ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 1000 ರನ್‌ ಗಡಿ ದಾಟಿದ ಜೈಸ್ವಾಲ್;‌ ಹಲವು ರೆಕಾರ್ಡ್ ಬ್ರೇಕ್;‌ ಹೀಗಿದೆ ದಾಖಲೆಗಳ ಪಟ್ಟಿ-yashasvi jaiswal second fastest indian to complete 1000 runs in test cricket india vs england 5th test records jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 1000 ರನ್‌ ಗಡಿ ದಾಟಿದ ಜೈಸ್ವಾಲ್;‌ ಹಲವು ರೆಕಾರ್ಡ್ ಬ್ರೇಕ್;‌ ಹೀಗಿದೆ ದಾಖಲೆಗಳ ಪಟ್ಟಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 1000 ರನ್‌ ಗಡಿ ದಾಟಿದ ಜೈಸ್ವಾಲ್;‌ ಹಲವು ರೆಕಾರ್ಡ್ ಬ್ರೇಕ್;‌ ಹೀಗಿದೆ ದಾಖಲೆಗಳ ಪಟ್ಟಿ

Yashasvi Jaiswal: ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ ಅವರು, ಒಂದೇ ಸರಣಿಯಲ್ಲಿ 700ಕ್ಕೂ ಅಧಿಕ ರನ್‌ ಕಲೆ ಹಾಕಿದ್ದಾರೆ. ಈ ನಡುವೆ 1000ಕ್ಕೂ ಅಧಿಕ ಟೆಸ್ಟ್‌ ರನ್‌ಗಳನ್ನು ವೇಗವಾಗಿ ಪೂರ್ಣಗೊಳಿಸಿದ್ದಾರೆ. ಈ ವೇಳೆ ಅವರು ನಿರ್ಮಿಸಿರುವ ದಾಖಲೆಗಳ ಪಟ್ಟಿ ಹೀಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 1000 ರನ್‌ ಗಡಿ ದಾಟಿದ ಜೈಸ್ವಾಲ್
ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 1000 ರನ್‌ ಗಡಿ ದಾಟಿದ ಜೈಸ್ವಾಲ್ (REUTERS)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ (India vs England 5th Test) ಸರಣಿಯಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (Yashasvi Jaiswal) ದಾಖಲೆಯ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಸತತ ಎರಡು ದ್ವಿಶತಕ ಸಿಡಿಸಿ ಮಿಂಚಿದ್ದ ಜೈಸ್ವಾಲ್‌, ಆಂಗ್ಲರ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್ ಗಡಿ ದಾಟಿದ ಅವರು, ವೇಗವಾಗಿ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಪಂದ್ಯದಲ್ಲಿ ಹಲವು ಹಳೆಯ ದಾಖಲೆಗಳನ್ನು ಮುರಿದಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಜೈಸ್ವಾಲ್‌ 700ಕ್ಕೂ ಅಧಿಕ ರನ್‌ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.

ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತದ ಪರ ಆರಂಭಿಕರಾಗಿ ನಾಯಕ ರೋಹಿತ್‌ ಶರ್ಮಾ ಮತ್ತು ಜೈಸ್ವಾಲ್‌ ಕಣಕ್ಕಿಳಿದರು. ಇನ್ನಿಂಗ್ಸ್‌ನ 14.3ನೇ ಎಸೆತದಲ್ಲಿ ಶೋಯೆಬ್ ಬಶೀರ್ ಎಸೆತದಲ್ಲಿ ಜೈಸ್ವಾಲ್‌ ಬೌಂಡರಿ ಬಾರಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್ ಪೂರ್ಣಗೊಳಿಸಿದರು. ಭಾರತದ ಪರ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ರನ್‌ ಪೂರೈಸಿದ ಎರಡನೇ ಬ್ಯಾಟರ್‌ ಎಂಬ ದಾಖಲೆಯನ್ನು ಇದೀಗ ಜೈಸ್ವಾಲ್‌ ನಿರ್ಮಿಸಿದ್ದಾರೆ ಅವರು, 16 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಕೇವಲ 14 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿರುವ ವಿನೋದ್ ಕಾಂಬ್ಳಿ ಅಗ್ರಸ್ಥಾನದಲ್ಲಿದ್ದಾರೆ.

ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ಟೆಸ್ಟ್ ರನ್‌ ಗಳಿಸಿದ ಭಾರತೀಯರು

  • 14 - ವಿನೋದ್ ಕಾಂಬ್ಳಿ
  • 16 - ಯಶಸ್ವಿ ಜೈಸ್ವಾಲ್
  • 18 - ಚೇತೇಶ್ವರ ಪೂಜಾರ
  • 19 - ಮಯಾಂಕ್ ಅಗರ್ವಾಲ್
  • 21 - ಸುನಿಲ್ ಗವಾಸ್ಕರ್

‌ಇದನ್ನೂ ಓದಿ | ಲಂಡನ್‌ನಿಂದ ಮರಳಿ ಎನ್‌ಸಿಎ ಹಾಜರಾದ ಕೆಎಲ್‌ ರಾಹುಲ್;‌ ಟಿ20 ವಿಶ್ವಕಪ್‌ಗೆ ವಿಕೆಟ್ ಕೀಪರ್ ಆಗಿ ಮುಂಚೂಣಿಯಲ್ಲಿ ಕನ್ನಡಿಗ

ಇದೇ ವೇಳೆ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ವೇಗವಾಗಿ 1000 ಟೆಸ್ಟ್ ರನ್‌ ಗಳಿಸಿದ ಐದನೇ ಆಟಗಾರ ಎಂಬ ದಾಖಲೆಯನ್ನು ಜೈಸ್ವಾಲ್ ನಿರ್ಮಿದ್ದಾರೆ. ಅಲ್ಲದೆ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಸುನಿಲ್ ಗವಾಸ್ಕರ್ ಮತ್ತು ಚೇತೇಶ್ವರ್ ಪೂಜಾರ ತಲಾ 11 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಕೇವಲ 9 ಪಂದ್ಯಗಳಲ್ಲೇ ಜೈಸ್ವಾಲ್‌ ಯಶಸ್ವಿಯಾಗಿ ಮೈಲಿಗಲ್ಲು ತಲುಪಿದ್ದಾರೆ.

ಕಡಿಮೆ ಪಂದ್ಯಗಳಲ್ಲಿ ವೇಗವಾಗಿ 1000 ಟೆಸ್ಟ್ ರನ್‌ ಗಳಿಸಿದ ಆಟಗಾರರು

  • 7 - ಡಾನ್ ಬ್ರಾಡ್ಮನ್
  • 9 - ಎವರ್ಟನ್ ವೀಕ್ಸ್
  • 9 - ಹರ್ಬರ್ಟ್ ಸಟ್ಕ್ಲಿಫ್
  • 9 - ಜಾರ್ಜ್ ಹೆಡ್ಲಿ
  • 9 - ಯಶಸ್ವಿ ಜೈಸ್ವಾಲ್

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಟೆಸ್ಟ್‌ನಲ್ಲಿ 1000 ರನ್‌ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಭಾರತೀಯ ಆಟಗಾರ

  • ಸಚಿನ್ ತೆಂಡೂಲ್ಕರ್ -19 ವರ್ಷ, 217 ದಿನಗಳು
  • ಕಪಿಲ್ ದೇವ್ -21 ವರ್ಷ, 27 ದಿನಗಳು
  • ರವಿಶಾಸ್ತ್ರಿ -21 ವರ್ಷ, 197 ದಿನಗಳು
  • ಯಶಸ್ವಿ ಜೈಸ್ವಾಲ್ -22 ವರ್ಷ 70 ದಿನಗಳು
  • ದಿಲೀಪ್ ವೆಂಗ್‌ಸರ್ಕರ್ -22 ವರ್ಷ, 293 ದಿನಗಳು

1000 ಟೆಸ್ಟ್ ರನ್‌ ಗಳಿಕೆ ವೇಳೆ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಭಾರತೀಯರು

  • 83.33 - ವಿನೋದ್ ಕಾಂಬ್ಳಿ
  • 71.43 - ಚೇತೇಶ್ವರ ಪೂಜಾರ
  • 71.43 - ಯಶಸ್ವಿ ಜೈಸ್ವಾಲ್
  • 62.5 - ಸುನಿಲ್ ಗವಾಸ್ಕರ್
  • 55.56 - ಮಯಾಂಕ್ ಅಗರ್ವಾಲ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point