The Kerala Story: ಸತ್ಯಕಥೆ ಇರುವುದು ಬರೀ ಅಡಿಬರಹದಲ್ಲಷ್ಟೇ!; ದೇಶ ವಿಭಜಿಸುವ ಕೇರಳ ಸ್ಟೋರಿಯಂಥ ಚಿತ್ರಗಳು ನನಗಿಷ್ಟವಿಲ್ಲ ಎಂದ ಕಮಲ್ ಹಾಸನ್
ಸಿನಿಮಾ ಶೀರ್ಷಿಕೆ ಕೆಳಗೆ ಇದು ನಿಜವಾದ ಕಥೆ ಎಂದರೆ ಅದು ರಿಯಲ್ ಸ್ಟೋರಿ ಆಗಿಬಿಡುತ್ತದೆಯೇ? ದಿ ಕೇರಳ ಸ್ಟೋರಿ ಬಗ್ಗೆ ನಟ ಕಮಲ್ ಹಾಸನ್ ನೀಡಿದ ಪ್ರತಿಕ್ರಿಯೆ ಇದು. IIFA ಅವಾರ್ಡ್ ಕಾರ್ಯಕ್ರಮದಲ್ಲಿ ಅವರು ನೀಡಿದ ಹೇಳಿಕೆಯ ವಿವರ ಇಲ್ಲಿದೆ.
The Kerala Story: ಭಾರತೀಯ ಸಿನಿಮಾರಂಗದಲ್ಲಿ ವಿವಾದದ ಜತೆಗೆ ಹೆಜ್ಜೆಹಾಕಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿರುವ ಚಿತ್ರ ದಿ ಕೇರಳ ಸ್ಟೋರಿ. ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಈಗಾಗಲೇ ಹತ್ತು ಹಲವು ಕಾರಣಕ್ಕೆ ಸುದ್ದಿಯಲ್ಲಿದೆ. ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆ ಬಳಿಕ ಪರ ವಿರೋಧ ಚರ್ಚೆಯೂ ಈ ಸಿನಿಮಾವನ್ನು ಆವರಿಸಿದೆ. ಅದೆಲ್ಲದರ ನಡುವೆಯೂ ಎಲ್ಲರಿಂದ ಮೆಚ್ಚುಗೆ ಪಡೆದು ಕಲೆಕ್ಷನ್ ವಿಚಾರದಲ್ಲಿಯೂ 250 ಕೋಟಿ ಗಳಿಸಿ ಹಿಟ್ ಪಟ್ಟಿ ಸೇರಿದೆ. ಈಗ ಈ ಸಿನಿಮಾದ ಬಗ್ಗೆಯೇ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ (Kamal Haasan) ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕರುನಾಡಿಂದ ಫಾರಿನ್ ಕಡೆ ಹೊರಟ ಡೇರ್ ಡೆವಿಲ್ ಮುಸ್ತಾಫಾ; ವಿದೇಶದಲ್ಲೂ ಕಣ್ತುಂಬಿಕೊಳ್ಳಿ ಪೂಚಂತೇ ಪ್ರಪಂಚ
ದಿ ಕೇರಳ ಸ್ಟೋರಿ ಸಿನಿಮಾ ನೋಡಿದ ಬಹುತೇಕರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಅಂಶವನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ರಾಜಕಾರಣಿಗಳು ಎಡ ಮತ್ತು ಬಲ ಪಂಥೀಯರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗ ಈ ಸತ್ಯ ಘಟನೆ ಆಧರಿತ ಚಿತ್ರ ಎಂದು ಹೇಳಿಕೊಂಡಿರುವ ಸಿನಿಮಾ ತಂಡದ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ. ಸಿನಿಮಾ ಶೀರ್ಷಿಕೆ ಕೆಳಗೆ ನಿಜವಾದ ಕಥೆ ಎಂದು ಹಾಕಿದ ತಕ್ಷಣ ಅದು ನೈಜ ಕಥೆಯಾಗುವುದಿಲ್ಲ ಎಂದಿದ್ದಾರೆ.
ಕಮಲ್ ಹಾಸನ್ ಹೇಳುವುದೇನು?
IIFA ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಕಮಲ್ ಹಾಸನ್, 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಪ್ರಚಾರದ ಸಿನಿಮಾ ಎಂದು ಕರೆದಿದ್ದಾರೆ. "ನಾನು ಯಾವತ್ತಿದ್ದರೂ ಪ್ರಚಾರ ಚಿತ್ರಗಳ ವಿರುದ್ಧವೇ ಇದ್ದೇನೆ. ಶೀರ್ಷಿಕೆ ಕೆಳಗೆ ಇದು ಸತ್ಯ ಕಥೆ ಎಂದು ಟ್ಯಾಗ್‌ಲೈನ್ ಹಾಕಿದ ತಕ್ಷಣ ಅದು ನಿಜವಾದ ಕಥೆ ಆಗುವುದಿಲ್ಲ. ಇಂಥ ಸಿನಿಮಾಗಳು ದೇಶದ ಜನರನ್ನು ವಿಭಜಿಸುವ ಕೆಲಸ ಮಾಡುತ್ತವೆ. ಈ ಸಿನಿಮಾ ನನಗೆ ಇಷ್ಟವಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಪತಿ ಫೋಟೋ ಹಾಕಲು ಮಹಾಲಕ್ಷ್ಮೀ ಹಿಂದೇಟು; ಪತ್ನಿಯ ವರ್ತನೆಗೆ ರವೀಂದ್ರ ಚಂದ್ರಶೇಖರನ್ ಕಳವಳ
'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಕೇರಳದ ಅನೇಕ ಮಹಿಳೆಯರನ್ನು ಮೋಸದಿಂದ ಮತಾಂತರಿಸಿ ಐಸಿಸ್‌ಗೆ ಸೇರಲು ಕಳುಹಿಸಲಾಗಿದೆ ಎಂದು ನಿರ್ದೇಶಕ ಸುದೀಪ್ತೋ ಸೇನ್ ತೋರಿಸಿದ್ದಾರೆ. ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಹೀಗೆ ಐಸಿಸ್‌ಗೆ ಸೇರ್ಪಡೆಯಾಗಿದ್ದ ಯುವತಿಯರನ್ನೂ ಕರೆದು ಪತ್ರಿಕಾಗೋಷ್ಠಿ ಮಾಡಿತ್ತು ಚಿತ್ರತಂಡ.
ಇನ್ನು ಇಡೀ ಸಿನಿಮಾದ ಹೈಲೈಟ್ ಎಂದರೆ ಅದು ಅದಾ ಶರ್ಮಾ. ತಮ್ಮ ನಟನೆ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ ಈ ನಟಿ. ಹಿಂದಿ, ಮಲಯಾಳಂನಲ್ಲಿ ಬಿಡುಗಡೆಯಾದ ಈ ಸಿನಿಮಾ ಮೇ 5ರಂದು ಬಿಡುಗಡೆ ಆಗಿತ್ತು. ಅದಾ ಜತೆಗೆ ಸೋನಿಯಾ ಬಾಲಾನಿ, ಯೋಗಿತಾ ಬಿಹಾನಿ ಮತ್ತು ಸಿದ್ಧಿ ಇದ್ನಾನಿ ಕೂಡ ನಟಿಸಿದ್ದರು.