I Love You ಸರ್‌, ನಾವಿಬ್ರೂ ಮದ್ವೆ ಆಗೋಣ್ವಾ? ಸೇತುಪತಿಗೆ ಶಾರುಖ್‌ ಖಾನ್‌ ಪ್ರೇಮನಿವೇದನೆ, ಹೀಗಿತ್ತು ವಿಜಯ್‌ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  I Love You ಸರ್‌, ನಾವಿಬ್ರೂ ಮದ್ವೆ ಆಗೋಣ್ವಾ? ಸೇತುಪತಿಗೆ ಶಾರುಖ್‌ ಖಾನ್‌ ಪ್ರೇಮನಿವೇದನೆ, ಹೀಗಿತ್ತು ವಿಜಯ್‌ ಪ್ರತಿಕ್ರಿಯೆ

I Love You ಸರ್‌, ನಾವಿಬ್ರೂ ಮದ್ವೆ ಆಗೋಣ್ವಾ? ಸೇತುಪತಿಗೆ ಶಾರುಖ್‌ ಖಾನ್‌ ಪ್ರೇಮನಿವೇದನೆ, ಹೀಗಿತ್ತು ವಿಜಯ್‌ ಪ್ರತಿಕ್ರಿಯೆ

ಜವಾನ್ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ವಿಜಯ್ ಸೇತುಪತಿ ಅವರ ಸರಳತೆ ನೆರೆದಿದ್ದವರನ್ನು ಆಕರ್ಷಿಸಿತು. ಒಂದೆಡೆ, ಜವಾನ್ ತಂಡದ ಎಲ್ಲರೂ ಸೂಟು ಬೂಟಿನಲ್ಲಿ ಕಾಣಿಸಿಕೊಂಡರೆ, ವಿಜಯ್ ಸೇತುಪತಿ ಮಾತ್ರ ತೀರಾ ಸರಳ ಪ್ಯಾಂಟ್‌ ಮತ್ತು ಶರ್ಟ್‌ನಲ್ಲಿ ಎದುರಾಗಿದ್ದರು.

I Love You ಸರ್‌, ನಾವಿಬ್ರೂ ಮದ್ವೆ ಆಗೋಣ್ವಾ? ಸೇತುಪತಿಗೆ ಶಾರುಖ್‌ ಖಾನ್‌ ಪ್ರೇಮನಿವೇದನೆ, ಹೀಗಿತ್ತು ವಿಜಯ್‌ ಪ್ರತಿಕ್ರಿಯೆ
I Love You ಸರ್‌, ನಾವಿಬ್ರೂ ಮದ್ವೆ ಆಗೋಣ್ವಾ? ಸೇತುಪತಿಗೆ ಶಾರುಖ್‌ ಖಾನ್‌ ಪ್ರೇಮನಿವೇದನೆ, ಹೀಗಿತ್ತು ವಿಜಯ್‌ ಪ್ರತಿಕ್ರಿಯೆ

Jawan Success Meet: ಅಟ್ಲಿ ನಿರ್ದೇಶನದ ಜವಾನ್ ಬಾಕ್ಸ್ ಆಫೀಸ್‌ನಲ್ಲಿ ದಿನಕ್ಕೊಂದು ದಾಖಲೆ ಸೃಷ್ಟಿಸುತ್ತಿದೆ. ಕೇವಲ 9 ದಿನದಲ್ಲಿ 400 ಕೋಟಿ ಕ್ಲಬ್ ಸೇರಿರುವ ಜವಾನ್, ಇದೀಗ 500 ಕೋಟಿಯತ್ತ ಸಾಗುತ್ತಿದೆ. ಶಾರುಖ್ ಖಾನ್ ಹೆಸರಿನಲ್ಲಿ ಜವಾನ್ ಜನಪ್ರಿಯತೆ ಗಳಿಸುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಚಿತ್ರದ ವಿಲನ್ ವಿಜಯ್ ಸೇತುಪತಿ ಅವರ ಕೊಡುಗೆಯೂ ಅಪಾರ. ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ತಮ್ಮ ನಟನೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ದಕ್ಷಿಣ ಮಾತ್ರವಲ್ಲದೆ ಹಿಂದಿ ಭಾಷಿಕ ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಿರುವಾಗ ಈ ದೊಡ್ಡ ಗೆಲುವನ್ನು ಸಂಭ್ರಮಿಸಲು ಚಿತ್ರತಂಡ ಮುಂಬೈನಲ್ಲಿ ಸಕ್ಸಸ್‌ ಪಾರ್ಟಿ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯ್‌ ಸೇತುಪತಿ ಮತ್ತೊಮ್ಮೆ ತಮ್ಮ ಸರಳತೆಯಿಂದ ಎಲ್ಲರ ಹೃದಯ ಗೆದ್ದರು.

ಸರಳತೆಯ ಸರದಾರ

ಜವಾನ್ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ವಿಜಯ್ ಸೇತುಪತಿ ಅವರ ಸರಳತೆ ನೆರೆದಿದ್ದವರನ್ನು ಆಕರ್ಷಿಸಿತು. ಒಂದೆಡೆ, ಜವಾನ್ ತಂಡದ ಎಲ್ಲರೂ ಸೂಟು ಬೂಟಿನಲ್ಲಿ ಕಾಣಿಸಿಕೊಂಡರೆ, ಆದರೆ ವಿಜಯ್ ಸೇತುಪತಿ ಮಾತ್ರ ತೀರಾ ಸರಳ ಪ್ಯಾಂಟ್‌ ಮತ್ತು ಶರ್ಟ್‌ನಲ್ಲಿ ಎದುರಾದರು. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿಜಯ್‌ ಸೇತುಪತಿ ಅವರ ಸರಳತೆಯ ವಿಡಿಯೋಗಳು ವೈರಲ್‌ ಆಗುವುದರ ಜತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯ ಅವರ ಸಿನಿಮಾ ಡೆಡಿಕೇಷನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಶಾರುಖ್‌ ಖಾನ್‌, "ವಿಜಯ್ ಜವಾನ್‌ಗಾಗಿ ತಮ್ಮ ಪ್ರತಿಯೊಂದು ದೃಶ್ಯವನ್ನು ಎರಡು ಬಾರಿ ಶೂಟ್‌ ಮಾಡಿದ್ದಾರೆ. ಮೊದಲು ತಮಿಳಿನಲ್ಲಿ ನಂತರ ಹಿಂದಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಹಿಂದಿ ಅವರಿಗೆ ಸುಲಭದ ಭಾಷೆಯಲ್ಲ. ಆದರೆ ಇದರ ಹೊರತಾಗಿಯೂ ಸೆಟ್‌ನಲ್ಲಿ ಅವರ ಭಾಗವಹಿಸುವಿಕೆ ಎಲ್ಲರಿಗೂ ಇಷ್ಟವಾಗಿತ್ತು ಎಂದರು ಶಾರುಖ್.‌

ಶಾರುಖ್ ಮತ್ತು ವಿಜಯ್ ಜೋಡಿ

ಪ್ರತಿಯೊಬ್ಬರೂ ಶಾರುಖ್ ಖಾನ್ ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ವರ್ತಿಸುವ ರೀತಿ, ಜನರನ್ನು ನಡೆಸಿಕೊಳ್ಳುವ ರೀತಿ.. ಹೀಗೆ ಎಲ್ಲವೂ ಇಷ್ಟ. ಅವರು ಪ್ರೀತಿಯನ್ನಷ್ಟೇ ನೀಡುತ್ತಾರೆ. ಅದೇ ರೀತಿ ಶಾರುಖ್‌ ಅವರನ್ನು ಜನರು ತೆರೆಯ ಮೇಲೆ ನೋಡಲು ಇಷ್ಟಪಡುತ್ತಾರೆ. ಸಿನಿಮಾ ಹೊರತುಪಡಿಸಿ ಅವರು ಮಾತನಾಡುವ ರೀತಿ ಮತ್ತು ಅಭಿಮಾನಿಗಳನ್ನು ನಿಭಾಯಿಸುವ ರೀತಿಯನ್ನು ನಾನು ನಿಜವಾಗಿಯೂ ಇಷ್ಟಪಡುತ್ತೇನೆ" ಎಂದು ಶಾರುಖ್‌ ಅವರ ಗುಣಗಾನ ಮಾಡಿದ್ದಾರೆ ವಿಜಯ್‌.

ವಿಜಯ್‌ ಹೀಗೆ ಹೇಳುತ್ತಿದ್ದಂತೆ ಅಲ್ಲೇ ಇದ್ದ ಶಾರುಖ್‌ ಅಷ್ಟೇ ಖುಷಿಯಲ್ಲಿ, "ನೀವು ನಮ್ಮ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇ ದೊಡ್ಡ ಖುಷಿ. ಐ ಲವ್‌ ಯೂ ಸರ್.‌ ನನಗನಿಸಿದ ಮಟ್ಟಿಗೆ ಈ ಇವೆಂಟ್‌ ಮುಗಿದ ಮೇಲೆ ನಾನು ನಿಮಗೆ ಪ್ರಪೋಸ್‌ ಮಾಡಲಿದ್ದೇನೆ. ನಾವಿಬ್ಬರೂ ಮದುವೆ ಆಗೋಣ" ಎಂದಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ ಸರ್..‌ ಎಂದು ವಿಜಯ್‌ ಸೇತುಪತಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಜೋಡಿಯ ಈ ಮಾತು ಅಭಿಮಾನಿ ವಲಯದಲ್ಲಿಯೂ ಸಖತ್‌ ವೈರಲ್‌ ಆಗಿದ್ದು ಮೆಚ್ಚುಗೆ ಪಡೆದುಕೊಂಡಿದೆ.

ಜವಾನ್ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡುವುದಾದರೆ, ಬಾಕ್ಸ್ ಆಫೀಸ್‌ನಲ್ಲಿ, ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಅಭಿನಯದ ಈ ಸಿನಿಮಾ ಭಾರತದಲ್ಲಿ 400 ಕೋಟಿ ರೂಗಳ ಗಳಿಕೆ ದಾಟಿದರೆ, ವಿಶ್ವದಾದ್ಯಂತ 700 ಕೋಟಿ ರೂ. ದಾಟಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner