ವಿಶೇಷಚೇತನ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸ್ಮೃತಿ ಮಂಧಾನ; ಹೃದಯಸ್ಪರ್ಶಿ ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶೇಷಚೇತನ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸ್ಮೃತಿ ಮಂಧಾನ; ಹೃದಯಸ್ಪರ್ಶಿ ವಿಡಿಯೋ ವೈರಲ್

ವಿಶೇಷಚೇತನ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸ್ಮೃತಿ ಮಂಧಾನ; ಹೃದಯಸ್ಪರ್ಶಿ ವಿಡಿಯೋ ವೈರಲ್

Smriti Mandhana: ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಭಾರತದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಅವರು ವಿಶೇಷಚೇತನ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ್ದಾರೆ.

ವಿಶೇಷಚೇತನ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸ್ಮೃತಿ ಮಂಧಾನ; ಹೃದಯಸ್ಪರ್ಶಿ ವಿಡಿಯೋ ವೈರಲ್
ವಿಶೇಷಚೇತನ ಅಭಿಮಾನಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಸ್ಮೃತಿ ಮಂಧಾನ; ಹೃದಯಸ್ಪರ್ಶಿ ವಿಡಿಯೋ ವೈರಲ್

ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜಯಿಸಿದ ನಂತರ ಭಾರತದ ಸ್ಟಾರ್ ಆಟಗಾರ್ತಿ​ ಸ್ಮೃತಿ ಮಂಧಾನ ಅವರು ವಿಶೇಷಚೇತನ ಅಭಿಮಾನಿಯೊಬ್ಬರಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ತನ್ನ ಭೇಟಿಯಾಗಲು ಬಂದಿದ್ದ ಯುವ ಅಭಿಮಾನಿಗೆ ಮಂಧಾನ ಮೊಬೈಲ್ ಫೋನ್ ಗಿಫ್ಟ್ ಕೊಟ್ಟರು.

ಆ ಪುಟ್ಟ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಸ್ಮೃತಿ, ಮೊಬೈಲ್ ಫೋನ್ ಉಡುಗೊರೆ ನೀಡಿ ಆತ್ಮವಿಶ್ವಾಸ ತುಂಬಿದರು. ಉಡುಗೊರೆ ನೀಡಿದ ಸ್ಮೃತಿ ಮಂಧಾನಗೆ ಪುಟ್ಟ ಅಭಿಮಾನಿ ಆದಿಶಾ ಹೆರಾತ್ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಆದಿಶಾ ಹೆರಾತ್​ಗೆ ಕ್ರಿಕೆಟ್​ ಅಂದರೆ ಬಲು ಇಷ್ಟ. ಈ ಪ್ರೀತಿಯೇ ಆದಿಶಾ ಅವರನ್ನು ಮೈದಾನಕ್ಕೆ ಬರುವಂತೆ ಮಾಡಿದೆ. ಇದು ಆಕೆಗೆ ಸ್ಮರಣೀಯ ದಿನವಾಗಿದ್ದು, ತನ್ನ ಫೇವರಿಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗೆ ಅನಿರೀಕ್ಷಿತ ಭೇಟಿಯಾಗಿದೆ. ಇದು ತನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೆಚ್ಚುಗೆಯ ಸಂಕೇತವಾಗಿ ಮಂಧಾನ ಮೊಬೈಲ್ ಫೋನ್ ಉಡುಗೊರೆ ನೀಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಂಚಿಕೊಂಡ ವಿಡಿಯೋಗೆ ಕ್ಯಾಪ್ಶನ್ ಬರೆದಿದೆ.

ಧನ್ಯವಾದ ಹೇಳಿದ ಪುಟ್ಟ ಬಾಲಕಿ ತಾಯಿ

ಆದಿಶಾ ಹೆರಾತ್ ಅವರ ತಾಯಿ ಈ ಬಗ್ಗೆ ಮಾತನಾಡಿದ್ದು, ತನ್ನ ಮಗಳು ಮಂಧಾನ ಅವರನ್ನು ಭೇಟಿಯಾಗಿದ್ದು ಮತ್ತು ಮೊಬೈಲ್ ಫೋನ್ ಉಡುಗೊರೆಯಾಗಿ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಅನಿರೀಕ್ಷಿತವಾಗಿ ಪಂದ್ಯ ವೀಕ್ಷಿಸಲು ಬಂದಿದ್ದೇವೆ. ನನ್ನ ಮಗಳು ಪಂದ್ಯವನ್ನು ನೋಡಬೇಕು ಎಂದು ಬಯಸಿದ್ದಳು. ಇದೇ ವೇಳೆ ಭಾರತ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಮೇಡಮ್​ನ ಭೇಟಿಯಾದೆವು.

ಅವರಿಂದ (ಮಂಧಾನ) ನನ್ನ ಮಗಳು ಮೊಬೈಲ್ ಫೋನ್​ ಉಡುಗೊರೆ ಪಡೆದಿದ್ದಾರೆ. ಅವರ ಅನಿರೀಕ್ಷಿತ ಭೇಟಿ ಮತ್ತು ಅವರಿಂದ ಉಡುಗೊರೆ ಪಡೆದಿದ್ದು ನಮ್ಮ ಅದೃಷ್ಟ ಎಂದು ಭಾವಿಸುತ್ತೇನೆ. ನಿಜವಾಗಲೂ ನನಗೆ ತುಂಬಾ ಖುಷಿ ಕೊಟ್ಟಿತು ಮತ್ತು ಧನ್ಯವಾದಗಳು ಎಂದು ಆದಿಶಾ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ

ಪಾಕಿಸ್ತಾನ ವಿರುದ್ಧ ಭಾರತಕ್ಕೆ ಗೆಲುವು

ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ತನ್ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ ತಂಡವನ್ನು 7 ವಿಕೆಟ್​ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್, 19.2 ಓವರ್​​ಗಳಲ್ಲಿ 108 ರನ್ ಗಳಿಸಿ ಸರ್ವಪತನ ಕಂಡಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡವು 14.1 ಓವರ್​​​ಗಳಲ್ಲೇ ಗೆಲುವಿನ ನಗೆ ಬೀರಿತು. ಸ್ಮೃತಿ ಮಂಧಾನ 45 ರನ್​ಗಳ ಸ್ಫೋಟಕ ಇನ್ನಿಂಗ್ಸ್​ ಆಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸ್ಮೃತಿ ಮಂಧಾನ ಅವರಿಗೆ ಶಫಾಲಿ ವರ್ಮಾ ಕೂಡ 40 ರನ್ ಕಲೆ ಹಾಕಿ ಸಾಥ್ ನೀಡಿದ್ದರು. ಇನ್ನು ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಮಿಂಚಿನ ಪ್ರದರ್ಶನ ನೀಡಿದರು. ಆಲ್​ರೌಂಡರ್ ದೀಪ್ತಿ ಶರ್ಮಾ ಮೂರು ವಿಕೆಟ್‌ ಕಬಳಿಸಿದರೆ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ ಎರಡು ವಿಕೆಟ್ ಕಬಳಿಸಿದರು. ಪಾಕ್ ಪರ ಸಿದ್ರಾ ಅಮೀನ್, ತುಬಾ ಹಸನ್ ಮತ್ತು ಫಾತಿಮಾ ಸನಾ ಮಾತ್ರ 20 ರನ್ ಗಳಿಸಿದರೆ, ಅಮೀನ್ 25 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು. ಇಷ್ಟು ರನ್ ಗಳಿಸಲು ತೆಗೆದುಕೊಂಡಿದ್ದು 35 ಎಸೆತಗಳನ್ನು.

Whats_app_banner