ಬಘೀರ ಸಿನಿಮಾ ಆನ್‌ಲೈನ್ ಬುಕಿಂಗ್‌ಗೆ ಮಂದ ಪ್ರತಿಕ್ರಿಯೆ: ಪ್ರಚಾರದ ಕೊರತೆಯೇ ಕಾರಣವೆಂದ ಅಭಿಮಾನಿಗಳು
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಕನ್ನಡದ ಬಹುನಿರೀಕ್ಷಿತ ಸಿನಿಮಾ ಬಘೀರ ಇಂದು (ಅಕ್ಟೋಬರ್ 31) ಬಿಡುಗಡೆಯಾಗಿದೆ. ‘ಉಗ್ರಂ‘ ಬಳಿಕ ಪ್ರಶಾಂತ್ ನೀಲ್– ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ ಇದಾಗಿದ್ದು, ಸಿನಿಮಾದ ಆನ್‌ಲೈನ್ ಬುಕ್ಕಿಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಚಾರದ ಕೊರತೆಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಅಭಿಮಾನಿಗಳು.
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಯನದ ಬಘೀರ ಸಿನಿಮಾ ಇಂದು (ಅಕ್ಟೋಬರ್ 31) ಬಿಡುಗಡೆಯಾಗಿದೆ. ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸಿನಿಮಾ ಬಗ್ಗೆ ಕನ್ನಡ ಪ್ರೇಕ್ಷಕರಲ್ಲಿ ನಿರೀಕ್ಷೆ ಕೊಂಚ ಹೆಚ್ಚೇ ಇತ್ತು ಎನ್ನಬಹುದು. ದಶಕಗಳ ಹಿಂದೆ ಉಗ್ರಂನಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿರುವ ಪ್ರಶಾಂತ್ ನೀಲ್ ಬಘೀರಕ್ಕೆ ಚಿತ್ರಕಥೆ ಬರೆದಿದ್ದಾರೆ. ಶ್ರೀಮುರಳಿ ಹಾಗೂ ನೀಲ್ ಕಾಂಬಿನೇಷನ್ ಮತ್ತೆ ಒಂದಾಗಿರುವುದಕ್ಕೆ ಅಭಿಮಾನಿಗಳು ಸಂತಸ ಪಟ್ಟಿದ್ದರು. ಬಘೀರ ಸಿನಿಮಾಕ್ಕೆ ಡಾ ಸೂರಿ ನಿರ್ದೇಶನವಿದ್ದು, ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಬಘೀರಾ ಟೀಸರ್ ಮತ್ತು ಟ್ರೇಲರ್ ಉತ್ತಮ ಬಝ್ ಸೃಷ್ಟಿಸಿತ್ತು, ಆದರೂ ಮುಂಗಡ ಬುಕ್ಕಿಂಗ್ ತೆರೆಯಲಾದ ಗಂಟೆಗಳ ನಂತರ ಪ್ರತಿಕ್ರಿಯೆ ನೀರಸವಾಗಿದೆ. ಇಂಡಸ್ಟ್ರಿ ಟ್ರ್ಯಾಕರ್ ಕರ್ನಾಟಕ ಟಾಕೀಸ್ ಪ್ರಕಾರ, ಬಘೀರಾ ಬೆಂಗಳೂರಿನಲ್ಲಿ 388 ಪ್ರದರ್ಶನಗಳನ್ನು ಹೊಂದಿದೆ, ಅಕ್ಟೋಬರ್ 30 ರ ಆರಂಭದಲ್ಲಿ ಕೇವಲ ಮೂರು ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ.
ಅಪಾರ ನಿರೀಕ್ಷೆ ಮೂಡಿಸಿದ್ದ ಬಘೀರ ಸಿನಿಮಾದ ಆನ್‌ಲೈನ್ ಬುಕ್ಕಿಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಪ್ರಚಾರದ ಕೊರತೆಯೇ ಕಾರಣ ಎನ್ನುತ್ತಿದ್ದಾರೆ ನೀಲ್–ಶ್ರೀ ಮುರಳಿ ಅಭಿಮಾನಿಗಳು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆಗಳು ಹೀಗಿವೆ:
ಬಘೀರ ದೊಡ್ಡ ಬಜೆಟ್‌ನ ಬಹುನಿರೀಕ್ಷಿತ ಚಿತ್ರವಾದ್ರೂ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೀರಸವಾಗಿದೆ. ದುರಾದೃಷ್ಟವಶಾತ್ ಕಳಪೆ ಪ್ರಚಾರದ ಕಾರಣ ಸಿನಿಮಾವು ಪ್ರೇಕ್ಷಕರನ್ನು ತಲುಪಿಲ್ಲ. ಆದರೂ ಮಾಗಡಿ ರಸ್ತೆ ಹಾಗೂ ಗಾಂಧಿ ನಗರದಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣಲು ಚಿತ್ರ ಸಜ್ಜಾಗಿದೆ ಎಂದು @KA_Talkies ಎನ್ನುವ ಟ್ವಿಟರ್ ಪುಟ ಹ್ಯಾಂಡಲ್ ಮಾಡುವವರು ಬರೆದುಕೊಂಡಿದ್ದಾರೆ.
ಈ ನಡುವೆ ಬಘೀರಾ ಸಿನಿಮಾವು ದೀಪಾವಳಿ ಹಬ್ಬಗಳು ಮುಗಿದ ನಂತರ ಮೊದಲ ದಿನ-ಮೊದಲ ಪ್ರದರ್ಶನದ ಪ್ರತಿಕ್ರಿಯೆಯ ಆಧಾರದ ಮೇಲೆ ದಿನದಲ್ಲಿ ಮತ್ತು ವಾರಾಂತ್ಯದಲ್ಲಿ ಬುಕಿಂಗ್‌ಗಳು ಹೆಚ್ಚಾಗುತ್ತವೆ ಎಂಬ ನಿರೀಕ್ಷೆಯಿದೆ ಎಂದು ಕೂಡ ಹೇಳಲಾಗುತ್ತಿದೆ. ಇದರೊಂದಿಗೆ ದೊಡ್ಡ ಬಜೆಟ್ ಮಾರ್ಟಿನ್ ಸಿನಿಮಾ ಸೋತಿರುವುದು ಕೂಡ ಬಘೀರಾಗೆ ಹಿನ್ನಡೆಯಾಗಬಹುದು ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ. ಮದಗಜ – 2, ಭರಾಟೆಯಂತಹ ಸಿನಿಮಾದ ಸೋಲು ಕೂಡ ಬಘೀರನ ಯಶಸ್ಸಿಗೆ ಹಿನ್ನೆಡೆಯಾಗಬಹುದು ಎಂದು ಸಿನಿ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
‘ಬಘೀರ ಸಿನಿಮಾ ಬಗ್ಗೆ ಪ್ರಚಾರ ಕಡಿಮೆಯಾಗಿರುವುದು ಆನ್‌ಲೈನ್ ಬುಕ್ಕಿಂಗ್ ಕಡಿಮೆಯಾಗಲು ಕಾರಣ. ಹೊಂಬಾಳೆ ಫಿಲ್ಮ್ಸ್ ಆನ್‌ಲೈನ್ ಪ್ರಚಾರ ಬಜ್ ಹೇಗೆ ಸೃಷ್ಟಿಯಾಗುತ್ತೆ‘ ಎಂದು @NithinMNK1 ಎನ್ನುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
‘ಕಳಪೆ ಪ್ರಚಾರ ಎಂದು ಹೇಳಿದ್ದರು ಯಾರು?, ಕಾಂತರಕ್ಕೂ ಎಲ್ಲರೂ ಇದೇ ರೀತಿ ಹೇಳಿದ್ದರು. ಆದರೆ ಕಾಂತರ ಇವರ ಬಾಯಿ ಮುಚ್ಚಿಸಿತು‘ ಎಂದು @yadu_46 ಎನ್ನುವ ಟ್ವಿಟರ್ ಪುಟ ನಿರ್ವಹಿಸುವವರು ಹೇಳಿದ್ದಾರೆ.
‘PAN INDIA ಚಿತ್ರದ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಲನಚಿತ್ರಗಳ ಸೋಲಿನ ಫಲಿತಾಂಶ ಇದು ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಕನ್ನಡ ಪ್ರೇಕ್ಷಕರು ಈ ಡಾರ್ಕ್ ವಿಷಯದ ಸಿನಿಮಾಗಳಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಎಲ್ಲಾ ಹೇಳಿದ ಮತ್ತು ಮಾಡಿದ ಭರವಸೆ #ಬಘೀರಾ ಈ ಸರಣಿಯನ್ನು ಮುರಿದು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮುತ್ತದೆ‘ ಎನ್ನುವವರು ಬರೆದುಕೊಂಡಿದ್ದಾರೆ.