ವಿನೇಶ್ ಫೋಗಟ್ ಬೆಳ್ಳಿ ಪದಕ ದೋಚಿದರು; ಸ್ಟಾರ್ ಕುಸ್ತಿಪಟು ಅನರ್ಹತೆಗೆ ಸಚಿನ್ ತೆಂಡೂಲ್ಕರ್ ಆಕ್ರೋಶ-sachin tendulkar calls time for umpires call after cas issues official statement on vinesh phogats appeal ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ವಿನೇಶ್ ಫೋಗಟ್ ಬೆಳ್ಳಿ ಪದಕ ದೋಚಿದರು; ಸ್ಟಾರ್ ಕುಸ್ತಿಪಟು ಅನರ್ಹತೆಗೆ ಸಚಿನ್ ತೆಂಡೂಲ್ಕರ್ ಆಕ್ರೋಶ

ವಿನೇಶ್ ಫೋಗಟ್ ಬೆಳ್ಳಿ ಪದಕ ದೋಚಿದರು; ಸ್ಟಾರ್ ಕುಸ್ತಿಪಟು ಅನರ್ಹತೆಗೆ ಸಚಿನ್ ತೆಂಡೂಲ್ಕರ್ ಆಕ್ರೋಶ

Sachin Tendulkar: ವಿನೇಶ್ ಫೋಗಟ್ ಅವರ ಅನರ್ಹತೆಯ ಬಗ್ಗೆ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅವರು ಒಲಿಂಪಿಕ್ಸ್​​ ಬೆಳ್ಳಿ ಪದಕ ಗೆಲ್ಲಲು ಅರ್ಹರು ಎಂದು ಹೇಳಿದ್ದಾರೆ.

ವಿನೇಶ್ ಫೋಗಟ್ ಬೆಳ್ಳಿ ಪದಕ ದೋಚಿದರು; ಸ್ಟಾರ್ ಕುಸ್ತಿಪಟು ಅನರ್ಹತೆಗೆ ಸಚಿನ್ ತೆಂಡೂಲ್ಕರ್ ಆಕ್ರೋಶ
ವಿನೇಶ್ ಫೋಗಟ್ ಬೆಳ್ಳಿ ಪದಕ ದೋಚಿದರು; ಸ್ಟಾರ್ ಕುಸ್ತಿಪಟು ಅನರ್ಹತೆಗೆ ಸಚಿನ್ ತೆಂಡೂಲ್ಕರ್ ಆಕ್ರೋಶ

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಫೈನಲ್​ ಪಂದ್ಯದಲ್ಲಿ ಕುಸ್ತಿಪಟು ವಿನೇಶ್ ಫೋಗಾಟ್ ಅವರು ಅನರ್ಹಗೊಂಡ ವಿಚಾರಕ್ಕೆ ಸಂಬಂಧಿಸಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಪ್ರತಿಕ್ರಿಯಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸಚಿನ್, ವಿನೇಶ್​ಗೆ ಸಿಗಬೇಕಿದ್ದ ಬೆಳ್ಳಿಯನ್ನು ದೋಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನದ ಪದಕದ ಪಂದ್ಯಕ್ಕೂ ಮುನ್ನ 100 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣ ಅವರನ್ನು ಮಹಿಳೆಯರ 50 ಕೆಜಿ ಫ್ರೀಸ್ಟೈಲ್​ನ ಫೈನಲ್​ಗೆ ಅನರ್ಹ ಮಾಡಲಾಗಿತ್ತು. ತದನಂತರ ವಿನೇಶ್‌, ಅನರ್ಹತೆ ಪ್ರಶ್ನಿಸಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಸಿಎಸ್‌ಎ ಮನವಿ ಸ್ವೀಕರಿಸಿ ಕ್ರೀಡಾಕೂಟ ಮುಗಿಯುವ ಮುನ್ನವೇ ತೀರ್ಪು ಹೊರಬೀಳಲಿದೆ ಎಂದು ತಿಳಿಸಿದೆ.

ಸಚಿನ್ ತೆಂಡೂಲ್ಕರ್ ಹೇಳಿದ್ದೇನು?

ಎಕ್ಸ್​ ಖಾತೆಯಲ್ಲಿ ಟಿಪ್ಪಣ್ಣಿ ಹಾಕಿರುವ ಸಚಿನ್, ವಿನೇಶ್ ಅವರ ಅನರ್ಹತೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂಪೈರ್ಸ್ ಕಾಲ್​ಗಾಗಿ ಸಮಯ ಬಂದಿದೆ. ಪ್ರತಿಯೊಂದು ಕ್ರೀಡೆಯೂ ತನ್ನದೇ ಆದ ನಿಯಮಗಳನ್ನು ಹೊಂದಿದೆ. ಆ ನಿಯಮಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನೋಡಬೇಕು. ಕೆಲವೊಮ್ಮೆ ಮರುಪರಿಶೀಲಿಸಬೇಕು ಎಂದು ಹೇಳಿರುವ ತೆಂಡೂಲ್ಕರ್​,  ಒಲಿಂಪಿಕ್ಸ್​​ನಲ್ಲಿ ವಿನೇಶ್ ಅರ್ಹ ಬೆಳ್ಳಿ ಪದಕವನ್ನು ಕಸಿದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿನೇಶ್ ಅವರು ಪದಕದ ಸುತ್ತಿಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಅತಿಯಾದ ತೂಕಕ್ಕೆ ಸಂಬಂಧಿಸಿದ ಅರ್ನಹತೆ ನಿಯಮ ಫೈನಲ್​ಗೂ ಮೊದಲೇ ಇತ್ತು. ಹಾಗಾಗಿ ಅರ್ಹವಾದ ಬೆಳ್ಳಿಯ ಪದಕವನ್ನು ಆಕೆಯಿಂದ ಕಸಿದುಕೊಳ್ಳುವುದು ತರ್ಕ ಮತ್ತು ಕ್ರೀಡಾ ಪ್ರಜ್ಞೆಯನ್ನು ವಿರೋಧಿಸುತ್ತದೆ. ಅವರು ಬೇರೆ ಯಾವುದೇ ಅಡ್ಡ ದಾರಿ ಹಿಡಿದಿಲ್ಲ. ನ್ಯಾಯಯುತವಾಗಿ ಫೈನಲ್​ಗೇರಿದ್ದರು ಎಂದು ಸಚಿನ್ ಉಲ್ಲೇಖಿಸಿದ್ದಾರೆ.

ಅವರೇನು ಔಷಧ ತೆಗೆದುಕೊಂಡಿದ್ದರೇ?

ಪದಕ ಗೆಲ್ಲಲು ಮತ್ತು ಉತ್ತಮ ಪ್ರದರ್ಶನ ನೀಡಲು ಔಷಧಗಳನ್ನು ಪಡೆದು ಕ್ರೀಡಾ ನಿಯಮ ಉಲ್ಲಂಘಿಸಿದರೆ ಅರ್ನಹತೆ ಮಾಡುವುದರಲ್ಲಿ ಅರ್ಥ ಇದೆ. ಹೀಗೆ ನಿಯಮ ಉಲ್ಲಂಘಿಸಿದವರಿಗೆ ಗೆದ್ದರೂ ಪದಕ ನೀಡದೆ, ಅಂತಹವರನ್ನು ಕೊನೆಗೆ ಹಾಕುವುದು ಸಮರ್ಥನೀಯ. ಆದರೆ, ಏನೂ ತಪ್ಪು ಮಾಡದೆ ನಿಯಮಗಳನ್ನು ಪರಿಶೀಲಿಸದೆ ಹೀಗೆ ಅನರ್ಹ ಮಾಡುವುದು ಎಷ್ಟು ಸರಿ ಎಂದು ಸಚಿನ್ ಪ್ರಶ್ನಿಸಿದ್ದಾರೆ.

ಆದಾಗ್ಯೂ, ವಿನೇಶ್ ತನ್ನ ಎದುರಾಳಿಗಳನ್ನು ನ್ಯಾಯಯುತವಾಗಿ ಸೋಲಿಸಿ ಅಗ್ರ 2 ಸ್ಥಾನಗಳನ್ನು ತಲುಪಿದರು. ಅವರು ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹರು. ನಾವೆಲ್ಲರೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿರುವಾಗ, ವಿನೇಶ್ ಅವರಿಗೆ ಅರ್ಹವಾದ ಮನ್ನಣೆ ಸಿಗಲಿ ಎಂದು ನಾವು ಆಶಿಸೋಣ ಮತ್ತು ಪ್ರಾರ್ಥಿಸೋಣ ಎಂದು ಸಚಿನ್, ಕ್ರೀಡಾ ಪ್ರೇಮಿಗಳಿಗೆ ಹೇಳಿದ್ದಾರೆ.

ಫೋಗಟ್ ತನ್ನ 50 ಕೆಜಿ ವಿಭಾಗದ ಫೈನಲ್​​ಗೂ ಮುನ್ನ 2 ಕೆಜಿ ಹೆಚ್ಚಾಗಿದ್ದ ಫೋಗಾಟ್ ತೂಕ ಕಳೆದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಸಾಧ್ಯವಾಗಲಿಲ್ಲ. ಇಡೀ ರಾತ್ರಿ ವಾಕಿಂಗ್ ಮಾಡಿದರು. ಸ್ಕಪಿಂಗ್, ಜಂಪಿಂಗ್ ಮಾಡಿದರು. ರಕ್ತವನ್ನು ಕೊಟ್ಟರು. ಕೂದಲು ಕಟ್ ಮಾಡಿದರು. ಆದರೆ ಕೊನೆಯಲ್ಲಿ 100 ಗ್ರಾಂ ಕಳೆದುಕೊಳ್ಳಲು ವಿಫಲರಾದರು. 

ಪ್ರಸ್ತುತ ವಿನೇಶ್ ಫೋಗಾಟ್, ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ತನಗೆ ಅನ್ಯಾಯವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕುಸ್ತಿ ಗೆದ್ದಿದೆ, ನಾನು ಸೋತೆ ಎಂದು ವಿದಾಯದ ಕುರಿತು ಪೋಸ್ಟ್ ಹಾಕಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.