ಮಾರ್ಟಿನ್ನಿಂದ ಜಿಗ್ರಾವರೆಗೆ, ನವರಾತ್ರಿಯಲ್ಲಿ ಬಿಡುಗಡೆಯಾದ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಡೀಟೆಲ್ಸ್ ಇಲ್ಲಿದೆ
ನವರಾತ್ರಿ ಸಂದರ್ಭದಲ್ಲಿ ಬಿಡುಗಡೆಯಾದ ಮಾರ್ಟಿನ್, ಜಿಗ್ರಾ, ವೆಟ್ಟೈಯನ್ ಮತ್ತು ವಿಕಿ ವಿದ್ಯಾ ಕಾ ವೋ ವಾಲ ವಿಡಿಯೋ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಡೀಟೆಲ್ಸ್ ಇಲ್ಲಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್, ಆಲಿಯಾ ಭಟ್ ಅಭಿನಯದ ಜಿಗ್ರಾ ಹಾಗೂ ರಜಿನಿ ಕಾಂತ್ ಅಭಿನಯದ ವೆಟ್ಟೈಯನ್, ರಾಜ್ ಕುಮಾರ್ ರಾವ್ ಮತ್ತಯ ತೃಪ್ತಿ ದಿಮ್ರಿ ಅಭಿನಯದ ವಿಕಿ ವಿದ್ಯಾ ಕಾ ವೋ ವಾಲ ವಿಡಿಯೋ ಈ ಎಲ್ಲ ಸಿನಿಮಾಗಳು ಸಹ ಒಂದೇ ವಾರದಲ್ಲಿ ಬಿಡುಗಡೆಯಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಬಿಡುಗಡೆಯಾದ ಈ ಎಲ್ಲ ಸಿನಿಮಾಗಳೂ ಸಹ ಜನರ ಗಮನಸೆಳೆದಿದೆ. ಇನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ, ಯಾವ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂದು ನಾವಿಲ್ಲಿ ತಿಳಿಸಿದ್ದೇವೆ ಗಮನಿಸಿ.
ಬಾಕ್ಸ್ ಆಫೀಸ್ನಲ್ಲಿ ಇದುವರೆಗೆ ಯಾವ ಸಿನಿಮಾ ಎಷ್ಟು ಗಳಿಸಿದೆ ಹಾಗೂ ಸಿನಿಮಾಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದೊರೆತಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಮಾರ್ಟಿನ್ ಕಲೆಕ್ಷನ್
Sacnilk ವೆಬ್ಸೈಟ್ ವರದಿ ಪ್ರಕಾರ ʼಮಾರ್ಟಿನ್ʼ ಮೊದಲ ದಿನ 6.70 ಕೋಟಿ ಗಳಿಸಿತ್ತು. ಇನ್ನು ಎರಡನೇ ದಿನ 5.50 ಕೋಟಿ ರೂ ಗಳಿಸಿದೆ ಎನ್ನಲಾಗುತ್ತಿದೆ. Sacnilk ವರದಿ ಮಾಡಿರುವ ಪ್ರಕಾರ ‘ಮಾರ್ಟಿನ್’ ಸಿನಿಮಾ ಮೂರು ದಿನಗಳಲ್ಲಿ ಸುಮಾರು 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಬಾಕ್ಸ್ ಆಫೀಸ್ ಲೆಕ್ಕಚಾರದ ಮಾಹಿತಿ ಹೊರಬಿದ್ದಿಲ್ಲ. ಒಂದು ವಾರದಲ್ಲಿ 94.5 ಕೋಟಿ ದಾಟುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಜಿಗ್ರಾ ಕಲೆಕ್ಷನ್
ಜಿಗ್ರಾ ಸಿನಿಮಾವು ಅಷ್ಟೊಂದು ಕಲೆಕ್ಷನ್ ಮಾಡಿಲ್ಲ ಎಂದೇ ಹೇಳಲಾಗುತ್ತಿತ್ತು. ಚಿತ್ರ ಬಿಡುಗಡೆಯಾದ ಮೊದಲ ದಿನ ತುಂಬಾ ನಿರಾಸೆಯಾಗಿತ್ತು. ಆದರೆ ಎರಡನೇ ದಿನ ಕಲೆಕ್ಷನ್ ಸುಧಾರಿಸಿತ್ತು. ಮೂರನೇ ದಿನದ ಕಲೆಕ್ಷನ್ನೊಂದಿಗೆ ಜಿಗ್ರಾ ಇದುವರೆಗೆ 16.75 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ. ಜಿಗ್ರಾ ಚಿತ್ರದಲ್ಲಿ ವೇದಾಂಗ್ ರೈನಾ ಆಲಿಯಾ ಸಹೋದರನಾಗಿ ನಟಿಸಿದ್ದಾರೆ. ಆಕ್ಷನ್-ಥ್ರಿಲ್ಲರ್ ಚಿತ್ರವನ್ನು ವಾಸನ್ ಬಾಲಾ ನಿರ್ದೇಶಿಸಿದ್ದಾರೆ.
ವೆಟ್ಟೈಯನ್ ಕಲೆಕ್ಷನ್
ವೆಟ್ಟೈಯನ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ 77.90 ಕೋಟಿ ರೂ., 2ನೇ ದಿನದಲ್ಲಿ ರೂ. 45.26 ಕೋಟಿ, 3ನೇ ದಿನ ರೂ. 47.87 ಕೋಟಿ, ಮತ್ತು 4ನೇ ದಿನ ರೂ. 41.32 ಕೋಟಿ ಗಳಿಸಿತು. ಇದರೊಂದಿಗೆ ಚಿತ್ರದ ಒಟ್ಟು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ 107-109 ಕೋಟಿ ತಲುಪಿದೆ ಎನ್ನಲಾಗುತ್ತಿದೆ. . ರಜನಿಕಾಂತ್, ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹದ್ ಫಾಸಿಲ್, ಮಂಜು ವಾರಿಯರ್, ಅಭಿರಾಮಿ, ದುಷಾರ ವಿಜಯನ್ ಮತ್ತು ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಕಿ ವಿದ್ಯಾ ಕಾ ವೋ ವಾಲ ವಿಡಿಯೋ - ಕಲೆಕ್ಷನ್
ಈ ಸಿನಿಮಾಗೆ ವೀಕ್ಷಕರಿಂದ ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. - ದಿನ 1: 5 ಕೋಟಿ, - ದಿನ 2: 6.9 ಕೋಟಿ ಹಾಗೂ ಮೂರನೇ ದಿನ 6.31 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ.