ಭಾರತ-ಇಂಗ್ಲೆಂಡ್ ಟೆಸ್ಟ್​ಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದ ಭಯೋತ್ಪಾದಕ ಪನ್ನುನ್; ರಾಂಚಿಯಲ್ಲಿ ಬಿಗಿ ಭದ್ರತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ಇಂಗ್ಲೆಂಡ್ ಟೆಸ್ಟ್​ಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದ ಭಯೋತ್ಪಾದಕ ಪನ್ನುನ್; ರಾಂಚಿಯಲ್ಲಿ ಬಿಗಿ ಭದ್ರತೆ

ಭಾರತ-ಇಂಗ್ಲೆಂಡ್ ಟೆಸ್ಟ್​ಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದ ಭಯೋತ್ಪಾದಕ ಪನ್ನುನ್; ರಾಂಚಿಯಲ್ಲಿ ಬಿಗಿ ಭದ್ರತೆ

India vs England 4th Test : ಭಾರತ-ಇಂಗ್ಲೆಂಡ್ ಟೆಸ್ಟ್​ಗೆ ಅಡ್ಡಿಪಡಿಸುವುದಾಗಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್​ಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದ ಭಯೋತ್ಪಾದಕ ಪನ್ನುನ್
ಭಾರತ-ಇಂಗ್ಲೆಂಡ್ ಟೆಸ್ಟ್​ಗೆ ಅಡ್ಡಿಪಡಿಸುವ ಬೆದರಿಕೆ ಹಾಕಿದ ಭಯೋತ್ಪಾದಕ ಪನ್ನುನ್

ರಾಂಚಿ: ಭಾರತ - ಇಂಗ್ಲೆಂಡ್ (India vs England 4th Test) ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಅಮೆರಿಕ ಮೂಲದ ನಿಯೋಜಿತ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾವೋವಾದಿಗಳಿಗೆ ಮನವಿ

ಗೃಹ ಸಚಿವಾಲಯದಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟಿರುವ ಪನ್ನುನ್, 4ನೇ ಟೆಸ್ಟ್​ ಪಂದ್ಯಕ್ಕೆ ಅಡ್ಡಿಪಡಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಮೂಲಕ ನಿಷೇಧಿತ ಸಿಪಿಐ (ಮಾವೋವಾದಿ)ಗೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕನೇ ಟೆಸ್ಟ್ ಫೆಬ್ರವರಿ 23 ರಿಂದಜೆಎಸ್​ಸಿಎ ಇಂಟರ್​ನ್ಯಾಷನ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗಲಿದೆ. ಇಂಗ್ಲೆಂಡ್ ತಂಡ ಮಂಗಳವಾರ ನಗರಕ್ಕೆ ಆಗಮಿಸಿದೆ. ಈಗಾಗಲೇ ಈ ಸರಣಿಯಲ್ಲಿ ಉಭಯ ತಂಡಗಳು ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ ಎರಡರಲ್ಲಿ ಜಯಿಸಿದ್ದರೆ, ಇಂಗ್ಲೆಂಡ್ ಒಂದು ಗೆಲುವು ದಾಖಲಿಸಿದೆ.

ಭಾರತ-ಇಂಗ್ಲೆಂಡ್​ಗೆ ಬೆದರಿಕೆ

"ರಾಂಚಿಯಲ್ಲಿ ನಡೆಯಲಿರುವ ಪಂದ್ಯವನ್ನು ರದ್ದುಗೊಳಿಸುವಂತೆ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತ ಮತ್ತು ಇಂಗ್ಲೆಂಡ್ ತಂಡಗಳಿಗೆ ಬೆದರಿಕೆ ಹಾಕಿದ್ದಾರೆ. ಪಂದ್ಯ ರದ್ದುಗೊಳಿಸುವ ಪ್ರಯತ್ನದಲ್ಲಿ ಗೊಂದಲವನ್ನು ಸೃಷ್ಟಿಸುವಂತೆ ಅವರು ಸಿಪಿಐ (ಮಾವೋವಾದಿ) ಅನ್ನು ಒತ್ತಾಯಿಸಿದ್ದಾರೆ.

‘ಐಟಿ ಕಾಯ್ದೆಯಡಿ ಧುರ್ವಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ’ ಎಂದು ಹಟಿಯಾ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿಕೆ ಮಿಶ್ರಾ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಐಎನ್​ಎ ರೆಡಾರ್ನ್​ನಲ್ಲಿ ಪನ್ನುನ್

ಬೆದರಿಕೆಗಳು ಮತ್ತು ಬೆದರಿಕೆ ತಂತ್ರಗಳ ಮೂಲಕ ಪಂಜಾಬ್ ಹಾಗೂ ದೇಶದ ಇತರ ಭಾಗಗಳಲ್ಲಿ ಭಯ ಮತ್ತು ಭಯೋತ್ಪಾದನೆ ಹರಡುತ್ತಿರುವ "ನಿಯೋಜಿತ ವೈಯಕ್ತಿಕ ಭಯೋತ್ಪಾದಕ"ನ ವಿರುದ್ಧ ಭಯೋತ್ಪಾದನಾ ವಿರೋಧಿ ಫೆಡರಲ್ ಏಜೆನ್ಸಿ ತನ್ನ ಮೊದಲ ಪ್ರಕರಣವನ್ನು ದಾಖಲಿಸಿದಾಗಿನಿಂದ ಪನ್ನುನ್, 2019 ರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ರೇಡಾರ್​ನಲ್ಲಿದ್ದಾರೆ.

ಫೆಬ್ರವರಿ 3, 2021 ರಂದು ವಿಶೇಷ ಎನ್ಐಎ ನ್ಯಾಯಾಲಯವು ಪನ್ನುನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್​​ಗಳನ್ನು ಹೊರಡಿಸಿತು. ಕಳೆದ ವರ್ಷ ನವೆಂಬರ್ 29 ರಂದು ಅವರನ್ನು "ಘೋಷಿತ ಅಪರಾಧಿ" ಎಂದು ಘೋಷಿಸಲಾಯಿತು.

ಯುಎಸ್ ಮತ್ತು ಕೆನಡಾ ಮೂಲದ ಪನ್ನುನ್ ಸುತ್ತ ತನ್ನ ಹಿಡಿತವನ್ನು ಬಿಗಿಗೊಳಿಸಿದ ನಂತರ ಎನ್ಐಎ 2023 ರ ಸೆಪ್ಟೆಂಬರ್​​ನಲ್ಲಿ ಪಂಜಾಬ್​ನ ಅಮೃತಸರ, ಚಂಡೀಗಢದಲ್ಲಿ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್​ಜೆ) ಸಂಘಟನೆಯ ಸ್ವಯಂ ಘೋಷಿತ ಜನರಲ್ ಕೌನ್ಸೆಲ್, ಆತನ ಮನೆ, ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

Whats_app_banner