ನೋಡಲಿಲ್ಲ ಎಂದು ಮತ್ತೆ ಹರಾಜು ಮುಂದುವರೆಸಿದರು. ಆಗ ಎಸ್​​​ಆರ್​ಹೆಚ್​ ಒಂದು ಕ್ಷಣ ದಂಗಾಯಿತು. ಕೆಕೆಆರ್ 3 ಕೋಟಿಗೆ ಹರಾಜು ಹಾಕಿದ ಬೆನ್ನಲ್ಲೇ ಎಸ್​ಆರ್​​ಹೆಚ್​ 3.20 ಕೋಟಿ ನೀಡಿ ಮತ್ತೆ ಮನೋಹರ್​ ಖರೀದಿಸಿತು. ಇದರಿಂದ 40 ಲಕ್ಷ ಹೆಚ್ಚುವರಿ ಕೊಡಬೇಕಾಯಿತು.

SRH ಖರೀದಿಸಿದ ಆಟಗಾರರ ಪಟ್ಟಿ: ಮೊಹಮ್ಮದ್ ಶಮಿ (10 ಕೋಟಿ), ಹರ್ಷಲ್ ಪಟೇಲ್ (8 ಕೋಟಿ), ಇಶಾನ್ ಕಿಶನ್ (11.25 ಕೋಟಿ), ರಾಹುಲ್ ಚಹರ್ (3.2 ಕೋಟಿ ರೂ.), ಆಡಮ್ ಝಂಪಾ (2.40 ಕೋಟಿ), ಅಥರ್ವ ಟೈಡೆ (30 ಲಕ್ಷ), ಅಭಿನವ್ ಮನೋಹರ್ (3.20 ಕೋಟಿ), ಸಿಮರ್ಜೀತ್ ಸಿಂಗ್ (1.50 ಕೋಟಿ).

SRH ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಪ್ಯಾಟ್ ಕಮಿನ್ಸ್ (18 ಕೋಟಿ), ಅಭಿಷೇಕ್ ಶರ್ಮಾ (14 ಕೋಟಿ), ನಿತೀಶ್ ರೆಡ್ಡಿ (6 ಕೋಟಿ), ಹೆನ್ರಿಚ್ ಕ್ಲಾಸೆನ್ (23 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ).

Whats_app_banner