ಕನ್ನಡ ಸುದ್ದಿ  /  ಕ್ರಿಕೆಟ್  /  ತಾಯ್ನಾಡಿಗೆ ಬಂದಿಳಿದ ಖುಷಿಯಲ್ಲಿ ರೋಹಿತ್​ ಶರ್ಮಾ ಭರ್ಜರಿ ಸ್ಟೆಪ್ಸ್; ತಮಟೆ ಸದ್ದಿಗೆ ಪಂತ್, ಹಾರ್ದಿಕ್, ಸೂರ್ಯ ಹೆಜ್ಜೆ

ತಾಯ್ನಾಡಿಗೆ ಬಂದಿಳಿದ ಖುಷಿಯಲ್ಲಿ ರೋಹಿತ್​ ಶರ್ಮಾ ಭರ್ಜರಿ ಸ್ಟೆಪ್ಸ್; ತಮಟೆ ಸದ್ದಿಗೆ ಪಂತ್, ಹಾರ್ದಿಕ್, ಸೂರ್ಯ ಹೆಜ್ಜೆ

Rohit Sharma: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ಮುಂಭಾಗ ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ತಾಯ್ನಾಡಿಗೆ ಬಂದಿಳಿದ ಖುಷಿಯಲ್ಲಿ ರೋಹಿತ್​ ಶರ್ಮಾ ಭರ್ಜರಿ ಸ್ಟೆಪ್ಸ್; ತಮಟೆ ಸದ್ದಿಗೆ ಪಂತ್, ಹಾರ್ದಿಕ್, ಸೂರ್ಯ ಹೆಜ್ಜೆ
ತಾಯ್ನಾಡಿಗೆ ಬಂದಿಳಿದ ಖುಷಿಯಲ್ಲಿ ರೋಹಿತ್​ ಶರ್ಮಾ ಭರ್ಜರಿ ಸ್ಟೆಪ್ಸ್; ತಮಟೆ ಸದ್ದಿಗೆ ಪಂತ್, ಹಾರ್ದಿಕ್, ಸೂರ್ಯ ಹೆಜ್ಜೆ

ವೆಸ್ಟ್ ಇಂಡೀಸ್ ಮತ್ತು ಯುಎಸ್​​ಎ ಜಂಟಿ ಆತಿಥ್ಯದಲ್ಲಿ ಒಂದು ತಿಂಗಳ ಕಾಲ ಜರುಗಿದ 2024 ಟಿ20 ವಿಶ್ವಕಪ್​ ಟೂರ್ನಿಯಲ್ಲಿ (T20 World Cup 2024) ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡ (Indian Cricket Team), ಇಂದು (ಜುಲೈ 4) ಮುಂಜಾನೆ ತಾಯ್ನಾಡಿಗೆ ಬಂದಿಳಿದಿದೆ. ವಿಶೇಷ ವಿಮಾನದ ಮೂಲಕ ಬಾರ್ಬಡೋಸ್​ನಿಂದ ದೆಹಲಿ ಏರ್​​​ಪೋರ್ಟ್​ಗೆ ಭಾರತ ತಂಡದ ಆಟಗಾರರು ಆಗಮಿಸಿದ್ದು, ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದಿದ್ದಾರೆ.

ಫೈನಲ್‌ನಲ್ಲಿ ಸೌತ್ ಆಫ್ರಿಕಾ ವಿರುದ್ಧ (India vs South Africa) 7 ರನ್​ಗಳಿಂದ ರೋಚಕ ಗೆಲುವು ದಾಖಲಿಸಿ 17 ವರ್ಷಗಳ ನಂತರ ಭಾರತ ಟಿ20 ವಿಶ್ವಕಪ್​ ಗೆದ್ದುಕೊಂಡಿತು. ಚುಟುಕು ವಿಶ್ವಕಪ್​ನಲ್ಲಿ ದಾಖಲೆಯ 2ನೇ ಟ್ರೋಫಿ ಜಯಿಸಿರುವ ಟೀಮ್ ಇಂಡಿಯಾ (Team India), ದೆಹಲಿ ವಿಮಾನ ನಿಲ್ದಾಣದಿಂದ ಬಸ್ ಮೂಲಕ ಐಟಿಸಿ ಮೌರ್ಯ ಹೋಟೆಲ್​ಗೆ ತೆರಳಿದೆ. ಹೋಟೆಲ್ ಮುಂಭಾಗವೂ ಭರ್ಜರಿ ಸ್ವಾಗತ ಸಿಕ್ಕಿತು.

ಸುಮಾರು 16 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ತವರಿನ ನೆಲವನ್ನು ಸ್ಪರ್ಶಿಸಿದ ಭಾರತ ತಂಡಕ್ಕೆ ಫ್ಯಾನ್ಸ್​ ಘೋಷಣೆ, ಜೈಕಾರಗಳ ಮೂಲಕ ಅದ್ಧೂರಿ ಸ್ವಾಗತ ಸಿಕ್ಕಿತು. ತವರಿನಲ್ಲಿ ಕಾಲಿಡುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್ ಟ್ರೋಫಿಯನ್ನು ಮೇಲೆತ್ತಿ ಅಭಿಮಾನಿಗಳಿಗೆ ಪ್ರದರ್ಶಿಸಿದರು. ಹೋಟೆಲ್ ಮುಂಭಾಗ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಟ್ರೆಂಡಿಂಗ್​ ಸುದ್ದಿ

ಆಟಗಾರರು ಭರ್ಜರಿ ಡ್ಯಾನ್ಸ್

ತಮಟೆ ಬಾರಿಸುತ್ತಾ ಹಾಗೂ ಬಾಂಗ್ರಾ ನೃತ್ಯ ಪ್ರದರ್ಶಿಸಿ ಸ್ವಾಗತ ಕೋರುತ್ತಿದ್ದವರೊಂದಿಗೆ ನಾಯಕ ರೋಹಿತ್​ ಶರ್ಮಾ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಸ್ಟೆಪ್ಸ್ ಹಾಕಿದ್ದಾರೆ. ಮೈದಾನದಲ್ಲಿ ಭರ್ಜರಿ ಸಿಕ್ಸರ್​ಗಳಿಂದಲೇ ಗಮನ ಸೆಳೆಯುವ ರೋಹಿತ್​, ಸ್ಮೂತ್ ಡ್ಯಾನ್ಸ್​ ಮೂಲಕ ಸಂಭ್ರಮಿಸಿದ್ದಾರೆ. ರಿಷಭ್ ಪಂತ್ ಟ್ರೋಫಿ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.

ತಮಟೆ ಸದ್ದಿಗೆ ಭಾರತೀಯ ಕ್ರಿಕೆಟಿಗರು ಸಖತ್ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೆಲ್ಲದ್ದಕ್ಕೂ ಮುನ್ನ ವಿಮಾನದಲ್ಲೇ ಭಾರತ ಆಟಗಾರರು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಟ್ರೋಫಿ ಹಿಡಿದು ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಕಪ್ ಹಿಡಿದು ಭಾವುಕರಾಗಿದ್ದಾರೆ. ಪಂತ್ ಕುಣಿದಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ವಿಶೇಷ ವಿಮಾನದ ಮೂಲಕ ಭಾರತಕ್ಕೆ ಆಗಮನ

ಕೋಚ್​ಗಳು, ಆಟಗಾರರು, ಮತ್ತವರ ಕುಟುಂಬ ಸದಸ್ಯರು ಹಾಗೂ ಬಿಸಿಸಿಐ ಅಧಿಕಾರಿಗಳು, ಪತ್ರಕರ್ತರು ಈ ವಿಶೇಷ ಚಾರ್ಟರ್ ಫ್ಲೈಟ್ ಮೂಲಕ ಭಾರತಕ್ಕೆ ಬಂದಿಳಿದಿದ್ದಾರೆ. ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್‌ ಕಪ್‌ (Air India Champions 24 World Cup) ಎಂಬ ಹೆಸರಿನ ವಿಮಾನ ಇಂದು ಬೆಳಿಗ್ಗೆ 6:20ರ ಸುಮಾರಿಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಜೂನ್ 29ರಂದು ಶನಿವಾರ ಫೈನಲ್ ನಡೆದ ನಂತರ ಭಾನುವಾರ ಭಾರತ ತಂಡವು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ದ್ವೀಪರಾಷ್ಟ್ರಕ್ಕೆ ಬೆರಿಲ್ ಚಂಡಮಾರುತ ಅಪ್ಪಳಿಸಿದ ಕಾರಣ 3 ದಿನಗಳ ಕಾಲ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಬಿಸಿಸಿಐ ವಿಶೇಷ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿ, ಆಟಗಾರರನ್ನು ತವರಿಗೆ ಕರೆ ತಂದಿದೆ.

ಹೋಟೆಲ್ ಮುಂಭಾಗ ಸ್ವಾಗತ ಮಾಡಿಕೊಂಡಿದ್ದಲ್ಲದೆ, ಕೇಕ್ ಕೂಡ ಕತ್ತರಿಸಲಾಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವ ಭಾರತ ಆಟಗಾರರು ಸಂಜೆ 5 ಗಂಟೆಗೆ ಮುಂಬೈನಲ್ಲಿ ತೆರೆದ ಬಸ್​ನಲ್ಲಿ ರೋಡ್ ಶೋ ನಡೆಸಲಿದ್ದಾರೆ.