ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕರಿಸಿದೆ ಕರ್ನಾಟಕ ವಿಧಾನಸಭೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕರಿಸಿದೆ ಕರ್ನಾಟಕ ವಿಧಾನಸಭೆ

ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕರಿಸಿದೆ ಕರ್ನಾಟಕ ವಿಧಾನಸಭೆ

Karnataka Assembly Session: ಆದಾಯ ಹೆಚ್ಚಳದ ಕಡೆಗೆ ಗಮನಹರಿಸಿರುವ ಕರ್ನಾಟಕ ಸರ್ಕಾರ ಮಂಗಳವಾರ (ಡಿಸೆಂಬರ್ 17) ವಾಹನ ತೆರಿಗೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ವಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಾಗಾಗಿ ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಬಹುದು.

ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದೆ.
ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದೆ. (Meta AI Image)

Karnataka Assembly Session: ಕರ್ನಾಟಕದಲ್ಲಿ ಹೊಸ ಕಾರು ಅಥವಾ ಹೊಸ ಬೈಕ್ ಖರೀದಿಸುವ ಆಲೋಚನೆಯಲ್ಲಿದ್ದೀರಾ, ಇಲ್ಲೊಂದು ಕಹಿ ಸುದ್ದಿ ಇದೆ. ಸರ್ಕಾರಿ ಬೊಕ್ಕಸದ ಆದಾಯ ಹೆಚ್ಚಿಸುವುದಕ್ಕಾಗಿ ಹೊಸ ಕಾರು ಮತ್ತು ಬೈಕ್‌ಗಳ ಖರೀದಿ ಮೇಲೆ 500 ರೂಪಾಯಿಯಿಂದ 1000 ರೂಪಾಯಿ ತನಕ ಸೆಸ್ ವಿಧಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ (2ನೇ ತಿದ್ದುಪಡಿ) ಮಸೂದೆಯನ್ನು ಕರ್ನಾಟಕ ವಿಧಾನಸಭೆ ನಿನ್ನೆ (ಡಿಸೆಂಬರ್ 17) ಅಂಗೀಕರಿಸಿದೆ. ವಿಪಕ್ಷ ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸೆಸ್ ವಿಧಿಸುವುದಕ್ಕೆ ಅಗತ್ಯವಾದ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದೆ.

ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ

ಬೆಳಗಾವಿಯಲ್ಲಿ ಕರ್ನಾಟಕ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ನಿನ್ನೆ (ಡಿಸೆಂಬರ್ 17) ಕರ್ನಾಟಕ ಮೋಟಾರು ವಾಹನ ತೆರಿಗೆ (2ನೇ ತಿದ್ದುಪಡಿ) ಮಸೂದೆ ಅಂಗೀಕಾರವಾಗಿದೆ. ಇದರಂತೆ, ಹೊಸ ಕಾರು ಮತ್ತು ಬೈಕ್ ಖರೀದಿಸಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಮಾಡಿಸುವಾಗ ಸರ್ಕಾರಕ್ಕೆ ಸೆಸ್ ರೂಪದಲ್ಲಿ 500 ರೂಪಾಯಿಯಿಂದ 1000 ರೂಪಾಯಿ ಪಾವತಿಸಬೇಕಾಗುತ್ತದೆ. ಇದು ಒಂದು ಸಲದ ಶುಲ್ಕವಾಗಿರಲಿದೆ. ವಿಪಕ್ಷ ಬಿಜೆಪಿ, ಜೆಡಿಎಸ್‌ ಸದಸ್ಯರ ತೀವ್ರ ವಿರೋಧದ ನಡುವೆ ಈ ಮಸೂದೆ ಅಂಗೀಕಾರವಾಗಿದೆ. ದ್ವಿಚಕ್ರ ವಾಹನಗಳಿಗೆ 500 ರೂಪಾಯಿ ಮತ್ತು ಖಾಸಗಿ ವಾಹನ ಅಂದರೆ ಸಾರಿಗೆಯೇತರ ಕಾರುಗಳ ಖರೀದಿ ವೇಳೆ 1000 ರೂಪಾಯಿ ಸೆಸ್ ವಿಧಿಸಲು ಸರ್ಕಾರ ತೀರ್ಮಾನಿಸಿದೆ.

ಬಿಜೆಪಿ ಸದಸ್ಯರ ಒಂದು ಬಣ ಈ ಮಸೂದೆಯನ್ನು ಸೋಲಿಸಬೇಕು ಎಂದು ಮಸೂದೆಯನ್ನು ಮತಕ್ಕೆ ಹಾಕುವಂತೆ ಆಗ್ರಹಿಸಿದರು. ಆದರೆ ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಆದಾಗ್ಯೂ, ಸ್ಪೀಕರ್‌ ಯುಟಿ ಖಾದರ್ ಅವರು ಈ ಮಸೂದೆಯನ್ನು ಮತಕ್ಕೆ ಹಾಕಲು ಉತ್ಸಾಹ ತೋರಲಿಲ್ಲ.

ಹೊಸ ಕಾರು, ಹೊಸ ಬೈಕ್‌ಗಳ ಮೇಲೆ ಹೆಚ್ಚುವರಿ ಸೆಸ್; ಯಾರು ಏನು ಹೇಳಿದರು

ವಿಧೇಯಕವನ್ನು ಮಂಡಿಸಿದ ಕಾನೂನು ಸಚಿವ ಎಚ್‌ಕೆ ಪಾಟೀಲ್, ಹೆಚ್ಚುವರಿ ಸೆಸ್ ಅನ್ನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಅಲೈಡ್ ವರ್ಕರ್ಸ್ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ಬಳಸಲಾಗುವುದು, ಇದು ಬಸ್, ಕ್ಯಾಬ್ ಮತ್ತು ಆಟೋ ರಿಕ್ಷಾ ಚಾಲಕರ ಒಳಿತಿಗಾಗಿ ಪೂರೈಕೆಯಾಗುತ್ತದೆ ಎಂದು ಹೇಳಿದರು.

ನಾಗರಿಕರು ಈಗಾಗಲೇ ತೆರಿಗೆ ಹೊರೆ ಅನುಭವಿಸುತ್ತಿದ್ದಾರೆ. ಇಂಧನ ತೆರಿಗೆ ಹೆಚ್ಚಳ ಮಾಡಿಯಾಗಿದೆ. ಈಗ ವಾಹನಗಳ ಮೇಲೆ ಹೆಚ್ಚುವರಿ ಸೆಸ್ ಯಾಕೆ ವಿಧಿಸುತ್ತಿದ್ದೀರಿ? ನಾಗರಿಕರ ಮೇಲೆ ಇನ್ನಷ್ಟು ಹೊರೆ ಹೇರಬೇಡಿ ಎಂದು ವಿಪಕ್ಷ ನಾಯಕ ಆರ್ ಅಶೋಕ ಅವರು ಆಗ್ರಹಿಸಿದರು.

ಸಂಗ್ರಹವಾಗುವ ಸೆಸ್‌ಗೆ ಹೊಂದಾಣಿಕೆಯ ಅನುದಾನ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಸರ್ಕಾರವನ್ನು ಒತ್ತಾಯಿಸಿದರು.

ಆನ್‌ಲೈನ್ ಗೇಮ್ ನಿಷೇಧಕ್ಕೆ ಒತ್ತಾಯ: ಆನ್​ಲೈನ್ ಗೇಮ್‌ಗಳನ್ನು ನಿಷೇಧಿಸುವಂತೆ ವಿಧಾನಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪವಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಆನ್‌ಲೈನ್ ರಮ್ಮಿ, ಬೆಟ್ಟಿಂಗ್ ಆ್ಯಪ್​ಗಳಿಗೆ ಯಾವುದಕ್ಕೂ ಪರವಾನಗಿ ಇಲ್ಲ. ಬೆಂಗಳೂರಿನಲ್ಲಿ 5, ವಿಜಯನಗರದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಸ್‌ಗಳು ದಾಖಲಾಗ್ತಿವೆ. ಕೋರ್ಟ್ ಸ್ಟೇ ಇದೆ. ಅದನ್ನು ತೆರವು ಮಾಡಿಸ್ತೇವೆ. ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕ ಕಾನೂನು ತರುತ್ತೇವೆ ಎಂದು ಹೇಳಿದರು.

ಸಿವಿಲ್ ಪ್ರಕರಣ ಬೇಗ ಇತ್ಯರ್ಥಕ್ಕೆ ಆಗ್ರಹ: ಸಿವಿಲ್ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ಸಿವಿಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯಕ್ಕಾಗಿ ಸಿವಿಲ್ ಪ್ರೊಸೀಜರ್ ಕೋಡ್ (ಕರ್ನಾಟಕ ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯು ಅಂಗೀಕರಿಸಿತು.

"ಸಿವಿಲ್ ಪ್ರಕರಣಗಳಲ್ಲಿ, ನಮ್ಮ ಪ್ರಕರಣಗಳು ಯಾವಾಗ ಮುಗಿಯುತ್ತವೆ ಎಂದು ನಮಗೆ ತಿಳಿದಿಲ್ಲ. ಇದು 10-20 ವರ್ಷಗಳನ್ನು ತೆಗೆದುಕೊಳ್ಳಬಹುದು. ವಾಣಿಜ್ಯ ನ್ಯಾಯಾಲಯಗಳಲ್ಲಿ, ಸಮಯದ ವೇಳಾಪಟ್ಟಿ ಸ್ಪಷ್ಟವಾಗಿದೆ. ಹಾಗಾಗಿ ವಾಣಿಜ್ಯ ನ್ಯಾಯಾಲಯಗಳಲ್ಲಿ ಇರುವಂತೆ ಸಿವಿಲ್ ವ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು,’’ ಎಂದು ವಿಧೇಯಕವನ್ನು ಮಂಡಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಕರ್ನಾಟಕದಲ್ಲಿ 9.85 ಲಕ್ಷ ಸಿವಿಲ್ ವಿವಾದಗಳು ಬಾಕಿ ಇವೆ.

Whats_app_banner