OTTplay Premium: ಕೇವಲ 616 ರೂಗೆ ಹೈಸ್ಪೀಡ್ ಇಂಟರ್‌ನೆಟ್ ಮತ್ತು ಒಟಿಟಿ ಪ್ರೀಮಿಯಂ ಪಡೆಯಿರಿ, ಇಲ್ಲಿದೆ ವಿವರ
OTTplay Premium: ಒಟಿಟಿಪ್ಲೇ ಪ್ರೀಮಿಯಂ ಮತ್ತು ಕೆಸಿಸಿಎಲ್ ಜತೆಯಾಗಿ ಒಟಿಟಿ ವೀಕ್ಷಕರಿಗೆ ವಿನೂತನ ಆಫರ್ ಪ್ರಕಟಿಸಿದೆ. ಕೇವಲ 616 ರೂಪಾಯಿಗೆ ಹೈ ಸ್ಪೀಡ್ ಇಂಟರ್‌ನೆಟ್ ಮತ್ತು ಒಟಿಟಿ ಪ್ರೀಮಿಯಂ ಕಂಟೆಂಟ್ ಪಡೆಯುವ ಅವಕಾಶ ನೀಡಿದೆ. ಸನ್‌ನೆಕ್ಸ್ಟ್, ಸೋನಿ ಲಿವ್, ಝೀ5, ನಮ್ಮ ಫ್ಲಿಕ್ಸ್ ಮುಂತಾದ ಹಲವು ಒಟಿಟಿ ಕಂಟೆಂಟ್‌ಗಳನ್ನು ಪಡೆಯಬಹುದಾಗಿದೆ.
ಬೆಂಗಳೂರು: ಈಗ ಎಲ್ಲರೂ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ವೈವಿಧ್ಯಮಯ ಮನರಂಜನಾ ಆಯ್ಕೆಗಳನ್ನು ಬಯಸುತ್ತಾರೆ. ಜಗತ್ತಿನ ಇಂತಹ ಬೇಡಿಕೆಯನ್ನು ಪೂರೈಸುವ ಕಾರ್ಯತಂತ್ರದ ಭಾಗವಾಗಿ ಭಾರತದ ಮೊದಲ ಎಐ ಚಾಲಿತ ಸ್ಟ್ರೀಮಿಂಗ್ ವೇದಿಕೆಯಾಗಿರುವ ಒಟಿಟಿಪ್ಲೇ ಪ್ರೀಮಿಯಂ (OTTplay Premium) ಅತಿದೊಡ್ಡ ಮಲ್ಟಿಪಲ್ ಸಿಸ್ಟಮ್ ಆಪರೇಟರ್ ಆಗಿರುವ ಕೇರಳ ಕಮ್ಯುನಿಕೇಟರ್ಸ್ ಕೇಬಲ್ ಲಿಮಿಟೆಡ್ (ಕೆಸಿಸಿಎಲ್) ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಭಾರತದಲ್ಲಿ ಅತಿ ದೊಡ್ಡ ಸಂಪರ್ಕ ನೆಲೆಯನ್ನು ಹೊಂದಿರುವ ಉನ್ನತ ಶ್ರೇಣಿಯ ಎಂಎಸ್‌ಒ ಇದಾಗಿದ್ದು, ಇದರಿಂದ ಒಟಿಟಿ ಪ್ರಿಯರಿಗೆ ಸಾಕಷ್ಟು ಅನುಕೂಲತೆಗಳು ಇವೆ.
ಎಷ್ಟು ವೇಗದ ಇಂಟರ್‌ನೆಟ್? ಯಾವೆಲ್ಲ ಒಟಿಟಿ ಲಭ್ಯ?
ಗ್ರಾಹಕರಿಗೆ 50 ಎಂಬಿಬಿಎಸ್ ಇಂಟರ್ನೆಟ್ ಸಂಪರ್ಕ, 4000 ಜಿಬಿ ಡೇಟಾ ಮಿತಿ ಮತ್ತು 14 ಪ್ರೀಮಿಯಂ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಸಾಧ್ಯವಾಗಲಿದೆ. ಮನೆಯಲ್ಲಿ ಮನರಂಜನೆ ಮತ್ತು ಅತ್ಯಧಿಕ ವೇಗದ ಇಂಟರ್‌ನೆಟ್ ಪಡೆಯುವ ಸಲುವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಹಲವು ಚಾನೆಲ್‌ಗಳನ್ನು, ಒಟಿಟಿ ಫ್ಲಾಟ್‌ಫಾರ್ಮ್‌ಗಳನ್ನು ಗ್ರಾಹಕರು ಬಳಸಬಹುದಾಗಿದೆ. ಚಂದಾದಾರರು ಸನ್‌ಎನ್‌ಎಕ್ಸ್‌ಟಿ, ಸೋನಿ ಲಿವ್, ಜೀ 5, ಲಯನ್ಸ್‌ಗೇಟ್ ಪ್ಲೇ, ಡಿಸ್ಟ್ರೋ ಟಿವಿ, ನಮ್ಮ ಫ್ಲಿಕ್ಸ್, ಎಎಲ್‌ಟಿ ಬಾಲಾಜಿ, ಪ್ಲೇ ಫ್ಲಿಕ್ಸ್, ಐಸ್ಟ್ರೀಮ್, ಫ್ಯಾನ್‌ಕೋಡ್, ಡಾಲಿವುಡ್ ಪ್ಲೇ, ಶಾರ್ಟ್ಸ್ ಟಿವಿ ಮತ್ತು ರಾಜ್ ಡಿಜಿಟಲ್‌ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳನ್ನು ಆನಂದಿಸಬಹುದಾಗಿದೆ.
ದರ ಎಷ್ಟು?
ಇಷ್ಟೊಂದು ಒಟಿಟಿ ಚಾನೆಲ್‌ಗಳು ಮತ್ತು ಅತ್ಯಧಿಕ ವೇಗದ ಇಂಟರ್‌ನೆಟ್ ಪಡೆಯಲು ಗ್ರಾಹಕರು ಎಷ್ಟು ಮೊತ್ತ ಪಾವತಿಸಬೇಕು? ಇಂತಹ ಪ್ರಶ್ನೆಗೆ ಉತ್ತರ ಇಲ್ಲಿದೆ. ಕೇವಲ 616 ರೂಪಾಯಿಗೆ ಗ್ರಾಹಕರು ಈ ಕೊಡುಗೆಯನ್ನು ಪಡೆಯಬಹುದಾಗಿದೆ. ಸಮಗ್ರ ಮನರಂಜನೆ ಮತ್ತು ಇಂಟರ್‌ನೆಟ್ ಪ್ಯಾಕೇಜ್ ಪಡೆಯಲು ಭಾರತದಲ್ಲಿಯೇ ಇರುವ ಅತ್ಯಂತ ಕಡಿಮೆ ವೆಚ್ಚದ ಆಯ್ಕೆಗಳಲ್ಲಿ ಒಂದಾಗಿದೆ. ಒಟಿಟಿ ಪ್ಲೇ ಪ್ರೀಮಿಯಂ ಮತ್ತು ಕೆಸಿಸಿಎಲ್ ಪಾಲುದಾರಿಕೆಯಿಂದ ಗ್ರಾಹರಕಗಿಎ ಮನರಂಜನೆ ಜತೆಗೆ ಹೆಚ್ಚು ವೇಗದ ಇಂಟರ್‌ನೆಟ್ ದೊರಕಲಿದೆ.
ಕೇರಳದ ರಾಡಿಸನ್ ಬ್ಲೂ ಕೊಚ್ಚಿಯಲ್ಲಿ ಫೆಬ್ರವರಿ 22, 2024ರಂದು ನಡೆದ ಸುಂದರ ಸಮಾರಂಭದಲ್ಲಿ ಒಟಿಟಿ ಪ್ರೀಮಿಯಂ ಮತ್ತು ಕೆಸಿಸಿಎಲ್ ನಡುವಿನ ಪಾಲುದಾರಿಕೆಯನ್ನು ಘೋಷಿಸಲಾಗಿದೆ. ಒಟಿಟಿ ಪ್ಲೇ ಮತ್ತು ಕೆಸಿಸಿಎಲ್‌ನ ಪ್ರಮುಖ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾರತದಲ್ಲಿ ಮನೆಗಳಲ್ಲಿ ಮನರಂಜನೆ ಮತ್ತು ಹೆಚ್ಚಿನ ವೇಗದ ಇಂಟರ್‌ನೆಟ್‌ನಲ್ಲಿ ಕ್ರಾಂತಿಯುಂಟುಮಾಡಲು ಈ ಎರಡು ಸಂಸ್ಥೆಗಳ ಬದ್ಧತೆ ಕಾರ್ಯಕ್ರಮದಲ್ಲಿ ವ್ಯಕ್ತವಾಗಿದೆ.
ಯಾರು ಏನಂದ್ರು?
"ನಮ್ಮ ಬಳಕೆದಾರರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಾಲ ಕಂಟೆಂಟ್ ಒದಗಿಸಿ ಸ್ಟ್ರೀಮಿಂಗ್ ಅನುಭವ ಹೆಚ್ಚಿಸುವುದು ಒಟಿಟಿ ಪ್ಲೇ ಪ್ರೀಮಿಯಂನ ಧ್ಯೇಯವಾಗಿದೆ. ಕೆಸಿಸಿಎಲ್ ಜತೆಗೆ ನಮ್ಮ ತಂಡದ ಪಾಲುದಾರಿಕೆಯಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದರ ಜತೆಗೆ ಹೆಚ್ಚು ವೇಗದ ಇಂಟರ್‌ನೆಟ್ ಕೂಡ ಗ್ರಾಹಕರಿಗೆ ದೊರಕಲಿದೆ. ಇದರಿಂದ ಸಂಯೋಜಿತ ಸಮಗ್ರ ಪ್ಯಾಕೇಜ್ ದೊರಕುತ್ತದೆ. ಇದು ಉದ್ಯಮಕ್ಕೆ ಹೊಸ ಮಾನದಂಡವನ್ನು ತರುತ್ತದೆ ಎನ್ನುವುದು ನಮ್ಮ ನಂಬಿಕೆ" ಎಂದು ಒಟಿಟಿ ಪ್ಲೇಯ ಸಿಇಒ ಮತ್ತು ಸಹ ಸ್ಥಾಪಕರಾದ ಅವಿನಾಶ್ ಮೊದಲಿಯಾರ್ ಹೇಳಿದ್ದಾರೆ.
"ಕಂಪನಿಯು ಈ ಹಿಂದೆ ಒಟಿಟಿ ಬಂಡಲ್ಡ್ ಸ್ಕ್ರೀಮ್‌ಗಳನ್ನು ಅಳವಡಿಸಿಕೊಂಡಿತ್ತು. ಆದರೆ, ಒಟಿಟಿ ಪ್ಲೇ ಜತೆಗಿನ ಒಪ್ಪಂದವು ಆಪರೇಟರ್‌ಗಳು ಮತ್ತು ಗ್ರಾಹಕರ ಬೇಡಿಕೆಯನ್ನು ಪೂರ್ಣಪ್ರಮಾಣದಲ್ಲಿ ಪೂರೈಸಲು ನೆರವಾಗಲಿದೆ" ಎಂದು ಸಿಇಎ ಅಧ್ಯಕ್ಷ ಅಬುಬಕ್ಕರ್ ಸಿದ್ಧಿಕ್ ಹೇಳಿದ್ದಾರೆ. "ಕೇರಳದ ಮನರಂಜನೆ ಉದ್ಯಮದಲ್ಲಿ ಕೆಸಿಸಿಎಲ್‌ಗೆ ಕಾರ್ಪೊರೆಟ್ ದೈತ್ಯರಿಂದ ಸ್ಪರ್ಧೆಯಿದೆ. ಒಟಿಟಿಪ್ಲೇ ಜತೆಗಿನ ಬಂಡಲಿಂಗ್ ಕೊಡುಗೆ ಆರಂಭವಾಗಿರುವುದು ಗ್ರಾಹಕರ ನೆಲೆಯನ್ನು ಉಳಿಸಿಕೊಳ್ಳಲು ನೆರವಾಗಲಿದೆ" ಎಂದು ಸಿಒಎ ಜನರಲ್ ಸೆಕ್ರೆಟರಿ ಕೆವಿ ರಾಜನ್ ಹೇಳಿದ್ದಾರೆ.
"ಭಾರತದಲ್ಲಿ 8 ನೇ ಅತಿದೊಡ್ಡ ಎಫ್‌ಟಿಟಿಎಚ್ ಬ್ರಾಡ್‌ಬ್ಯಾಂಡ್ ಪೂರೈಕೆದಾರರಾಗಿ ಬ್ರಾಡ್‌ಬ್ಯಾಂಡ್‌ನಲ್ಲಿ ಕೆವಿಬಿಎಲ್ ಪ್ರಗತಿ ಹೊಂದಿದೆ. ಇದೀಗ ಒಟಿಟಿ ಬಂಡಲಿಂಗ್ ಸೇರಿದಂತೆ ಇದರ ವೈವಿಧ್ಯತೆ ಇನ್ನಷ್ಟು ಬೆಳವಣಿಗೆ ಕಾಣಲಿದೆ" ಎಂದು ಕೆಸಿಸಿಎಲ್ ಮತ್ತು ಕೆವಿಬಿಎಲ್ ಅಧ್ಯಕ್ಷ ಗೋವಿಂದನ್ ಹೇಳಿದ್ದಾರೆ. "ಹೆಚ್ಚು ಎಂಬಿಪಿಎಸ್ ಮತ್ತು ಆಕರ್ಷಕ ದರದ ಜತೆಗೆ ಆಕರ್ಷಕ ಒಟಿಟಿ ಬಂಡಲ್ ಯೋಜನೆಗಳು ಮಾರುಕಟ್ಟೆಯಲ್ಲಿ ಇನ್ನಷ್ಟು ಮುನ್ನುಗಲು ನೆರವಾಗಲಿದೆ" ಎಂದು ಕೆಸಿಸಿಎಲ್ ಮತ್ತು ಕೆವಿಬಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್‌ಕುಮಾರ್ ಹೇಳಿದ್ದಾರೆ.
"ಭಾರತದಲ್ಲಿ ವಯರ್ ಬ್ರಾಡ್‌ಬ್ಯಾಂಡ್‌ನ ಪ್ರಮಾಣವು ಒಟ್ಟು ಬ್ರಾಡ್‌ಬ್ಯಾಂಡ್‌ನಲ್ಲಿ ಕೇವಲ ಶೇಕಡ 5ರಷ್ಟಿದೆ. ಒಟಿಟಿ ಬಂಡಲಿಂಗ್‌ನಂತಹ ಆಕರ್ಷಕ ಕೊಡುಗೆಯಿಂದಾಗಿ ವಯರ್ ಬ್ರಾಡ್‌ಬ್ಯಾಂಡ್ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿದೆ" ಎಂದು ಕೆಸಿಸಿಎಲ್ ಮತ್ತು ಕೆವಿಬಿಎಲ್‌ನ ಸಿಇಒ ಪದ್ಮಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಸಮಾರಂಭದಲ್ಲಿ ಟಿಸಿಸಿಎಲ್‌ನ ಅಧ್ಯಕ್ಷ ಶಕೀಲನ್ ಕೂಡ ಭಾಗವಹಿಸಿದ್ದರು.
ಒಟಿಟಿಪ್ಲೇ ಬಗ್ಗೆ ನಿಮಗೆಷ್ಟು ಗೊತ್ತು?
ಒಟಿಟಿಪ್ಲೇ ಭಾರತದ ಮೊದಲ ಎಐ ಆಆಧರಿತ ಶಿಫಾರಸು ಎಂಜಿನ್ ವೇದಿಕೆಯಾಗಿದೆ. 2022ರಲ್ಲಿ ಒಟಿಟಿ ಪ್ಲೇ ಪ್ರೀಮಿಯಂ ಆರಂಭವಾಗಿತ್ತು. ಈ ಮೂಲಕ ಈ ವೇದಿಕೆಯು ಸ್ಟ್ರೀಮಿಂಗ್ ಸೇವೆಯತ್ತ ಪ್ರವೇಶಿಸಿತ್ತು. ಇದು ಗ್ರಾಹಕರಿಗೆ ಇನ್ನಷ್ಟು ಉತ್ತಮವಾದ ಕಂಟೆಂಟ್ ಅನುಭವವನ್ನು ನೀಡುತ್ತದೆ. ಬಳಕೆದಾರರಿಗೆ ಹೆಚ್ಚಿನ ಮನರಂಜನೆ ಒದಗಿಸುತ್ತದೆ. ಒಟಿಟಿಪ್ಲೇಯಲ್ಲಿ 6 ಮಾಸಿಕ ಚಂದಾದಾರಿಕೆ ಪ್ಯಾಕ್‌ಗಳು, 1 ತ್ರೈಮಾಸಿಕ ಪ್ಯಾಕ್ ಮತ್ತು 6 ವಾರ್ಷಿಕ ಪ್ಯಾಕ್‌ಗಳಿವೆ. ಇದು ಭಾರತದ 32ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜತೆ ಪಾಲುದಾರಿಕೆ ಹೊಂದಿದೆ. ಐಒಎಸ್, ಆಪ್ ಸ್ಟೋರ್, ಜಿಯೋಸ್ಟೋರ್, ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್, ಆಂಡ್ರಾಯ್ಡ್ ಟಿವಿ ಮತ್ತು ಫೈರ್‌ಸ್ಟಿಕ್‌ನಲ್ಲಿ ಒಟಿಟಿ ಪ್ಲೇ ಪ್ರೀಮಿಯಂ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಟಿಟಿ ಪ್ಲೇಯಲ್ಲಿ ಲಭ್ಯವಿರುವ ಅತ್ಯಾಕರ್ಷಕ ಪ್ಯಾಕ್‌ಗಳಲ್ಲಿ ನಿಮಗೆ ಸೂಕ್ತವಾಗಿರುವುದನ್ನು ಆರಿಸಿಕೊಂಡು ವೀಕ್ಷಿಸಬಹುದು.
ಒಟಿಟಿಪ್ಲೇಯಲ್ಲಿ ಒಟಿಟಿ ಪ್ರೀಮಿಯಂ ಎಂಬ ಆಯ್ಕೆ ಇದೆ. ಇದು ಬಂಡಲ್ ಮಾಡಿರುವ ಚಂದಾದಾರಿಕೆ. ಇದರಲ್ಲಿ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಸೋನಿ ಲಿವ್, ಝೀ5, ಇಟಿವಿ ವಿನ್, ಆಹಾ ತೆಲುಗು, ಆಹಾ ತಮಿಳು, ಆಲ್ಟ್ ಬಾಲಾಜಿ, ಲಯನ್ಸ್‌ಗೇಟ್ ಪ್ಲೇ, ಸನ್‌ನೆಕ್ಸ್ಟ್, ಶೆಮರೊಮಿ, ಶಾರ್ಟ್‌ಟಿವಿ, ಪ್ಲೇ ಫ್ಲಿಕ್ಸ್, ಡಾಲಿವುಡ್ ಪ್ಲೇ, ಪಿಟಿಸಿ ಪ್ಲೇ ಇತ್ಯಾದಿಗಳು ದೊರಕುತ್ತವೆ. ಇವೆಲ್ಲ ಎಐ ಆಧರಿತ ಶಿಫಾರಸುಗಳು ಮತ್ತು ಬಳಕೆದಾರರ ವೀಕ್ಷಣೆ ಆಸಕ್ತಿಗಳನ್ನು ಆಧರಿಸಿ ಕಂಟೆಂಟ್ ಡಿಸ್ಕವರಿ ಟೆಕ್ನಾಲಜಿ ಬಳಸಿಕೊಂಡು ನೀಡಲಾಗುತ್ತದೆ.