ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್​​ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್​​ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ

ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್​​ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ

RCB Target: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಬಳಿ ಉಳಿದಿರುವ 83 ಕೋಟಿ ಪರ್ಸ್​​ನಲ್ಲಿ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಟಾರ್ಗೆಟ್​ ಮಾಡಬೇಕಾದ ಆಟಗಾರರು ಯಾರು? ಇಲ್ಲಿದೆ ವಿವರ.

ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್​​ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ
ಐಪಿಎಲ್ 2025 ಆಟಗಾರರ ಖರೀದಿ ಮೇಳದಲ್ಲಿ ಆರ್​​ಸಿಬಿ ಟಾರ್ಗೆಟ್ ಮಾಡಬೇಕಾದ ಕ್ರಿಕೆಟರ್ಸ್ ಯಾರು? ಇಲ್ಲಿದೆ ವಿವರ

ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 37 ಕೋಟಿ ಕೊಟ್ಟು ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಇದರೊಂದಿಗೆ 120 ಕೋಟಿ ಪರ್ಸ್​​ನಲ್ಲಿ ಇನ್ನೂ 83 ಕೋಟಿ ಉಳಿದಿದೆ. ಆದರೆ ಆರ್​ಸಿಬಿ ಹರಾಜಿಗೆ ಬರುವುದಕ್ಕೂ ಮುನ್ನ ಆರ್​ಸಿಬಿ ತಂತ್ರಗಳು ಹೇಗಿವೆ, ಖರೀದಿಸಲು ಆರ್​​ಸಿಬಿ ಟಾರ್ಗೆಟ್ ಮಾಡುವ ಕ್ರಿಕೆಟರ್ಸ್ ಯಾರು? ಕರ್ನಾಟಕ ಸರ್ಕಾರದಿಂದ ಒತ್ತಡ ಇರೋದ್ಯಾಕೆ? ಇಲ್ಲಿದೆ ವಿವರ.

ಆರ್​ಸಿಬಿ ಪ್ರತಿ ವರ್ಷದಂತೆ ಈ ಬಾರಿ ತಪ್ಪುಗಳನ್ನು ಮಾಡಬಾರದು. ಬ್ಯಾಟಿಂಗ್​​ನಲ್ಲಿ ಘಟಾನುಘಟಿ ಆಟಗಾರರನ್ನೇ ಖರೀದಿಸುವ ಆರ್​ಸಿಬಿ, ಬೌಲಿಂಗ್ ವಿಚಾರಕ್ಕೆ ಬಂದಾಗ ಅನಾನುಭವಿಗಳನ್ನೇ ಖರೀದಿಸುವ ಮೂಲಕ ಟೀಕೆಗೆ ಗುರಿಯಾಗುತ್ತದೆ. ಹಾಗಾಗಿ ಎರಡು ವಿಭಾಗಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಅನುಭವಿಗಳು, ಯುವ ಆಟಗಾರರ ಮಿಶ್ರಣದಿಂದ ಕೂಡಿರಬೇಕು. ಹಲವು ವರ್ಷಗಳಿಂದ ಬೌಲಿಂಗ್​ನಲ್ಲಿ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಆ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕು ಆರಂಭಿಕರಿಂದ ಹಿಡಿದು 11ನೇ ಆಟಗಾರನ ತನಕ ತಂಡವನ್ನು ರಕ್ಷಿಸುವವರಾಗಿರಬೇಕು. ಆರ್​ಸಿಬಿ ಟಾರ್ಗೆಟ್ ಮಾಡಬೇಕಾದ ಪಾತ್ರಗಳು ಯಾವುವು? ಇಲ್ಲಿದೆ ವಿವರ.

ರೋಲ್​ ನಂಬರ್ 1: ಆರಂಭಿಕ ಆಟಗಾರ, ಮೇಲಾಗಿ ಸ್ಪಿನ್ ವಿರುದ್ಧ ಉತ್ತಮವಾಗಿ ಆಡಬೇಕು. ಅವರು ವಿಕೆಟ್ ಕೀಪರ್ ಆಗಿದ್ದರೆ ಬೋನಸ್. ಅಂತಹವರ ಪೈಕಿ 6 ಆಟಗಾರರು ಉತ್ತಮ.

ಕೆಎಲ್ ರಾಹುಲ್

ಡೆವೊನ್ ಕಾನ್ವೆ

ಜಾನಿ ಬೈರ್​ಸ್ಟೋ

ಡೇವಿಡ್ ವಾರ್ನರ್

ರಚಿನ್ ರವೀಂದ್ರ

ರಹಮಾನುಲ್ಲಾ ಗುರ್ಬಾಜ್

ಜೋಸ್ ಬಟ್ಲರ್​

ಜೇಕ್ ಫ್ರೇಸರ್-ಮೆಕ್‌ಗುರ್ಕ್

ರೋಲ್ ನಂಬರ್ 2: ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಪಿನ್ ಮತ್ತು ವೇಗದ ಬೌಲರ್ಸ್ ವಿರುದ್ಧ ಮಿಂಚಬೇಕು. ತಂಡಕ್ಕೆ ತಿರುವು ನೀಡುವವರಾಗಿರಬೇಕು.

ವಿಲ್ ಜ್ಯಾಕ್ಸ್

ಗ್ಲೆನ್ ಮ್ಯಾಕ್ಸ್​ವೆಲ್

ರಿಲೀ ರೊಸ್ಸೌವ್

ಲಿಯಾಮ್ ಲಿವಿಂಗ್​ಸ್ಟನ್

ಶ್ರೇಯಸ್ ಅಯ್ಯರ್

ಐಡೆನ್ ಮಾರ್ಕ್ರಾಮ್

ರೋಲ್ ನಂಬರ್ 3: 5ನೇ ಕ್ರಮಾಂಕ ಮತ್ತು ಆರನೇ ಕ್ರಮಾಂಕದಲ್ಲಿ ವೇಗಿಗಳ ವಿರುದ್ಧ ಅಬ್ಬರಿಸುವವರು ಬೇಕು. ಫಿನಿಷರ್​​ಗಳು.

ಡೇವಿಡ್ ಮಿಲ್ಲರ್

ಟಿಮ್ ಡೇವಿಡ್

ಶೆರ್ಫೇನ್ ರುದರ್‌ಫೋರ್ಡ್

ರೊಮಾರಿಯೋ ಶೆಫರ್ಡ್

ವಿಷ್ಣು ವಿನೋದ್

ಮಾರ್ಕಸ್ ಸ್ಟೊಯಿನಿಸ್

ರೋಲ್ ನಂಬರ್ 4: ಬ್ಯಾಟಿಂಗ್ ಜೊತೆಗೆ ಮಿಂಚುವ ಸ್ಪಿನ್ನರ್​ಗಳು

ವಾಷಿಂಗ್ಟನ್ ಸುಂದರ್

ಹರ್‌ಪ್ರೀತ್ ಬ್ರಾರ್

ಕೃನಾಲ್ ಪಾಂಡ್ಯ

ಅಕೇಲ್ ಹೊಸೈನ್

ಕೇಶವ ಮಹಾರಾಜ್

ಶಹಬಾಜ್ ಅಹ್ಮದ್

ರೋಲ್​ ನಂಬರ್ 5: ಒಬ್ಬ ನಿಜವಾದ ವಿಕೆಟ್-ಟೇಕರ್ ಒಬ್ಬ ಮಣಿಕಟ್ಟಿನ ಸ್ಪಿನ್ನರ್ ಬೇಕು.

ಯುಜ್ವೇಂದ್ರ ಚಹಲ್

ನೂರ್ ಅಹ್ಮದ್

ಮಹೇಶ್ ತೀಕ್ಷಣ

ಮಾಯಾಂಕ್ ಮಾರ್ಕಾಂಡೆ

ಸುಯಾಶ್ ಶರ್ಮಾ

ರೋಲ್ ನಂಬರ್ 6: ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್​​​ಗಳಲ್ಲಿ ವಿಕೆಟ್​ ಪಡೆಯುವ ಬೌಲರ್​​ಗಳು.

ಅವೇಶ್ ಖಾನ್

ಪ್ರಸಿದ್ಧ್ ಕೃಷ್ಣ

ಜೋಶ್ ಹೇಜಲ್​ವುಡ್

ಕುಲದೀಪ್ ಸೇನ್

ಯಶ್ ಠಾಕೂರ್

ರೋಲ್ ನಂಬರ್ 7: ಡೆತ್-ಓವರ್ಸ್ ಸ್ಪೆಷಲಿಸ್ಟ್. ಆರ್​ಸಿಬಿಗೆ ಬೇಕಾದ ರೋಲ್ ಇದಾಗಿದೆ. ಕಳೆದ ಹಲವು ವರ್ಷಗಳಿಂದ ಇದೇ ಸಮಸ್ಯೆ ಎದುರಿಸಿ ಗೆಲ್ಲುವ ಪಂದ್ಯಗಳನ್ನು ಕೈಚೆಲ್ಲಿದೆ.

ಮೊಹಮ್ಮದ್ ಶಮಿ

ಹರ್ಷಲ್ ಪಟೇಲ್

ಮಿಚೆಲ್ ಸ್ಟಾರ್ಕ್​

ಮುಸ್ತಫಿಜುರ್ ರೆಹಮಾನ್

ಟಿ ನಟರಾಜನ್

ಅರ್ಷದೀಪ್ ಸಿಂಗ್

Whats_app_banner