ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದ ಆಟಗಾರರು ಯಾರ್ಯಾರು; ಹೀಗಿದೆ ಸಂಪೂರ್ಣ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದ ಆಟಗಾರರು ಯಾರ್ಯಾರು; ಹೀಗಿದೆ ಸಂಪೂರ್ಣ ತಂಡ

ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದ ಆಟಗಾರರು ಯಾರ್ಯಾರು; ಹೀಗಿದೆ ಸಂಪೂರ್ಣ ತಂಡ

Rajasthan Royals: ಜೋಫ್ರಾ ಆರ್ಚರ್, ವನಿಂದು ಹಸರಂಗ, ನಿತೀಶ್ ರಾಣಾ ಸೇರಿದಂತೆ ಪ್ರಬಲ ಆಟಗಾರರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿದೆ. ಐಪಿಎಲ್‌ 2025 ಮೆಗಾ ಹರಾಜಿನ ನಂತರ ಆರ್‌ಆರ್‌ ತಂಡ ಹೇಗಿದೆ. ತಂಡ ಉಳಿಸಿಕೊಂಡ ಹಾಗೂ ಆಕ್ಷನ್‌ನಲ್ಲಿ ಖರೀದಿ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ.

ಐಪಿಎಲ್ ಹರಾಜಿನ ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ತಂಡ ಹೀಗಿದೆ
ಐಪಿಎಲ್ ಹರಾಜಿನ ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ತಂಡ ಹೀಗಿದೆ

ಐಪಿಎಲ್‌ 2025ರ ಮೆಗಾ ಹರಾಜು ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದೆ. ಇದರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪ್ರಬಲ ಆಟಗಾರರನ್ನು ಖರೀದಿ ಮಾಡಿದೆ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಬರೋಬ್ಬರಿ 12.5 ಕೋಟಿ ರೂ. ಗಿಟ್ಟಿಸಿಕೊಂಡಿದ್ದಾರೆ. 2 ಕೋಟಿ ಮೂಲ ಬೆಲೆ ಇದ್ದ ಆಟಗಾರನಿಗೆ ದುಬಾರಿ ಬೆಲೆ ತೆತ್ತು ತಂಡ ಖರೀದಿ ಮಾಡಿದೆ. ಆರ್ಚರ್ ಹೊರತುಪಡಿಸಿ, ಶ್ರೀಲಂಕಾದ ಬೌಲಿಂಗ್‌ ಜೋಡಿ ವನಿಂದು ಹಸರಂಗ ಮತ್ತು ಮಹೀಶ್ ತೀಕ್ಷಾಣಾ ಅವರನ್ನು ಕ್ರಮವಾಗಿ 5.25 ಮತ್ತು 4.40 ಕೋಟಿ ರೂ.ಗೆ ಬಳಗ ಸೇರಿಸಿಕೊಂಡಿದೆ. ಇದೇ ವೇಳೆ ಎಂಐ ತಂಡದ ಮಾಜಿ ಆಟಗಾರ ಆಕಾಶ್ ಮಧ್ವಾಲ್ ಅವರನ್ನು 1.20 ಕೋಟಿ ಮತ್ತು ಕಾರ್ತಿಕೇಯ ಸಿಂಗ್ ಅವರನ್ನು 30 ಲಕ್ಷ ರೂ.ಗೆ ಖರೀದಿಸಲಾಗಿದೆ.

ಎರಡನೇ ದಿನದ ಹರಾಜಿನಲ್ಲಿ ತಂಡವು ಕೆಕೆಆರ್‌ ಮಾಜಿ ನಾಯಕ ನಿತೀಶ್ ರಾಣಾ ಅವರಿಗಾಗಿ 4.20 ಕೋಟಿ ಖರ್ಚು ಮಾಡಿತು. ಸಿಎಸ್‌ಕೆ ಮಾಜಿ ವೇಗಿ ತುಷಾರ್ ದೇಶಪಾಂಡೆ ಅವರನ್ನು 6.50 ಕೋಟಿ ರೂ. ತೆತ್ತು ಬಳಗ ಸೇರಿಸಿಕೊಂಡಿತು. ಅತ್ತ ಶುಭ್ಮನ್ ದುಬೆ ಅವರನ್ನು 80 ಲಕ್ಷ ರೂ.ಗೆ ತಂಡಕ್ಕೆ ಸೆಳೆಯಿತು.

ರಾಜಸ್ಥಾನ ತಂಡದ ಪ್ರಮುಖ ಖರೀದಿ ಆರ್ಚರ್. 2023ರಲ್ಲಿ ಮುಂಬೈ ಇಂಡಿಯನ್ಸ್ ಪರ ಕೊನೆಯ ಬಾರಿ ಅವರು ಆಡಿದ್ದರು. 35 ಐಪಿಎಲ್ ಪಂದ್ಯಗಳಲ್ಲಿ ಆಡಿ 46 ವಿಕೆಟ್ ಕಬಳಿಸಿದ್ದಾರೆ. ವಿಶ್ವದ ಅತ್ಯುತ್ತಮ ಟಿ20 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ವನಿಂದು ಹಸರಂಗ, ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು. ಐಪಿಎಲ್ ವೃತ್ತಿಜೀವನದಲ್ಲಿ 26 ಪಂದ್ಯಗಳಲ್ಲಿ 35 ವಿಕೆಟ್ ಪಡೆದಿದ್ದಾರೆ.

ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದ ಆಟಗಾರರು

  • ಜೋಫ್ರಾ ಆರ್ಚರ್ (12.50 ಕೋಟಿ ರೂ.)
  • ವನಿಂದು ಹಸರಂಗ (5.25 ಕೋಟಿ)
  • ಮಹೇಶ್ ತೀಕ್ಷಾಣಾ (4.40 ಕೋಟಿ)
  • ಆಕಾಶ್ ಮಧ್ವಾಲ್ (1.20 ಕೋಟಿ)
  • ಕುಮಾರ್‌ ಕಾರ್ತಿಕೇಯ (30 ಲಕ್ಷ)
  • ನಿತೀಶ್ ರಾಣಾ (4.20 ಕೋಟಿ)
  • ತುಷಾರ್ ದೇಶಪಾಂಡೆ (6.50 ಕೋಟಿ)
  • ಫಜಲ್ಹಾಕ್ ಫಾರೂಕಿ (6.50 ಕೋಟಿ)
  • ವೈಭವ್ ಸೂರ್ಯವಂಶಿ (1.10 ಕೋಟಿ ರೂ.)
  • ಕ್ವೇನಾ ಮಫಕಾ (1.50 ಕೋಟಿ ರೂ.)
  • ಕುನಾಲ್ ರಾಥೋಡ್ (30 ಲಕ್ಷ ರೂ.)
  • ಅಶೋಕ್ ಶರ್ಮಾ (30 ಲಕ್ಷ ರೂ.)

ಇದನ್ನೂ ಓದಿ | ಐಪಿಎಲ್ 2025 ಹರಾಜು; ಎಲ್ಲಾ 10 ತಂಡಗಳ ಸಂಪೂರ್ಣ ತಂಡ, ರಿಟೈನ್ ಆದವರು, ಯಾರಿಗೆ ಎಷ್ಟು ಮೊತ್ತ? ಇಲ್ಲಿದೆ ವಿವರ

ರಿಟೈನ್‌ ಮಾಡಿಕೊಂಡ ಆಟಗಾರರು

  • ಯಶಸ್ವಿ ಜೈಸ್ವಾಲ್ (18 ಕೋಟಿ)
  • ಸಂಜು ಸ್ಯಾಮ್ಸನ್ (18 ಕೋಟಿ)
  • ಧ್ರುವ್ ಜುರೆಲ್ (14 ಕೋಟಿ)
  • ರಿಯಾನ್ ಪರಾಗ್ (14 ಕೋಟಿ)
  • ಶಿಮ್ರಾನ್ ಹೆಟ್ಮೆಯರ್ (11 ಕೋಟಿ)
  • ಸಂದೀಪ್ ಶರ್ಮಾ (4 ಕೋಟಿ)

ಇದನ್ನೂ ಓದಿ | ಐಪಿಎಲ್ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಗಿದೆ; ಡಿಸಿ ಉಳಿಸಿಕೊಂಡ-ಖರೀದಿಸಿದ ಆಟಗಾರರ ಪಟ್ಟಿ ಹೀಗಿದೆ

Whats_app_banner