ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌, ಆಕೆಯ ಬೈಸೆಪ್ಸ್‌ ಮಸಲ್ಸ್‌ ನೋಡಿ ದಂಗಾದ ಅಭಿಮಾನಿಗಳು; ವರ್ಕೌಟ್‌, ಡಯೆಟ್‌ನಲ್ಲಿ ಪುಷ್ಪ ನಟಿಗಿಲ್ಲ ಸಾಟಿ
ಕನ್ನಡ ಸುದ್ದಿ  /  ಮನರಂಜನೆ  /  ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌, ಆಕೆಯ ಬೈಸೆಪ್ಸ್‌ ಮಸಲ್ಸ್‌ ನೋಡಿ ದಂಗಾದ ಅಭಿಮಾನಿಗಳು; ವರ್ಕೌಟ್‌, ಡಯೆಟ್‌ನಲ್ಲಿ ಪುಷ್ಪ ನಟಿಗಿಲ್ಲ ಸಾಟಿ

ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌, ಆಕೆಯ ಬೈಸೆಪ್ಸ್‌ ಮಸಲ್ಸ್‌ ನೋಡಿ ದಂಗಾದ ಅಭಿಮಾನಿಗಳು; ವರ್ಕೌಟ್‌, ಡಯೆಟ್‌ನಲ್ಲಿ ಪುಷ್ಪ ನಟಿಗಿಲ್ಲ ಸಾಟಿ

Rashmika Mandanna Gym girl: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಂಬಾನಿ ಮದುವೆಯಲ್ಲಿ ಭಾಗವಹಿಸಿದ್ದರು. ಈ ಸಮಯದ ಆಕೆಯ ವಿಡಿಯೋವೊಂದು ವೈರಲ್‌ ಆಗಿದೆ. ಈಕೆಯ ಬೈಸೆಪ್ಸ್‌, ಮಸಲ್ಸ್‌ ನೋಡಿ "ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌" ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌, ಆಕೆಯ ಬೈಸೆಪ್ಸ್‌ ಮಸಲ್ಸ್‌ ನೋಡಿ ದಂಗಾದ ಅಭಿಮಾನಿಗಳು
ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌, ಆಕೆಯ ಬೈಸೆಪ್ಸ್‌ ಮಸಲ್ಸ್‌ ನೋಡಿ ದಂಗಾದ ಅಭಿಮಾನಿಗಳು

ಬೆಂಗಳೂರು: ರಶ್ಮಿಕಾ ಮಂದಣ್ಣ ಸೀರೆಯುಟ್ಟು ನಡೆದಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಆದರೆ, ಈ ವಿಡಿಯೋದಲ್ಲಿ ನೆಟ್ಟಿಗರು ಗಮನಿಸಿರುವುದೇ ಬೇರೆ. ಬೆನ್ನು ತಿರುಗಿಸಿ ನಟಿ ಸಾಗುವ ಸಂದರ್ಭದಲ್ಲಿ ಆಕೆಯ ತೋಳುಗಳ ಬೈಸೆಪ್ಸ್‌ ಮತ್ತು ಬೆನ್ನಿನ ಮಸಲ್ಸ್‌ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಕರ್ಷಕ ಮೈಮಾಟಕ್ಕಾಗಿ ಕರ್ನಾಟಕ ಮೂಲದ ನಟಿ ರಶ್ಮಿಕಾ ಮಂದಣ್ಣ ಅವರು ಕಠಿಣ ವರ್ಕೌಟ್‌ ಮಾಡುವುದಕ್ಕೆ ಸಾಕ್ಷಿ ಎನ್ನುವಂತೆ ಇದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣರ ವಿಡಿಯೋ ವೈರಲ್‌

ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದರು. ಆ ಸಮಯದಲ್ಲಿ ದುಬಾರಿ ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಈ ಸಮಯದಲ್ಲಿ ಕೆಲವರು ಈಕೆಯ ಬೈಸೆಪ್ಸ್‌ ಮತ್ತು ಬೆನ್ನಿನ ಮಸಲ್ಸ್‌ ಗಮನಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಶ್ಮಿಕಾ ಮಂದಣ್ಣರ ವಿಡಿಯೋ ನೋಡಿ ಅಭಿಮಾನಿಗಳು ನೋಡಿ ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. "ಜಿಮ್‌ ಅಭಿಮಾನಿಗಳು ಆಕೆಯ ಮಸಲ್‌ ನೋಡಿ ಅಚ್ಚರಿಗೊಂಡಿದ್ದಾರೆ" "ರಶ್ಮಿಕಾ ಬಾಡಿ ಬಿಲ್ಡಿಂಗ್‌ ಮಾಡುತ್ತಿದ್ದಾರೆ" "ಲೇಡಿ ಬಾಡಿ ಬಿಲ್ಡರ್‌ನಂತೆ ಕಾಣಿಸುತ್ತಿದ್ದಾರೆ" "ಪುರುಷ ನಟರಿಗಿಂತ ಅತ್ಯುತ್ತಮವಾದ ಮಸಲ್‌ ಹೊಂದಿದ್ದಾರೆ" "ರಶ್ಮಿಕಾ ಮಂದಣ್ಣ ಜಿಮ್‌ ಗರ್ಲ್‌" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಇದೇ ಸಮಯದಲ್ಲಿ ನೆಗೆಟಿವ್‌ ಕಾಮೆಂಟ್‌ಗಳು, ಬಾಡಿ ಶೇಮಿಂಗ್‌ ಕಾಮೆಂಟ್‌ಗಳೂ ಬಂದಿವೆ.

ಸುಂದರವಾಗಿ ಕಾಣಿಸುವ ನಟ ನಟಿಯರ ಫಿಟ್ನೆಸ್‌ ಹಿಂದೆ ಕಠಿಣ ಪರಿಶ್ರಮ ಇರುತ್ತದೆ. ತೆರೆಯ ಮೇಲೆ ಸುಂದರವಾಗಿ ಕಾಣಲು, ಫಿಟ್‌ ಆಗಿ ಕಾಣಲು ದಿನದ ಬಹುತೇಕ ಸಮಯ ಜಿಮ್‌ನಲ್ಲಿ ಕಳೆಯುತ್ತಾರೆ. ಇದೇ ರೀತಿ ನಾಲಗೆ ಬಯಸುವ ರುಚಿಕರವಾದ ಆಹಾರವನ್ನೆಲ್ಲ ತ್ಯಜಿಸಿ ಕಠಿಣ ಪಥ್ಯಕ್ರಮವನ್ನೂ ಅಳವಡಿಸುತ್ತಾರೆ. ಕೈಯಲ್ಲಿ ಕೋಟ್ಯಾಂತರ ಹಣವಿದ್ದರೂ ದಿನದಲ್ಲಿ ಇಂತಿಷ್ಟು ಕ್ಯಾಲೋರಿ ಎಂದು ಲೆಕ್ಕ ಹಾಕಿ ಆಹಾರ ಸೇವಿಸುತ್ತಾರೆ. ಈ ಮೂಲಕ ತಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ರಶ್ಮಿಕಾ ಮಂದಣ್ಣ ಕೂಡ ಫಿಟ್ನೆಸ್‌ ಅಭಿಮಾನಿ.

ವರ್ಕೌಟ್‌, ಡಯೆಟ್‌ನಲ್ಲಿ ಪುಷ್ಪ ನಟಿಗಿಲ್ಲ ಸಾಟಿ

ಈಗಾಗಲೇ ತನ್ನ ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಮಂದಣ್ಣ ತನ್ನ ವರ್ಕೌಟ್‌ ಕುರಿತು ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇವರು ಶಿಸ್ತಿನ ಡಯೆಟ್‌ ಮತ್ತು ವರ್ಕೌಟ್‌ ವೇಳಾಪಟ್ಟಿ ಹೊಂದಿದ್ದಾರೆ. ತೂಕ ಹೆಚ್ಚದಂತೆ ವರ್ಕೌಟ್‌ ಮಾಡುತ್ತಾರೆ. ಇದೇ ಸಮಯದಲ್ಲಿ ಆರೋಗ್ಯವಂತ ದೇಹ ಬಿಲ್ಡಿಂಗ್‌ ಕಸರತ್ತುಗಳನ್ನು ಮಾಡುತ್ತಾರೆ. ಬಿಝಿ ಶೆಡ್ಯೂಲ್‌ ಇದ್ದರೂ ನಿಯಮಿತವಾಗಿ ವರ್ಕೌಟ್‌ ಮಾಡಲು ಮರೆಯುವುದಿಲ್ಲ ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಭಾರತದ ಬಿಝಿ ನಟಿ ಎಂದು ಎಲ್ಲರಿಗೂ ಗೊತ್ತು. ಆಕೆಯ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಬಿಡುವಿಲ್ಲದಂತೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತ ಇರುತ್ತಾರೆ. ಇಷ್ಟಿದ್ದರೂ ವಾರದಲ್ಲಿ 4-5 ದಿನ ಜಿಮ್‌ಗೆ ಹೋಗುವುದನ್ನು ತಪ್ಪಿಸುವುದಿಲ್ಲ. ಸ್ಟ್ರೆಂತ್‌ ಮತ್ತು ವೇಟ್‌ ಟ್ರೇನಿಂಗ್‌, ಕಾರ್ಡಿಯೋ ಮತ್ತು ಕೋರ್‌ ಎಕ್ಸರ್‌ಸೈಸ್‌ ಮಾಡುತ್ತಾರೆ. ಇದೇ ಸಮಯದಲ್ಲಿ ಪವರ್‌ ಯೋಗ, ಸ್ವಿಮ್ಮಿಂಗ್‌, ವಾಕಿಂಗ್‌, ಕಿಕ್‌ ಬಾಕ್ಸಿಂಗ್‌ ಮೂಲಕ ತನ್ನ ದೈಹಿಕ ಸೌಂದರ್ಯ ಕಾಪಾಡಿಕೊಳ್ಳುತ್ತಿದ್ದಾರೆ.

ಒತ್ತಡ ಮತ್ತು ಕ್ಯಾಲೋರಿ ಬರ್ನ್‌ ಮಾಡುವ ಸಲುವಾಗಿ ಕಠಿಣ ಕಿಕ್‌ಬಾಕ್ಸಿಂಗ್‌ ಮಾಡುತ್ತಾರೆ. ಇದರಿಂದ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯವೂ ಉತ್ತಮವಾಗುತ್ತದೆ ಎಂದು ರಶ್ಮಿಕಾ ಹಿಂದೊಮ್ಮೆ ಹೇಳಿದ್ದರು. ಕೇವಲ ವರ್ಕೌಟ್‌ ಮಾತ್ರವಲ್ಲದೆ ಕಠಿಣ ಪಥ್ಯಕ್ಕೂ ಒತ್ತು ನೀಡುತ್ತಾರೆ ಕಿರಿಕ್‌ ಪಾರ್ಟಿ ನಟಿ. ಆಪಲ್‌ ಸಿಡೆರ್‌ ವಿನೆಗರ್‌ ಡ್ರಿಂಗ್‌ ಮತ್ತು ಆಯಾ ಋತುಮಾನದ ಹಣ್ಣುಗಳು, ಸಿಹಿ ಆಲುಗಡ್ಡೆ, ತರಕಾರಿ ಸೂಪ್‌, ಎಳನೀರು ಸೇವನೆಗೆ ಆದ್ಯತೆ ನೀಡುತ್ತಾರೆ. ಸಾಮಾನ್ಯವಾಗಿ ಇವರ ಮಾರ್ನಿಂಗ್‌ ಡಯೆಟ್‌ ಇದಾಗಿರುತ್ತದೆ. ಸಿಹಿತಿಂಡಿ, ಅಕ್ಕಿಯಿಂದ ತಯಾರಿಸಿದ ಆಹಾರ, ಜಂಕ್‌ ಫುಡ್‌, ಪ್ರೈಡ್‌ ಫುಡ್‌ಗಳಿಂದ ದೂರವಿರುತ್ತಾರೆ.

ವರದಿಗಳ ಪ್ರಕಾರ ರಶ್ಮಿಕಾ ಮಂದಣ್ಣ ಚೀಟ್‌ ಡೇ ಕೂಡ ಹೊಂದಿದ್ದಾರೆ. ಅಂದರೆ, ಅಪರೂಪಕ್ಕೆ ಒಂದು ದಿನ ತನ್ನೆಲ್ಲ ಡಯೆಟ್‌ ಮರೆತು ಇಷ್ಟಬಂದದ್ದನ್ನು ತಿನ್ನುವಂತಹ ಕ್ರಮ ಬೆಳೆಸಿಕೊಂಡಿದ್ದಾರೆ. ತನ್ನ ಫಿಟ್ನೆಸ್‌ ಕಾಪಾಡಿಕೊಳ್ಳಲು ಪರಿಣಿತ ಕೋಚ್‌ ಹೊಂದಿರುವ ರಶ್ಮಿಕಾ ಮಂದಣ್ಣ ತನ್ನ ಆಕರ್ಷಕ ಮೈಕಟ್ಟಿನ ಮೂಲಕವೂ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

Whats_app_banner