ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ ಜೊತೆ ಈ ಆಟಗಾರ ಓಪನರ್; ವಿಕೆಟ್ ಕೀಪರ್ ಯಾರು? ಟಿ20 ವಿಶ್ವಕಪ್‌ಗೆ ಭಾರತ ತಂಡ ರಚಿಸಿದ ಯುವರಾಜ್ ಸಿಂಗ್

ರೋಹಿತ್ ಶರ್ಮಾ ಜೊತೆ ಈ ಆಟಗಾರ ಓಪನರ್; ವಿಕೆಟ್ ಕೀಪರ್ ಯಾರು? ಟಿ20 ವಿಶ್ವಕಪ್‌ಗೆ ಭಾರತ ತಂಡ ರಚಿಸಿದ ಯುವರಾಜ್ ಸಿಂಗ್

ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಯಾದರೂ, ಆಡುವ ಬಳಗ ಹೇಗಿರಲಿದೆ ಎಂಬ ಗೊಂದಲ ಇನ್ನೂ ಇದೆ. ವಿಕೆಟ್‌ ಕೀಪರ್ ಆಗಿ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಇದೆ. ಈ ಗೊಂದಲಕ್ಕೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತೆರೆ ಎಳೆದಿದ್ದಾರೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ ರಚಿಸಿದ ಯುವರಾಜ್ ಸಿಂಗ್
ಟಿ20 ವಿಶ್ವಕಪ್‌ಗೆ ಭಾರತ ತಂಡ ರಚಿಸಿದ ಯುವರಾಜ್ ಸಿಂಗ್ (PTI)

ಐಪಿಎಲ್‌ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಟೂರ್ನಿಗೆ ಈಗಾಗಲೇ 15 ಸದಸ್ಯರ ಭಾರತ ತಂಡ ಅಂತಿಮವಾಗಿದೆ. ಹೀಗಾಗಿ ತಂಡದ ಆಡುವ ಬಳಗದ ಸಂಯೋಜನೆ ಹೇಗಿರಲಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ತಂಡ ಅಂತಿಮವಾದರೂ, ಆಟಗಾರರ ನಡುವೆ ಒಂದೊಂದು ಸ್ಥಾನಕ್ಕೂ ಭಾರಿ ಪೈಪೋಟಿ ಇದೆ. ಇದೀಗ ಮಾಜಿ ವಿಶ್ವಕಪ್‌ ಹೀರೋ ಯುವರಾಜ್‌ ಸಿಂಗ್‌, ಭಾರತದ ಆಡುವ ಬಳಗ ಹೇಗಿರಲಿದೆ ಎಂಬ ಸುಳಿವು ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟೀಮ್‌ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಹಲವರ ನಡುವೆ ಪೈಪೋಟಿ ಇದೆ. ಇದರಲ್ಲಿ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ನಡುವೆ ದೀರ್ಘಕಾಲದಿಂದ ತೀವ್ರ ಸ್ಪರ್ಧೆ ಇದೆ. ಅಪಘಾತದಿಂದಾಗಿ ವರ್ಷಕ್ಕೂ ಹೆಚ್ಚು ಕಾಲ ಭಾರತ ತಂಡದಿಂದ ಹೊರಗುಳಿಯುವ ಮೊದಲು, ತಮ್ಮ ಅದ್ಭುತ ಇನ್ನಿಂಗ್ಸ್‌ಗಳಿಂದಾಗಿ ಪಂತ್ ತಂಡದ ಪ್ರಮುಖ ಆಟಗಾರನಾಗಿದ್ದರು. ಎಂಎಸ್ ಧೋನಿ ಉತ್ತರಾಧಿಕಾರಿಯಾಗಿ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಕಾಣಿಸಿಕೊಂಡಿದ್ದರು. ಅತ್ತ ಸ್ಯಾಮ್ಸನ್ ತಂಡದಿಂದ ಹೊರಬಿದ್ದರು. ಕಳೆದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಪರ ಅಮೂಲ್ಯ ಶತಕ ಸಿಡಿಸಿದ ಸಂಜು, ತಮ್ಮ ಸ್ಥಾನವನ್ನು ಸಾಬೀತುಪಡಿಸಿದರು. ಆ ಬಳಿಕ ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಈವರೆಗೆ 504 ರನ್ ಗಳಿಸಿರುವ ಸ್ಯಾಮ್ಸನ್‌, ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ‌. ಇದೀಗ ಈ ಇಬ್ಬರೂ ಭಾರತದ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್‌ ಹಿಂದಿಕ್ಕಿ ರಿಷಬ್‌ ಪಂತ್ ಭಾರತದ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಇದರ ಟೀಮ್‌ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅಭಿಪ್ರಾಯ ಕೂಡಾ ಹೌದು. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್‌ ತಂಡದಲ್ಲಿ ಪ್ರಭಾವ ಬೀರಬಹುದು ಎಂದು ಭಾರತದ ಮಾಜಿ ಆಲ್‌ರೌಂಡರ್ ಲೆಕ್ಕಹಾಕಿದ್ದಾರೆ.

ರಿಷಭ್ ಪಂತ್‌ಗೆ ಮಣೆ

“ನಾನು ಬಹುಶಃ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುತ್ತೇನೆ. ನಿಸ್ಸಂಶಯವಾಗಿ, ಸಂಜು ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಎಡಗೈ ಬ್ಯಾಟರ್‌ ರಿಷಭ್ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ. ಅವರು ಈ ಹಿಂದೆಯೂ ಅದನ್ನು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಿದ್ದಾರೆ,” ಎಂದು ಯುವರಾಜ್ ಸಿಂಗ್‌ ಐಸಿಸಿಯೊಂದಿಗೆ ಮಾತನಾಡುತ್ತಾ ಹೇಳಿದರು.

ರೋಹಿತ್ ಶರ್ಮಾ-ಯಶಸ್ವಿ ಜೈಸ್ವಾಲ್ ಆರಂಭಿಕರು

“ಖಂಡಿತವಾಗಿಯೂ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಬೇಕು. ವಿರಾಟ್ ಕೊಹ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯುತ್ತಾರೆ. ತದನಂತರ, ಸೂರ್ಯಕುಮಾರ್‌ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿ. ನಂತರ ನಾನು ಎಡಗೈ ಹಾಗೂ ಬಲಗೈ ಸಂಯೋಜನೆ ನೋಡಲು ಬಯಸುತ್ತೇನೆ. ಏಕೆಂದರೆ ಎಲ್ಲಾ ಸಮಯದಲ್ಲೂ ಎರಡು ಸಂಯೋಜನೆಗಳಲ್ಲಿ ಬೌಲಿಂಗ್ ಮಾಡುವುದು ಕಷ್ಟ” ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ | ಶಂಕಿತ ಉಗ್ರರ ಅರೆಸ್ಟ್ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಭದ್ರತಾ ಭೀತಿ; ಆರ್‌ಸಿಬಿ ಅಭ್ಯಾಸ ರದ್ದು, ಪತ್ರಿಕಾಗೋಷ್ಠಿಯೂ ಕ್ಯಾನ್ಸಲ್‌

“ಯುಜ್ವೇಂದ್ರ ಚಹಲ್ ಅವರನ್ನು ಭಾರತ ತಂಡದಲ್ಲಿ ನೋಡುವುದು ಸಂತೋಷವಾಗುತ್ತಿದೆ. ಏಕೆಂದರೆ ಅವರು ನಿಜವಾಗಿಯೂ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ವಿಶ್ವಕಪ್‌ನ ದ್ವಿತೀಯಾರ್ಧದಲ್ಲಿ, ಪಿಚ್ ನಿಧಾನಗತಿ ಪಡೆದುಕೊಳ್ಳಬಹುದು. ಹೀಗಾಗಿ ಸ್ಪಿನ್‌ನಲ್ಲಿ ಹೆಚ್ಚುವರಿ ಬೌಲಿಂಗ್ ಆಯ್ಕೆ ಇಟ್ಟುಕೊಳ್ಳುವುದು ಒಳ್ಳೆಯದು. ನಮ್ಮಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಇದ್ದಾರೆ. ಅರ್ಷದೀಪ್ ಸಿಂಗ್ ಕೂಡಾ ಇದ್ದಾರೆ. ಹೀಗಾಗಿ ಭಾರತ ಬಲಿಷ್ಠ ತಂಡವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | RR vs RCB live score IPL 2024: ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ ಎಲಿಮಿನೇಟರ್‌ ಪಂದ್ಯದ ಲೈವ್‌ ಅಪ್ಡೇಟ್

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ