ಗೌತಮ್‌ ಕಣ್ಣ ಮುಂದೆ ಸಾಗಿದ ಅಮ್ಮ, ಭಾಗ್ಯಮ್ಮಳನ್ನು ಹುಡುಕಿ ಮುಗಿಸಲು ಶಕುಂತಲಾ ಗ್ಯಾಂಗ್‌ ಪ್ಲ್ಯಾನ್‌- ಅಮೃತಧಾರೆ ಇಂದಿನ ಸಂಚಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಗೌತಮ್‌ ಕಣ್ಣ ಮುಂದೆ ಸಾಗಿದ ಅಮ್ಮ, ಭಾಗ್ಯಮ್ಮಳನ್ನು ಹುಡುಕಿ ಮುಗಿಸಲು ಶಕುಂತಲಾ ಗ್ಯಾಂಗ್‌ ಪ್ಲ್ಯಾನ್‌- ಅಮೃತಧಾರೆ ಇಂದಿನ ಸಂಚಿಕೆ

ಗೌತಮ್‌ ಕಣ್ಣ ಮುಂದೆ ಸಾಗಿದ ಅಮ್ಮ, ಭಾಗ್ಯಮ್ಮಳನ್ನು ಹುಡುಕಿ ಮುಗಿಸಲು ಶಕುಂತಲಾ ಗ್ಯಾಂಗ್‌ ಪ್ಲ್ಯಾನ್‌- ಅಮೃತಧಾರೆ ಇಂದಿನ ಸಂಚಿಕೆ

Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಗುರುವಾರದ (ನವೆಂಬರ್‌ 28) ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಗೌತಮ್‌ ಭಾಗ್ಯಮ್ಮಳನ್ನು ನೋಡದೆ ಇದ್ದರೂ ಆಕೆಯನ್ನು ನೋಡಿದ ಲಕ್ಷ್ಮಿಕಾಂತ್‌ ಈ ವಿಚಾರವನ್ನು ಶಕುಂತಲಾಳಿಗೆ ತಿಳಿಸಿದ್ದಾನೆ.

ಭಾಗ್ಯಮ್ಮಳನ್ನು ಹುಡುಕಿ ಮುಗಿಸಲು ಶಕುಂತಲಾ ಗ್ಯಾಂಗ್‌ ಪ್ಲ್ಯಾನ್‌- ಅಮೃತಧಾರೆ ಇಂದಿನ ಸಂಚಿಕೆ
ಭಾಗ್ಯಮ್ಮಳನ್ನು ಹುಡುಕಿ ಮುಗಿಸಲು ಶಕುಂತಲಾ ಗ್ಯಾಂಗ್‌ ಪ್ಲ್ಯಾನ್‌- ಅಮೃತಧಾರೆ ಇಂದಿನ ಸಂಚಿಕೆ

ಅಮೃತಧಾರೆ ಧಾರಾವಾಹಿಯ ಗುರುವಾರದ (ನವೆಂಬರ್‌ 28) ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ನಿನ್ನೆಯ ಸಂಚಿಕೆಯಲ್ಲಿ ಸುಧಾ ದಾರಿ ತಪ್ಪಿಯಲ್ಲಿ ಬೀದಿಯಲ್ಲಿ ಸುತ್ತುತ್ತಾ ಇದ್ದ ಕಥೆ ನಿಮಗೆ ಗೊತ್ತು. ಇನ್ನೊಂದೆಡೆ ಕಾರಿನಲ್ಲಿ ಗೌತಮ್‌ ಮತ್ತು ಲಕ್ಷ್ಮಿಕಾಂತ್‌ ಹೋಗುತ್ತಿದ್ದರು. ಆಗ ಲಕ್ಷ್ಮಿಕಾಂತ್‌ ಕಣ್ಣಿಗೆ ಭಾಗ್ಯಾ ಕಾಣಿಸಿದ್ದಾರೆ. ತನ್ನ ತಾಯಿಯನ್ನು ಗೌತಮ್‌ ನೋಡಿಬಿಟ್ರೆ ಗತಿ ಏನು ಎಂದು ಲಕ್ಷ್ಮಿಕಾಂತ್‌ ಚಿಂತಿಸುವಾಗಲೇ ತಲೆ ಎತ್ತದೆ ಗೌತಮ್‌ ತನ್ನ ಅಮ್ಮ ಭಿಕ್ಷುಕಿ ಎಂದು ತಿಳಿದು ಐನೂರು ರೂ ನೀಡುತ್ತಾರೆ. ಇವತ್ತಿನ ಸಂಚಿಕೆಯಲ್ಲಿ ಗೌತಮ್‌ ತನ್ನ ತಾಯಿಯನ್ನು ನೋಡಿಲ್ಲ. ಭಾಗ್ಯಾ ಹಾಗೇ ಮುಂದಕ್ಕೆ ಹೋಗಿದ್ದಾರೆ. ಇದರಿಂದ ಲಕ್ಷ್ಮಿಕಾಂತ್‌ ನಿರಾಳವಾಗಿದ್ದಾನೆ. ಆದರೆ, ಮುಂದೆ ನಡೆಯಲಿರುವ ಅನೇಕ ಘಟನೆಗಳಿಗೆ ಇದು ಹೊಸ ಆರಂಭವಾಗುವ ಸೂಚನೆ ಇದೆ.

ಇದ್ಯಾವುದೂ ಗೊತ್ತಿಲ್ಲದೆ ಸುಧಾ ಭೂಮಿಕಾಳ ಜತೆ ಮಾತನಾಡುತ್ತಿದ್ದಾಳೆ. ಇನ್ನೊಂದೆಡೆ ಮೊಮ್ಮಗಳು ಅಜ್ಜಿ ಇಲ್ಲದೆ ಅಳುತ್ತಾ ಇದ್ದಾಳೆ. ಪಕ್ಕದ ಮನೆ ಆಂಟಿ ಕೂಡ ಚಿಂತೆಯಲ್ಲಿದ್ದಾರೆ. ಅವರು ಸುಧಾಳಿಗೆ ಕಾಲ್‌ ಮಾಡಿ ವಿಚಾರ ತಿಳಿಸುತ್ತಾರೆ. "ಅಜ್ಜಿ ಎಲ್ಲೂ ಕಾಣಿಸ್ತಾ ಇಲ್ಲ" ಎಂದು ಹೇಳಿದಾಗ ಸುಧಾ ಗಾಬರಿಯಾಗುತ್ತಾಳೆ. ಎಲ್ಲಾ ಕಡೆ ಹುಡುಕಿದೆವು ಎಂದು ಹೇಳಿದಾಗ ಸುಧಾ "ನಾನು ಈಗಲೇ ಬರುವೆ" ಎಂದು ಹೊರಡುತ್ತಾಳೆ. ಭೂಮಿಕಾ ಬಂದಾಗ ಸುಧಾ ಇರುವುದಿಲ್ಲ.

ಗೌತಮ್‌ ಕಾರಿನಲ್ಲಿರುವ ಲಕ್ಷ್ಮಿಕಾಂತ್‌ ಟೆನ್ಷನ್‌ನಲ್ಲಿದ್ದಾನೆ. ಇವಳು ಇಷ್ಟು ದಿನ ಇಲ್ಲೇ ಇದ್ದಾಳ, ನಮ್ಮ ಸುತ್ತಮುತ್ತ ಓಡಾಡುತ್ತ ಇದ್ಲ ಎಂದು ಚಿಂತಿಸುತ್ತಾನೆ. "ಏನು ಟೆನ್ಷನ್‌ನಲ್ಲಿದ್ದೀರಿ ಭಾವ" ಎಂದು ಗೌತಮ್‌ ಕೇಳಿದಾಗ ಏನೋ ಹೇಳುತ್ತಾನೆ. "ದುಡ್ಡಿಲ್ಲ, ಅದಕ್ಕೆ ಚಿಂತೆ" ಎನ್ನುತ್ತಾನೆ. ಇಲ್ಲೇ ಹತ್ತಿರದಲ್ಲಿ ಕ್ಲೀನಿಕ್‌ ಇದೆ, ಯಾಕೋ ಮೈ ಹುಷಾರಿಲ್ಲ ಎಂದು ಕಾರಿನಿಂದ ಇಳಿಯುತ್ತಾನೆ. ಕಾರಿನಿಂದ ಇಳಿದು ಲಕ್ಷ್ಮಿಕಾಂತ್‌ ಹುಡುಕುತ್ತಾನೆ. ಎಲ್ಲೂ ಭಾಗ್ಯಾ ಕಾಣಿಸುವುದಿಲ್ಲ.

ಅಮ್ಮನನ್ನು ಹುಡುಕಲು ಹೊರಟ ಸುಧಾ

ಸುಧಾ ಓಡೋಡಿ ಮನೆಗೆ ಬರುತ್ತಾಳೆ. ಮಗಳಿಗೆ ಸಮಾಧಾನ ಹೇಳುತ್ತಾಳೆ. ಸುಧಾ ಕೂಡ ಹುಡುಕಲು ಹೋಗುತ್ತಾಳೆ. ಇನ್ನೊಂದೆಡೆ ಲಕ್ಷ್ಮಿಕಾಂತ್‌ ಹುಡುಕುತ್ತಿದ್ದಾನೆ. ಶಕುಂತಲಾದೇವಿಗೆ ಕಾಲ್‌ ಮಾಡಿ ವಿಷಯ ತಿಳಿಸುತ್ತಾನೆ. "ಭಾಗ್ಯಾ ನಮ್ಮ ಸುತ್ತಮುತ್ತ ಇದ್ದಾಳೆ. ನಾನು ನನ್ನ ಕಣ್ಣಾರೆ ನೋಡಿದೆ" ಎಂದು ಹೇಳುತ್ತಾನೆ. "ಅವಳು ನಿನ್ನ ಕಣ್ಣಿಗೆ ಕಾಣಿಸಿದ್ದಾಳೆ ಅಂದರೆ ಇನ್ನು ಯಾರ ಕಣ್ಣಿಗೂ ಕಾಣಿಸಬಾರದು" ಎಂದು ಹೇಳುತ್ತಾಳೆ.

ಗೌತಮ್‌ ಬಂದಾಗ ಸುಧಾಳ ಸಂಗತಿ ಹೇಳುತ್ತಾಳೆ. ಕೈಯಲ್ಲಿ ಏನಾದರೂ ಎತ್ತಿಕೊಂಡು ಓಡಿದ್ದಾಳ ಎಂದು ಗೌತಮ್‌ ಕೇಳುತ್ತಾರೆ. "ನೀವು ಹೀಗೆ ಮಾತನಾಡ್ತಿದ್ದೀರ" ಎಂದು ಕೇಳುತ್ತಾರೆ ಭೂಮಿಕಾ. "ನೀವು ತಂಗಿ ಬಗ್ಗೆ ಹೀಗೆ ಹೇಳ್ತಾರ" ಎಂದು ಕೇಳಿದಾಗ "ಈ ಸಮಾಜದಲ್ಲಿ ಏನೇನೂ ನಡೆಯುತ್ತಿದೆ. ನಾನು ಯಾರನ್ನು ಹೇಗೆ ನಂಬಲಿ" ಎಂದು ಗೌತಮ್‌ ಹೇಳುತ್ತಾರೆ.

ಭಾಗ್ಯಾ ರಸ್ತೆಯಲ್ಲಿ ಹೋಗುವಾಗ ರಿಕ್ಷಾವೊಂದಕ್ಕೆ ಅಡ್ಡಬರುತ್ತಾಳೆ. ರಿಕ್ಷಾ ಚಾಲಕ ಇಳಿದು ಬಯ್ಯುತ್ತಾನೆ. ಭಾಗ್ಯಾಳ ಕೈಯಲ್ಲಿದ್ದ ಹಣ ಮತ್ತು ಫೋಟೋ ಕೆಳಗೆ ಬೀಳುತ್ತದೆ. ಇದನ್ನು ಸುಧಾ ನೋಡುತ್ತಾಳೆ. ಆಕೆಗೆ ಅಮ್ಮ ಸಿಗುತ್ತಾಳೆ. ಅದೇ ಆಟೋದಲ್ಲಿ ಅಮ್ಮನನ್ನು ಕರೆದುಕೊಂಡು ಹೋಗುತ್ತಾಳೆ. ಆಗ ಅಲ್ಲೇ ಲಕ್ಷ್ಮಿಕಾಂತ್‌ ಹುಡುಕುತ್ತಾ ಇದ್ದಾನೆ. ಹೂವಿನ ಅಂಗಡಿಯವಳ ಬಳಿ ಕೇಳುತ್ತಾನೆ. "ಒಂದು ಹುಡುಗಿ ಬಂದು ಕರ್ಕೊಂಡು ಹೋದ್ಲು ನೋಡಿ" ಎನ್ನುತ್ತಾಳೆ. ಮತ್ತೆ ಆ ಕಡೆ ಈ ಕಡೆ ಹೋದ ಲಕ್ಷ್ಮಿಕಾಂತ್‌ಗೆ ನೆಲದಲ್ಲಿ ಬಿದ್ದಿರುವ ಫೋಟೋ ಕಾಣಿಸುತ್ತದೆ. ಭಾಗ್ಯಾ ಗೌತಮ್‌ನ ಹಳೆಯ ಫೊಟೋ ನೋಡಿ ಆತಂಕ ಹೆಚ್ಚುತ್ತದೆ.

ಮನೆಗೆ ಹೋಗಿ ಶಕುಂತಲಾಳಿಗೆ ವಿಷಯ ತಿಳಿಸುತ್ತಾನೆ. ನಾನು ನೋಡಿರುವುದು ಅವಳೇ ಎಂದು ಅಲ್ಲಿ ಸಿಕ್ಕಿದ ಫೋಟೋವನ್ನು ನೋಡುತ್ತಾಳೆ. ಶಕುಂತಲಾಗೆ ಕನ್‌ಫರ್ಮ್‌ ಆಗುತ್ತದೆ. ಆದಷ್ಟು ಬೇಗ ಇವರಿಗೆ ವ್ಯವಸ್ಥೆ ಮಾಡೋಣ ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಾರೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ನವೆಂಬರ್‌ 28, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner