PBKS Squad: ಮೆಗಾ ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ; ನಾಯಕ, ಕೋಚ್, ಪರ್ಸ್ ಮೊತ್ತ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Pbks Squad: ಮೆಗಾ ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ; ನಾಯಕ, ಕೋಚ್, ಪರ್ಸ್ ಮೊತ್ತ ಹೀಗಿದೆ

PBKS Squad: ಮೆಗಾ ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ; ನಾಯಕ, ಕೋಚ್, ಪರ್ಸ್ ಮೊತ್ತ ಹೀಗಿದೆ

Punjab Kings Full Squad: ಇಂಡಿಯನ್ ಪ್ರೀಮಿಯರ್ ಲೀಗ್​ 2025 ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಬಲಿಷ್ಠ ತಂಡವನ್ನು ರಚಿಸಿದೆ. ಹರಾಜಿನಲ್ಲಿ ಖರೀದಿಸಿದ ಆಟಗಾರರು, ಯಾರಿಗೆಷ್ಟು ಮೊತ್ತ, ನಾಯಕ, ಕೋಚ್ ಯಾರು ಎಂಬುದನ್ನು ಈ ಮುಂದೆ ನೋಡೋಣ.

ಮೆಗಾ ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ; ನಾಯಕ, ಕೋಚ್, ಪರ್ಸ್ ಮೊತ್ತ ಹೀಗಿದೆ
ಮೆಗಾ ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ; ನಾಯಕ, ಕೋಚ್, ಪರ್ಸ್ ಮೊತ್ತ ಹೀಗಿದೆ

ಐಪಿಎಲ್ 2025 ಮೆಗಾ ಹರಾಜು ಪಂಜಾಬ್​ ಕಿಂಗ್ಸ್ (Punjab Kings Full Squad:)​ ಬಲಿಷ್ಠ ತಂಡ ಕಟ್ಟಿದೆ. ಹಿಂದೆಂದಿಗಿಂತಲೂ ಈ ಬಾರಿ ವಿಭಿನ್ನವಾಗಿ, ವಿನೂತನವಾಗಿ ತಂಡ ಸಂಯೋಜಿಸಿದೆ. ಮೆಗಾ ಹರಾಜಿಗೂ ಮುನ್ನ ಇಬ್ಬರನ್ನು ಉಳಿಸಿಕೊಂಡಿದ್ದ ಪಿಬಿಕೆಎಸ್​​ ಅನುಭವಿ ಆಟಗಾರರನ್ನೇ ತಮ್ಮ ಬುಟ್ಟಿಗೆ ಹಾಕಿಕೊಂಡಿದೆ. ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರದ ಪ್ರೀತಿ ಝಿಂಟಾ ಒಡೆತನದ ಫ್ರಾಂಚೈಸಿ ನೂತನ ನಾಯಕನೊಂದಿಗೆ ಚೊಚ್ಚಲ ಟ್ರೋಫಿಯ ಕನಸಿನಲ್ಲಿದೆ.

ಐಪಿಎಲ್ ಪ್ರಶಸ್ತಿ ವಿಜೇತ ಶ್ರೇಯಸ್ ಅಯ್ಯರ್ ಅವರಿಗೆ 26.5 ಕೋಟಿ ನೀಡಿ ಖರೀದಿಸಿರುವ ಪಂಜಾನ್, ಅವರನ್ನೇ ತಮ್ಮ ತಂಡದ ಮುಂದಿನ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ. ಅವರು ಕಳೆದ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅಯ್ಯರ್ ಜೊತೆಗೆ ಕೋಚ್ ರಿಕಿ ಪಾಂಟಿಂಗ್ ಈ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಯ್ಯರ್​ ಟಾರ್ಗೆಟ್ ಮಾಡಿಯೇ ಪಾಂಟಿಂಗ್​ ಖರೀದಿಸಿದ್ದಾರೆ. ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಲೆಗ್​ ಸ್ಪಿನ್ನರ್​ ಯುಜ್ವೇಂದ್ರ ಚಹಲ್​ಗೂ ಮಣೆ ಹಾಕಿದೆ.

ಪಿಬಿಕೆಎಸ್ ಐಪಿಎಲ್ ತಂಡ

ಹರಾಜಿನಲ್ಲಿ ಖರೀದಿಸಿದ ಆಟಗಾರರು: ಅರ್ಷದೀಪ್ ಸಿಂಗ್ (18 ಕೋಟಿ ರೂ.), ಶ್ರೇಯಸ್ ಅಯ್ಯರ್ (26.75 ಕೋಟಿ ರೂ.), ಯುಜ್ವೇಂದ್ರ ಚಹಲ್ (18 ಕೋಟಿ ರೂ.), ಮಾರ್ಕಸ್ ಸ್ಟೋಯ್ನಿಸ್ (11 ಕೋಟಿ ರೂ.), ಗ್ಲೆನ್ ಮ್ಯಾಕ್ಸ್‌ವೆಲ್ 4.20 ಕೋಟಿ ರೂ), ನೆಹಾಲ್ ವಧೇರಾ (4.20 ಕೋಟಿ ರೂ.), ಹರ್‌ಪ್ರೀತ್ ಬ್ರಾರ್ (1.50 ಕೋಟಿ ರೂ), ವಿಷ್ಣು ವಿನೋದ್ (95 ಲಕ್ಷ ರೂ.), ವಿಜಯ್‌ಕುಮಾರ್ ವೈಶಾಕ್ (1.80 ಕೋಟಿ ರೂ.), ಯಶ್ ಠಾಕೂರ್ (1.60 ಕೋಟಿ ರೂ.), ಮಾರ್ಕೊ ಜಾನ್ಸೆನ್ (7 ಕೋಟಿ ರೂ.), ಜೋಶ್ ಇಂಗ್ಲಿಸ್ (2.60 ಕೋಟಿ ರೂ.), ಲಾಕಿ ಫರ್ಗುಸನ್ (2 ಕೋಟಿ ರೂ.), ಅಜ್ಮತುಲ್ಲಾ ಒಮರ್ಜಾಯ್ (2.40 ಕೋಟಿ ರೂ.), ಹರ್ನೂರ್ ಪನ್ನು (30 ಲಕ್ಷ ರೂ.), ಕುಲ್ದೀಪ್ ಸೇನ್ (80 ಲಕ್ಷ ರೂ.), ಪ್ರಿಯಾಂಶ್ ಆರ್ಯ (3.80 ಕೋಟಿ ರೂ.), ಆರೋನ್ ಹಾರ್ಡಿ (1.25 ಕೋಟಿ ರೂ.), ಮುಶೀರ್ ಖಾನ್ (30 ಲಕ್ಷ ರೂ.), ಸೂರ್ಯಾಂಶ್ ಶೆಡ್ಜ್ (30 ಲಕ್ಷ ರೂ.), ಕ್ಸೇವಿಯರ್ ಬಾರ್ಟ್ಲೆಟ್ (80 ಲಕ್ಷ ರೂ.), ಪೈಲಾ ಅವಿನಾಶ್ (30 ಲಕ್ಷ ರೂ.).

ರಿಟೇನ್ ಮಾಡಿಕೊಂಡಿದ್ದ ಆಟಗಾರರು: ಶಶಾಂಕ್ ಸಿಂಗ್ (5.5 ಕೋಟಿ), ಪ್ರಭಾಸಿಮ್ರಾನ್ ಸಿಂಗ್ (4 ಕೋಟಿ)

ಪಿಬಿಕೆಎಸ್ ಮುಖ್ಯ ಕೋಚ್ ಯಾರು?

ಪಂಜಾಬ್ ಕಿಂಗ್ಸ್ (PKBS) ಮುಖ್ಯ ಕೋಚ್ ರಿಕಿ ಪಾಂಟಿಂಗ್. ಇದೇ ವರ್ಷ ಸೆಪ್ಟೆಂಬರ್​​​​ನಲ್ಲಿ ಈ ಸ್ಥಾನಕ್ಕೆ ನೇಮಕಗೊಂಡರು. ತಂಡವನ್ನು ಯಶಸ್ಸಿನತ್ತ ಮುನ್ನಡೆಸುವ ಗುರಿಯೊಂದಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪಾಂಟಿಂಗ್ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ತರಬೇತುದಾರರಾಗಿದ್ದರು.

Whats_app_banner