ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ವಿಂಡೀಸ್​ ನಡುವಿನ 1997ರ ಟೆಸ್ಟ್ ನೆನಪಿಸಿದ ವರದಿಗಾರ; ಕೆರಳಿ ಕೆಂಡವಾದ ರಾಹುಲ್ ದ್ರಾವಿಡ್

ಇಂಡೋ-ವಿಂಡೀಸ್​ ನಡುವಿನ 1997ರ ಟೆಸ್ಟ್ ನೆನಪಿಸಿದ ವರದಿಗಾರ; ಕೆರಳಿ ಕೆಂಡವಾದ ರಾಹುಲ್ ದ್ರಾವಿಡ್

Rahul Dravid: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ 2024 ಸೂಪರ್​-8 ಪಂದ್ಯಕ್ಕೂ ಮುನ್ನಾದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವರದಿಗಾರನೊಬ್ಬನ ಪ್ರಶ್ನೆಗೆ ರಾಹುಲ್ ದ್ರಾವಿಡ್ ಗರಂ ಆಗಿದ್ದಾರೆ.

ಇಂಡೋ-ವಿಂಡೀಸ್​ ನಡುವಿನ 1997ರ ಟೆಸ್ಟ್ ನೆನಪಿಸಿದ ವರದಿಗಾರ; ಕೆರಳಿ ಕೆಂಡವಾದ ರಾಹುಲ್ ದ್ರಾವಿಡ್
ಇಂಡೋ-ವಿಂಡೀಸ್​ ನಡುವಿನ 1997ರ ಟೆಸ್ಟ್ ನೆನಪಿಸಿದ ವರದಿಗಾರ; ಕೆರಳಿ ಕೆಂಡವಾದ ರಾಹುಲ್ ದ್ರಾವಿಡ್

2024ರ ಟಿ20 ವಿಶ್ವಕಪ್ ಸೂಪರ್​​ 8 ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಸೆಣಸಾಟಕ್ಕೂ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಡ್​ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು, ಪತ್ರಕರ್ತರೊಬ್ಬರ ಪ್ರಶ್ನೆಗೆ ಕೋಪಗೊಂಡಿದ್ದಾರೆ. 1997ರಲ್ಲಿ ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್​ ಪಂದ್ಯದ ಕುರಿತು ಪ್ರಶ್ನೆ ಅದಾಗಿತ್ತು. ಆ ಪ್ರಶ್ನೆ ಕೇಳಿದ ಬೆನ್ನಲ್ಲೇ ದ್ರಾವಿಡ್ ಕೆರಳಿ ಕೆಂಡವಾಗಿದ್ದಾರೆ.

ಅಪರೂಪಕ್ಕೊಮ್ಮೆ ತಾಳ್ಮೆ ಕಳೆದುಕೊಳ್ಳುವ ದ್ರಾವಿಡ್, ಈ ಬಾರಿ ಕೋಪಗೊಂಡಿದ್ದಾರೆ. ಅಲ್ಲದೆ, 27 ವರ್ಷಗಳ ಸೋಲಿನ ನೋವನ್ನು ನೆನಪಿಸಿದ ವರದಿಗಾರನಿಗೆ ಸಿಟ್ಟಿನೊಂದಿಗೆ ಖಡಕ್ಕಾಗಿಯೇ ಉತ್ತರ ಕೊಟ್ಟಿದ್ದಾರೆ. ಅಂದು 1997ರಲ್ಲಿ ಕೆನ್ಸಿಂಗ್ಟನ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ಟೆಸ್ಟ್ ನಡೆದಿತ್ತು. ಈ ಪಂದ್ಯದಲ್ಲಿ ದ್ರಾವಿಡ್ ಮೊದಲ ಇನ್ನಿಂಗ್ಸ್​ನಲ್ಲಿ 78 ಮತ್ತು ಎರಡನೇ ಇನ್ನಿಂಗ್ಸ್​​ನಲ್ಲಿ 2 ರನ್​ ಗಳಿಸಿದ್ದರು. ಆದರೆ ಪಂದ್ಯ 38 ರನ್ನಿಂದ ಭಾರತ ಸೋತಿತ್ತು.

ಅಂದು ಭಾರತ ಮುಜುಗರದ ಸೋಲು ಅನುಭವಿಸಿದ್ದನ್ನು ಕೆದಕಿ ಕಿಚಾಯಿಸಲು ಯತ್ನಿಸಿದರು. ಇದೀಗ ಆಫ್ಘಾನಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಸೂಪರ್​​-8 ಕದನವೂ ಇದೇ ಮೈದಾನದಲ್ಲಿ ನಡೆಯುವ ಕಾರಣ ವರದಿಗಾರರೊಬ್ಬರು ಈ ಪ್ರಶ್ನೆ ಕೇಳಿದ್ದಾರೆ. ಆದರೆ, ರಿಪೋರ್ಟರ್ ಕೇಳಿದ ಪ್ರಶ್ನೆ ದಾಟಿ ಸರಿಯಿರಲಿಲ್ಲ. ಹಾಗಾಗಿ ದ್ರಾವಿಡ್ ಕೋಪಗೊಂಡರು.

ಟ್ರೆಂಡಿಂಗ್​ ಸುದ್ದಿ

ರಾಹುಲ್, ನೀವು ಆಟಗಾರನಾಗಿ ಈಗಾಗಲೇ ಆಡಿದ್ದೀರಿ. 1997ರ ಟೆಸ್ಟ್‌ ನೆನಪಿದ್ಯಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕೋಪದಲ್ಲೇ ಉತ್ತರಿಸಿದ ರಾಹುಲ್ ದ್ರಾವಿಡ್, ಧನ್ಯವಾದಗಳು ಗೆಳೆಯ. ನಾನು ಕೆಲ ವಿಷಯಗಳಿಂದ ಬೇಗನೇ ಹೊರಗೆ ಬರುತ್ತೇನೆ. ನಾನು ಯಾವುದೇ ವಿಷಯಗಳನ್ನು ಬೇಗನೇ ಮರೆಯುತ್ತೇನೆ. ನಡೆದು ಹೋದ ಘಟನೆಗಳ ಬಗ್ಗೆ ಈಗ ಚಿಂತಿಸಿ ಫಲವಿಲ್ಲ. ಅದು ನನ್ನ ವಿಶೇಷತೆ. ಅಂದಿನ ಪಂದ್ಯದ ಕುರಿತು ಈಗೇಕೆ ಚಿಂತಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಇಷ್ಟು ಹೇಳಿದರೂ ಮತ್ತೆ ಅದೇ ವರದಿಗಾರ ಮತ್ತೊಂದು ಕೊಂಕು ಪ್ರಶ್ನೆ ಕೇಳಿದರು. ಗುರುವಾರ (ಜೂನ್ 20) ಇಲ್ಲಿ ಅತ್ಯುತ್ತಮ ನೆನಪುಗಳನ್ನು ಸೃಷ್ಟಿಸುತ್ತೀರಾ? ಎಂದು ಕೇಳಿದ್ದಾರೆ. ಇದಕ್ಕೆ ಮತ್ತೆ ಕೋಪದಲ್ಲೇ ಉತ್ತರಿಸಿದ ದ್ರಾವಿಡ್, ದೇವರೇ, ನಾನೇನು ಹೊಸದನ್ನು ಮಾಡಲು ಪ್ರಯತ್ನಿಸುವುದಿಲ್ಲ ಎಂದು ಖಾರವಾಗಿ ಹೇಳಿದ್ದಾರೆ. ಅಲ್ಲಿಗೆ ಆ ವರದಿಗಾರ ಸುಮ್ಮನಾದರು. ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ ಇದೆ.

ವೆಸ್ಟ್ ಇಂಡೀಸ್​ನ​ ಸ್ಪಿನ್​ ಸ್ನೇಹಿ ಮತ್ತು ಸ್ಲೋ ಪಿಚ್​​​ ಆಗಿರುವ ಕಾರಣ ಟೀಮ್ ಮ್ಯಾನೇಜ್​ಮೆಂಟ್​ ಮತ್ತೊಬ್ಬ ಸ್ಪಿನ್ನರ್​​ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದುವರೆಗೂ ಮ್ಯಾಜಿಕ್ ಮಾಡದ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟು ಕುಲ್ದೀಪ್ ಯಾದವ್ ಅಥವಾ ಯುಜ್ವೇಂದ್ರ ಚಹಲ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಯಾವುದೇ ಬದಲಾವಣೆ ಅಸಾಧ್ಯ. ರೋಹಿತ್​-ಕೊಹ್ಲಿಯೇ ಇನಿಂಗ್ಸ್​ ಆರಂಭಿಸಬಹುದು.

ಅಫ್ಘಾನಿಸ್ತಾನ ತಂಡವನ್ನು ಕಡಿಮೆ ಅಂದಾಜಿಸಲ್ಲ ಎಂದ ದ್ರಾವಿಡ್

ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನ ತಂಡವನ್ನು ಸುಲಭವಾಗಿ ಪರಿಗಣಿಸುವುದಿಲ್ಲ. ಟಿ20ಐ ಕ್ರಿಕೆಟ್ ಸ್ವರೂಪದಲ್ಲಿ ಅತ್ಯಂತ ಡೇಂಜರಸ್ ತಂಡವಾಗಿದೆ. ಹಾಲಿ ವಿಶ್ವಕಪ್​ನಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡಿದ್ದೇವೆ. ಆಫ್ಘನ್​ಗೆ ಹೆಚ್ಚಿನ ಅಂತಾರಾಷ್ಟ್ರೀಯ ಅನುಭವ ಇಲ್ಲದಿದ್ದರೂ ತಂಡದ ಕೆಲವರು ನಮ್ಮವರಿಗಿಂತ ಅತಿಹೆಚ್ಚು ಟಿ20 ಲೀಗ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಫ್ಘಾನಿಸ್ತಾನವನ್ನು ಹಗುವಾಗಿ ಪರಿಗಣಿಸಲ್ಲ ಎಂದಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ