ಕನ್ನಡ ಸುದ್ದಿ  /  ಕ್ರಿಕೆಟ್  /  ಸೂಸೈಡ್ ಮಾಡಿಕೊಂಡ ಭಾರತೀಯ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಯಾರು; ಕನ್ನಡಿಗನ ಕ್ರಿಕೆಟ್​ ಸಾಧನೆ ಹೇಗಿದೆ?

ಸೂಸೈಡ್ ಮಾಡಿಕೊಂಡ ಭಾರತೀಯ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಯಾರು; ಕನ್ನಡಿಗನ ಕ್ರಿಕೆಟ್​ ಸಾಧನೆ ಹೇಗಿದೆ?

Who Is David Johnson : ಟೀಮ್ ಇಂಡಿಯಾ ಹಾಗೂ ಕರ್ನಾಟಕ ತಂಡದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ನಿಧನರಾಗಿದ್ದಾರೆ. ಅವರ ಕ್ರಿಕೆಟ್ ಸಾಧನೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ಸೂಸೈಡ್ ಮಾಡಿಕೊಂಡ ಭಾರತೀಯ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಯಾರು; ಕನ್ನಡಿಗನ ಕ್ರಿಕೆಟ್​ ಸಾಧನೆ ಹೇಗಿದೆ?
ಸೂಸೈಡ್ ಮಾಡಿಕೊಂಡ ಭಾರತೀಯ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಯಾರು; ಕನ್ನಡಿಗನ ಕ್ರಿಕೆಟ್​ ಸಾಧನೆ ಹೇಗಿದೆ?

ಭಾರತ ತಂಡದ ಹಾಗೂ ಕರ್ನಾಟಕದ ಮಾಜಿ ವೇಗಿ ಡೇವಿಡ್ ಜಾನ್ಸನ್ (Who Is David Johnson) ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. 1996ರಲ್ಲೇ ಆಸ್ಟ್ರೇಲಿಯಾ ವಿರುದ್ಧದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಗಂಟೆಗೆ 157.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು ಮಾಜಿ ವೇಗಿ.

ಬೆಂಗಳೂರಿನ ಕೊತ್ತನೂರು ಬಳಿಯ ಅಪಾರ್ಟ್​ಮೆಂಟ್​ನಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳಿಂದ ಕುಡಿತದ ಚಟಕ್ಕೆ ದಾಸರಾಗಿದ್ದ ಡೇವಿಡ್ ಜಾನ್ಸನ್​ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಾಜಿ ವೇಗದ ಬೌಲರ್​​​ಗೆ ಟೀಮ್ ಇಂಡಿಯಾ ದಿಗ್ಗಜ ಸ್ಪಿನ್ನರ್​ ಅನಿಲ್ ಕುಂಬ್ಳೆ ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ಸಹ ಆಟಗಾರ ಡೇವಿಡ್ ಜಾನ್ಸನ್ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ನಮ್ಮನ್ನು ಬಿಟ್ಟು ಬೇಗ ಹೊರಟು ಬಿಟ್ಟರೆ ಬೆನ್ನಿ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಿಸಿಸಿಐ ಕಾರ್ಯದರ್ಶಿ ಜೈ ಶಾ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. 'ಭಾರತದ ಮಾಜಿ ವೇಗದ ಬೌಲರ್ ಡೇವಿಡ್ ಜಾನ್ಸನ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಅವರು ಕ್ರಿಕೆಟ್‌ಗೆ ನೀಡಿದ ಕೊಡುಗೆ ಶಾಶ್ವತವಾಗಿ ಸ್ಮರಣೀಯವಾಗಿದೆ ಎಂದು ಬರೆದಿದ್ದಾರೆ.

ಡೇವಿಡ್ ಜಾನ್ಸನ್ ಕ್ರಿಕೆಟ್ ವೃತ್ತಿಜೀವನ

ಕರ್ನಾಟಕದ ವೇಗಿ ಜಾನ್ಸನ್ 1996ರಲ್ಲಿ ದೇಶೀಯ ಸರ್ಕ್ಯೂಟ್‌ನಲ್ಲಿ ಶ್ರೇಷ್ಠ ಪ್ರದರ್ಶನದಿಂದಾಗಿ ಭಾರತ ತಂಡದಲ್ಲಿ ಅವಕಾಶ ಪಡೆದರು. 1995-96ರಲ್ಲಿ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ 152ಕ್ಕೆ 10 ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನದ ನಂತರ ಭಾರತ ತಂಡಕ್ಕೂ ಆಯ್ಕೆಯಾದರು.

ನಂತರ ಅವರು ಅಕ್ಟೋಬರ್ 1996ರಲ್ಲಿ ಹೊಸ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ (ಈಗ ಅರುಣ್ ಜೇಟ್ಲಿ ಕ್ರೀಡಾಂಗಣ) ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​​ ಕ್ರಿಕೆಟ್​ಗೆ ಪದಾರ್ಪಣೆಗೈದರು. ಆ ಪಂದ್ಯದಲ್ಲಿ ಜಾವಗಲ್ ಶ್ರೀನಾಥ್ ಗಾಯಗೊಂಡ ಕಾರಣ ತಂಡದಲ್ಲಿ ಅವಕಾಶ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳು ಮುಖ್ಯವಾಗಿ ಬೌಲಿಂಗ್ ಮಾಡಿದ ಕಾರಣ ಜಾನ್ಸನ್ ಕೇವಲ 4 ಓವರ್‌ಗಳನ್ನು ಬೌಲ್ ಮಾಡುವ ಅವಕಾಶ ಪಡೆದಿದ್ದರು. ಆದಾಗ್ಯೂ, 2ನೇ ಇನ್ನಿಂಗ್ಸ್​​ನಲ್ಲಿ 12 ಓವರ್‌ ಬೌಲ್ ಮಾಡಿ 40 ರನ್ ನೀಡಿ 1 ವಿಕೆಟ್ ಪಡೆದರು.

ಆಸ್ಟ್ರೇಲಿಯಾದ ಸ್ಟಾರ್ ಮೈಕಲ್ ಸ್ಲೇಟರ್ ಅವರನ್ನು ಔಟ್ ಮಾಡಿದ್ದರು. ಒಟ್ಟಾರೆಯಾಗಿ, ಜಾನ್ಸನ್ ಚೊಚ್ಚಲ ಟೆಸ್ಟ್‌ನಲ್ಲಿ 16 ಓವರ್‌ಗಳನ್ನು ಬೌಲ್ ಮಾಡಿ ಒಂದು ವಿಕೆಟ್ ಪಡೆದರು. ಆ ಪಂದ್ಯದಲ್ಲಿ ಕುಂಬ್ಳೆ ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ್ದರು. ಈ ಸರಣಿಯಲ್ಲಿ ಜಾನ್ಸನ್ 157.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಒಂದು ವಾರದ ನಂತರ ಡರ್ಬನ್‌ನಲ್ಲಿ ನಡೆದ ಜಾನ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ, ಇದೇ ಅವರ ಪಾಲಿಗೆ ಕೊನೆಯ ಪಂದ್ಯವಾಗಿದೆ. ಮೊದಲ ಇನಿಂಗ್ಸ್‌ನಲ್ಲಿ 15 ಓವರ್‌ಗಳಲ್ಲಿ 52 ರನ್ ನೀಡಿ ಎರಡು ವಿಕೆಟ್ ಪಡೆದರು.

ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ಓವರ್‌ಗಳನ್ನು ಬೌಲ್ ಮಾಡಿದರು. ಆದರೆ ಯಾವುದೇ ವಿಕೆಟ್ ಪಡೆಯಲಿಲ್ಲ. ಅಂದಿನಿಂದ, ಜಾನ್ಸನ್ ಭಾರತೀಯ ಜೆರ್ಸಿಯನ್ನು ಧರಿಸಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿಲ್ಲ.

ಮತ್ತೆ ಅವಕಾಶವೇ ಕೊಡಲಿಲ್ಲ

ದೇಶೀಯ ಕ್ರಿಕೆಟ್​ನಲ್ಲಿ ಡೇವಿಡ್ ಜಾನ್ಸನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ 39 ಪಂದ್ಯಗಳಲ್ಲಿ 437 ರನ್​ ಗಳಿಸಿದ್ದು, 125 ವಿಕೆಟ್ ಪಡೆದಿದ್ದಾರೆ. ಇನ್ನು ಲಿಸ್ಟ್​ ಎ ಕ್ರಿಕೆಟ್​ನಲ್ಲಿ 33 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 118 ರನ್ ಗಳಿಸಿ 41 ವಿಕೆಟ್​ ಕಿತ್ತಿದ್ದಾರೆ.

ಬೌಲಿಂಗ್​​ನಲ್ಲಿ ಅತ್ಯುತ್ತಮ ಸಾಧನೆ ತೋರಿದ್ದರೂ ಜಾನ್ಸನ್​ಗೆ ಟೀಮ್ ಇಂಡಿಯಾ ಪರ ಎರಡೇ ಪಂದ್ಯಗಳಿಗೆ ಅವಕಾಶ ಸೀಮಿತಗೊಳಿಸಿದ್ದು ಅಚ್ಚರಿ ಮೂಡಿಸಿತ್ತು. ಕುಡಿತಕ್ಕೆ ಚಟಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.