2024ರ ಐಪಿಎಲ್‌ನಲ್ಲಿ ದಾಖಲಾದ 5 ಗರಿಷ್ಠ ಸ್ಕೋರ್‌ಗಳು, ಯಾರು ಗೆದ್ದರು? ಯಾರು ಸೋತರು? ಪೂರ್ಣ ಮಾಹಿತಿ ತಿಳಿಯಿರಿ
2024ರ ಐಪಿಎಲ್ ಮುಕ್ತಾಯಗೊಂಡಿದ್ದು, ಎಸ್‌ಆರ್‌ಎಚ್ ವಿರುದ್ಧ ಗೆದ್ದ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗಿದೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ದಾಖಲಾದ 5 ಗರಿಷ್ಠ ಸ್ಕೋರ್‌ಗಳ ವಿವರ ಇಲ್ಲಿದೆ.
ಬೆಂಗಳೂರು: 2024ರ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿಶ್ವದಾಖಲೆಯ ದೊಡ್ಡ ಮೊತ್ತಗಳನ್ನು ತಂಡಗಳು ಪೇರಿಸಿವೆ. ಇದರಲ್ಲಿ ಅಗ್ರ 5 ತಂಡಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಏಪ್ರಿಲ್ 15 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಆರ್‌ಬಿಸಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಲೀಗ್ ಪಂದ್ಯ ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಎಸ್‌ಆರ್‌ಎಚ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದು ಟಿ20 ಕ್ರಿಕೆಟ್‌ನಲ್ಲೇ ಅತಿ ಗರಿಷ್ಠ ಸ್ಕೋರ್ ಎನಿಸಿದೆ. ಹೈದರಾಬಾದ್ ಪರ ಆರಂಭಿಕ ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 9 ಬೌಂಡರಿ 8 ಅಮೋಘ ಸಿಕ್ಸರ್‌ಗಳ ಸಹಿತ 102 ರನ್ ಬಾರಿಸಿದರು.
288 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಬಾರಿಸಿತು. ಚೇಸಿಂಗ್‌ನಲ್ಲಿ ಇದು ಕೂಡ ದಾಖಲೆಯಾಗಿದೆ. ಬೆಂಗಳೂರು ತಂಡದ ಪರ ದಿನೇಶ್ ಕಾರ್ತಿಕ್ ಕೇವಲ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ ಸೇರಿ 83 ರನ್ ಬಾರಿಸಿ ತಂಡ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿದರು. ಈ ಪಂದ್ಯವನ್ನು ಎಸ್‌ಆರ್‌ಎಚ್ 25 ರನ್‌ಗಳಿಂದ ಗೆದ್ದುಕೊಂಡಿತ್ತು. ಗರಿಷ್ಠ ರನ್ ದಾಖಲಿಸಿದ ಟಾಪ್ 5 ತಂಡಗಳ ವಿವರ ಇಲ್ಲಿದೆ.
2024ರ ಐಪಿಎಲ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ಅಗ್ರ ತಂಡಗಳು
- 2024ರ ಏಪ್ರಿಲ್ 15 - ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 287
- 2024ರ ಮಾರ್ಚ್ 27 - ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 277 ರನ್
- 2024ರ ಏಪ್ರಿಲ್ 3 - ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ 272 ರನ್
ಇದನ್ನೂ ಓದಿ: ಕೆಕೆಆರ್‌ಗೆ ಗೆಲುವು; ಸನ್‌ರೈಸರ್ಸ್ ಮಣಿಸಿ 3ನೇ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಕೋಲ್ಕತ್ತಾ ನೈಟ್ ರೈಡರ್ಸ್
- 2024ರ ಏಪ್ರಿಲ್ 20 - ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 266 ರನ್
- 2024ರ ಏಪ್ರಿಲ್ 26 - ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 262
- 2024ರ ಏಪ್ರಿಲ್ 15 - ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 262 ರನ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)