ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ್ದು ಇದೆಂಥಾ ತಯಾರಿ? ಅರ್ಥವಾಗುತ್ತಿಲ್ಲ ಬಿಸಿಸಿಐ ಪ್ಲಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ್ದು ಇದೆಂಥಾ ತಯಾರಿ? ಅರ್ಥವಾಗುತ್ತಿಲ್ಲ ಬಿಸಿಸಿಐ ಪ್ಲಾನ್

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ್ದು ಇದೆಂಥಾ ತಯಾರಿ? ಅರ್ಥವಾಗುತ್ತಿಲ್ಲ ಬಿಸಿಸಿಐ ಪ್ಲಾನ್

ICC Champions Trophy 2025: ಶ್ರೀಲಂಕಾ ವಿರುದ್ಧ ಆಡಿರುವ ಪಂದ್ಯ ಭಾರತ ತಂಡದ ಈ ವರ್ಷದ ಕೊನೆಯ ಏಕದಿನ ಆಗಿದೆ. ರೋಹಿತ್ ಸೇನೆ 2024 ರಲ್ಲಿ ಒಂದೇ ಒಂದು ಏಕದಿನ ಹೊಂದಿಲ್ಲ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಯಾರಿ ನಡೆಸಲು, ತಂಡ ಕಟ್ಟಲು ಹೆಚ್ಚು ಅವಕಾಶವಿಲ್ಲ.

ಟೀಮ್ ಇಂಡಿಯಾದ್ದು ಇದು ಯಾವ ರೀತಿಯ ಚಾಂಪಿಯನ್ಸ್ ಟ್ರೋಫಿ ತಯಾರಿ? ಅರ್ಥವಾಗುತ್ತಿಲ್ಲ ಬಿಸಿಸಿಐ ಪ್ಲಾನ್
ಟೀಮ್ ಇಂಡಿಯಾದ್ದು ಇದು ಯಾವ ರೀತಿಯ ಚಾಂಪಿಯನ್ಸ್ ಟ್ರೋಫಿ ತಯಾರಿ? ಅರ್ಥವಾಗುತ್ತಿಲ್ಲ ಬಿಸಿಸಿಐ ಪ್ಲಾನ್

ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿತ್ತು. ಅಲ್ಲಿ ತಂಡವು ಕೇವಲ 3 ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯನ್ನು ಮಾತ್ರ ಆಡಿದೆ. ಟಿ20ಯಲ್ಲಿ ಭಾರತ ಸರಣಿ ವಶಪಡಿಸಿಕೊಂಡಿತು. ಆದರೆ ಏಕದಿನ ಪಂದ್ಯಕ್ಕೆ ಬಂದಾಗ ಆತಿಥೇಯ ಶ್ರೀಲಂಕಾ ಹಿರಿಯ ಭಾರತೀಯ ತಂಡದ ಮೇಲೆ ಪ್ರಾಬಲ್ಯ ಸಾಧಿಸಿತು. ಏಕದಿನ ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಹೀನಾಯವಾಗಿ ಸೋತಿತು. ಇದು ಚಾಂಪಿಯನ್ಸ್ ಟ್ರೋಫಿಗೆ ಮೊದಲು ಟೀಮ್ ಇಂಡಿಯಾಕ್ಕೆ ದೊಡ್ಡ ಚಿಂತೆಯಾಗಿದೆ.

ಏಕೆಂದರೆ ಯುವ ಆಟಗಾರರಿಂದ ಕೂಡಿದ್ದ ಶ್ರೀಲಂಕಾ ತಂಡದ ಎದುರು ಭಾರತ ಸೋತಿರುವುದು ಚರ್ಚೆ ಹುಟ್ಟುಹಾಕಿದೆ. ಆದರೆ, ಇನ್ನೂ ಆತಂಕಕಾರಿ ಸಂಗತಿಯೆಂದರೆ ಶ್ರೀಲಂಕಾ ವಿರುದ್ಧ ಆಡಿರುವ ಪಂದ್ಯ ಭಾರತ ತಂಡದ ಈ ವರ್ಷದ ಕೊನೆಯ ಏಕದಿನ ಆಗಿದೆ. ರೋಹಿತ್ ಸೇನೆ ಮುಂದಿನ ದಿನಗಳಲ್ಲಿ 2024 ರಲ್ಲಿ ಒಂದೇ ಒಂದು ಏಕದಿನ ಪಂದ್ಯವನ್ನು ಹೊಂದಿಲ್ಲ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ತಯಾರಿ ನಡೆಸಲು ತಂಡ ಕಟ್ಟಲು ಹೆಚ್ಚು ಅವಕಾಶ ಇಲ್ಲ.

2025 ರಲ್ಲಿ ಭಾರತ-ಇಂಗ್ಲೆಂಡ್

ಭಾರತೀಯ ಕ್ರಿಕೆಟ್ ತಂಡವು ಮುಂದಿನ ಏಕದಿನ ಪಂದ್ಯವನ್ನು ಫೆಬ್ರವರಿ 2025 ರಲ್ಲಿ ಇಂಗ್ಲೆಂಡ್ ವಿರುದ್ಧ ನೇರವಾಗಿ ಆಡಲಿದೆ. ಫೆಬ್ರವರಿ 6 ರಂದು ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಆದರೆ, ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಾಗಲಿದೆ. ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಭಾರತ ಪಾಕಿಸ್ತಾನಕ್ಕೆ ಹೋಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಪಂದ್ಯಾವಳಿಯನ್ನು ಹೈಬ್ರಿಡ್ ರೀತಿಯಲ್ಲಿ ನಡೆಸುವ ಸಾಧ್ಯತೆಯಿದೆ.

ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗುವ ಮುನ್ನ ಭಾರತ ತಂಡ ಕೇವಲ 3 ಏಕದಿನ ಪಂದ್ಯವನ್ನಷ್ಟೆ ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ, ಮೆಗಾ ಐಸಿಸಿ ಈವೆಂಟ್‌ಗೆ ಭಾರತ ಹೇಗೆ ತಯಾರಿ ನಡೆಸುತ್ತೆ ಎಂಬುದು ದೊಡ್ಡ ಚಿಂತೆ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೆ ಎಂಬ ಅನುಮಾನ ಕೂಡ ಹುಟ್ಟುಕೊಂಡಿದೆ. ಇದು ಟೀಮ್ ಇಂಡಿಯಾಕ್ಕೆ ಕಬ್ಬಿಣದ ಕಡಲೆಯಂತಾಗಿರುವುದು ನಿಜ. ಇಂಗ್ಲೆಂಡ್ ವಿರುದ್ಧದ ಆ 3 ಏಕದಿನ ಪಂದ್ಯಗಳಲ್ಲಿ ಅವರು ತಮ್ಮ ಬೆಸ್ಟ್ ಪ್ಲೇಯಿಂಗ್ 11 ಆಟಗಾರರನ್ನು ಕಣಕ್ಕಿಳಿಸಬೇಕು. ರೋಹಿತ್ ಮತ್ತು ಗೌತಮ್ ಗಂಭೀರ್​ಗೆ ಇದೊಂದೆ ದಾರಿ ಇದ್ದು, ತಮ್ಮ ಪರಿಪೂರ್ಣ ಆಟದ ಸಂಯೋಜನೆಯನ್ನು ಕಂಡುಕೊಳ್ಳಬೇಕಾಗಿದೆ.

ಈ ಬಾರಿಯಾದರೂ ಗೆಲ್ಲುತ್ತಾ ಐಸಿಸಿ ಟ್ರೋಫಿ

ಕಳೆದ 11 ವರ್ಷಗಳಿಂದ ಭಾರತ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿಲ್ಲ. 2024ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ 13 ವರ್ಷಗಳ ನಂತರ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತು. ಇದೀಗ 2013ರ ನಂತರ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಜ್ಜಾಗಿದೆ. ಅಂದು ಇಂಗ್ಲೆಂಡ್​​ನಲ್ಲಿ ಈ ಟ್ರೋಫಿ ಗೆದ್ದಿತ್ತು. ಈ ಬಾರಿಯ ಹೊಸ ಕೋಚ್ ಗೌತಮ್ ಗಂಭೀರ್ ಈ ಬರ ನೀಗಿಸುವರೆ ಎಂಬುದನ್ನು ಕಾದುನೋಡಬೇಕಿದೆ. ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಕಾರಣ ಭಾರತ ತಂಡ ಅಲ್ಲಿಗೆ ಪ್ರಯಾಣ ನಡೆಸುವುದು ಅನುಮಾನ ಎನಿಸಿದೆ.

Whats_app_banner