ಕನ್ನಡ ಸುದ್ದಿ  /  ಕ್ರಿಕೆಟ್  /  ವೇಗದ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸಲು ಪರದಾಟ; ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ

ವೇಗದ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸಲು ಪರದಾಟ; ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ

Glenn Maxwell: ಆರ್‌ಸಿಬಿ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಧಾನದ ಬಗ್ಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್‌ ವಾಗ್ದಾಳಿ ನಡೆಸಿದ್ದಾರೆ. ವೇಗದ ಬೌಲಿಂಗ್‌ ಎದುರಿಸಲು ಆಲ್‌ರೌಂಡರ್‌ ಪರದಾಡುವ ಬಗೆಯನ್ನು ವಿವರಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ
ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿರುದ್ಧ ಸುನಿಲ್ ಗವಾಸ್ಕರ್ ವಾಗ್ದಾಳಿ (IPL-X)

ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವು ಕಾಣಲು ಪರದಾಡುತ್ತಿದೆ. ತಂಡದಲ್ಲಿ ಬಲಿಷ್ಠ ಬ್ಯಾಟರ್‌ಗಳಿದ್ದರೂ, ಅಬ್ಬರ ಸಾಲುತ್ತಿಲ್ಲ. ಈ ನಡುವೆ ಪ್ರಸಕ್ತ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಆಸೀಸ್‌ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಮ್ಯಾಕ್ಸಿ, ಟೂರ್ನಿಯ ಮೊದಲಾರ್ಧದಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ಪರ ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಬಿದ್ದಿರುವ ಮ್ಯಾಕ್ಸಿ, ಆರ್‌ಸಿಬಿ ಪಾಲಿಗೆ ಈವರೆಗೆ ನೆರವಾಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಕಳೆದ ಮೂರು ಪಂದ್ಯಗಳಲ್ಲಿ ಮ್ಯಾಕ್ಸಿ ಫಾರ್ಮ್‌ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿತ್ತು. ಕೆಲವೊಂದು ಪಂದ್ಯಗಳಲ್ಲಿ ಡಕೌಟ್‌ ಆಗಿರುವ ಮ್ಯಾಕ್ಸಿಯನ್ನು ಹೈದರಾಬ್‌ ವಿರುದ್ಧದ ಪಂದ್ಯದಲ್ಲಿ ಆಡಿಸುತ್ತಿಲ್ಲ. ಪಂದ್ಯದ ಆರಂಭಕ್ಕೂ ಮುನ್ನ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ವಿಧಾನದ ಬಗ್ಗೆ ಮಾತನಾಡಿದ ಗವಾಸ್ಕರ್, ಚೆಂಡು ಎದೆ ಮತ್ತು ಭುಜದತ್ತ ಪುಟಿಯುವಾಗ ಅವರ ದೌರ್ಬಲ್ಯದ ಕುರಿತು ವಿವರಿಸಿದರು.

“ಅವರು ವೇಗದ ಬೌಲಿಂಗ್ ಎದುರಿಸಲು ಸಾಧ್ಯವಾಗುತ್ತಿಲ್ಲ. ಎದೆ ಅಥವಾ ಭುಜದ ಎತ್ತರಕ್ಕೆ ಪುಟಿಯುತ್ತಿರುವ ಚೆಂಡುಗಳು ಮ್ಯಾಕ್ಸ್‌ವೆಲ್‌ಗೆ ಬ್ಯಾಟ್‌ ಬೀಸಲು ತೊಂದರೆ ಕೊಡುತ್ತಿವೆ. ಅವರು ತಮ್ಮ ಸೊಂಟದ ಎತ್ತರಕ್ಕಿಂತ ಕೆಳಗಿರುವ ಪ್ರತಿಯೊಂದು ಚೆಂಡನ್ನು ಹೊಡೆಯಬಲ್ಲರು. ಆದರೆ ಅದಕ್ಕಿಂತ ಮೇಲೆ ಪುಟಿಯು ಚೆಂಡುಗಳನ್ನು ಹೊಡೆಯಲು ಅವರಿಂದ ಆಗುತ್ತಿಲ್ಲ” ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ತುಂಬಾ ನಗುತ್ತಿದ್ದಾರೆ; ಖುಷಿಯಾಗಿರುವಂತೆ ನಟಿಸುತ್ತಿದ್ದಾರೆ ಎಂದ ಕೆವಿನ್ ಪೀಟರ್ಸನ್

“ಭಾರತದ ಮೈದಾನಗಳಲ್ಲಿ ಏಪ್ರಿಲ್ 20ರವರೆಗಿನ ಹವಾಮಾನವು ವೇಗದ ಬೌಲಿಂಗ್‌ಗೆ ನೆರವಾಗುತ್ತವೆ. ವೇಗಿಗಳು ಯಶಸ್ಸನ್ನು ಪಡೆಯುವಾಗ, ಮ್ಯಾಕ್ಸ್‌ವೆಲ್ ಕೂಡಾ ಸುಧಾರಿಸಿಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.

ಹೆಸರು ಮಾತ್ರ ದೊಡ್ಡದು

ಇದೇ ವೇಳೆ ಹಿಂದಿಯಲ್ಲಿ ನುಡಿಗಟ್ಟಿನೊಂದಿಗೆ ಮ್ಯಾಕ್ಸಿ ಆಟವನ್ನು ವಿವರಿಸಿದ ಸನ್ನ, "ನಾಮ್ ಬಡೇ ಪರ್ ದರ್ಶನ್ ಚೋಟೆ" ಎಂದು ಹೇಳಿದ್ದಾರೆ. ಅಂದರೆ ಹೆಸರೇನೋ ದೊಡ್ಡದು. ಆದರೆ ಪ್ರದರ್ಶನ ಮಾತ್ರ ಹೇಳಿಕೊಳ್ಳುವಂತಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಆಡಿದ ಕೊನೆಯ ಪಂದ್ಯದಲ್ಲಿ ಮ್ಯಾಕ್ಸ್‌ವೆಲಲ್‌ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಅವರು ಇಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.

IPL_Entry_Point