ಡ್ಯಾನ್ಸ್‌ಗೆ ಕಳಂಕ ಎಂದು ಅವಮಾನ ಮಾಡಿದವರ ಮುಂದೆ ಭಾಗ್ಯಾ ನೃತ್ಯ ಪ್ರದರ್ಶನ, ಡ್ಯಾನ್ಸ್‌ ಟೀಚರ್‌ ತೀರ್ಪು ಏನು? ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಡ್ಯಾನ್ಸ್‌ಗೆ ಕಳಂಕ ಎಂದು ಅವಮಾನ ಮಾಡಿದವರ ಮುಂದೆ ಭಾಗ್ಯಾ ನೃತ್ಯ ಪ್ರದರ್ಶನ, ಡ್ಯಾನ್ಸ್‌ ಟೀಚರ್‌ ತೀರ್ಪು ಏನು? ಭಾಗ್ಯಲಕ್ಷ್ಮೀ ಧಾರಾವಾಹಿ

ಡ್ಯಾನ್ಸ್‌ಗೆ ಕಳಂಕ ಎಂದು ಅವಮಾನ ಮಾಡಿದವರ ಮುಂದೆ ಭಾಗ್ಯಾ ನೃತ್ಯ ಪ್ರದರ್ಶನ, ಡ್ಯಾನ್ಸ್‌ ಟೀಚರ್‌ ತೀರ್ಪು ಏನು? ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 28ರ ಎಪಿಸೋಡ್‌ನಲ್ಲಿ ಕುಸುಮಾ ಎಲ್ಲರನ್ನೂ ಆಹ್ವಾನಿಸಿರುವುದು ಬರ್ತ್‌ಡೇ ಪಾರ್ಟಿಗಲ್ಲ, ಬದಲಿಗೆ ಭಾಗ್ಯಾ ಡ್ಯಾನ್ಸ್‌ ನೋಡಲು ಎಂದು ತಿಳಿದ ಶಿಕ್ಷಕಿ ಸಿಟ್ಟಾಗುತ್ತಾಳೆ. ಅತ್ತೆಗಾಗಿ ಭಾಗ್ಯಾ ಮತ್ತೆ ನೃತ್ಯ ಪ್ರದರ್ಶನ ಮಾಡಲು ಒಪ್ಪುತ್ತಾಳೆ.

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 28ರ ಎಪಿಸೋಡ್‌ನಲ್ಲಿ ಭಾಗ್ಯಾಳನ್ನು ನೋಡುತ್ತಿದ್ದಂತೆ ಸಿಟ್ಟಾದ ಡ್ಯಾನ್ಸ್‌ ಟೀಚರ್‌
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್‌ 28ರ ಎಪಿಸೋಡ್‌ನಲ್ಲಿ ಭಾಗ್ಯಾಳನ್ನು ನೋಡುತ್ತಿದ್ದಂತೆ ಸಿಟ್ಟಾದ ಡ್ಯಾನ್ಸ್‌ ಟೀಚರ್‌ (PC: Jio Cinema)

Bhagyalakshmi Kannada Serial: ಸೊಸೆಗೆ ಅವಮಾನ ಮಾಡಿದ ಶಿಕ್ಷಕಿಯನ್ನು ಕುಸುಮಾ ಮನೆಗೆ ಆಹ್ವಾನಿಸುತ್ತಾಳೆ. ಅದನ್ನು ನೋಡಿ ತಾಂಡವ್‌, ಹಾಗೂ ಶ್ರೇಷ್ಠಾ ಶಾಕ್‌ ಆಗುತ್ತಾರೆ. ಕುಸುಮಾ ಏನು ಮಾಡಲು ಹೊರಟಿದ್ದಾಳೆ. ಅನ್ನೋದು ಇಬ್ಬರಿಗೂ ಗೊಂದಲವಾಗುತ್ತದೆ. ಅಲ್ಲಿ ಶ್ರೇಷ್ಠಾ ಹಾಗೂ ತಾಂಡವ್‌ ಇಬ್ಬರನ್ನೂ ನೋಡಿ ಡ್ಯಾನ್ಸ್‌ ಟೀಚರ್‌ ಕೂಡಾ ಕನ್ಫ್ಯೂಸ್‌ ಆಗುತ್ತಾರೆ.

ಇಂದು ನನ್ನ ಹುಟ್ಟುಹಬ್ಬ ಅಲ್ಲ ಎಂದ ಕುಸುಮಾ

ಕುಸುಮಾ ಶಿಕ್ಷಕಿಯನ್ನು ಮನೆ ಒಳಗೆ ಕರೆದೊಯ್ಯುತ್ತಾಳೆ. ನಿಮ್ಮ ಮನೆಯಲ್ಲಿ ನನ್ನ ಬಳಿ ಡ್ಯಾನ್ಸ್‌ ಕಲಿಯುತ್ತಿರುವವರು ಯಾರು ಎಂದು ಆಕೆ ಕೇಳುತ್ತಾಳೆ. ಸ್ವಲ್ಪ ಹೊತ್ತು ಇರಿ ಆಕೆ ಬರುತ್ತಾಳೆ. ನೀವು ಇಲ್ಲಿಗೆ ಬಂದಿದ್ದೀರಿ ಎಂದರೆ ಆಕೆಯೂ ನಿನ್ನ ಮುಂದೆ ಬಂದೇ ಬರುತ್ತಾಳೆ ಎಂದು ಕುಸುಮಾ ಹೇಳುತ್ತಾಳೆ. ಅಷ್ಟಕ್ಕೂ ನಾನು ನಿಮ್ಮನ್ನೆಲ್ಲಾ ಇಲ್ಲಿ ಕರೆತಿರುವುದು ಬರ್ತ್‌ಡೇ ಪಾರ್ಟಿಗಲ್ಲ, ಇಂದು ನಾನು ಹುಟ್ಟಿದ ದಿನ ಅಲ್ಲವೇ ಅಲ್ಲ ಎಂದು ಕುಸುಮಾ ಹೇಳುತ್ತಾಳೆ. ಅದನ್ನು ಕೇಳಿ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ಹಾಗಿದ್ದರೆ ನನ್ನನ್ನು ಇಲ್ಲಿಗೆ ಕರೆದ ಉದ್ದೇಶವೇನು ಎಂದು ಶಿಕ್ಷಕಿ ಕೇಳುತ್ತಾಳೆ. ನಾನು ಹುಟ್ಟುಹಬ್ಬ ಅಂತ ಸುಳ್ಳು ಹೇಳದಿದ್ದರೆ ನೀವು ಇಲ್ಲಿಗೆ ಬರುತ್ತಿರಲಿಲ್ಲ. ಅದಕ್ಕೆ ನಾನು ಸುಳ್ಳು ಹೇಳಿದ್ದು ಎಂದು ಕುಸುಮಾ ಹೇಳುತ್ತಾಳೆ.

ಇತ್ತ ರೂಮ್‌ನಲ್ಲಿ ಭರತನಾಟ್ಯ ಡ್ರೆಸ್‌ ಧರಿಸಿ ತಯಾರಾಗುವ ಭಾಗ್ಯಾ ಅತ್ತೆಯ ನಡೆ ಅರ್ಥವಾಗದೆ ಯೋಚನೆಯಲ್ಲಿ ಮುಳುಗುತ್ತಾಳೆ. ಪೂಜಾಗೆ ಕೂಡಾ ಏನೂ ಅರ್ಥವಾಗುವುದಿಲ್ಲ. ತನ್ವಿ ಹಾಗೂ ತನ್ಮಯ್‌ ಅಮ್ಮನನ್ನು ಮಾತನಾಡಿಸಿ ಈ ಡ್ರೆಸ್‌ನಲ್ಲಿ ನೀವು ಎಷ್ಟು ಮುದ್ದಾಗಿ ಕಾಣುತ್ತಿದ್ದೀರ. ನೀವು ಭರತನಾಟ್ಯ ಮುಂದುವರೆಸಿದ್ದರೆ ಇಷ್ಟೊತ್ತಿಗೆ ಟಿವಿಯಲ್ಲಿ ಬರುತ್ತಿದ್ದಿರಿ. ಪ್ರತಿಭೆ ಇದ್ದರೂ ನೀವು ಏಕೆ ಮುಂದುವರೆಸಲಿಲ್ಲ ಎಂದು ತನ್ವಿ , ಅಮ್ಮನನ್ನು ಕೇಳುತ್ತಾಳೆ. ನಾನು ಹೇಳಿದರೂ ನಿನಗೆ ಅರ್ಥವಾಗುವುದಿಲ್ಲ ಎಂದು ಭಾಗ್ಯಾ ಮಗಳಿಗೆ ಹೇಳುತ್ತಾಳೆ. ಅಷ್ಟರಲ್ಲಿ ಕುಸುಮಾ ಭಾಗ್ಯಾಳನ್ನು ಕರೆಯುತ್ತಾಳೆ.

ಡ್ಯಾನ್ಸ್‌ ಟೀಚರ್‌ ಮುಂದೆ ಮತ್ತೆ ಭಾಗ್ಯಾ ನೃತ್ಯ ಪ್ರದರ್ಶನ

ಭಾಗ್ಯಾಳನ್ನು ನೋಡಿ ಡ್ಯಾನ್ಸ್‌ ಟೀಚರ್‌ಗೆ ಶಾಕ್‌ ಆಗುತ್ತದೆ. ಚೆನ್ನಾಗಿ ಡ್ಯಾನ್‌ ಮಾಡುವುದಿಲ್ಲ ಎಂದು ಹೊರಗೆ ಕಳಿಸಿದ್ದರಲ್ಲ, ಅವಳೇ ಇವಳು, ನನ್ನ ಸೊಸೆ ಎಂದು ಕುಸುಮಾ ಹೇಳುತ್ತಾಳೆ. ಭಾಗ್ಯಾ, ಕುಸುಮಾ ಸೊಸೆ ತಿಳಿಯುತ್ತಿದ್ದಂತೆ ಹೊರಗೆ ಹೋಗುವ ಶಿಕ್ಷಕಿಯನ್ನು ಕುಸುಮಾ ಮತ್ತೆ ಒಳಗೆ ಕರೆ ತರುತ್ತಾಳೆ. ನಿಮಗೆ ನಿಜಕ್ಕೂ ಡ್ಯಾನ್ಸ್‌ ಬಗ್ಗೆ ಗೌರವ ಇದ್ದರೆ ಒಳಗೆ ಬಂದು ನನ್ನ ಸೊಸೆ ಮಾಡುವ ಡ್ಯಾನ್ಸ್‌ ನೋಡಿ ಏನು ತಪ್ಪು ಮಾಡಿದಳು ಅಂತ ಹೇಳಿ ಎನ್ನುತ್ತಾಳೆ. ವಿಧಿ ಇಲ್ಲದೆ ಆಕೆ ಒಪ್ಪಿಕೊಳ್ಳುತ್ತಾಳೆ. ಸರಿ ಡ್ಯಾನ್ಸ್‌ ಮಾಡು ಎನ್ನುತ್ತಾಳೆ. ನೀನು ಧೈರ್ಯದಿಂದ ಡ್ಯಾನ್ಸ್‌ ಮಾಡು ಎಂದು ಕುಸುಮಾ ಸೊಸೆಗೆ ಧೈರ್ಯ ಹೇಳುತ್ತಾಳೆ. ಅತ್ತೆ ಮಾತಿಗೆ ಇಲ್ಲ ಎನ್ನಲಾಗದೆ ಭಾಗ್ಯಾ , ಡ್ಯಾನ್ಸ್‌ ಮಾಡಲು ಒಪ್ಪುತ್ತಾಳೆ. ನೀನು ಹೆದರಬೇಡ, ಭಾಗ್ಯಾ ಏನೇ ಡ್ಯಾನ್ಸ್‌ ಮಾಡಿದರೂ ನನ್ನ ಫ್ರೆಂಡ್‌ಗೆ ಇಷ್ಟವಾಗುವುದಿಲ್ಲ ಎಂದು ಶ್ರೇಷ್ಠಾ ತಾಂಡವ್‌ಗೆ ಹೇಳುತ್ತಾಳೆ.

ಭಾಗ್ಯಾ ಡ್ಯಾನ್ಸ್‌ ಶಿಕ್ಷಕಿಗೆ ಇಷ್ಟವಾಗುವುದಾ? ಅಥವಾ ಶ್ರೇಷ್ಠಾ ಹೇಳಿದಂತೆ ಮತ್ತೆ ಅವಮಾನವಾಗುವುದಾ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner