Animated Movies: ವಾರಾಂತ್ಯಕ್ಕೆ ನೋಡಲು ಬೆಸ್ಟ್ ಅನಿಮೇಟೆಡ್ ಮೂವಿಗಳ ಪಟ್ಟಿ ಇಲ್ಲಿದೆ; ಮಕ್ಕಳ ಜೊತೆ ನೀವೂ ವೀಕ್ಷಿಸಿ
OTTಯಲ್ಲಿ ಅನೇಕ ಮನರಂಜನೆಯ ಅನಿಮೇಟೆಡ್ ಚಲನಚಿತ್ರಗಳಿವೆ. ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಂತಹ OTT ಗಳಲ್ಲಿ ನಿಮ್ಮ ಮಕ್ಕಳೊಂದಿಗೆ ನೀವೂ ಸಹ ಈ ಚಲನಚಿತ್ರಗಳನ್ನು ವೀಕ್ಷಿಸಬಹುದು. ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಈ ವಾರಾಂತ್ಯದಲ್ಲಿ ಇವುಗಳನ್ನು ನೋಡಿ.
ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಮಕ್ಕಳು ಅಥವಾ ವಯಸ್ಕರು ಎಂಬುದನ್ನು ಲೆಕ್ಕಿಸದೆ ಎಲ್ಲರೂ ಒಟ್ಟಿಗೆ ಕೂತು ನೋಡಬಹುದಾದ ಅನೇಕ ಅನಿಮೇಟೆಡ್ ಮೂವಿಗಳು ಲಭ್ಯವಿದೆ. ಮಕ್ಕಳು ಮಾತ್ರವಲ್ಲ ಈ ಕಾಲದಲ್ಲಿ ಎಲ್ಲರೂ ಇಷ್ಟಪಟ್ಟು ಈ ರೀತಿ ಮೂವಿಗಳನ್ನು ನೋಡುತ್ತಾರೆ. ನಿಮಗೂ ಈ ರೀತಿ ಅನಿಮೇಟೆಡ್ ಮೂವಿಗಳನ್ನು ನೋಡುವ ಮನಸಿದ್ದರೆ ನಾವಿಲ್ಲಿ ನೀಡಲಾದ ಸಿನಿಮಾಗಳನ್ನು ನೋಡಿ. ಇದು ನಿಮಗೆ ಖುಷಿ ಕೊಡಬಹುದು.
ಇನ್ಸೈಡ್ ಔಟ್
ಇನ್ಸೈಡ್ ಔಟ್ 2015ರಲ್ಲಿ ಹುಟ್ಟಿಕೊಂಡ ಒಂದು ಕಲ್ಪನೆ. ಅನಿಮೇಟೆಡ್ ಸಿನಿಮಾವಾದರೂ ಒಂದು ಕುಟುಂಬದ ಎಲ್ಲ ಭಾವನೆಗಳನ್ನು ಇದು ಒಳಗೊಂಡಿದೆ. ಮಕ್ಕಳೊಂದಿಗೆ ನೋಡಲೇಬೇಕಾದ ಚಿತ್ರವಿದು. ನೀವು ಈ ಚಲನಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಕಾರ್ಲ್ ಫ್ರೆಡ್ರಿಕ್ಸನ್
ಕಾರ್ಲ್ ಫ್ರೆಡ್ರಿಕ್ಸನ್ ಎಂಬ ಬಲೂನ್ ಮಾರಾಟಗಾರನ ಮನೆಯು ಅದೇ ಬಲೂನ್‌ಗಳ ಸಹಾಯದಿಂದ ದಕ್ಷಿಣ ಅಮೆರಿಕಾಕ್ಕೆ ಹಾರುತ್ತದೆ. ಆ ನಂತರ ಏನಾಯಿತು ಎಂಬುದು ನೀವು ಈ ಚಲನಚಿತ್ರದಲ್ಲಿ ನೋಡುತ್ತೀರಿ. ತುಂಬಾ ಭಾವನೆಗಳನ್ನು ತನ್ನೊಳಗಡೆ ಅಡಗಿಸಿಕೊಂಡಿರುವ ಈ ಚಿತ್ರ ಕಾಮಿಡಿಯನ್ನೂ ಹೊಂದಿದೆ. ಮಕ್ಕಳು ಖಂಡಿತ ಇದನ್ನು ಇಷ್ಟಪಟ್ಟು ನೋಡುತ್ತಾರೆ. ಈ ಕ್ಲಾಸಿಕ್ ಅನಿಮೇಟೆಡ್ ಚಲನಚಿತ್ರವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
ದಿ ಲಯನ್ ಕಿಂಗ್
ದಿ ಲಯನ್ ಕಿಂಗ್ 1994 ರಲ್ಲಿ ಹುಟ್ಟಿಕೊಂಡ ಕಥೆ. ಇದು ಒಂದು ಉತ್ತಮ ಅನಿಮೇಟೆಡ್ ಚಲನಚಿತ್ರವಾಗಿದೆ. 2019ರಲ್ಲಿ ಈ ಸಿನಿಮಾ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿತ್ತು. ಈ ಕಥೆ ಸಿಂಬಾ ಎಂಬ ಸಿಂಹದ ಸುತ್ತ ಸುತ್ತುತ್ತದೆ. ಮಕ್ಕಳು ಅದನ್ನು ಆನಂದಿಸುತ್ತಾರೆ. ನೀವು ಈ ಚಲನಚಿತ್ರವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಇನ್ನು ಈ ಸಿನಿಮಾ ಥಿಯೇಟರ್‌ಗಳಲ್ಲೂ ಪ್ರದರ್ಶನಗೊಂಡು ಸಾಕಷ್ಟು ಜನಮನ್ನಣೆ ಗಳಿಸಿತ್ತು. ಇಂದಿಗೂ ಸಾಕಷ್ಟು ಜನ ಈ ಸಿನಿಮಾವನ್ನು ನೋಡಲು ಆಸಕ್ತರಾಗಿದ್ದಾರೆ. ನೀವು ಈ ಚಿತ್ರವನ್ನು ಮನೆಯಲ್ಲೇ ಕುಳಿತು ನೋಡಲು ಬಯಸಿದರೆ ಡಿಸ್ನಿ ಹಾಟ್‌ಸ್ಟಾರ್ ಮೂಲಕ ನೋಡಬಹುದು.
ವಿಭಾಗ