ಬಣ್ಣ ಬಣ್ಣದ ಕಥೆ ಕಟ್ಟಿದ ಚೈತ್ರಾ ಕುಂದಾಪುರ; ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ
ಕನ್ನಡ ಸುದ್ದಿ  /  ಮನರಂಜನೆ  /  ಬಣ್ಣ ಬಣ್ಣದ ಕಥೆ ಕಟ್ಟಿದ ಚೈತ್ರಾ ಕುಂದಾಪುರ; ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ

ಬಣ್ಣ ಬಣ್ಣದ ಕಥೆ ಕಟ್ಟಿದ ಚೈತ್ರಾ ಕುಂದಾಪುರ; ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ

ಚೈತ್ರಾ ಕುಂದಾಪುರ ಅವರ ಬಗ್ಗೆ ಮನೆಯಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಹುಟ್ಟಿಕೊಂಡಿದ್ದು, ಮನೆಯಿಂದ ಹೊರ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಮನೆಯೊಳಗಡೆ ಹೋದಾಗಿನಿಂದ ಚೈತ್ರಾ ಅವರ ಮಾತಿನ ದಾಟಿಯೂ ಬದಲಾಗಿದೆ.

ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ
ಉಗ್ರಂ ಮಂಜು ಭವ್ಯಾ ಗೌಡ ನಡುವೆ ಮಾತಿನ ಸ್ಫೋಟಕ್ಕೆ ಕಾರಣವಾದ ಚೈತ್ರಾ

ಬಿಗ್‌ ಬಾಸ್‌ನಲ್ಲಿ ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸಾಕಷ್ಟು ರೀತಿಯಲ್ಲಿ ವಾರ್ನ್ ಮಾಡಲಾಗಿದೆ. ಆದರೆ ಅವರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ಹೇಳಿ ಮನೆ ತುಂಬಾ ಒಂದು ಬೇರೆ ರೀತಿಯ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಅವರು ಆಡಿದ ಮಾತಿನಿಂದ ಅವರು ನಡೆದುಕೊಂಡ ರೀತಿಯಿಂದ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದೆ. ಡಾಕ್ಟರ್ ಹತ್ತಿರ ಮನೆಯ ಬಗ್ಗೆ ಅಭಿಪ್ರಾಯಗಳನ್ನು ಕೇಳಿಕೊಂಡು ಅದನ್ನು ಮನೆಯಲ್ಲಿ ತಾನು ಹೇಳಿದ್ದೇನೆ, ಹೊರಗಡೆ ಏನಾಗುತ್ತಿದೆ ಎಂಬ ವಿಚಾರವನ್ನು ನಿಮಗೆಲ್ಲ ತಿಳಿಸುತ್ತಿದ್ದೇನೆ ಎಂದು ಚೈತ್ರಾ ಸ್ಪರ್ಧಿಗಳನ್ನು ಗೊಂದಲಕ್ಕೀಡು ಮಾಡಿದ್ದಾರೆ.

ಇದೇ ವಿಚಾರವಾಗಿ ಮಾತುಕತೆ ನಡೆಯುತ್ತದೆ. ಮನೆಯ ಹೊರಗಡೆ ಮಾತುಕತೆ ನಡೆಸುವುದೇ ತಪ್ಪು, ಅದರಲ್ಲೂ ಮಾತಾಡಿದ ನಂತರದಲ್ಲಿ ಅದನ್ನು ತಂದು ಮನೆಯವರ ಮೇಲೆ ಹೇರಿಕೆ ಮಾಡಿರುವುದು ಇನ್ನೂ ದೊಡ್ಡ ತಪ್ಪು ಎಂದು ಸುದೀಪ್ ಅವರು ಮನವರಿಕೆ ಮಾಡಿಕೊಡಲು ಪ್ರಯತ್ನಸಿದ್ದಾರೆ. ಆದರೆ ಈ ಮಾತಿನ ಗಾಯ ಮನೆಮಂದಿ ಮೇಲೆ ತುಂಬಾ ದೊಡ್ಡ ಪರಿಣಾಮವನ್ನೇ ಬೀರಿದೆ. ನೀತಿ ಕಥೆಯ ರೂಪದಲ್ಲಿ ಒಂದೂರಲ್ಲಿ ಒಬ್ಬ ರಾಜ ಇದ್ದ, ಒಬ್ಬ ಸೇವಕಿ ಇದ್ಲು ಅವರ ನಡುವೆ ಸಂಬಂಧ ಬೆಳಿತು ಎನ್ನುವ ರೀತಿಯಲ್ಲಿ ಕಥೆ ಹೇಳಿದ್ದರು.

ಅದಾದ ನಂತರದಲ್ಲಿ ವಾರದ ಪಂಚಾಯ್ತಿಯಲ್ಲೂ ಸುದೀಪ್ ಅವರು ಒಂದು ತೋಳದ ಕಥೆಯನ್ನು ಹೇಳಿ ಚೈತ್ರಾ ಎನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿಕೊಟ್ಟಿದ್ದರು. ಚೈತ್ರಾ ಉಗ್ರಂ ಮಂಜು ಅವರ ಬಳಿ ಕಥೆ ಹೇಳಿದ್ದ ಕಾರಣ ಉಗ್ರಂ ಮಂಜು ಅವರ ಬಳಿ ಪಾತ್ರಗಳ ವಿವರಣೆಯನ್ನು ಸುದೀಪ್ ಕೇಳಿದ್ದರು, ಆಗ ಉಗ್ರಂ ಮಂಜು ತ್ರಿವಿಕ್ರಂ ಮತ್ತು ಭವ್ಯಾ ಈ ಕಥೆಯಲ್ಲಿ ಬರುತ್ತಾರೆ ಎಂದಿದ್ದರು.

ಅದಾದ ನಂತರ ಒಂದು ಬ್ರೇಕ್ ಇರುತ್ತದೆ. ಬ್ರೇಕ್ ಸಮಯದಲ್ಲಿ ಭವ್ಯಾ ಅವರು ನೀವು ಯಾಕೆ ನನ್ನ ಹೆಸರನ್ನು ಹೇಳಿದ್ದೀರಿ ಎಂದು ಕೋಗಾಡುತ್ತಾರೆ. ನನಗೂ ಮನೆ ಇದೆ, ನನಗೂ ಫ್ಯಾಮಿಲಿ ಇದೆ. ಯಾವಾಗಲೂ ನನ್ನ ಹೆಸರನ್ನು ವಿಕ್ರಂ ಹೆಸರಿನೊಂದಿಗೆ ಸೇರಿಸಬೇಡಿ ನನ್ನನ್ನು ಜನ ನೋಡುವ ರೀತಿ ಬದಲಾಗುತ್ತದೆ ಎಂದು ರೇಗಾಡಿದ್ದಾರೆ. ಈ ರೀತಿ ಕೂಗಾಡುವಾಗ ಉಗ್ರಂ ಮಂಜು ಅವರು ಸುಮ್ಮನಾಗಿದ್ದಾರೆ. ನಾನು ಉತ್ತರ ಕೊಡಬೇಕೋ? ಬೇಡ್ವೋ? ಎಂದಷ್ಟೇ ಕೇಳುತ್ತಾರೆ. ಆ ನಂತರ ಚೈತ್ರಾ ಅವರು ತಾನು ತಪ್ಪಿಸಿಕೊಳ್ಳುವ ಸಲುವಾಗಿ ನಾನು ಯಾರ ಹೆಸರನ್ನೂ ಹೇಳಿಲ್ಲ ಎಂದು ಹೇಳುತ್ತಾರೆ.

ಬಿಗ್‌ ಬಾಸ್‌ ಮನೆಯಿಂದ ಆಸ್ಪತ್ರೆ ಪಾಲಾಗಿ ಮರಳಿ ಬಿಗ್ ಮನೆಗೆ ಬಂದಿದ್ದ‌ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್‌ ವಾರದ ಕಥೆಯಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ, ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ನನಗೆ ಆಗ್ತಿಲ್ಲ. ಈಗಲೇ ನಾನು ಹೊರಡುವೆ ಎಂದಿ ಕ್ಯಾಮರಾ ಮುಂದೆ ಕಣ್ಣೀರಾಗಿದ್ದಾರೆ.

Whats_app_banner