Pakistan Cricket Team: ಪಾಕಿಸ್ತಾನ ಕ್ರಿಕೆಟ್ ತಂಡದ ಆತಂಕಕ್ಕೆ ಬ್ರೇಕ್; ವಿಶ್ವಕಪ್‌ಗಾಗಿ ಕೊನೆಗೂ ಸಿಕ್ತು ವೀಸಾ, ನಾಳೆ ಭಾರತಕ್ಕೆ ಆಗಮನ
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಇದ್ದ ಅಡ್ಡಿ, ಆತಂಕಗಳು ದೂರವಾಗಿವೆ. ಭಾರತಕ್ಕೆ ಬರಲು ಕೊನೆಗೂ ವೀಸಾ ನೀಡಲಾಗಿದೆ.
ಮುಂಬೈ: ಐಸಿಸಿ ಏಕದಿನ ವಿಶ್ವಕಪ್‌ಗೆ (ICC ODI World Cup 2023) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಹಾ ಟೂರ್ನಿಯಲ್ಲಿ ಭಾಗವಹಿಸಲಿರುವ 10 ತಂಡಗಳು ಭಾರತಕ್ಕೆ (India) ಆಗಮಿಸುತ್ತಿವೆ. ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಕ್ರಿಕೆಟ್ (Cricket) ಲೋಕದ ಅತ್ಯುನ್ನತ ಪ್ರಶಸ್ತಿಗಾಗಿ ನಡೆಯಲಿರುವ ಕಾದಾಟವನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಕಾಯುತ್ತಿದ್ದಾರೆ.
ಮೆಗಾ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳು ಪೈಕಿ ಈ ಮೊದಲೇ 9 ತಂಡಗಳಿಗೆ ವೀಸಾವನ್ನು ನೀಡಲಾಗಿದೆ. ಆದರೆ ಪಾಕಿಸ್ತಾನ ತಂಡಕ್ಕೆ ಮಾತ್ರ ಭಾರತದ ವೀಸಾ (Indian Visa) ತಡವಾಗಿತ್ತು. ಸದ್ಯ ನಿನ್ನೆ (ಸೆಪ್ಟೆಂಬರ್ 25, ಸೋಮವಾರ) ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ಭಾರತಕ್ಕೆ ಬರಲು ವೀಸಾವನ್ನು ನೀಡಲಾಗಿದೆ. ಇದರೊಂದಿಗೆ ಪಾಕ್ ತಂಡದ ಮುಂದಿದ್ದ ಎಲ್ಲಾ ಅಡ್ಡಿ, ಆತಂಕಗಳು ದೂರವಾಗಿವೆ.
ವೀಸಾ ತಡವಾಗಿದ್ದಕ್ಕೆ ಐಸಿಸಿಗೆ ದೂರು ನೀಡಿದ್ದ ಪಿಸಿಬಿ
ಭಾರತದ ವೀಸಾ ವಿಳಂಬದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಗೆ ದೂರು ಕೂಡ ನೀಡಿತ್ತು. ಒಟ್ಟಿನಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಎಲ್ಲಾ ಹೈಡ್ರಾಮಾಗಳಿಗೆ ಬ್ರೇಕ್ ಬಿದ್ದಂತಾಗಿದೆ.
ನೆರೆಯ ಪಾಕಿಸ್ತಾನಕ್ಕೆ ಭಾರತ ಸರ್ಕಾರ (Indian Govt) ವೀಸಾ ನೀಡಿದೆ. ಇದನ್ನು ಐಸಿಸಿ ಕೂಡ ದೃಢಪಡಿಸಿದೆ. ಈಗಾಗಲೇ ಪಾಕ್ ಆಟಗಾರರ ಕೈಗೆ ವೀಸಾ ಸೇರಿದು, ನಾಳೆ (ಸೆಪ್ಟೆಂಬರ್ 27) ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲಿದೆ.
ಪಾಕಿಸ್ತಾನ ಪ್ಲಾನ್ ಉಲ್ಟಾ ಪಲ್ಟಾ
ಈ ಹಿಂದೆ ಪಾಕಿಸ್ತಾನ ತಂಡ ದುಬೈಗೆ (Dubai) ಹೋಗಿ ಅಭ್ಯಾಸ ನಡೆಸಿದ ನಂತರ ಅಲ್ಲಿಂದ ಭಾರತಕ್ಕೆ ಬರುವ ಪ್ಲಾನ್ ಹಾಕಿಕೊಂಡಿತ್ತು. ಆದರೆ ಭಾರತದಿಂದ ವೀಸಾ ವಿಳಂಬವಾದ ಕಾರಣ ಅವರ ಪ್ಲಾನ್‌ಗಲು ಉಲ್ಟಾ ಪಲ್ಟಾ ಆಗಿದ್ದು, ಇದೀಗ ಲಾಹೋರ್‌ನಿಂದ (Lahore) ನೇರವಾಗಿ ಭಾರತಕ್ಕೆ ಬರಲು ನಿರ್ಧರಿಸಿದ್ದಾರೆ.
ವಿಶ್ವಕಪ್ ಪಂದ್ಯಗಳು ಆರಂಭಕ್ಕೂ ಮುನ್ನ ಪಾಕಿಸ್ತಾನ ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 6 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ಪಾಕ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.