Farrey OTT release: ಅಲಿಜೆ ಅಗ್ನಿಹೋತ್ರಿ ನಟನೆಯ ಫಾರಿ ಶೀಘ್ರದಲ್ಲಿ ಒಟಿಟಿಗೆ; ಮನೆಯಲ್ಲೇ ನೋಡಿ ಸಲ್ಮಾನ್ ಖಾನ್ ಸೋದರ ಸೊಸೆಯ ಸಿನಿಮಾ
Farrey OTT release: ಸೌಮೇಂದ್ರ ಪಾಧಿ ನಿರ್ದೇಶನದ ಥ್ರಿಲ್ಲರ್ ಸಿನಿಮಾ ಫಾರಿ ನವೆಂಬರ್ 24, 2023ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಒಟಿಟಿ ಪ್ರಿಯರು ಶೀಘ್ರದಲ್ಲಿ ಈ ಸಿನಿಮಾವನ್ನು ಮನೆಯಲ್ಲೇ ನೋಡಬಹುದು. ಝೀ 5 ಒಟಿಟಿಯಲ್ಲಿ ಫಾರಿ ಸಿನಿಮಾ ಬಿಡುಗಡೆಯಾಗಲಿದೆ.
Farrey OTT release:ಅಲಿಜಾ ಅಗ್ನಿಹೋತ್ರಿ ನಟಿಸಿದ ಫಾರಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದೆ ಇರುವವರು ಆರಾಮವಾಗಿ ಮನೆಯಲ್ಲೇ ನೋಡಬಹುದು. ಸಲ್ಮಾನ್ ಖಾನ್, ಅತುಲ್ ಅಗ್ನಿಹೋತ್ರಿ ಮತ್ತು ಅಲ್ವಿರಾ ಅಗ್ನಿಹೋತ್ರಿಯ ಈ ಸಿನಿಮಾ ಶೀಘ್ರದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ ಈ ಅಲಿಜಾ ಯಾರೆಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇವರು ಸಲ್ಮಾನ್ ಅವರ ಸೋದರ ಸೊಸೆ, ಅತುಲ್ ಮತ್ತು ಅಲ್ವಿರಾ ಅವರ ಮಗಳು.
ಫಾರಿ ಒಟಿಟಿ ಬಿಡುಗಡೆ ದಿನಾಂಕ
ಝೀ5 ಒಟಿಟಿಯು ಇದೀಗ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಫಾರಿ ಪ್ರಮೋದ ಜತೆಗೆ ಒಟಿಟಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. "ಝೀ5ನಲ್ಲಿ ಏಪ್ರಿಲ್ 5ರಿಂದ ಫಾರಿ ಸಿನಿಮಾವು ಪ್ರಸಾರವಾಗಲಿದೆ" ಎಂಬ ವಿವರ ನೀಡಿದೆ.
ಸೌಮೇಂದ್ರ ಪಾಧಿ ನಿರ್ದೇಶನದ ಈ ಚಿತ್ರವು ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡುತ್ತದೆ. ಶೈಕ್ಷಣಿಕವಾಗಿ ದೀನದಲಿತ ವಿದ್ಯಾರ್ಥಿಗಳಿಗೆ ಎದುರಾಗುವ ಅಡೆತಡೆಗಳ ಕುರಿತು ವಿವರ ನೀಡುತ್ತದೆ. ಹಣಕಾಸಿನ ಕೊರತೆ ಇರುವವರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಪ್ರಾಮುಖ್ಯತೆಯ ಕುರಿತ ಕಥೆಯನ್ನು ಈ ಸಿನಿಮಾ ಹೊಂದಿದೆ.
ಫಾರಿ ಸಿನಿಮಾದ ಕಥೆಯೇನು?
ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ವಿದ್ಯಾರ್ಥಿವೇತನದ ಸಹಾಯದಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದ ಅನಾಥ ಪ್ರತಿಭೆ ನಿಯಾತಿಯ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ನಿಯಾತಿ ಅನಾಥಶ್ರಮದಲ್ಲಿ ವಾರ್ಡನ್ ನೆರವಿನಿಂದ ಪ್ರೀತಿಯಿಂದ ಬೆಳೆದವಳು. ಬಾಲ್ಯದಿಂದಲೇ ಓದಿನಲ್ಲಿ ಮುಂದಿದ್ದ ಈಕೆ ತನ್ನ ಸ್ಕಾಲರ್‌ಶಿಪ್ ನೆರವಿನಿಂದಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಸೇರುತ್ತಾಳೆ. ಅಂದರೆ, ಹತ್ತನೇ ತರಗತಿಯಲ್ಲಿ ಈಕೆ ಮಾಡಿದ ಸಾಧನೆಯಿಂದಾಗಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯೊಂದು ಈಕೆಗೆ ಮುಂದಿನ ಎರಡು ವರ್ಷಗಳ ಕಾಲ ಉಚಿತ ಶಿಕ್ಷಣವನ್ನು ನೀಡಲು ಮುಂದಾಗುತ್ತದೆ. ಅಲ್ಲೂ ಆಕೆ ಟಾಪ್ ಸ್ಟುಡೆಂಟ್ ಆಗಿರುತ್ತಾಳೆ.
ಈಕೆಗೆ ಇದೇ ರೀತಿ ಉಚಿತ ಶಿಕ್ಷಣ ಪಡೆಯುತ್ತಿರುವ ಆಕಾಶ್ ಬೆಸ್ಟ್ ಫ್ರೆಂಡ್ ಆಗಿರುತ್ತಾನೆ. ಇದಾದ ಬಳಿಕ ಇವರಿಬ್ಬರು ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಪ್ರವೇಶ ಪರೀಕ್ಷೆ ಬರೆಯಲು ಆಕೆಯಾಗುತ್ತಾರೆ. ಇದಾದ ಬಳಿಕ ಇವರಿಗೆ ಓದಿನಲ್ಲಿ ಹಿಂದಿರುವ, ಹಣದಲ್ಲಿ ರಿಚ್ ಆಗಿರುವ ಗೆಳತಿಯರು ಜತೆಯಾಗುತ್ತಾರೆ. ಆಕೆಗೆ ಪರೀಕ್ಷೆಗೆ ನೆರವಾಗುವಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ. ನಿಯಾತಿಯು ಮೋಸದ ದಂಧೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಅವಳ ಕೆಲವು ಶ್ರೀಮಂತ ಸ್ನೇಹಿತರು ಪರೀಕ್ಷೆಯಲ್ಲಿ ಮೋಸ ಮಾಡುವ ಕುರಿತು ಈಕೆಗೆ ಪ್ರಚೋದನೆ ನೀಡುತ್ತಾರೆ. ಮುಂದೆನಾಗುತ್ತದೆ ಎಂದು ಆಸಕ್ತಿ ಇರುವವರು ಸಿನಿಮಾ ನೋಡಬಹುದು. ನಿಯಾತಿ ಸಿಂಗ್ ಪಾತ್ರದಲ್ಲಿ ಅಲಿಜೆ ಅಗ್ನಿಹೋತ್ರಿ ನಟಿಸಿದ್ದಾರೆ.
ರೋನಿತ್ ರಾಯ್, ಜೂಹಿ ಬಬ್ಬರ್ ಸೋನಿ, ಸಾಹಿಲ್ ಮೆಹ್ತಾ, ಜೈನ್ ಶಾ, ಪ್ರಸನ್ನ ಬಿಶ್ತ್, ಅರ್ಬಾಜ್ ಖಾನ್, ಶಿಲ್ಪಾ ಶುಕ್ಲಾ ಮತ್ತು ಇಶಾನ್ ಜ್ಯಾಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುನೀರ್ ಖೇಟರ್ಪಾಲ್, ನಿಖಿಲ್ ನಮಿತ್, ವೈ ರವಿಶಂಕರ್ ಮತ್ತು ನವೀನ್ ಯೆರ್ನೇನಿ ಜಂಟಿಯಾಗಿ ನಿರ್ಮಿಸಿರುವ ಸಿನಿಮಾ ಇದಾಗಿದೆ.