Kichcha Sudeep: ಸುದೀಪ್​ ಜಾಹೀರಾತು, ಪೋಸ್ಟರ್​ಗಳಿಗೆ ತಡೆ ಕೋರಿ ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ಸುದೀಪ್​ ಜಾಹೀರಾತು, ಪೋಸ್ಟರ್​ಗಳಿಗೆ ತಡೆ ಕೋರಿ ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ

Kichcha Sudeep: ಸುದೀಪ್​ ಜಾಹೀರಾತು, ಪೋಸ್ಟರ್​ಗಳಿಗೆ ತಡೆ ಕೋರಿ ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ

ಬಿಜೆಪಿ ಪಕ್ಷದ ಸ್ಟಾರ್​ ಪ್ರಚಾರಕರಾಗಿರುವ ನಟ ಕಿಚ್ಚ ಸುದೀಪ್​ ಅವರ ಜಾಹೀರಾತು, ಪೋಸ್ಟರ್​ ಹಾಗೂ ಕಾರ್ಯಕ್ರಮಗಳಿಗೆ ತಡೆ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ ಬರೆದಿದೆ.

ನಟ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದ ನಟ ಕಿಚ್ಚ ಸುದೀಪ್​ ಅವರ ಜಾಹೀರಾತು, ಪೋಸ್ಟರ್​ ಹಾಗೂ ಕಾರ್ಯಕ್ರಮಗಳಿಗೆ ತಡೆ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ ಬರೆದಿದೆ.

ಪತ್ರದಲ್ಲಿ ಏನಿದೆ?s

“ಖ್ಯಾತ ಚಲನಚಿತ್ರ ನಟರಾ ಕಿಚ್ಚ ಸುದೀಪ್​ರವರು ಪ್ರಸ್ತುತ ಬಿಜೆಪಿ ಪಕ್ಷದ ಸ್ಟಾರ್​ ಪ್ರಚಾರಕರಾಗಿರುವುದರಿಂದ ಇವರು ನಟಿಸಿರುವ ಜಾಹೀರಾತು, ಪೋಸ್ಟರ್​ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ಟಿವಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿಯುವುದು ಮತ್ತು ಇವರ ಭಾವಚಿತ್ರವಿರುವ ಪೋಸ್ಟರ್​ ಜಾಹೀರಾತುಗಳನ್ನು ಈ ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ” ಎಂದು ಜೆಡಿಎಸ್​ ಕಾನೂನು ಘಟಕದ ವಕ್ತಾರ ಪ್ರದೀಪ್ ಕುಮಾರ್​ ಪಿ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ
ಚುನಾವಣಾ ಆಯೋಗಕ್ಕೆ ಜೆಡಿಎಸ್​ ಪತ್ರ

ನಿನ್ನೆಯಷ್ಟೇ ಶಿವಮೊಗ್ಗ ವಕೀಲ ಕೆ.ಪಿ. ಶ್ರೀಪಾಲ್‌ ಎನ್ನುವವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಂದರ್ಭದಲ್ಲಿ ನಟ ಸುದೀಪ್‌ ಅವರ ಯಾವುದೇ ಸಿನಿಮಾಗಳ ಬಿಡುಗಡೆ, ಸಿನಿಮಾ ಪ್ರಸಾರ ಹಾಗೂ ಜಾಹೀರಾತುಗಳ ಪ್ರಸಾರವನ್ನು ತಡೆ ಹಿಡಿಯುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಸುದೀಪ್‌ಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರು ಬಿಜೆಪಿ ಪರ ಪ್ರಚಾರ ಮಾಡಲು ಮುಂದಾಗಿರುವುದರಿಂದ ಅವರ ಸಿನಿಮಾ ಹಾಗೂ ಜಾಹೀರಾತುಗಳು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಆದ್ದರಿಂದ ಈ ರೀತಿ ಮನವಿ ಮಾಡಲಾಗಿದೆ.

ಏಪ್ರಿಲ್ 14 ರಿಂದ ಸುದೀಪ್​ ಪ್ರಚಾರ?

ಸುದೀಪ್‌ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದ ಕಿಚ್ಚ, ನಾನು ಯಾವ ಪಕ್ಷವನ್ನೂ ಸೇರುತ್ತಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುವೆ ಎಂದು ಹೇಳಿದ್ದರು. ಚುನಾವಣೆಯನ್ನು ಗೆಲ್ಲಲೇಬೇಕೆಂಬ ಪಣ ತೊಟಿರುವ ಬಿಜೆಪಿ, ಚುನಾವಣೆ ಪ್ರಚಾರಕ್ಕಾಗಿ ಖ್ಯಾತ ನಟ ಸುದೀಪ್‌ ಅವರನ್ನು ಸ್ಟಾರ್‌ ಪ್ರಚಾರಕನನ್ನಾಗಿ ಕರೆ ತಂದಿದೆ. ಏಪ್ರಿಲ್ 14 ರಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಹೇಳಲಾಗಿದೆ.

ಬೆದರಿಕೆ ಪತ್ರ

ಸುದೀಪ್‌ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ವೈರಲ್‌ ಆದಾಗಿನಿಂದ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಎರಡು ಬೆದರಿಕೆ ಪತ್ರಗಳು ಬಂದಿದ್ದು, ಆ ಪತ್ರಗಳಲ್ಲಿ ಕಿಚ್ಚನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಜೊತೆಗೆ ಬೆದರಿಕೆ ಕೂಡಾ ಹಾಕಲಾಗಿದೆ. ಸುದೀಪ್‌ ಅವರ ಆಪ್ತ, ನಿರ್ಮಾಪಕ ಜಾಕ್‌ ಮಂಜು, ಕಿಚ್ಚನ ಪರವಾಗಿ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಬೆದರಿಕೆ ಒಡ್ಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಬೆದರಿಕೆ ಪತ್ರಳದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುದೀಪ್​, ಇದು ನಮ್ಮ ಚಿತ್ರರಂಗದಲ್ಲಿ ಇರುವವರ ಕೆಲಸ. ಅದು ಯಾರು ಅಂತಲೂ ನನಗೆ ಗೊತ್ತು. ಆದರೆ, ಅದನ್ನ ಇವತ್ತು ಮಾತನಾಡಲು ಹೋಗಲ್ಲ. ಯಾಕಂದ್ರೆ, ಅದು ಯಾವ ದಾರಿಯಲ್ಲಿ ಬರಬೇಕೋ ಆ ದಾರಿಯಲ್ಲಿಯೇ ಬರಲಿ, ನಾನು ಯಾವುದಕ್ಕೂ ಹೆದರೋನಲ್ಲ, ಅದಂತೂ ಸತ್ಯ ಎಂದು ಹೇಳಿದ್ದಾರೆ.

Whats_app_banner