ಕನ್ನಡ ಸುದ್ದಿ  /  Cricket  /  No One Can Be Ms Dhoni Sunil Gavaskar Clarifies His Big Statement On Dhruv Jurel Ahead Of India Vs England 5th Test Prs

ಧೋನಿ ಅವರಂತಾಗಲು ಯಾರಿಂದಲೂ ಸಾಧ್ಯವಿಲ್ಲ: ಧ್ರುವ್ ಜುರೆಲ್ ಕುರಿತು ನೀಡಿದ್ದ ಹೇಳಿಕೆಗೆ ಸುನಿಲ್ ಗವಾಸ್ಕರ್ ಸ್ಪಷ್ಟನೆ

Sunil Gavaskar : ರಾಂಚಿ ಟೆಸ್ಟ್ ಪಂದ್ಯದ ವೇಳೆ ಸುನಿಲ್ ಗವಾಸ್ಕರ್ ಅವರು ಧ್ರುವ್ ಜುರೆಲ್ ಅವರನ್ನು ಎಂಎಸ್ ಧೋನಿಗೆ ಹೋಲಿಸಿದ್ದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ.

ಧ್ರುವ್ ಜುರೆಲ್ ಕುರಿತು ನೀಡಿದ್ದ ಹೇಳಿಕೆಗೆ ಸುನಿಲ್ ಗವಾಸ್ಕರ್ ಸ್ಪಷ್ಟನೆ
ಧ್ರುವ್ ಜುರೆಲ್ ಕುರಿತು ನೀಡಿದ್ದ ಹೇಳಿಕೆಗೆ ಸುನಿಲ್ ಗವಾಸ್ಕರ್ ಸ್ಪಷ್ಟನೆ (PTI)

ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಪದಾರ್ಪಣೆಗೈದು ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದಿರುವ ಯುವ ವಿಕೆಟ್ ಕೀಪರ್​ ಧ್ರುವ್ ಜುರೆಲ್ ಅವರನ್ನು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಸಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ಅವರು, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​​​ನಲ್ಲಿ ಭಾರತದ ಮೊದಲ ಇನ್ನಿಂಗ್ಸ್​​ನಲ್ಲಿ 90 ರನ್​ ಬಾರಿಸಿದ ಜುರೆಲ್​ರನ್ನು ಮುಂದಿನ ಎಂಎಸ್ ಧೋನಿ ಎಂದು ಗವಾಸ್ಕರ್​ ಗುಣಗಾನ ಮಾಡಿದ್ದರು. ಕಾಮೆಂಟ್ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1ರಲ್ಲಿ ಸರಣಿ ಗೆದ್ದುಕೊಂಡಿದೆ. ಇದೀಗ 5ನೇ ಮತ್ತು ಅಂತಿಮ ಟೆಸ್ಟ್​​​​​ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದ್ದು, ಉಭಯ ತಂಡಗಳು ಭರ್ಜರಿ ಅಭ್ಯಾಸ ಆರಂಭಿಸಿವೆ. ಅಂತಿಮ ಟೆಸ್ಟ್​​ ಪಂದ್ಯಕ್ಕೂ ಮುನ್ನ ಗವಾಸ್ಕರ್ ಅವರನ್ನು ಜುರೆಲ್-ಧೋನಿ ನಡುವಿನ ಹೋಲಿಕೆಗಳ ಬಗ್ಗೆ ಕೇಳಲಾಯಿತು. ಭಾರತದ ಮಾಜಿ ನಾಯಕ ಇನ್ನೊಬ್ಬ ಧೋನಿ ಅವರಂತಾಗಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಜುರೆಲ್ ಉಜ್ವಲ ಭವಿಷ್ಯದ ತಾರೆಯಾಗಲಿದ್ದಾರೆ ಎಂದು ಗವಾಸ್ಕರ್​ ತನ್ನ ಮಾತಿನ ಅರ್ಥವನ್ನು ವಿವರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗವಾಸ್ಕರ್, ಜುರೆಲ್ ಅವರ ಆಟದ ಬಗ್ಗೆ ಯೋಚಿಸುವ ರೀತಿ, ಪರಿಸ್ಥಿತಿಯನ್ನು ನಿರ್ಣಯಿಸುವ ರೀತಿ ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್ ಮಾಡುವ ರೀತಿ ನನಗೆ ಎಂಎಸ್ ಧೋನಿ ಭಾವನೆ ನೀಡುತ್ತದೆ. ಅವರು ಒಂದು ಸಿಕ್ಸರ್ ಹೊಡೆದ ಬಳಿಕ ನಂತರ ಸಿಂಗಲ್ ಮತ್ತು ಡಬಲ್​ ರನ್​ಗಳ ಮೂಲಕ ಸ್ಟ್ರೈಕ್​​ ರೊಟೇಟ್ ಮಾಡುತ್ತಿದ್ದರು ಎಂದರು. ಅಲ್ಲದೆ ವಿಕೆಟ್ ಕೀಪಿಂಗ್​ನಲ್ಲೂ ಚಾಣಾಕ್ಷತನ ತೋರಿಸಿದರು. ರಿವರ್ಸ್ ಸ್ವೀಪ್​ ಸಿಡಿಸಲು ಹೋದ ಜೇಮ್ಸ್​ ಆಂಡರ್ಸನ್​ರ​ ಅದ್ಭುತ ಕ್ಯಾಚ್ ಪಡೆದರು ಎಂದರು. ಜುರೆಲ್​ನನ್ನು ಧೋನಿಯಂತೆ ಎನ್ನಲು ಕಾರಣ ಮುಂದಿನಂತಿದೆ.

ಎಂಎಸ್ ಧೋನಿ ಅವರು ಸಹ ಇಷ್ಟೇ ವಯಸ್ಸಿನಲ್ಲಿದ್ದಾಗ, ಅವರಿಗೂ ಇದೇ ಪರಿಸ್ಥಿತಿಯ ಅರಿವು ಇತ್ತು. ಅದಕ್ಕಾಗಿಯೇ ಜುರೆಲ್, ಎಂಎಸ್ ಧೋನಿಯಂತೆ ನಾನು ಹೇಳಿದ್ದೆ. ಆದರೆ ಎಂಎಸ್ ಧೋನಿ ಆಗಲು ಯಾರಿಂದಲೂ ಸಾಧ್ಯವಿಲ್ಲ. ಒಬ್ಬನೇ ಎಂಎಸ್ ಧೋನಿ. ಅವರ ಸ್ಥಾನ ತುಂಬಲು ಯಾರಿಂದಲೂ ಆಗುವುದಿಲ್ಲ. ಆದರೆ, ಧೋನಿ ಮಾಡಿದ ಕೆಲಸದ ಕೆಲವು ಭಾಗವನ್ನು ಜುರೆಲ್ ಮಾಡಲು ಸಾಧ್ಯವಾದರೆ, ಅದು ಭಾರತೀಯ ಕ್ರಿಕೆಟ್​​ಗೆ ಉತ್ತಮ. ಇದು ಎದುರಾಳಿ ತಂಡಗಳ ಮೇಲೆ ಒತ್ತಡವನ್ನೂ ಹಾಕುತ್ತದೆ ಎಂದು ಗವಾಸ್ಕರ್ ಸ್ಪೋರ್ಟ್ಸ್ ತಕ್​​​​​ ಹೇಳಿದ್ದಾರೆ.

'ಜುರೆಲ್ ಟಿ 20 ವಿಶ್ವಕಪ್​ಗೆ ಆಯ್ಕೆಯಾಗಬಹುದು':

2020ರಲ್ಲಿ ಭಾರತದ ಅಂಡರ್ 19 ವಿಶ್ವಕಪ್ ತಂಡದ ಸದಸ್ಯರಾಗಿದ್ದ ಗವಾಸ್ಕರ್ ಜುರೆಲ್ ಕಳೆದ ಐಪಿಎಲ್​​​​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೆಲವು ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ. 23ರ ಹರೆಯದ ಜುರೆಲ್, ಈ ಐಪಿಎಲ್​​ನಲ್ಲೂ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾದರೆ, ಟಿ20 ವಿಶ್ವಕಪ್​​​ನಲ್ಲಿ ಭಾರತಕ್ಕೆ ಆಯ್ಕೆಯಾಗಬಹುದು ಎಂದು ಗವಾಸ್ಕರ್ ಹೇಳಿದರು. ಅವರು ಖಂಡಿತವಾಗಿಯೂ ಒಂದು ಆಯ್ಕೆಯಾಗಿದ್ದಾರೆ. ಆದರೆ ಅವರ ಐಪಿಎಲ್ ಫಾರ್ಮ್ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ ಎಂದರು.

ಯುವ ಆಟಗಾರ ಸುಲಭವಾಗಿ ಸಿಕ್ಸರ್ ಹೊಡೆಯುತ್ತಾರೆ. ಇದು ಅವರು ಕಡಿಮೆ ಸ್ವರೂಪದ ಕ್ರಿಕೆಟ್​​​ನಲ್ಲಿ ಹೇಗೆ ಆಡುತ್ತಾರೆ ಎಂಬುದನ್ನು ತೋರಿಸುತ್ತದೆ. ಅವರಿಗೆ ಅವಕಾಶ ಸಿಕ್ಕರೆ ಅವರು ಫಿನಿಶರ್ ಆಗಿ 5 ಅಥವಾ 6 ನೇ ಕ್ರಮಾಂಕದಲ್ಲಿ ಮಾತ್ರ ಬ್ಯಾಟಿಂಗ್ ಮಾಡುತ್ತಾರೆ. ಇನ್ನಿಂಗ್ಸ್​​​ನ ಕೊನೆಯ 4-5 ಓವರ್​​ಗಳಲ್ಲಿ ಧೋನಿ ಹೇಗೆ ಬ್ಯಾಟ್ ಮಾಡುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಜುರೆಲ್ ಅವರಿಂದಲೂ ಅದನ್ನೇ ನಿರೀಕ್ಷಿಸಲಾಗುವುದು' ಎಂದು ಹೇಳಿದ್ದಾರೆ.

IPL_Entry_Point