ಇಂಡೋ-ಆಸೀಸ್ ಪಂದ್ಯ; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಆಸೀಸ್ ಪಂದ್ಯ; ಪ್ಲೇಯಿಂಗ್ Xi, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಇಲ್ಲಿದೆ

ಇಂಡೋ-ಆಸೀಸ್ ಪಂದ್ಯ; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಇಲ್ಲಿದೆ

IND vs AUS T20 World Cup 2024: ಜೂನ್ 24ರಂದು ಟಿ20 ವಿಶ್ವಕಪ್ 2024 ಸೂಪರ್-8 ಪಂದ್ಯದಲ್ಲಿ ಭಾರತ - ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ. ಡ್ಯಾರೆನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ಜರುಗಲಿದೆ.

ಇಂಡೋ-ಆಸೀಸ್ ಪಂದ್ಯ; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಇಲ್ಲಿದೆ
ಇಂಡೋ-ಆಸೀಸ್ ಪಂದ್ಯ; ಪ್ಲೇಯಿಂಗ್ XI, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ ಇಲ್ಲಿದೆ

ಅಫ್ಘಾನಿಸ್ತಾನ ವಿರುದ್ಧ 47 ರನ್‌, ಬಾಂಗ್ಲಾದೇಶ ವಿರುದ್ಧ 50 ರನ್​ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ (Team India), ಇದೀಗ ಸೂಪರ್​-8 ಹಂತದಲ್ಲಿ 3ನೇ ಪಂದ್ಯಕ್ಕೆ ಸಜ್ಜಾಗಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡ (Australia Cricket Team) ಎದುರಿಸಲು ರೋಹಿತ್​ ಪಡೆ ಸನ್ನದ್ಧಗೊಂಡಿದೆ. ಜೂನ್ 24ರಂದು ಸೇಂಟ್ ಲೂಸಿಯಾದ ಡ್ಯಾರೆನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ (Daren Sammy National Cricket Stadium) ಈ ಪಂದ್ಯ ಜರುಗಲಿದೆ.

ಗ್ರೂಪ್ ಹಂತದಲ್ಲಿ ನಾಲ್ಕಕ್ಕೆ ನಾಲ್ಕು ಗೆದ್ದು ಸೂಪರ್-8ಕ್ಕೆ ಪ್ರವೇಶಿಸಿದ ಆಸ್ಟ್ರೇಲಿಯಾ, ಸೆಮಿಫೈನಲ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ಸಜ್ಜಾಗಿದೆ. ಸೂಪರ್​​-8 ಹಂತದ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಭಾರತ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ, ಆಸೀಸ್ ಸೋತರೆ ಸೆಮೀಸ್ ಹಾದಿ ಬಹುತೇಕ ದುರ್ಗಮವಾಗಲಿದೆ.

ಏಕೆಂದರೆ ಸೂಪರ್​​-8 ಸುತ್ತಿನ ಗ್ರೂಪ್​ 1ರಲ್ಲಿ ಅಫ್ಘಾನಿಸ್ತಾನ ಕೂಡ ಆಸ್ಟ್ರೇಲಿಯಾಗೆ ಕಠಿಣ ಪೈಪೋಟಿ ನೀಡುತ್ತಿದೆ. ಸೂಪರ್​​-8ರಲ್ಲಿ ಆಫ್ಘನ್-ಆಸೀಸ್ ಆಡಿದ 2 ಪಂದ್ಯಗಳ ಪೈಕಿ ತಲಾ 1 ಗೆಲುವು ಸಾಧಿಸಿದ್ದು, ತಲಾ ಒಂದೊಂದು ಸೋತಿವೆ. ಆದರೆ ಆಫ್ಘನ್​ಗಿಂತ ರನ್​ರೇಟ್ ಆಸಿಸ್ ತಂಡದ್ದು ಉತ್ತಮವಾಗಿದೆ. ಮತ್ತೊಂದೆಡೆ ಭಾರತ, 2ಕ್ಕೆ ಎರಡೂ ಗೆದ್ದು ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಕದನಕ್ಕೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ , ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್​ ಸಿಂಗ್, ಜಸ್ಪ್ರೀತ್ ಬುಮ್ರಾ.

ಭಾರತ ವಿರುದ್ಧದ ಕದನಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ತಂಡ

ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಶ್ ಹೇಜಲ್​ವುಡ್.

ಪಿಚ್ ಹೇಗಿರಲಿದೆ?

ಡ್ಯಾರೆನ್ ಸಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 180ಕ್ಕೂ ಹೆಚ್ಚು ಪಂದ್ಯಗಳು ನಡೆದಿದ್ದು, ಬಹುತೇಕ ಪಂದ್ಯಗಳಲ್ಲಿ ತಂಡಗಳಿಂದ ಉತ್ತಮ ಪ್ರದರ್ಶನ ಕಂಡು ಬಂದಿದೆ. ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ಗಳಿಸಿದ 218 ರನ್ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ವೆಸ್ಟ್ ಇಂಡೀಸ್ ಮಾಡಿದ ಗರಿಷ್ಠ ಸ್ಕೋರ್ ಆಗಿದೆ. ಗುರಿ ಬೆನ್ನಟ್ಟಿದ ಈ ಮೈದಾನದಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ 197 ರನ್ ಗಳಿಸಿತು. ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವೂ ಸಹ ಹೈಸ್ಕೋರಿಂಗ್ ಗೇಮ್ ಆಗಿ ನಿರೀಕ್ಷಿಸಬಹುದಾಗಿದೆ.

ಹವಾಮಾನ ವರದಿ

ಭಾರತ ತಂಡ ಗ್ರೂಪ್-1ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೂಪರ್-8ರ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಪ್ರಸಕ್ತ ಟೂರ್ನಿಯಲ್ಲಿ ಇಂಡೋ-ಆಸೀಸ್ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಹವಾಮಾನ ವರದಿ ಪ್ರಕಾರ ಬೆಳಗ್ಗೆ ಶೇ.55ರಷ್ಟು ಮಳೆಯಾಗುವ ಸಾಧ್ಯತೆ ಇದೆ. ತಾಪಮಾನ 32 ಡಿಗ್ರಿಯ ಆಸುಪಾಸಿನಲ್ಲಿ ಇರಲಿದೆ. ಮಳೆಯಿಂದ ಪಂದ್ಯ ಹಾಳಾಗುವ ಎಲ್ಲ ಸಾಧ್ಯತೆಗಳೂ ಇವೆ.

ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 31

ಭಾರತ ಗೆಲುವು - 19

ಆಸೀಸ್ ಗೆಲುವು - 11

ರದ್ದು - 01

ಮಳೆಯಿಂದ ಪಂದ್ಯ ರದ್ದಾದ ನಂತರ ಯಾರಿಗೆ ಲಾಭ?

ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳ ಖಾತೆಗೆ ತಲಾ ಒಂದು ಅಂಕ ಸೇರ್ಪಡೆಯಾಗಲಿದೆ. ಅಗ್ರಸ್ಥಾನದಲ್ಲಿರುವ ಭಾರತ 5 ಅಂಕಗಳನ್ನು ಪಡೆದು ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ಅದೇ ಸಮಯದಲ್ಲಿ ಆಸ್ಟ್ರೇಲಿಯಾ 3 ಅಂಕ ಪಡೆಯಲಿದೆ. ಆದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದರೆ ಮಾತ್ರ ಆಸೀಸ್​ಗೆ ಸೆಮಿಫೈನಲ್ ದಾರಿ ಸುಲಭವಾಗಲಿದೆ. ಒಂದು ವೇಳೆ ಆಫ್ಘನ್ ಗೆದ್ದರೆ, ಆಸೀಸ್​ ತವರಿಗೆ ಮರಳಬೇಕಾಗುತ್ತದೆ.

Whats_app_banner