ಶ್ರೀಲಂಕಾ ವಿರುದ್ಧದ ಮೊದಲ ಏಕದಿನಕ್ಕೆ ಭಾರತ ಸಂಭಾವ್ಯ XI; ಕೊಹ್ಲಿ-ರೋಹಿತ್ ಸೇರಿ ಹಲವರು 9 ತಿಂಗಳ ನಂತರ ಕಣಕ್ಕೆ-rohit sharma virat kohli return 2 debutants in team indias likely xi for 1st odi vs sri lanka in colombo prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ವಿರುದ್ಧದ ಮೊದಲ ಏಕದಿನಕ್ಕೆ ಭಾರತ ಸಂಭಾವ್ಯ Xi; ಕೊಹ್ಲಿ-ರೋಹಿತ್ ಸೇರಿ ಹಲವರು 9 ತಿಂಗಳ ನಂತರ ಕಣಕ್ಕೆ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನಕ್ಕೆ ಭಾರತ ಸಂಭಾವ್ಯ XI; ಕೊಹ್ಲಿ-ರೋಹಿತ್ ಸೇರಿ ಹಲವರು 9 ತಿಂಗಳ ನಂತರ ಕಣಕ್ಕೆ

India Likely XI : ಟಿ20ಐ ಸರಣಿ ಮುಗಿಸಿರುವ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಹಾಗಾಗಿ ಮೊದಲ ಏಕದಿನ ಪಂದ್ಯಕ್ಕೆ ಯಾರಿಗೆಲ್ಲಾ ಅವಕಾಶ ಸಿಗಬಹುದು ಎಂಬುದರ ವಿವರ ಇಲ್ಲಿದೆ.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನಕ್ಕೆ ಭಾರತ ಸಂಭಾವ್ಯ XI; ಕೊಹ್ಲಿ-ರೋಹಿತ್ ಸೇರಿ ಹಲವರು 9 ತಿಂಗಳ ನಂತರ ಕಣಕ್ಕೆ
ಶ್ರೀಲಂಕಾ ವಿರುದ್ಧದ ಮೊದಲ ಏಕದಿನಕ್ಕೆ ಭಾರತ ಸಂಭಾವ್ಯ XI; ಕೊಹ್ಲಿ-ರೋಹಿತ್ ಸೇರಿ ಹಲವರು 9 ತಿಂಗಳ ನಂತರ ಕಣಕ್ಕೆ

ಶ್ರೀಲಂಕಾ ವಿರುದ್ಧದ 3 ಟಿ20ಐ ಪಂದ್ಯಗಳ ಸರಣಿ ವೈಟ್ ವಾಶ್ ಮಾಡಿಕೊಂಡಿರುವ ಟೀಮ್ ಇಂಡಿಯಾ, ಇದೀಗ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದೆ. ನಾಯಕ ರೋಹಿತ್​ ಶರ್ಮಾ ಮತ್ತು ನೂತನ ಕೋಚ್ ಗೌತಮ್ ಗಂಭೀರ್ ಜೋಡಿಗೆ ಇದು ಮೊದಲ ಸರಣಿಯಾಗಿದ್ದು, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ಪ್ರಾರಂಭಿಸಲಿದೆ. ಚುಟುಕು ಸರಣಿ ಪೂರ್ಣಗೊಂಡ 3 ದಿನಗಳ ಬಳಿಕ ಒಡಿಐ ಸಿರೀಸ್ ಶುರುವಾಗಲಿದೆ. ಕೊಲಂಬೊದ ಪ್ರೇಮದಾಸ ಕ್ರಿಕೆಟ್​ ಮೈದಾನ 3 ಪಂದ್ಯಗಳಿಗೆ ವೇದಿಕೆ ಒದಗಿಸಲಿದೆ.

2024ರ ಕ್ಯಾಲೆಂಡರ್​ ವರ್ಷದಲ್ಲಿ 7 ತಿಂಗಳು ಪೂರ್ಣಗೊಂಡಿದ್ದು, 8ನೇ ತಿಂಗಳಿಗೆ ಕಾಲಿಟ್ಟಿದ್ದೇವೆ. ಆದರೆ ಭಾರತ ಕ್ರಿಕೆಟ್ ತಂಡ ಒಂದೇ ಒಂದು ಏಕದಿನ ಪಂದ್ಯವನ್ನೂ ಆಡಿಲ್ಲ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದ್ದೇ ಕೊನೆಯದ್ದು. ಅಚ್ಚರಿ ಅಂದರೆ ಕಳೆದ ವರ್ಷ ನವೆಂಬರ್ 19ರಂದು ನಡೆದ ವಿಶ್ವಕಪ್​ ಫೈನಲ್ ನಂತರ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ ಸೇರಿ ಹಲವು ಸ್ಟಾರ್​ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿರುವುದು ಇದೇ ಮೊದಲು.

ಆದರೆ, ಲಂಕಾ ಸರಣಿಗೆ ಅನುಭವಿಗಳ ಜೊತೆಗೆ ಹೊಸಬರಿಗೂ ಅವಕಾಶ ಸಿಕ್ಕಿದ್ದು, ಯಾರೆಲ್ಲಾ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಯಾರಿಗೆ ಅವಕಾಶ ಸಿಗಬಹುದು? ಇಲ್ಲಿದೆ ಸಂಭಾವ್ಯ ತಂಡ.

ಯಾರಿಗೆಲ್ಲಾ ಸಿಗಬಹುದು ಪ್ಲೇಯಿಂಗ್​ 11ನಲ್ಲಿ ಅವಕಾಶ

ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮತ್ತೆ ಇನ್ನಿಂಗ್ಸ್​​ ಆರಂಭಿಸಲು ಸಜ್ಜಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಹಾರ್ದಿಕ್ ಪಾಂಡ್ಯ ಅವಕಾಶ ಪಡೆಯದ ಹಿನ್ನೆಲೆ ಸ್ಥಾನ ಯಾರು ತುಂಬುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಈ ಸ್ಥಾನಕ್ಕೆ ಬ್ಯಾಟಿಂಗ್ ಮಾತ್ರವಲ್ಲ, 6ನೇ ಬೌಲಿಂಗ್​ ಆಯ್ಕೆಯೂ ಆಗಿರಬೇಕಾದ ಕಾರಣ ಶಿವಂ ದುಬೆಗೆ ಅವಕಾಶ ನೀಡುವ ಸಾಧ್ಯತೆ ಇದೆ.

​ಈ ಸ್ಥಾನಕ್ಕೆ ರಿಷಭ್ ಪಂತ್​​ಗೂ ಅವಕಾಶ ನೀಡಬಹುದು. ಆದರೆ ಇಲ್ಲಿ 6ನೇ ಬೌಲಿಂಗ್​ ಆಯ್ಕೆಯ ಪ್ರಶ್ನೆ ಉದ್ಭವಿಸಿದ ಕಾರಣ ಆಲ್​ರೌಂಡರ್​​ಗೆ ಮಣೆ ಹಾಕುವ ನಿರೀಕ್ಷೆ ಇದೆ. ರಿಯಾನ್ ಪರಾಗ್​ ಕೂಡ ಈ ಸ್ಥಾನಕ್ಕೆ ಪ್ರಬಲ ಪೈಪೋಟಿಯಾಗಿದ್ದರೂ ಈ ಸ್ಥಾನಕ್ಕೆ ಪರಾಗ್​ ಬ್ಯಾಟಿಂಗ್ ಶೈಲಿ ಸರಿ ಹೊಂದದ ಕಾರಣ ಬೆಂಚ್ ಕಾಯಬೇಕಾಗುತ್ತದೆ.

ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ 7ನೇ ಸ್ಥಾನ ಪಡೆಯಲಿದ್ದಾರೆ. ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಮತ್ತು ಮೊಹಮ್ಮದ್ ಶಮಿ ಅವರ ಅಲಭ್ಯತೆಯಲ್ಲಿ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್​ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಕುಲದೀಪ್ ಯಾದವ್ ತಂಡದ ಮೊದಲ ಆಯ್ಕೆಯ ಮಣಿಕಟ್ಟಿನ ಸ್ಪಿನ್ನರ್ ಸ್ಥಾನಮಾನ ಗ್ಯಾರಂಟಿ. ಇನ್ನೊಂದು ಸ್ಥಾನದ ಆಯ್ಕೆ ತುಂಬಾ ಕಠಿಣವಾಗಿದೆ.

ಪಿಚ್ ಪರಿಸ್ಥಿತಿಗಳಿಗೆ ತಕ್ಕಂತೆ ಆಯ್ಕೆ ಮಾಡಲು ಟೀಮ್ ಮ್ಯಾನೇಜ್​ಮೆಂಟ್ ನಿರ್ಧರಿಸುವ ನಿರೀಕ್ಷೆ ಇದೆ. ಭಾರತ ಮೂರನೇ ಸ್ಪಿನ್ನರ್ ಬಯಸಿದರೆ, ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಗಬಹುದು ಅಥವಾ ಮೂರನೇ ವೇಗಿಯ ಆಯ್ಕೆಯ ಬಯಸಿದರೆ, ಖಲೀಲ್ ಅಹ್ಮದ್​ಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಶಿವಂ ದುಬೆ ವೇಗದ ಬೌಲಿಂಗ್ ಬೌಲಿಂಗ್ ಆಲ್​ರೌಂಡರ್​ ಆಗಿರುವ ಕಾರಣ ಮೂರನೇ ವೇಗಿಯಾಗಿಯೂ ಕಣಕ್ಕಿಳಿಯಲಿದ್ದಾರೆ. ಹಾಗಾಗಿ ಅಕ್ಷರ್​, ಕುಲ್ದೀಪ್ ಜೊತೆಗೆ ಮೂರನೇ ಸ್ಫಿನ್ನರ್​ ಆಗಿ ಸುಂದರ್​ ಅವಕಾಶ ಪಡೆದರೂ ಅಚ್ಚರಿ ಇಲ್ಲ.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ XI

ಶುಭ್ಮನ್​ ಗಿಲ್ (ಉಪನಾಯಕ), ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್/ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.