ಕನ್ನಡ ಸುದ್ದಿ  /  Cricket  /  Wpl 2024 Gujarat Giants Opt To Bat Vs Royal Challengers Bangalore Womens Premier League Beth Mooney Smriti Mandhana Jra

ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ ಆಯ್ಕೆ ಮಾಡಿದ ಗುಜರಾತ್‌ ಜೈಂಟ್ಸ್‌; ಇಂದಿನ ಪಂದ್ಯಕ್ಕೂ ಶ್ರೇಯಾಂಕಾ ಪಾಟೀಲ್‌ ಅಲಭ್ಯ

ವಿಮೆನ್ಸ್‌ ಪ್ರೀಮಿಯರ್‌ ಲೀಗ್ ಎರಡನೇ ಆವೃತ್ತಿಯಲ್ಲಿ‌ ಎರಡನೇ ಬಾರಿಗೆ ಗುಜರಾತ್‌ ಜೈಂಟ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನೂ ಗೆಲುವಿನ ಖಾತೆಯನ್ನೇ ತೆರೆಯದ ಬೆತ್‌ ಮೂನಿ ಪಡೆ ಆರ್‌ಸಿಬಿ ವಿರುದ್ಧ ಗೆದ್ದು, ಗೆಲುವಿನ ಖಾತೆ ತೆರೆಯುವ ಉತ್ಸಾಹದಲ್ಲಿದೆ.

ಆರ್‌ಸಿಬಿ ಮತ್ತು ಗುಜರಾತ್‌ ಜೈಂಟ್ಸ್‌ ಪಂದ್ಯದ ಟಾಸ್‌ ಅಪ್ಡೇಟ್
ಆರ್‌ಸಿಬಿ ಮತ್ತು ಗುಜರಾತ್‌ ಜೈಂಟ್ಸ್‌ ಪಂದ್ಯದ ಟಾಸ್‌ ಅಪ್ಡೇಟ್ (PTI)

ವಿಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಎರಡನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ (Gujarat Giants vs Royal Challengers Bangalore Women) ವನಿತೆಯರ ತಂಡಗಳು ಎರಡನೇ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಇದುವರೆಗೂ ಗೆಲುವೇ ಕಾಣದ ಬೆತ್‌ ಮೂನಿ ಪಡೆ, ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ಬೆತ್‌ ಮೂನಿ ಪಡೆ ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಇಂದಿನ ಪಂದ್ಯಕ್ಕೆ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯುತ್ತಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್‌ ಮತ್ತೆ ಹೊರಗುಳಿದಿದ್ದಾರೆ. ಅತ್ತ ಗುಜರಾತ್‌ ತಂಡ ಒಂದು ಬದಲಾವಣೆ ಮಾಡಿದೆ.

ಪ್ರಸಕ್ತ ಆವೃತ್ತಿಯಲ್ಲಿ ಗುಜರಾತ್‌ ಜೈಂಟ್ಸ್‌ ಇನ್ನೂ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಸೋತಿರುವ ತಂಡವು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಟೂರ್ನಿಯ ನಾಕೌಟ್‌ ಹಂತಕ್ಕೇರಲು ಮುಂದಿನ ಎಲ್ಲಾ ಪಂದ್ಯಗಳನ್ನು ತಂಡ ಗೆಲ್ಲಲೇಬೇಕಾದ ಅನಿವಾರ್ಯವಿದೆ. ಪ್ರತಿ ಪಂದ್ಯವೂ ಬೆತ್ ಮೂನಿ ಪಡೆಗೆ ನಿರ್ಣಾಯಕವಾಗಿದ್ದು, ಇಂದು ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗುತ್ತದೆ.

ಮುಖಾಮುಖಿ ದಾಖಲೆ

ಡಬ್ಲ್ಯೂಪಿಎಲ್ ಸೀಸನ್ 1ರ ಮೊದಲ ಮುಖಾಮುಖಿಯಲ್ಲಿ ಗುಜರಾತ್‌ ತಂಡ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ ಸೇಡಿನ ಎರಡನೇ ಸಮರದಲ್ಲಿ ಬೆಂಗಳೂರು ಜಯಭೇರಿ ಬಾರಿಸಿತ್ತು. ಆ ಪಂದ್ಯದಲ್ಲಿ ಸೋಫಿ ಡಿವೈನ್‌ ದಾಖಲೆಯ 99 ರನ್‌ ಗಳಿಸಿದ್ದರು. ಗುಜರಾತ್‌ ಜೈಂಟ್ಸ್‌ ವಿರುದ್ಧ ಈ ಸೀಸನ್‌ನ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೀಗಾಗಿ ಜಿಜಿ ವಿರುದ್ಧ ಆರ್‌ಸಿಬಿಯು 2-1 ಅಂತರದ ಗೆಲುವಿನ ದಾಖಲೆ ಹೊಂದಿದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಗುಜರಾತ್‌ ಜೈಂಟ್ಸ್‌ ಮತ್ತು ಆರ್‌ಸಿಬಿ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಆರ್‌ಸಿಬಿ ಆಡುವ ಬಳಗ

ಸಬ್ಬಿನೇನಿ ಮೇಘನಾ, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಸೋಫಿ ಡಿವೈನ್, ಸೋಫಿ ಮೊಲಿನ್, ಜಾರ್ಜಿಯಾ ವೇರ್‌ಹ್ಯಾಮ್, ಏಕ್ತಾ ಬಿಶ್ತ್, ಸಿಮ್ರಾನ್ ಬಹದ್ದೂರ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್.

ಗುಜರಾತ್ ಜೈಂಟ್ಸ್ ಆಡುವ ಬಳಗ

ಬೆತ್ ಮೂನಿ‌ (ನಾಯಕಿ ಮತ್ತು ವಿಕೆಟ್‌ ಕೀಪರ್), ಲಾರಾ ವೊಲ್ವಾರ್ಡ್ಟ್, ಫೋಬೆ ಲಿಚ್‌ಫೀಲ್ಡ್, ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ಆಶ್ಲೀಗ್ ಗಾರ್ಡ್ನರ್, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್, ಶಬ್ನಮ್ ಎಂಡಿ ಶಕಿಲ್.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)