ಕುಸುಮಾ ವ್ರತಭಂಗ, ಕೊನೆಗೂ ಭಾಗ್ಯಾ ಮುಂದೆ ಬಯಲಾಯ್ತು ತಾಂಡವ್-ಶ್ರೇಷ್ಠಾ ಅಫೇರ್; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 15ರ ಎಪಿಸೋಡ್‌ನಲ್ಲಿ ಬಾಬಾ ಹೇಳಿದಂತೆ ಕುಸುಮಾ ವ್ರತಭಂಗವಾಗುತ್ತದೆ. ಇತ್ತ ಭಾಗ್ಯಾ, ಟ್ರಿಪ್‌ಗೆ ಬಂದ ಜೋಡಿಗಾಗಿ ತಾಳಿ ತಯಾರಿಸಿ ಅದನ್ನು ಕೊಡಲು ಓಡೋಡಿ ಬರುತ್ತಾಳೆ. ಆದರೆ ಅಲ್ಲಿ ತಾಂಡವ್-ಶ್ರೇಷ್ಠಾ ಇಬ್ಬರನ್ನೂ ನೋಡಿ ಶಾಕ್ ಆಗುತ್ತಾಳೆ. ಕೊನೆಗೂ ಭಾಗ್ಯಾಗೆ ನಿಜ ಗೊತ್ತಾಗಿದೆ.
Bhagyalakshmi Kannada Serial: ಮಗ-ಸೊಸೆಗೆ ಒಳ್ಳೆಯದಾಗಬೇಕು. ಭಾಗ್ಯಾಗೆ ತಾಂಡವ್-ಶ್ರೇಷ್ಠಾ ವಿಚಾರ ಗೊತ್ತಾಗಬಾರದು, ಸೊಸೆ ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೋಗಬಾರದು ಎಂದು ಕುಸುಮಾ ದೇವರಲ್ಲಿ ಪ್ರಾರ್ಥಿಸಿ ವ್ರತ ಮಾಡಲು ಆರಂಭಿಸುತ್ತಾಳೆ. ಖಾಲಿ ಹೊಟ್ಟೆಯಲ್ಲಿದ್ದುಕೊಂಡು ಸುಸ್ತಾಗಿ ಕುಸುಮಾ ಉಪವಾಸ ಮಾಡುವುದನ್ನು ಕಂಡು ಧರ್ಮರಾಜ್ ಬೇಸರಗೊಳ್ಳುತ್ತಾರೆ.
ಬಾಬಾ ಹೇಳಿದಂತೆ ಅರ್ಧಕ್ಕೆ ನಿಂತ ಕುಸುಮಾ ವ್ರತ
ಕುಸುಮಾ ತಾನೇ ಕೈಯ್ಯಾರೆ, ಮಣ್ಣಿನಿಂದ ಹಣತೆಗಳನ್ನು ತಯಾರಿಸಿ ಕೊನೆಗೂ ಎಣ್ಣೆ, ಬತ್ತಿ ಹಾಕಿ ದೀಪ ಹಚ್ಚುತ್ತಾಳೆ. ಮಹಾ ಮಂಗಳಾರತಿ ಮಾಡಿದರೆ ವ್ರತ ಪೂರ್ಣಗೊಂಡಂತೆ, ನಿಮ್ಮ ಮನಸ್ಸಿನ ಆಸೆಯನ್ನು ಒಮ್ಮೆ ದೇವರ ಮುಂದೆ ಹೇಳಿಕೊಳ್ಳಿ ಎಂದು ಅರ್ಚಕರು ಕುಸುಮಾಗೆ ಹೇಳುತ್ತಾರೆ. ಕುಸುಮಾ ಇನ್ನು ವ್ರತ ಮುಗಿದೇ ಹೋಯ್ತು ಎಂದು ಖುಷಿಯಾಗಿ ದೇವರಲ್ಲಿ ಪ್ರಾರ್ಥಿಸಿ ದೊಡ್ಡ ಹಣತೆಯನ್ನು ಕೈಗೆ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಆಕೆ ತಲೆ ಸುತ್ತಿ ಆಯ ತಪ್ಪುತ್ತಾಳೆ. ಇದರಿಂದ ಕೈ ತಾಗಿ ಕುಸುಮಾ ಹಚ್ಚಿದ್ದ ದೀಪಗಳು ಕೆಳಗೆ ಬೀಳುತ್ತದೆ. ಇದನ್ನು ಕಂಡು ಕುಸುಮಾ ಗಾಬರಿ ಆಗುತ್ತಾಳೆ. ಅಂತೂ ಬಾಬಾ ಹೇಳಿದ ಮಾತು ನಿಜವಾಗುತ್ತದೆ. ಭಾಗ್ಯಾಗೆ ನಿಜ ಗೊತ್ತಾಗಬಾರದು ಎಂದಾದರೆ ವ್ರತ ಪೂರ್ಣಗೊಳ್ಳಬೇಕು ತಾನೇ ಎಂದು ಬಾಬಾ ಹೇಳಿರುತ್ತಾರೆ. ಅವರು ಹೇಳಿದಂತೆ ಕುಸುಮಾ ವ್ರತಭಂಗವಾಗುತ್ತದೆ.
ತಾಳಿ ತಯಾರಿಸಿಕೊಂಡು ಹೊರಟ ಭಾಗ್ಯಾ
ಇತ್ತ ಭಾಗ್ಯಾ ಜೋಡಿಯನ್ನು ಭೇಟಿ ಆಗಲು ಹೊರಡುತ್ತಾಳೆ. ಅಷ್ಟರಲ್ಲಿ ಸಹನಾ ಬಂದು ಅವರಿಗೆ ತಾಳಿ ಬೇಕಂತೆ, ನಾವು ಇಲ್ಲಿ ಒಡವೆ ಅಂಗಡಿ ಇಟ್ಟಿದ್ದೇವ ಎಂದು ಅವರಿಬ್ಬರ ವರ್ತನೆಗೆ ಬೇಸರ ವ್ಯಕ್ತಪಡಿಸುತ್ತಾಳೆ. ಅವರು ತಮ್ಮೆಲ್ಲಾ ಒತ್ತಡಗಳನ್ನು ದೂರ ಇಟ್ಟು ಇಲ್ಲಿಗೆ ಬಂದು ಖುಷಿಯಿಂದ ಇರಬೇಕು ಎಂದು ಬಂದಿದ್ದಾರೆ. ಬಹುಶಃ ಅವರಿಗೆ ಮತ್ತೆ ತಾಳಿ ಕಟ್ಟಿಸಿಕೊಳ್ಳಬೇಕೆಂಬ ಆಸೆ ಉಂಟಾಗಿರಬಹುದು. ಅದನ್ನು ನಾನು ತೆಗೆದುಕೊಂಡು ಹೋಗುತ್ತೇನೆ ಎಂದು ದೇವರ ಮುಂದಿದ್ದ ದಾರ ಹಾಗೂ ಅರಿಶಿನದಿಂದ ತಾಳಿ ತಯಾರಿಸುತ್ತಾಳೆ. ಹೇಗೋ ಅವರು ನನ್ನನ್ನು ಭೇಟಿ ಮಾಡಬೇಕೆಂದುಕೊಂಡಿದ್ದಾರೆ, ನಾನೇ ಹೋಗಿಬರುತ್ತೇನೆ ಎಂದು ಅಲ್ಲಿಂದ ಹೊರಡುತ್ತಾಳೆ.
ತಾಂಡವ್-ಶ್ರೇಷ್ಠಾ ಅಫೇರ್ ಕೊನೆಗೂ ಭಾಗ್ಯಾ ಮುಂದೆ ಬಯಲು
ಅತ್ತ ಶ್ರೇಷ್ಠಾ ಹಾಗೂ ತಾಂಡವ್ ಕುಡಿದ ಮತ್ತಿನಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಇನ್ನು ಕೆಲವೇ ಸಮಯದಲ್ಲಿ ತಾಳಿ ಬರುತ್ತದೆ. ನೀನು ಅದನ್ನು ನನಗೆ ಕಟ್ಟಬೇಕು ಎಂದು ಶ್ರೇಷ್ಠಾ ಹೇಳುತ್ತಾಳೆ. ಇದಕ್ಕೆ ಉತ್ತರಿಸುವ ತಾಂಡವ್, ಕಟ್ಟೇ ಕಟ್ಟುತ್ತೇನೆ. ನೀನೆಂದರೆ ನನಗೆ ಎಷ್ಟು ಇಷ್ಟ ಗೊತ್ತಾ, ಐ ಲವ್ ಯೂ ಶ್ರೇಷ್ಠಾ ಎಂದು ಜೋರಾಗಿ ಅರಚುತ್ತಾನೆ. ತಾಳಿ ಕೊಡಲು ಖುಷಿಯಿಂದ ಬಂದ ಭಾಗ್ಯಾ ತಾಂಡವ್-ಶ್ರೇಷ್ಠಾ ಇಬ್ಬರನ್ನೂ ನೋಡುತ್ತಾಳೆ. ತನ್ನ ಗಂಡ ಅವಳಿಗೆ ಐ ಲವ್ ಯೂ ಹೇಳುವುದನ್ನು ಕಂಡು ಗಾಬರಿ ಆಗುತ್ತಾಳೆ. ಭಾಗ್ಯಾಗೆ ಎಲ್ಲಾ ವಿಚಾರ ತಿಳಿದು ಆಘಾತವಾಗುತ್ತದೆ. ತಾಂಡವ್ ತನ್ನ ಬಗ್ಗೆ ಆಡಿದ ಮಾತುಗಳನ್ನೆಲ್ಲಾ ನೆನಪಿಸಿಕೊಂಡು ಭಾಗ್ಯಾ ಕಣ್ಣೀರಿಡುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ