ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll Result: ಆಂಧ್ರಪ್ರದೇಶದಲ್ಲಿ ಎನ್‌ಡಿಎಗೆ ಬಹುಮತ, ಟಿಡಿಪಿ ಮೈತ್ರಿಗೆ ಜನರ ಒಲವು; ಹೀಗಿದೆ ಎಕ್ಸಿಟ್‌ ಪೋಲ್‌ ಫಲಿತಾಂಶ

Exit Poll Result: ಆಂಧ್ರಪ್ರದೇಶದಲ್ಲಿ ಎನ್‌ಡಿಎಗೆ ಬಹುಮತ, ಟಿಡಿಪಿ ಮೈತ್ರಿಗೆ ಜನರ ಒಲವು; ಹೀಗಿದೆ ಎಕ್ಸಿಟ್‌ ಪೋಲ್‌ ಫಲಿತಾಂಶ

ಲೋಕಸಭಾ ಚುನಾವಣೆ 2024ರ ಅಂತಿಮ ಹಂತದ ಮತದಾನ ಮುಗಿದು ಇದೀಗ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದಿದ್ದೆ. ಪ್ರಮುಖ ಎಕ್ಸಿಟ್‌ ಪೋಲ್‌ ಸಂಸ್ಥೆಗಳು ಆಂಧ್ರಪ್ರದೇಶದಲ್ಲಿ ಆರಂಭದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಮೇಲೈ ಸಾಧಿಸಬಹುದು ಎಂದು ಅಂದಾಜಿಸಿದ್ದರೂ ನಂತರದ ಸಮೀಕ್ಷೆಯ ಪ್ರಕಾರ ಎನ್‌ಡಿಎ ಬಹುಮತ ಪಡೆದಿದೆ.

Exit Poll Result: ಆಂಧ್ರಪ್ರದೇಶದಲ್ಲಿ ಮೇಲುಗೈ ಸಾಧಿಸಿದ ವೈಎಸ್‌ಆರ್‌ ಕಾಂಗ್ರೆಸ್‌;
Exit Poll Result: ಆಂಧ್ರಪ್ರದೇಶದಲ್ಲಿ ಮೇಲುಗೈ ಸಾಧಿಸಿದ ವೈಎಸ್‌ಆರ್‌ ಕಾಂಗ್ರೆಸ್‌;

ಆಂಧ್ರಪ್ರದೇಶದಲ್ಲಿ 2024ರ ಲೋಕಸಭಾ ಚುನಾವಣೆ ಮೇ 13 ರಂದು ನಡೆದಿತ್ತು. 18 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 25 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜೂನ್‌ 4 ರಂದು ಚುನಾವಣಾ ಫಲಿತಾಂಶ ಹೊರ ಬರಲಿದೆ. ಆಕ್ಸಿಸ್‌ ಮೈ ಇಂಡಿಯಾ, ಸಿ ವೋಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಎಬಿಪಿ ನ್ಯೂಸ್‌-ಸಿವೋಟರ್‌, ಟೈಮ್ಸ್‌ ನೌ, ನ್ಯೂಸ್‌ 18 ಐಬಿಎಸ್‌ಒಎಸ್‌, ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌, ಟುಡೇಸ್‌ ಚಾಣಾಕ್ಯ ಚುನಾವಣಾ ಸಮೀಕ್ಷೆ ಹೊರಬಿದ್ದಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಟಿಡಿಪಿ ಮೈತ್ರಿ ಪಕ್ಷಗಳ ನಡುವೆ ತೀವ್ರ ಪೈಪೋಟಿಯ ನಡುವೆ ಯಾರು ಮೇಲುಗೈ ಸಾಧಿಸಬಹುದು ಎಂದು ಕುತೂಹಲ ಈಗ ಕೊಂಚ ತಣ್ಣಗಾಗಿದೆ. ಆದರೆ ಎಕ್ಸಿಟ್‌ ಪೋಲ್‌ ಫಲಿತಾಂಶವೇ ಅಂತಿಮ ಎಂದೇನಲ್ಲ.

ಟ್ರೆಂಡಿಂಗ್​ ಸುದ್ದಿ

2024ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಟಿಪಿಡಿ ಮೈತ್ರಿ ಸರ್ಕಾರಗಳ ನಡುವೆ ತೀವ್ರ ಪೈಪೋಟಿ ಇದ್ದು ಇಂದಿನ ಎಕ್ಸಿಟ್‌ ಪೋಲ್‌ ಫಲಿತಾಂಶದ ಪ್ರಕಾರ ವೈಎಸ್‌ಆರ್‌ ಪಕ್ಷ 13 ಸ್ಥಾನ ಗಳಿಸುವ ಮೇಲುಗೈ ಸಾಧಿಸಿದೆ. ಎರಡನೇ ಸ್ಥಾನದಲ್ಲಿರುವ ಟಿಡಿಪಿ 12 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಉಳಿದ ಪಕ್ಷಗಳು ಯಾವುದೇ ಸ್ಥಾನಗಳಿಸಿಲ್ಲ. 

ಆಂಧ್ರಪ್ರದೇಶದಲ್ಲಿ ಸೀ-ವೋಟರ್‌ ಸಮೀಕ್ಷೆ ಪ್ರಕಾರ ಎನ್‌ಡಿಎ 21-25, ವೈಎಸ್‌ಆರ್‌ಪಿಸಿ 0-4, ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು 0 ಸ್ಥಾನ ಗಳಿಸಬಹುದು ಎಂದು ಹೇಳಲಾಗುತ್ತಿದೆ.

ಜನ್‌ ಕೀ ಬಾತ್‌ ಸಮೀಕ್ಷೆಯ ಪ್ರಕಾರ ಆಂಧ್ರಪ್ರದೇಶದಲ್ಲಿ ಬಿಜೆಪಿ 2-3, ಟಿಡಿಪಿ 10-14 ಹಾಗೂ ವೈಎಸ್‌ಆರ್‌ಸಿಪಿ 13-8 ಸೀಟುಗಳು ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವು ಹಿಂದಿನ ಬಾರಿ (2019 ರಲ್ಲಿ) ಗೆದ್ದಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದರು. "ಕಳೆದ ಬಾರಿ ಗೆದ್ದಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆದ್ದ ಪಕ್ಷವು ಈ ಬಾರಿ ಇತಿಹಾಸವನ್ನು ಸೃಷ್ಟಿಸುತ್ತದೆ...ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಭರಾಟೆ ಖಚಿತ ಮತ್ತು ಜೂನ್ 4 ರಂದು ಫಲಿತಾಂಶವು ಇಡೀ ದೇಶವನ್ನು ಎದ್ದುನಿಂತು ಆಂಧ್ರಪ್ರದೇಶದತ್ತ ನೋಡುವಂತೆ ಮಾಡುತ್ತದೆʼ ಎಂದು ಪತ್ರಿಕಾಗೋಷ್ಟಿಯಲ್ಲಿ ಜಗನ್‌ ಹೇಳಿದ್ದರು.

ಆದರೆ ಎಕ್ಸಿಟ್‌ ಪೋಲ್‌ನ ಅಂತಿಮ ಹಂತದ ಫಲಿತಾಂಶಗಳನ್ನು ನೋಡಿದಾಗ ಆಂಧ್ರಪ್ರದೇಶದಲ್ಲಿ ಈ ಬಾರಿ ಎನ್‌ಡಿಎ ಮೇಲುಗೈ ಸಾಧಿಸುವ ಸಾಧ್ಯತೆ ಎದ್ದು ಕಾಣುತ್ತಿದೆ. ಸಮೀಕ್ಷೆಗಳ ಒಟ್ಟು ಲೆಕ್ಕಾಚಾರದ ಪ್ರಕಾರ ಆಂಧ್ರಪ್ರದೇಶದಲ್ಲಿ ಎನ್‌ಡಿಎ 19 ರಿಂದ 25 ಸ್ಥಾನ ಗಳಿಸಬಹುದು ಎನ್ನಲಾಗುತ್ತಿದೆ. 

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು