ಲಕ್ನೋ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌ ಆಯ್ಕೆ; ಹೀಗಿದೆ ಉಭಯ ತಂಡಗಳ ಬಲಿಷ್ಠ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಲಕ್ನೋ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌ ಆಯ್ಕೆ; ಹೀಗಿದೆ ಉಭಯ ತಂಡಗಳ ಬಲಿಷ್ಠ ಆಡುವ ಬಳಗ

ಲಕ್ನೋ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌ ಆಯ್ಕೆ; ಹೀಗಿದೆ ಉಭಯ ತಂಡಗಳ ಬಲಿಷ್ಠ ಆಡುವ ಬಳಗ

RR vs LSG: ಐಪಿಎಲ್‌ 2024ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮೊದಲ ಬಾರಿಗೆ ಕಣಕ್ಕಿಳಿಯುತ್ತಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ಕೆಎಲ್‌ ರಾಹುಲ್‌ ಬಳಗ ಕಣಕ್ಕಿಳಿಯುತ್ತಿದೆ.

ರಾಜಸ್ಥಾನ vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ
ರಾಜಸ್ಥಾನ vs ಲಕ್ನೋ ಐಪಿಎಲ್‌ ಹಣಾಹಣಿ; ಜೈಪುರ ಪಿಚ್‌, ಹವಾಮಾನ ವರದಿ

ರಾಜಸ್ಥಾನ್ ರಾಯಲ್ಸ್ (Rajasthan Royals) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಗಳು ಐಪಿಎಲ್‌ 2024ರ ಪಂದ್ಯಾವಳಿಯಲ್ಲಿ ಇಂದು (ಮಾರ್ಚ್‌ 24ರ ಭಾನುವಾರ) ಅಭಿಯಾನ ಆರಂಭಿಸುತ್ತಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಪ್ರಸಕ್ತ ಆವೃತ್ತಿಯ ನಾಲ್ಕನೇ ಪಂದ್ಯ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ರಾಜಸ್ಥಾನ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಸಂಜು ಸ್ಯಾಮ್ಸನ್‌ ಬಳಗವು, ಈ ಬಾರಿ ಪ್ರಸಿದ್ಧ್ ಕೃಷ್ಣ ಮತ್ತು ಆಡಮ್ ಜಂಪಾ ಅವರಿಲ್ಲದೆ ಆಡಬೇಕಿದೆ. ರಾಜಸ್ಥಾನ ಪರ ಬಟ್ಲರ್‌, ಹೆಟ್ಮಾಯರ್‌, ಬೋಲ್ಟ್‌ ಆಡಿದರೆ, ಪೊವೆಲ್‌ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಅತ್ತ ಲಕ್ನೋ ಪರ ಡಿಕಾಕ್‌, ಪೂರನ್‌, ಸ್ಟೋಯ್ನಿಸ್‌ ಹಾಗೂ ನವೀನ್‌ ಉಲ್‌ ಹಕ್‌ ವಿದೇಶಿ ಆಟಗಾರರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ಪರ ಆಡಿದ್ದ ಕನ್ನಡಿಗ ದೇವದತ್‌ ಪಡಿಕ್ಕಲ್‌, ಈ ಬಾರಿ ಲಕ್ನೋ ಪರ ಪದಾರ್ಪಣೆ ಮಾಡಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ತಂಡವು ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿತ್ತು. ಕೆಎಲ್‌ ರಾಹುಲ್‌ ನೇತೃತ್ವದ ಲಕ್ನೋ ತಂಡವು ಪ್ಲೇಆಫ್‌ ಹಂತಕ್ಕೆ ಪ್ರವೇಶಿಸಿತ್ತು. ಆದರೆ ನಿರ್ಣಾಯಕ ಎಲಿಮಿನೇಟರ್‌ ಪಂದ್ಯದಲ್ಲಿ ಸೋತು ಹೊರಬಿದ್ದಿತು. ಈ ಬಾರಿ ಗೆಲುವಿನ ಆರಂಭ ಪಡೆಯುಲು ಉಭಯ ತಂಡಗಳು ಉತ್ಸುಕವಾಗಿದೆ.

ಇದನ್ನೂ ಓದಿ | ರಸೆಲ್ ಮಸ್ಸಲ್ ಪವರ್​​ ಮುಂದೆ ಶರಣಾದ ಹೈದರಾಬಾದ್, ಕೆಕೆಆರ್​ಗೆ ರೋಚಕ ಗೆಲುವು; ಐಪಿಎಲ್​ ದುಬಾರಿ ಕ್ಯಾಪ್ಟನ್​ಗೆ ಮೊದಲ ಸೋಲು

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಪಿಚ್ ಬ್ಯಾಟರ್‌ಗಳಿಗೆ ನೆರವಾಗಲಿದೆ.  ಈ ಮೈದಾನದಲ್ಲಿ ಈವರೆಗೆ ನಡೆದ ಒಟ್ಟು 52 ಐಪಿಎಲ್ ಪಂದ್ಯಗಳಲ್ಲಿ 34 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಜಯ ಸಾಧಿಸಿದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಲಕ್ನೋ ಮತ್ತು ರಾಜಸ್ತಾನ ನಡುವಿನ‌ ಐಪಿಎಲ್ ಪಂದ್ಯವನ್ನು ಟಿವಿ ಮೂಲಕ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವೀಕ್ಷಿಸಬಹುದು. ಜಿಯೋ ಸಿನಿಮಾ ಅಪ್ಲಿಕೇಶನ್‌ ಹಾಗೂ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲೈವ್‌ ಸ್ಟ್ರೀಮಿಂಗ್‌ ಮಾಡಬಹುದು.

ಲಕ್ನೋ ಸೂಪರ್‌ ಜೈಂಟ್ಸ್‌ ಆಡುವ ಬಳಗ

ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ಆಯುಷ್ ಬದೋನಿ, ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ನವೀನ್ ಉಲ್ ಹಕ್, ಯಶ್ ಠಾಕೂರ್, ರವಿ ಬಿಷ್ಣೋಯ್.

ಇಂಪ್ಯಾಕ್ಟ್‌ ಪ್ಲೇಯರ್‌ ಆಯ್ಕೆಗಳು: ದೀಪಕ್ ಹೂಡಾ, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಕೆ ಗೌತಮ್.

ರಾಜಸ್ಥಾನ್‌ ರಾಯಲ್ಸ್‌ ತಂಡ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್, ಆವೇಶ್ ಖಾನ್, ಟ್ರೆಂಟ್ ಬೋಲ್ಟ್.

ಇಂಪ್ಯಾಕ್ಟ್‌ ಪ್ಲೇಯರ್‌ ಆಯ್ಕೆಗಳು: ನಾಂದ್ರೆ ಬರ್ಗರ್, ರೋವ್ಮನ್ ಪೊವೆಲ್, ತನುಷ್ ಕೋಟ್ಯಾನ್, ಶುಭಂ ದುಬೆ, ಕುಲದೀಪ್ ಸೇನ್.

Whats_app_banner