ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರು, ವೋಟರ್ ಐಡಿ ಸಿಕ್ತಾ ಇಲ್ವಾ, ಈ 12 ದಾಖಲೆಗಳಲ್ಲಿ ಒಂದಿದ್ದರೂ ಸಾಕು

ಲೋಕಸಭಾ ಚುನಾವಣೆ ಪ್ರಕ್ರಿಯೆ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ. ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಇಂದು (ಏಪ್ರಿಲ್ 26) ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗೆ ವೋಟರ್ ಐಡಿ ಮರೆತು ಬಂದರೂ, ಬೂತ್ ಸ್ಲಿಪ್ ಸಿಗದೇ ಇದ್ದರೂ ಚಿಂತೆ ಮಾಡಬೇಕಾಗಿಲ್ಲ. ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.
ಲೋಕಸಭಾ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ. (@ceo_karnataka)

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಏಪ್ರಿಲ್ 16) ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನಕ್ಕೆ ಹೊರಡುವಾಗ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹುಡುಕಿದರೆ ಕೈಗೆ ಸಿಗದೇ ಇರುವುದು, ಮತಗಟ್ಟೆ ತಲುಪಿದಾಗ ಮತದಾರರ ಗುರುತಿನ ಚೀಟಿ ಕೈಯಲ್ಲಿ ಇಲ್ಲ ಎಂದು ಪೇಚಿಗೆ ಸಿಲುಕುವುದು ಸರ್ವೇ ಸಾಮಾನ್ಯ.

ಇಂತಹ ಸಮಸ್ಯೆಗೆಲ್ಲ ತಲೆಕೆಡಿಸಿಕೊಳ್ಳಬೇಡಿ. ಮತಗಟ್ಟೆಗೆ ನಿಮ್ಮ ವೋಟರ್ ಐಡಿ ತರಲು ನೀವು ಮರೆತಿದ್ದೀರಾ? ಚಿಂತೆ ಬೇಡ, ಈ ಸಂದರ್ಭದಲ್ಲಿ ಮತ ಚಲಾಯಿಸಲು ಬಳಸಬಹುದಾದ 12 ಪರ್ಯಾಯ ದಾಖಲೆಗಳು ಇಲ್ಲಿವೆ. ಮತಗಟ್ಟೆಯಲ್ಲಿ ಯಾವುದಾದರು ಒಂದು ದಾಖಲೆಯನ್ನು ತೋರಿಸಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬಹುದು ನೋಡಿ.

ಮತದಾರರ ಯಾದಿಯಲ್ಲಿ ಹೆಸರಿದ್ದು, ವೋಟರ್‌ ಐಡಿ ಇಲ್ಲದಿದ್ದರೆ ಬಳಕೆಯಾಗುವ ದಾಖಲೆಗಳಿವು

1. ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್‌)

2. ಆಧಾರ್ ಕಾರ್ಡ್

3. ಚಾಲನಾ ಪರವಾನಗಿ

4. ಪ್ಯಾನ್ ಕಾರ್ಡ್

5. ಆರ್‌ಜಿಐನಡಿ ಎನ್‌ಪಿಐ ಮೂಲಕ ವಿತರಿಸುವ ಸ್ಮಾರ್ಟ್‌ ಕಾರ್ಡ್‌

6. ವಿಶೇಷ ಚೇತನರ ವಿಶೇಷ ಗುರುತಿನ ಚೀಟಿ (ಯುಡಿಐಡಿ)

7. ಪಿಂಚಣಿ ದಾಖಲೆ

8. ಸೇವಾ ಗುರುತಿನ ಚೀಟಿ

9. ಸಂಸದರು/ ಶಾಸಕರು/ ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ

10. ಭಾವಚಿತ್ರ ಇರುವಂತಹ ಬ್ಯಾಂಕ್/ ಅಂಚೆ ಕಚೇರಿಯ ಪಾಸ್‌ಪುಸ್ತಕ

11. ಎಂಎನ್‌ಆರ್‌ಇಜಿಎ (ನರೇಗಾ) ಉದ್ಯೋಗ ಗುರುತಿನ ಚೀಟಿ

12. ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ (ಕಾರ್ಮಿಕ ಇಲಾಖೆ)

ಮತಗಟ್ಟೆಗಳಲ್ಲಿರುವ ಸೌಲಭ್ಯಗಳಿವು, ಎಸ್‌ಎಂಎಸ್‌ ಮೂಲಕ ಬೂತ್ ಸ್ಲಿಪ್ ಪಡೆಯುವುದು ಹೀಗೆ

ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುವ ವೇಳೆ ಯಾವುದೇ ಅಡ್ಡಿಗಳಾಗಬಾರದು. ಅವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಚುನಾವಣಾ ಆಯೋಗವು ಕೆಲವು ಸೌಲಭ್ಯಗಳನ್ನು ಒದಗಿಸಿದೆ. ಮುಖ್ಯವಾಗಿ ಶುದ್ಧ ಕುಡಿಯುವ ನೀರು, ಹೆಲ್ಪ್‌ ಡೆಸ್ಕ್‌, ಸುಸಜ್ಜಿತ ಪೀಠೋಪಕರಣಗಳು, ವಿದ್ಯುತ್ ಸೌಲಭ್ಯ, ರಾಂಪ್ ಸೌಲಭ್ಯ, ಶೌಚಾಲಯ, ಸೂಚನಾ ಫಲಕ, ಪಾರ್ಕಿಂಗ್ ಸೌಲಭ್ಯಗಳನ್ನು ಆಯೋಗ ಒದಗಿಸಿದೆ. ವಿಶೇಷ ಮತಗಟ್ಟೆಗಳನ್ನೂ ಸ್ಥಾಪಿಸಿರುವ ಆಯೋಗ, ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ಖಾಸಗಿ ಸಂಸ್ಥೆಗಳ ನೆರವನ್ನೂ ಪಡೆದುಕೊಂಡಿದೆ.

ಪ್ರಸ್ತುತ ಲೋಕಸಭೆಯ ಚುನಾವಣೆ ರಾಜ್ಯದಲ್ಲಿ‌ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತದಲ್ಲಿ‌ ಮತದಾನ ನಡೆಯಲಿದ್ದು ಒಟ್ಟು 5.47 ಕೋಟಿ ಮತದಾರರಿದ್ದು, ಒಟ್ಟು 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅದರಲ್ಲಿ 1832 ವಿವಿಧ ವಿಷಯವಾರು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ಮತದಾನ ಮಾಡಲು ತಯಾರಾಗಿದ್ದೀರ? ಹಾಗಾದರೆ ಈಗ ನಿಮ್ಮ ಬೂತ್ ಸ್ಲಿಪ್ ಅನ್ನು SMS ಮೂಲಕ ಪಡೆಯುರಿ, ತಪ್ಪದೆ ನಿಮ್ಮ ಮತ ಚಲಾಯಿಸಿ.

ಇಂದು (ಏಪ್ರಿಲ್ 26) ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಿವು

ಬೆಂಗಳೂರು ಉತ್ತರ

ಬೆಂಗಳೂರು ದಕ್ಷಿಣ

ಬೆಂಗಳೂರು ಕೇಂದ್ರ

ಬೆಂಗಳೂರು ಗ್ರಾಮಾಂತರ

ಚಿಕ್ಕಬಳ್ಳಾಪುರ

ಕೋಲಾರ

ತುಮಕೂರು

ಚಿತ್ರದುರ್ಗ

ಚಾಮರಾಜನಗರ

ಮೈಸೂರು - ಕೊಡಗು

ಮಂಡ್ಯ

ಹಾಸನ

ದಕ್ಷಿಣ ಕನ್ನಡ

ಉಡುಪಿ - ಚಿಕ್ಕಮಗಳೂರು

(This copy first appeared in Hindustan Times Kannada website. To read more like this please logon to kannada.hindustantimes.com)