12th Fail Trailer: ಒಂದು ವಿರಳ ಕಥೆ, ಬದುಕನ್ನೇ ಬದಲಿಸಿತು; 12ನೇ ತರಗತಿ ಫೇಲ್‌ ಆದವನು ಆಗಿದ್ದು IPS!
ಕನ್ನಡ ಸುದ್ದಿ  /  ಮನರಂಜನೆ  /  12th Fail Trailer: ಒಂದು ವಿರಳ ಕಥೆ, ಬದುಕನ್ನೇ ಬದಲಿಸಿತು; 12ನೇ ತರಗತಿ ಫೇಲ್‌ ಆದವನು ಆಗಿದ್ದು Ips!

12th Fail Trailer: ಒಂದು ವಿರಳ ಕಥೆ, ಬದುಕನ್ನೇ ಬದಲಿಸಿತು; 12ನೇ ತರಗತಿ ಫೇಲ್‌ ಆದವನು ಆಗಿದ್ದು IPS!

12th Fail Trailer: ವಿಧು ವಿನೋದ್‌ ಚೋಪ್ರಾ ನಿರ್ದೇಶನದ 12th ಫೇಲ್‌ ಸಿನಿಮಾ, ಟ್ರೇಲರ್‌ ಮೂಲಕ ಸದ್ದು ಮಾಡುತ್ತಿದೆ. ನೈಜ ಘಟನೆ ಆಧರಿಸಿ ನಿರ್ಮಾಣವಾದ ಈ ಸಿನಿಮಾ ಅಕ್ಟೋಬರ್ 27ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

12th Fail Trailer: ಒಂದು ವಿರಳ ಕಥೆ, ಬದುಕನ್ನೇ ಬದಲಿಸಿತು; 12ನೇ ತರಗತಿ ಫೇಲ್‌ ಆದವನು ಆಗಿದ್ದು IPS!
12th Fail Trailer: ಒಂದು ವಿರಳ ಕಥೆ, ಬದುಕನ್ನೇ ಬದಲಿಸಿತು; 12ನೇ ತರಗತಿ ಫೇಲ್‌ ಆದವನು ಆಗಿದ್ದು IPS!

12th Fail Trailer: ಬಾಲಿವುಡ್‌ ನಟ ವಿಕ್ರಾಂತ್‌ ಮೆಸ್ಸಿ ಹೊಸ ಸಿನಿಮಾ ಮೂಲಕ ಆಗಮಿಸಿದ್ದಾರೆ. ಆ ಚಿತ್ರದ ಹೆಸರು 12th ಫೇಲ್. ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ಸ್ಪೂರ್ತಿದಾಯಕ ವ್ಯಕ್ತಿಯ ಕಥೆ. ನಿಜ ಜೀವನದಲ್ಲಿ ಘಟಿಸಿದ ರಿಯಲ್‌ ಕಥೆ. ಈ ನೈಜ ಕಥೆಗೆ ಸಿನಿಮ್ಯಾಟಿಕ್‌ ಟಚ್‌ ಕೊಟ್ಟಿದ್ದಾರೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ವಿಧು ವಿನೋದ್‌ ಚೋಪ್ರಾ. ಈ ಸಿನಿಮಾದ ಟ್ರೇಲರ್‌ ಇದೀಗ ಸದ್ದು ಮಾಡುತ್ತಿದೆ. ಇನ್ನೇನು ಇದೇ ತಿಂಗಳು ಬಿಡುಗಡೆಗೂ ಸಿನಿಮಾ ಸಿದ್ಧವಾಗಿದೆ.

ವಿಕ್ರಾಂತ್‌ ಮೆಸ್ಸಿ ಬಾಲಿವುಡ್‌ನ ಯುವ ನಟ. ಈ ವರೆಗೂ ಇವರ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಉದಾಹರಣೆ ಇಲ್ಲ. ಇದೀಗ 12th ಫೇಲ್‌ ಸಿನಿಮಾ ಮೂಲಕ ಹಿಂದಿಯ ಜತೆಗೆ ಸೌತ್‌ ಸಿನಿಮಾ ಅಂಗಳಕ್ಕೂ ಆಗಮಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ರಿಲೀಸ್‌ ಮಾಡಲು ಚಿತ್ರದ ನಿರ್ಮಾಪಕರು ಪ್ಲಾನ್‌ ಮಾಡಿದ್ದಾರೆ.

12th ಫೇಲ್‍ ಚಿತ್ರವು ಅನುರಾಗ್‍ ಪಾಠಕ್‍ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್‍ ಆಗಿ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಜೀವನವನ್ನಾಧರಿಸಿ ಈ ಸಿನಿಮಾ ಮಾಡಲಾಗಿದೆ. ಕನ್ನಡದಲ್ಲಿ ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್‌ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಹೊತ್ತಿದೆ.

‘ಪರಿಂದಾ’, ‘1942 ಎ ಲವ್‍ ಸ್ಟೋರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ಮುನ್ನಾಭಾಯ್, ತಾರೇ ಜಮೀನ್‌ ಪರ್‌, 3 ಈಡಿಯೆಟ್ಸ್‌ ಸಿನಿಮಾಗಳನ್ನು ನೀಡಿದ ಬಾಲಿವುಡ್‌ನ ವಿಧು ವಿನೋದ್‍ ಚೋಪ್ರಾ ಅವರೊಂದಿಗೆ ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ ರಾಜ್‍ ಒಡೆತನದ ಕೆಆರ್‌ಜಿ ಸ್ಟುಡಿಯೋಸ್‍ ಕೈಜೋಡಿಸಿದೆ. ವಿಧು ವಿನೋದ್‍ ಚೋಪ್ರಾ ಅವರ 12th ಫೇಲ್‍ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ಅ. 27ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.

ಸಿನಿಮಾ, ಕಿರುತೆರೆ, ಒಟಿಟಿಯ ತಾಜಾ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' kannada.hindustantimes.com ವೆಬ್‌ಸೈಟ್ ನೋಡಿ

Whats_app_banner