ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ; ಆರ್‌ಸಿಬಿ ವಿರುದ್ಧ ದಾಖಲೆಗಳ ಬೆಟ್ಟ ನಿರ್ಮಿಸಿ ತನ್ನದೇ ರೆಕಾರ್ಡ್ ಮುರಿದ ಎಸ್‌ಆರ್‌ಎಚ್‌
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ; ಆರ್‌ಸಿಬಿ ವಿರುದ್ಧ ದಾಖಲೆಗಳ ಬೆಟ್ಟ ನಿರ್ಮಿಸಿ ತನ್ನದೇ ರೆಕಾರ್ಡ್ ಮುರಿದ ಎಸ್‌ಆರ್‌ಎಚ್‌

ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ; ಆರ್‌ಸಿಬಿ ವಿರುದ್ಧ ದಾಖಲೆಗಳ ಬೆಟ್ಟ ನಿರ್ಮಿಸಿ ತನ್ನದೇ ರೆಕಾರ್ಡ್ ಮುರಿದ ಎಸ್‌ಆರ್‌ಎಚ್‌

ಐಪಿಎಲ್‌ 2024ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ರಚಂಡ ಫಾರ್ಮ್‌ನಲ್ಲಿದೆ. ಇತ್ತೀಚೆಗಷ್ಟೇ ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ ನಿರ್ಮಿಸಿದ್ದ ತಂಡವು, ಇದೀಗ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತನ್ನದೇ ದಾಖಲೆ ಬ್ರೇಕ್‌ ಮಾಡಿದೆ.

ಆರ್‌ಸಿಬಿ ವಿರುದ್ಧ ದಾಖಲೆಗಳ ಬೆಟ್ಟ ನಿರ್ಮಿಸಿ ತನ್ನದೇ ರೆಕಾರ್ಡ್ ಮುರಿದ ಎಸ್‌ಆರ್‌ಎಚ್‌
ಆರ್‌ಸಿಬಿ ವಿರುದ್ಧ ದಾಖಲೆಗಳ ಬೆಟ್ಟ ನಿರ್ಮಿಸಿ ತನ್ನದೇ ರೆಕಾರ್ಡ್ ಮುರಿದ ಎಸ್‌ಆರ್‌ಎಚ್‌ (PTI)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ತಂಡ ದಾಖಲೆಯ ಮೇಲೆ ದಾಖಲೆ ನಿರ್ಮಿಸಿದೆ. ಆರ್‌ಸಿಬಿ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಎಸ್‌ಆರ್‌ಎಚ್‌, ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ಸಾಧನೆ ಮಾಡಿದೆ. ಇದರೊದಿಗೆ ತನ್ನದೇ ದಾಖಲೆಯನ್ನು ಬ್ರೇಕ್‌ ಮಾಡಿದೆ. ಇದೇ ಆವೃತ್ತಿಯಲ್ಲಿ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 277ರನ್‌ ಗಳಿಸಿತ್ತು. ಇದೀಗ ತನ್ನದೇ ಹಳೆಯ ದಾಖಲೆಯನ್ನು ಬ್ರೇಕ್‌ ಮಾಡಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಎಸ್‌ಆರ್‌ಎಚ್‌ ಆಟಗಾರರು, ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಟಾಸ್‌ ವೇಳೆ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌, ಈ ಮೈದಾನದಲ್ಲಿ ಕನಿಷ್ಠ 240 ರನ್‌ ಗಳಿಸಿದರೆ ಅದು ಸ್ಪರ್ಧಾತ್ಮಕ ಮೊತ್ತ ಎಂದಿದ್ದರು. ಅದರಂತೆಯೇ ಬ್ಯಾಟಿಂಗ್‌ನಲ್ಲಿ ಸಿಡಿದ ತಂಡವು ಐಪಿಎಲ್‌ ದಾಖಲೆಯನ್ನು ನಿರ್ಮಿಸಿತು. ಕೇವಲ 3 ವಿಕೆಟ್‌ ಕಳೆದುಕೊಂಡು 287 ರನ್‌ ಪೇರಿಸಿತು. ಇತ್ತೀಚೆಗಷ್ಟೇ ಮುಂಬೈ ವಿರುದ್ಧ ಗಳಿಸಿದ್ದ ತನ್ನದೇ ದಾಖಲೆಯ 277 ರನ್‌ ರೆಕಾರ್ಡ್‌ ಬ್ರೇಕ್‌ ಮಾಡಿತು.

ಟ್ರಾವಿಸ್‌ ಹೆಡ್‌ ಸ್ಫೋಟಕ ಶತಕ ಸಿಡಿಸಿದರೆ, ಹೆನ್ರಿಚ್‌ ಕ್ಲಾಸೆನ್‌ ಅರ್ಧಶತಕ ಗಳಿಸಿದರು. ಉಳಿದಂತೆ ಅಭಿಷೇಕ್‌ ಶರ್ಮಾ, ಐಡೆನ್‌ ಮರ್ಕ್ರಾಮ್‌ ಹಾಗೂ ಅಬ್ದುಲ್‌ ಸಮದ್‌ ಕೂಡಾ ಸಿಡಿದಿದೆದ್ದರು.

ಐಪಿಎಲ್‌ನಲ್ಲಿ ಗರಿಷ್ಠ ಮೊತ್ತ

  • ಎಸ್‌ಆರ್‌ಎಚ್‌ - 287/3 (ಆರ್‌ಸಿಬಿ ವಿರುದ್ಧ), ಬೆಂಗಳೂರು 2024
  • ಎಸ್‌ಆರ್‌ಎಚ್‌ - 277/3 (ಮುಂಬೈ ಇಂಡಿಯನ್ಸ್‌ ವಿರುದ್ಧ), ಹೈದರಾಬಾದ್ 2024
  • ಕೆಕೆಆರ್‌ - 272/7 (ಡಿಸಿ ವಿರುದ್ಧ), ವೈಜಾಗ್ 2024
  • ಆರ್‌ಸಿಬಿ - 263/5 (ಪುಣೆ ವಾರಿಯರ್ಸ್‌ ವಿರುದ್ಧ), ಬೆಂಗಳೂರು 2013
  • ಎಲ್‌ಎಸ್‌ಜಿ 257/7 (ಪಂಜಾಬ್‌ ವಿರುದ್ಧ), ಮೊಹಾಲಿ 2023

ಐಪಿಎಲ್‌ ಇತಿಹಾಸದ ಗರಿಷ್ಠ ಮೊತ್ತದ ಪೈಕಿ ಅಗ್ರ ಮೂರು ಮೊತ್ತಗಳು ಈ ಬಾರಿಯ ಐಪಿಎಲ್‌ನಲ್ಲೇ ಬಂದಿವೆ. ಮೊದಲೆರಡು ಸ್ಥಾನಗಳಲ್ಲಿ ಎಸ್‌ಆರ್‌ಎಚ್ ತಂಡವಿದ್ದರೆ, ಮೂರನೇ ಸ್ಥಾನದಲ್ಲಿ ಕೆಕೆಆರ್‌ ತಂಡವಿದೆ.

ಎಸ್‌ಆರ್‌ಎಚ್‌ ಗಳಿಸಿದ ಈ ಮೊತ್ತವು ಟಿ20 ಕ್ರಿಕೆ‌ಟ್‌ನಲ್ಲಿಯೇ ಎರಡನೇ ಗರಿಷ್ಠ ಮೊತ್ತವಾಗಿದೆ. ಇದರೊಂದಿಗೆ ಅಫ್ಘಾನಿಸ್ತಾನದ ದಾಖಲೆಯನ್ನು ಹೈದರಾಬಾದ್‌ ತಂಡ ಬ್ರೇಕ್‌ ಮಾಡಿದೆ.  

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ತಂಡಗಳು

  • 314/3 - ನೇಪಾಳ (ಮಂಗೋಲಿಯಾ ವಿರುದ್ಧ), ಹ್ಯಾಂಗ್‌ಝೌ 2023
  • 287/3 - ಎಸ್‌ಆರ್‌ಎಚ್‌ (ಆರ್‌ಸಿಬಿ ವಿರುದ್ಧ), ಬೆಂಗಳೂರು 2024
  • 278/3 - ಅಫ್ಘಾನಿಸ್ತಾನ (ಐರ್ಲೆಂಡ್‌ ವಿರುದ್ಧ), ಡೆಹ್ರಾಡೂನ್ 2019
  • 278/4 - ಜೆಕ್ ರಿಪಬ್ಲಿಕ್ (ಟರ್ಕಿ ವಿರುದ್ಧ), ಇಫ್ಲೋವ್ ದೇಶ 2019
  • 277/3 - ಎಸ್‌ಆರ್‌ಎಚ್‌ (ಎಂಐ ವಿರುದ್ಧ) ಹೈದರಾಬಾದ್ 2024

ಇದನ್ನೂ ಓದಿ | ವೇಗದ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸಲು ಪರದಾಟ; ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ

ಐಪಿಎಲ್ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ತಂಡಗಳು

  • 22 - ಎಸ್‌ಆರ್‌ಎಚ್‌ (ಆರ್‌ಸಿಬಿ ವಿರುದ್ಧ), ಬೆಂಗಳೂರು 2024
  • 21 - ಆರ್‌ಸಿಬಿ (ಪುಣೆ ವಾರಿಯರ್ಸ್‌ ವಿರುದ್ಧ) ಬೆಂಗಳೂರು 2013
  • 20 - ಆರ್‌ಸಿಬಿ (ಗುಜರಾತ್‌ ಲಯನ್ಸ್‌ ವಿರುದ್ಧ) ಬೆಂಗಳೂರು 2016
  • 20 - ಡಿಸಿ (ಗುಜರಾತ್‌ ಲಯನ್ಸ್‌ ವಿರುದ್ಧ), ದೆಹಲಿ 2017
  • 20 - ಎಂಐ (ಎಸ್‌ಆರ್‌ಎಚ್‌ ವಿರುದ್ಧ), ಹೈದರಾಬಾದ್ 2024

ಇದನ್ನೂ ಓದಿ | ಐಪಿಎಲ್‌ನಲ್ಲಿ 4ನೇ ಅತಿ ವೇಗದ ಶತಕ ಸಿಡಿಸಿದ ಟ್ರಾವಿಸ್ ಹೆಡ್; ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ಎಸ್‌ಆರ್‌ಎಚ್‌ ಆಟಗಾರ

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner